ಗ್ರ್ಯಾಬ್ ಹೌಸ್ ಗಳಿಗೆ ಜೀವ ತುಂಬುವ ಜಾಹೀರಾತು ಸಬ್ಜೆಕ್ಟ್...!

ಟೀಮ್​ ವೈ.ಎಸ್​. ಕನ್ನಡ

0

ಉತ್ಪಾದಕರು ಹಾಗೂ ಗ್ರಾಹಕರ ನಡುವೆ ನಿಂತಿರುವ ಪ್ರಮುಖ ಸಂಪರ್ಕ ಕೊಂಡಿ ಸೋಶಿಯಲ್ ಮೀಡಿಯಾಗಳು. ಜನರಿಗೆ ಹತ್ತಿರವಾಗಿರುವ ಈ ಸೋಶಿಯಲ್ ಮೀಡಿಯಾಗಳ ಮೂಲಕ ವಿವಿಧ ಕಂಪೆನಿಗಳು ತಮ್ಮ ಬ್ರಾಂಡ್ ಬಗ್ಗೆ ಕಂಟೆಂಟ್ ಗಳನ್ನ ತಯಾರಿಸಿ ಗ್ರಾಹಕರನ್ನ ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ಆದರೆ ಕೆಲವೊಮ್ಮೆ ಕ್ರಿಯೇಟಿವ್ ಆಗಿ, ಚಿತ್ತಾಕರ್ಷಕ ಸಬ್ ಜೆಕ್ಟ್ ಗಳನ್ನ ತಯಾರಿಸದೇ ಹೋದರೆ ಅದೆಂತಹ ಉತ್ಕೃಷ್ಟ ಮಟ್ಟದ ಬ್ರಾಂಡ್ ಆಗಿದ್ರೂ ನೆಲಕಚ್ಚುವ ಸಾಧ್ಯತೆಯೇ ಹೆಚ್ಚಾಗಿರುತ್ತೆ. ಕೆಲವೊಮ್ಮೆ ಅದೆಷ್ಟೋ ಕಂಪೆನಿಗಳಿಗೆ ತಮ್ಮ ಪ್ರೊಡಕ್ಟ್ ಗಳಿಗೆ ಎಷ್ಟರ ಮಟ್ಟಿಗೆ ಕಂಟೆಂಟ್ ಅಗತ್ಯವಿದೆ, ಏನು ಮಾಡಬೇಕು, ಏನು ಮಾಡಬಾರದು ಎನ್ನುವ ಪರಿಜ್ಞಾನವೇ ಇರುವುದಿಲ್ಲ. ಆದ್ರೆ ಗ್ರಾಹಕರನ್ನ ತಲುಪಲೇ ಬೇಕು ಅನ್ನುವ ಪರಮ ಗುರಿ ಇರುತ್ತವೆ. ಹೀಗಾಗಬೇಕು ಅಂದ್ರೆ ಸೋಶಿಯಲ್ ಮೀಡಿಯಾಗಳಲ್ಲಿ ನಿಮ್ಮ ಬ್ರಾಂಡ್ ಗಳು ಸದಾ ರಾರಾಜಿಸುತ್ತಿರಬೇಕು ಹಾಗೂ ಗಮನ ಸೆಳೆಯುವಂತಿರಬೇಕು ಅಂದ್ರೆ ಅಲ್ಲಿ ಮನಮೋಹಕ ಕಂಟೆಂಟ್ ಗಳೊಂದಿಗೆ ಪ್ರಚಾರ ಮಾಡುವುದು ಅನಿವಾರ್ಯ. ಅಲ್ಲದೆ ನಿಮ್ಮ ಗ್ರಾಹಕರು ಪ್ರೊಡಕ್ಟ್ ಗಳ ಬಗ್ಗೆ ಸದಾ ನಿರೀಕ್ಷೆಗಳನ್ನ ಇಟ್ಟುಕೊಂಡಿರಬೇಕು. ಹೀಗಾದ್ರೆ ಮಾತ್ರ ಯಾವುದೇ ಉತ್ಪನ್ನ ಅಥವಾ ಬ್ರಾಂಡ್ ಸಕ್ಸಸ್ ಆಗಲು ಸಾಧ್ಯ.

