ಮಾನವನೊಂದಿಗೆ ಪೆಂಗ್ವಿನ್ ಸ್ನೇಹ...!

ಟೀಮ್​ ವೈ.ಎಸ್​. ಕನ್ನಡ

ಮಾನವನೊಂದಿಗೆ ಪೆಂಗ್ವಿನ್ ಸ್ನೇಹ...!

Tuesday January 24, 2017,

2 min Read

ಸ್ನೇಹ ಎಂಬ ಪದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಎಂತಹದೇ ಕಷ್ಟವಿರಲಿ, ಅದನ್ನು ಒಗ್ಗಟಾಗಿ ಎದುರಿಸಲು ಕಾರಣವಾಗುವುದು ಸ್ನೇಹ. ಸ್ನೇಹವೊಂದಿದ್ದರೆ ಯಾವ ಸಾಧನೆ ಬೇಕಾದ್ರು ಮಾಡಬಹುದು. ಆದರೆ ಸ್ನೇಹ ಎಂಬುವುದು ತುಂಬಾ ವಿಭಿನ್ನವಾಗಿರುತ್ತದೆ. ಒಮ್ಮೆ ಸ್ನೇಹದ ಸೆಳತಕ್ಕೆ ಸಿಲುಕಿದ್ರೆ ಸಾಕೂ ಎಂತಹವರು ಕೂಡ ಅದನ್ನು ನಿಭಾಯಿಸುತ್ತಾರೆ. ಈಗ ಅಂತಹದೆ ಒಂದು ಅಪೂರ್ವ ಗೆಳೆತನಕ್ಕೆ ಪೆಂಗ್ವಿನ್ ಕಾರಣವಾಗಿದೆ.

image


‘ಸ್ನೇಹದ ಕಡಲಲಿ ನೆನಪಿನ ದೋಣಿಯಲ್ಲಿ ಪಯಣಿಗ ನಾನಮ್ಮ’ ಎಂಬ ಶುಭ ಮಂಗಳ ಚಿತ್ರದ ಹಾಡು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಆದರೆ ಇಲ್ಲೊಂದು ಪೆಂಗ್ವಿನ್ ಆ ಹಾಡಿನಂತೆ ಮನುಷ್ಯನೊಬ್ಬನ ಜೊತೆ ಗೆಳೆತನವನ್ನು ನಿಭಾಯಿಸುತ್ತಿದೆ. ಮನುಷ್ಯ ಮತ್ತು ಪೆಂಗ್ವಿನ್ ನಡುವಿನ ಅಪೂರ್ವ ಸ್ನೇಹದ ಕಥೆಗೆ ಸಾಕ್ಷಿಯಾಗಿದೆ. ಬ್ರೆಜಿಲ್‌ನ 71 ವರ್ಷದ ಜಾವೋ ಪರೇರಾ ಡಿಸೋಜಾ ಮತ್ತು ಡಿನ್ಡಿಂ ಪೆಂಗ್ವಿನ್ ನಡುವಿನ ಗೆಳೆತನದ ಕಥೆ ಇದು.

ಬ್ರೆಜಿಲ್‌ನ ರಿಯೋ ಡಿ ಜೆನಿರೋದ ಪುಟ್ಟ ದ್ವೀಪದಲ್ಲಿರುವ ಜೋವೋ ಪರೇರಾ ಅವರ ಮನೆಗೆ, ಪ್ರತೀ ವರ್ಷ ಪೆಂಗ್ವಿನ್​ ಒಂದು 8000 ಕಿಲೋ ಮೀಟರ್ ಸಂಚರಿಸಿ ಬರುತ್ತಿದೆ. ದಕ್ಷಿಣ ಆಫ್ರಿಕಾದ ಮಗಲ್ಲನಿಕ್ ಪ್ರಭೇದಕ್ಕೆ ಸೇರಿದ ಡಿನ್ಡಿಂ ಎಂಬ ಪೆಂಗ್ವಿನ್ ಪರೇರಾ ಅವರನ್ನು ಭೇಟಿ ಮಾಡುವುದಕ್ಕಾಗಿಯೇ ಇಷ್ಟು ದೂರ ಸಂಚರಿಸುತ್ತದೆ. ಆಯ್ಯೋ ಇದ್ಯಾವುದೇ ಕಾರ್ಟೂನ್ ಕಥೆಯಲ್ಲ. ನಿಜವಾಗಿಯು ಈ ಧರೆಯ ಮೇಲೆ ನಡೆಯುತ್ತಿರುವ ಅನನ್ಯ ಗೆಳೆತನ ಅದ್ಭುತ ಕಥೆಯಿದು.

