ಉತ್ತಮ ಪ್ರೊಪೋಸಲ್​​​​​ ಬರೆಯಲು 10 ಟಿಪ್ಸ್

ಟೀಮ್​​ ವೈ.ಎಸ್​​.

ಉತ್ತಮ ಪ್ರೊಪೋಸಲ್​​​​​ ಬರೆಯಲು 10 ಟಿಪ್ಸ್

Sunday November 01, 2015,

3 min Read

ಉದ್ಯಮಿ ಅಂದ್ಮೇಲೆ ನೀವು ಎಲ್ಲ ವಿಚಾರಗಳನ್ನೂ ತಿಳಿದುಕೊಂಡಿರಬೇಕು. ಬೇರೆ ಉದ್ಯಮಕ್ಕೆ ನೀವು ಸೇವೆ ಒದಗಿಸುತ್ತಿದ್ದೀರಾ ಎಂದಾದಲ್ಲಿ, ಅವರು ನಿಮ್ಮ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸದೇ ಇದ್ರೂ ಮಾರ್ಕೆಟಿಂಗ್‍ನಲ್ಲಿ ಭಾಗಿಯಾಗುವುದು ಅನಿವಾರ್ಯ. ಪ್ರಸ್ತಾಪಗಳ ಬರವಣಿಗೆ ಅಂದ್ರೆ ಬಹುತೇಕ ಎಲ್ಲರಿಗೂ ಅಲರ್ಜಿ, ಪ್ರಪೋಸಲ್ ಬರವಣಿಗೆಯನ್ನು ದ್ವೇಷಿಸುವವರೇ ಹೆಚ್ಚು. ಖಾಸಗಿ ವಲಯದ ಗ್ರಾಹಕರ ಬೇಡಿಕೆ ಮತ್ತು ಆಧುನಿಕತೆ ಹೆಚ್ಚಿದಾಗಲೆಲ್ಲ ಸಾರ್ವಜನಿಕ ವಲಯದ ಅಗತ್ಯತೆಗಳು ಇನ್ನಷ್ಟು ಕಠಿಣ ಮತ್ತು ಸಂಕೀರ್ಣವಾಗುತ್ತವೆ. ಹಾಗಾಗಿ ಪ್ರಸ್ತಾವನೆ ಬರವಣಿಗೆ ಅನ್ನೋದು ಆರಾಮ ವಲಯದಿಂದ ಹೊರಗಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

image


ಖಾಸಗಿ ವಲಯದಲ್ಲಿ ಉದ್ಯಮದಿಂದ ಉದ್ಯಮ

ಪ್ರಸ್ತಾಪದ ದಾಖಲೆಯಿಂದ ಒಂದೊಳ್ಳೆ ಅವಕಾಶ ನಿಮಗೆ ಸಿಗಬಹುದು. ಅಥವಾ ಪೈಪೋಟಿಯಿಂದಲೇ ನಿಮ್ಮನ್ನು ಹೊರಹಾಕಬಹುದು. ಹರಾಜು ಪ್ರಕ್ರಿಯೆಯಲ್ಲಿ ಉತ್ತಮವಾದ ಪ್ರೊಪೋಸಲ್​​​ ಬರವಣಿಗೆ ಮಹತ್ವ ಪಡೆಯುತ್ತೆ. ಮಾರ್ಕೆಟಿಂಗ್‍ನಲ್ಲಿ ಕೂಡ ತೊಡಗಿಕೊಳ್ಳುವುದು ಉತ್ತಮ. ಎಷ್ಟೋ ಮಂದಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪೈಪೋಟಿ ಒಡ್ಡಬಹದು. ಆದ್ರೆ ನೀವು ಕೂಡ ಮಾರ್ಕೆಟಿಂಗ್‍ನಲ್ಲಿ ಪರಿಣಿತರಾಗಿದ್ದರೆ ಅವಕಾಶ ನಿಮ್ಮ ಕೈತಪ್ಪುವ ಸಾಧ್ಯತೆಗಳಿಲ್ಲ. ನೀವೇ ನಿಮ್ಮ ಪ್ರಸ್ತಾಪವನ್ನ ಬರೆದು, ಅದರ ಮೇಲೆ ಸ್ಟಾಂಪ್ ಒತ್ತಿದ್ರೆ ಅದಕ್ಕಿರುವ ಘನತೆಯೇ ಬೇರೆ.