ಪ್ರಚಾರ ಕಲೆಯಲ್ಲಿ ಗ್ರ್ಯಾಬ್ ಗೌಸ್ ಗಳ ಪರದಾಟ..!

ಅತ್ಯುತ್ತಮ ಕಂಟೆಂಟ್ ಗಳನ್ನ ಕೊಡುವ ಸ್ಪರ್ಧೆಯಲ್ಲಿ ಗ್ರ್ಯಾಬ್ ಹೌಸ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಗಳು ಮುಂಚೂಣಿಯಲ್ಲಿವೆ. ಇನ್ನು ಸ್ಟಾರ್ಟ್ ಅಪ್ ಗಳಂತೂ ಭಾರೀ ನಿರೀಕ್ಷೆ ಹಾಗೂ ಒತ್ತಡಗಳೊಂದಿಗೆ ಮಾರ್ಕೆಟ್ ಗೆ ಕಾಲಿಡುತ್ತವೆ. ಆದ್ರೆ ಮಾರುಕಟ್ಟೆ ಹಾಗೂ ಗ್ರಾಹಕರನ್ನ ಸಮರ್ಪಕವಾಗಿ ತಲುಪಲಾಗದೆ ನಿರಾಸೆ ಅನುಭವಿಸುತ್ತವೆ. ಆದ್ರೆ ಕೆಲವು ಗ್ರ್ಯಾಬ್ ಹೌಸ್ ಗಳು ಮ್ಯಾಗಝೀನ್ ಅಥವಾ ನ್ಯೂಸ್ ಗಳಲ್ಲಿ ವೈರಸ್ ನಂತೆ ಕಂಟೆಂಟ್ ಗಳನ್ನ ಹರಿಯ ಬಿಡುತ್ತವೆ. ಇವುಗಳಲ್ಲಿ ಸ್ಕೂಪ್ ವೂಪ್, ಬಝ್ ಫೀಡ್ ನಂತರ ಗ್ರ್ಯಾಬ್ ಹೌಸ್ ಗಳು ಮುಂಚೂಣಿಯಲ್ಲಿವೆ. ಸಾಧ್ಯವಿರುವ ಎಲ್ಲಾ ರೀತಿಯ ಲೇಖನಗಳನ್ನ ಕ್ರಿಯೆಟೀವ್ ಆಗಿ ಹರಿಯ ಬಿಡುವ ಈ ಗ್ರ್ಯಾಬ್ ಹೌಸ್ ಗಳಿಗೆ ಸಾಕಷ್ಟು ಕ್ಲಿಕ್ ಗಳು ಹಾಗೂ ವ್ಯೂವ್ಸ್ ಬರುತ್ತವೆ. ಆದ್ರೆ ಅದೆಷ್ಟೋ ಗ್ರ್ಯಾಬ್ ಹೌಸ್ ಗಳು ತಮ್ಮ ಪ್ರೊಡೆಕ್ಟ್ ಗಳಿಗೆ ತಕ್ಕಂತೆ ಮ್ಯಾಗಝೀನ್ ಮಾಡಿ ಕ್ಲೈಂಟ್ ಗಳನ್ನ ಪಡೆಯಲು ವಿಫಲವಾದ್ರೆ ಮಾರುಕಟ್ಟೆಯಲ್ಲಿ ಅದೊಂದು ದೊಡ್ಡ ಹೊಡೆತ ಅನ್ನುವುದರಲ್ಲಿ ಅನುಮಾನವಿಲ್ಲ.