ಇದನ್ನು ಓದಿ: ಶಿಕ್ಷಣ ಸಂಸ್ಥೆಗಳಿಗೆ ಸಾಲ ಸೌಲಭ್ಯ- "ವರ್ಥನ"ದಿಂದ ಬದಲಾವಣೆಯ ಗಾಳಿ

ಐದು ವರ್ಷದ ಹಿಂದೆ ತಮ್ಮ ಮನೆಯ ಮುಂದಿರುವ ಕಡಲ ಕಿನಾರೆಯಲ್ಲಿ ಸಾಯುವ ಸ್ಥಿತಿಯಲ್ಲಿದ ಪುಟ್ಟ ಪೆಂಗ್ವಿನ್ ಜಾವೋ ಪರೇರಾ ಕಣ್ಣಿಗೆ ಬಿದ್ದಿತ್ತು. ಪೆಂಗ್ವಿನ್ ರೆಕ್ಕೆಗಳಲ್ಲಿ ಎಣ್ಣೆ ಮತ್ತು ಟಾರ್ ಅಂಟಿಕೊಂಡಿದ್ದರಿಂದ ಈಜಲು ಅಸಾಧ್ಯವಾಗಿದ್ದ ಪೆಂಗ್ವಿನ್​ ಅನ್ನು ಪರೇರಾ ತಮ್ಮ ಮನೆಗೆ ತೆಗೆದುಕೊಂಡು ಹೋಗಿ, ಸಂಪೂರ್ಣವಾಗಿ ಆರೈಕೆ ಮಾಡಿದ್ದರು. ಒಂದು ವಾರದಲ್ಲಿ ಪೆಂಗ್ವಿನ್ ರೆಕ್ಕೆಗಂಟಿದ್ದ ಎಲ್ಲ ಟಾರು , ಎಣ್ಣೆಯನ್ನೆಲ್ಲ ತೆಗೆದು ಪರೇರಾ ಅದಕ್ಕೆ ಡಿನ್ಡಿಂ ಎಂದು ಹೆಸರಿಟ್ಟು ಅದರ ಪ್ರಾಣ ರಕ್ಷಿಸಿದ್ದರು. ಅದರ ಜೊತೆ ಅಷ್ಟೋತ್ತಿಗೆ ಗೊತ್ತಿಲ್ಲದಂತೆ ಸ್ನೇಹ ಕೂಡವಾಗಿತ್ತು.

image


ಪ್ರತಿದಿನ ಪೆಂಗ್ವಿನ್​ಗೆ ಹೊಟ್ಟೆ ತುಂಬುವಷ್ಟು ಮೀನು ನೀಡಿ ಮನೆಯ ಪಕ್ಕದಲ್ಲೇ ಪೆಂಗ್ವಿನ್​ಗೆ ವಾಸಸ್ಥಳವನ್ನೂ ನೀಡಲಾಗಿತ್ತು. ಆರೋಗ್ಯ ಸುಧಾರಿಸಿಕೊಂಡ ನಂತರ ಡಿನ್ಡಿಂನ್ನು ಸಮುದ್ರಕ್ಕೆ ಬಿಡಲಾಯಿತು. ಆದರೆ ತನ್ನ ಪ್ರಾಣವನ್ನು ರಕ್ಷಿಸಿದ ಪರೇರಾರನ್ನು ಬಿಟ್ಟು ಹೋಗಲು ಹಿಂದೇಟು ಹಾಕಿದ ಡಿನ್ಡಿಂ, 11 ತಿಂಗಳುಗಳ ಕಾಲ ಪರೇರಾ ಜತೆಯಲ್ಲಿ ಕಳೆದ ಡಿನ್ಡಿಂ ಒಲ್ಲದ ಮನಸ್ಸಿನಿಂದ ಕಡಲಿನತ್ತ ಹೆಜ್ಜೆ ಹಾಕಿತು.

ಆದರೆ ಪರೇರಾ ಮರುವರ್ಷ ಆಶ್ಚರ್ಯ ಕಾದಿತ್ತು. ಮರುವರ್ಷ ಎಲ್ಲರನ್ನೂ ಅಚ್ಚರಿಗೊಳಿಸುವಂತೆ, ಡಿನ್ಡಿಂ ಪೆಂಗ್ವಿನ್ ಪರೇರಾ ಬಳಿಗೆ ಬಂತು. ಪ್ರತಿ ವರ್ಷ ಜೂನ್ ತಿಂಗಳಲ್ಲಿ ದ್ವೀಪಕ್ಕೆ ಬರುವ ಡಿನ್ಡಿಂ ಫೆಬ್ರವರಿಯಲ್ಲಿ ವಾಪಸ್ ಹೋಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಡಿನ್ಡಿಂ ಈ ರೀತಿ ಬರುತ್ತದೆ. ವಿಶೇಷವೇನೆಂದರೆ ಪರೇರಾ ಬಿಟ್ಟರೆ ಬೇರೆ ಯಾರ ಬಳಿಗೂ ಈ ಪೆಂಗ್ವಿನ್ ಹೋಗುವುದಿಲ್ಲ. ಕೇವಲ ಪರೇರ ಬಳಿ ಮಾತ್ರ ಸುಳಿದಾಡುತ್ತೆ.

ಪರೇರಾ ಅತ್ಯಂತ ಹೆಚ್ಚು ಪ್ರೀತಿಸುವ ಜೀವಿ ಡಿನ್ಡಿಂ, ಈ ಧರೆಯ ಮೇಲೆ ಡಿನ್ಡಿಂ ಇಷ್ಟಪಡುವಷ್ಟು ಅವರು ಬೇರೆ ಯಾರನ್ನೂ ಪ್ರೀತಿಸುವುದಿಲ್ಲವಂತೆ. ತಮ್ಮ ಗೆಳೆತನಕ್ಕಾಗಿ 8000 ಕಿಮೀ ದೂರ ಈಜಿ ಬರುವ ಪೆಂಗ್ವಿನ್​ ಅನ್ನು ಪರೇರಾ ಮಗುವಿನಂತೆ ಮುದ್ದಿಸುತ್ತಾರೆ. ಡಿನ್ಡಿಂ ಕೂಡಾ ಅಷ್ಟೇ, ಪರೇರಾ ನೀಡಿದ ಮೀನುಗಳನ್ನು ಬಾಯಿ ಚಪ್ಪರಿಸಿ ತಿಂದು, ಪರೇರಾ ಅವರನ್ನು ಮುದ್ದಿಸುತ್ತದೆ. ಗೆಳೆತನಕ್ಕೆ ಯಾವುದೇ ಭಾಷೆ, ಗಡಿರೇಖೆಗಳ ಹಂಗಿಲ್ಲ ಎಂಬುದನ್ನು ಡಿನ್ಡಿಂ ಮತ್ತು ಪರೇರಾರ ಸಾಭೀತು ಮಾಡಿದ್ದಾರೆ.

ಇದನ್ನು ಓದಿ:

1. ಹೊಸ ವರ್ಷದಲ್ಲಿ ಕಾಲ ಕಳೆಯೋದು ಹೇಗೆ..?- ಹಾಲಿಡೇ ಪ್ಲಾನ್ ಬಗ್ಗೆ ಯೋಚನೆ ಮಾಡಿ..!​

2. "ಗನ್​"ನ ಜೊತೆ "ಪೆನ್​" ಕಡೆಗೂ ಒಲವು..!

3. ಕಾಡು ರಕ್ಷಿಸಲು ಮರಗಳ ಮೇಲೆ ಕಲಾಕೃತಿ : ನಾರಿಯರ ಕೈಚಳಕದಲ್ಲಿ ಸ್ವರ್ಗವಾಗಿದೆ ಮಧುಬನಿ