ಇನ್ನು ಪ್ರತೀ ಕಂಪೆನಿಯ ಕಂಟೆಂಟ್ ಗಳನ್ನ ತಯಾರು ಮಾಡುವುದು ಆಯಾ ಬ್ರಾಂಡ್ ಮ್ಯಾನೇಜರ್ ಗಳ ಹೊಣೆಯಾಗಿರುತ್ತದೆ. ತಮ್ಮ ಕಂಪನಿಗೆಯ ಉತ್ಪನ್ನಗಳಿಗೆ ಯಾವ ರೀತಿ ಬ್ರಾಂಡಿಂಗ್ ಮಾಡಬೇಕು, ಗ್ರಾಹಕರ ಮನಸ್ಥಿತಿಗಳು ಹೇಗಿರುತ್ತವೆ ಎಂಬುದನ್ನ ಅರಿತುಕೊಂಡು ಮಾರ್ಕೆಟ್ ಗೆ ಇಳಿಯಬೇಕೇ ಹೊರತು, ತಮಗೆ ಬೇಕಾದಂತೆ ಕಂಟೆಂಟ್ ಗಳನ್ನ ರೂಪಿಸುವುದಲ್ಲ. ಅಲ್ಲದೆ ತಮ್ಮ ಬ್ರಾಂಡ್ ಗಳಿಗೆ ರೂಪಿಸಿರುವ ಕಂಟೆಂಟ್ ಗಳು ಎಷ್ಟರ ಮಟ್ಟಿಗೆ ಸರಿಹೊಂದತ್ತವೆ ಅನ್ನುವುದನ್ನೂ ಗಮನದಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ. ಹಾಗಂತ ಸಿಕ್ಕಪಟ್ಟೆ ವೈರಲ್ ಗಳಂತೆ ಪ್ರಚಾರಕ್ಕಿಳಿದರೂ ಗ್ರಾಹಕರು ಕಿರಿಕಿರಿ ಅನುಭವಿಸುವ ಅಪಾಯವೂ ಇರುತ್ತದೆ. ಹೀಗಾಗಿ ಅತ್ಯಂತ ಎಚ್ಚರಿಕೆಯಿಂದ ಇಲ್ಲಿ ಹೆಜ್ಜೆಗಳನ್ನ ಇಡುವುದು ಅನಿವಾರ್ಯ. ಇನ್ನು ಈ ಲೆಕ್ಕಾಚಾರಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸಕ್ಸಸ್ ಆಗಿರುವ ಗ್ರ್ಯಾಬ್ ಹೌಸ್ ಗಳ ಸಾಲಿನಲ್ಲಿ ಬಝ್ ಫೀಡ್ ಪ್ರಮುಖವಾಗಿ ಗುರುಸಿಕೊಳ್ಳುತ್ತದೆ.

ಎಲ್ಲಿ, ಯಾವ ಬ್ರ್ಯಾಂಡಿಂಗ್..?

ಬ್ರಾಂಡಿಂಗ್ ಎಲ್ಲಿ ಮಾಡಬೇಕು ಅನ್ನುವ ಸವಾಲಿನೊಂದಿಗೆ ಯಾವುದನ್ನ ಹೇಗೆ ಮಾಡಬೇಕು ಅನ್ನುವುದೂ ಇಲ್ಲಿ ದೊಡ್ಡ ಚಾಲೆಂಜ್.. ಉದಾಹರಣೆಗೆ ಯಾವುದಾದರೂ ಸ್ಕಿನ್ ಕೇರ್ ಉತ್ಪನ್ನವಾಗಿದ್ದರೆ ಅದಕ್ಕೆ ಎಲ್ಲೆಂದರಲ್ಲಿ ಬ್ರಾಂಡಿಂಗ್ ಮಾಡದೆ ಲೈಫ್ ಸ್ಟೈಲ್ ಮ್ಯಾಗ್ ಝೀನ್ ಗಳ ಮೊರೆಹೋಗುವುದು ಅತ್ಯುತ್ತಮ ಯೋಜನೆಯಾರುತ್ತದೆ. ಆದ್ರೆ ನಗರ ಪ್ರದೇಶಗಳಲ್ಲಿ ಇದು ಇನ್ನಷ್ಟು ಚಾಲೆಂಜಿಂಗ್ ಆಗಿರುತ್ತದೆ. ಇಲ್ಲಿ ಗ್ರ್ಯಾಬ್ ಹೌಸ್ ಗಳು ನ್ಯೂಸ್ ಹಾಗೂ ಲೈಫ್ ಸ್ಟೈಲ್ ಎರಡೂ ಮ್ಯಾಗ್ ಝಿನ್ ಗಳ ಮೊರೆ ಹೋಗಬೇಕಾಗುತ್ತದೆ. ಇನ್ನು ನಗರದಲ್ಲಿರುವ ಕಾಕ್ಟೈಲ್ ರೀತಿಯ ಮ್ಯಾಗ್ ಝೀನ್ ಗಳು ವೆಬ್ ಸೈಟ್ ಗಳ ಕ್ಲಿಕ್ಸ್ ಹಾಗೂ ವೀವ್ಸ್ ಗಳ ಮೇಲೆ ನಿರ್ಧರಿತವಾಗಿರುತ್ತವೆ. ಆದ್ರೆ ಗ್ರ್ಯಾಬ್ ಹೌಸ್ ಗಳು ತಮ್ಮ ಡೊಮೈನ್ ನಲ್ಲಿ ತಮ್ಮ ಇತರೆ ವಹಿವಾಟುಗಳ ಬಗ್ಗೆಯೂ ಮಾಹಿತಿ ನೀಡುವುದರಿಂದ ಗ್ರಾಹಕು ಗೊಂದಲಕ್ಕೀಡಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ.

ವೆಬ್ ಸೈಟ್ ಗಳ ಮುಂದೆ ಕುಳಿತು ಗ್ರ್ಯಾಬ್ ಹೌಸ್ ಗಳ ಹೋಮ್ ಪೇಜ್ ನೋಡುವ ಗ್ರಾಹಕ ದಿಢೀರನೆ ನಗರದ ಕಾಕ್ಟೈಲ್ ಪೇಜ್ ಅಥವಾ ಸ್ಕ್ರೋಲ್ ಡೌನ್ ಮಾಡಿ ಹೊರಹೋಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಹಾಗಾದ್ರೆ ಗ್ರಾಹಕರು ಬೇರೆ ಪೇಜ್ ಗೆ ಹೋಗಬಾರದು ಅಂತ ಕಂಪೆನಿಗಳು ನಿಜವಾಗಲೂ ಬಯಸುವುದಾದ್ರೆ, ಗ್ರ್ಯಾಬ್ ಹೌಸ್ ಗಳು ತಮ್ಮ ಡೊಮೈನ್ ನಲ್ಲಿ ಮತ್ತೊಂದು ಪೇಜನ್ನ ಸೃಷ್ಠಿಸುವುದನ್ನ ಮೊದಲು ನಿಲ್ಲಿಸಬೇಕು. ಇನ್ನು ಗ್ರಾಹಕರನ್ನ ನಿಜವಾಗಲೂ ತಮ್ಮತ್ತ ಸೆಳೆಯಲು ಬಯಸುವುದಾದರೆ ಅವರಿಗೆ ರಿಯಾಲಿಟಿಗಳ ಬಗ್ಗೆ ಮೊದಲು ಅರಿವು ಮಾಡಿಕೊಡಬೇಕು. ಅದ್ರಲ್ಲೂ ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ವ್ಯವಹಾರಗಳಾದ್ರೆ ಅಲ್ಲಿ ಬರುವ ಸಮಸ್ಯೆ, ಸವಾಲು ಹಾಗೂ ಅದಕ್ಕೆ ಪರಿಹಾರಗಳನ್ನೂ ಸೂಚಿಸಿರಬೇಕು. ಹೀಗೆ ಗ್ರ್ಯಾಬ್ ಹೌಸ್ ಗಳು ಮೊದಲು ತಮಗೆ ಬೇಕಾದ ಕಂಟೆಂಟ್ ಗಳ ಬಗ್ಗೆ ಒಂದು ನಿರ್ಧಾರಕ್ಕೆ ಬಂದ್ರೆ ತಮ್ಮ ಪ್ರೊಡಕ್ಟ್ ಗಳಿಗೆ ನಿಜವಾದ ಮಾರುಕಟ್ಟೆ ಒದಗಿಸಬಹುದು.

ಅನುವಾದ – ಬಿ ಆರ್ ಪಿ, ಉಜಿರೆ

Related Stories