ಪ್ರಸ್ತಾಪ ಬರವಣಿಗೆಗೆ 10 ಟಿಪ್ಸ್

1. ಅವರು ಕೇಳಿದ್ದನ್ನೇ ಕೊಡಿ : ಆಮಂತ್ರಣದಿಂದ ಗುತ್ತಿಗೆ ವರೆಗಿನ ಪಯಣ ಮಹತ್ವದ್ದು. ಎಷ್ಟೋ ಮಂದಿ ಇದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಗ್ರಾಹಕರಿಗೆ ಅರ್ಥವಾಗದ್ದನ್ನು ವಿವರಿಸುವ ಗೋಜಿಗೇ ಹೋಗುವುದಿಲ್ಲ.

2. ಸಂದರ್ಭಕ್ಕೆ ತಕ್ಕಂತೆ ಪ್ರತಿಕ್ರಿಯಿಸುವುದರ ಜೊತೆಗೆ ನೀವು ನಿಮ್ಮ 100% ಪರಿಶ್ರಮ ಹಾಕಿದ್ದೀರಾ ಅನ್ನೋದನ್ನು ದೃಢಪಡಿಸಿಕೊಳ್ಳಿ : ಮುಖ್ಯಸ್ಥರು ಯಾರು ಅನ್ನೋದನ್ನು ತಿಳಿದುಕೊಳ್ಳಿ , ನೀವು ಯಾರು ಅನ್ನೋದು ಕೂಡ ಅವರಿಗೆ ಗೊತ್ತಿರಲೇಬೇಕು. ಈ ಹಂತಕ್ಕೂ ಮೊದಲು ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರೆ ಒಳಿತು. ಭೇಟಿ ಸಾಧ್ಯವಾಗದಿದ್ದರೆ ಫೋನ್‍ನಲ್ಲಾದ್ರೂ ಮಾತನಾಡಿರಲೇಬೇಕು. ಇದರಿಂದ ಅವರ ಅಗತ್ಯತೆ ಏನು? ಅಂತಿಮ ನಿರ್ಧಾರ ತೆಗೆದುಕೊಳ್ಳುವವರು ಯಾರು ಅನ್ನೋದು ನಿಮಗೆ ತಿಳಿದಿರುತ್ತೆ. ಅದು ತಿಳಿದಿದ್ರೆ ನಿಮ್ಮ ಪ್ರಸ್ತಾವನೆಯಲ್ಲೇ ಅದನ್ನು ಬರೆದುಬಿಡಬಹುದು.

3. ಬರೆಯುವ ಮುನ್ನ ನೀವೇನನ್ನು ಹೇಳಬಯಸಿದ್ದೀರಿ ಎಂಬುದನ್ನು ನಿರ್ಧರಿಸಿ : ಮೊದಲು ನೀವು ಏನು ಹೇಳಲು ಬಯಸಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಐಡಿಯಾಗಳಿಗೆ ಒಂದು ಸ್ಪಷ್ಟ ರೂಪ ಕೊಡಿ. ನಂತರ ಅದನ್ನು ಇಂಗ್ಲೀಷ್‍ಗೆ ತುರ್ಜುಮೆ ಮಾಡಿ ಕಳಿಸಿ.

4. ಆಸಕ್ತಿ ಕೆರಳಿಸುವಂಥ ವಿಚಾರಕ್ಕೆ ಮಾನ್ಯತೆ ಇರಲಿ : ವರದಿಯ ತಾರ್ಕಿಕ ಅನುಕ್ರಮದಂತೆ ಪ್ರಸ್ತಾವನೆಯನ್ನು ಬರೆಯಬೇಡಿ. ನಿಮ್ಮ ಪ್ರಸ್ತಾವನೆಯನ್ನು ಒಪ್ಪಿದರೆ ಅವರಿಗಾಗುವ ಲಾಭವೇನು? ಅದು ಹೇಗೆ ಸಾಧ್ಯವಾಗುತ್ತೆ ಅನ್ನೋದನ್ನು ಸ್ಪಷ್ಟವಾಗಿ ಬರೆಯಿರಿ.

5. ಸ್ಪಷ್ಟತೆ ಬಹಳ ಮುಖ್ಯ : ನೀವು ಏನನ್ನು ಹೇಳಬಯಸಿದ್ದೀರಾ ಎಂಬ ಬಗ್ಗೆ ಸ್ಪಷ್ಟತೆ ಇರಲಿ. ನೀವ್ಯಾಕೆ ಅದನ್ನು ಮಾಡುತ್ತಿದ್ದೀರಾ? ಹೇಗೆ ಮಾಡುತ್ತೀರಾ? ಎಲ್ಲಿ ಮಾಡುತ್ತೀರಾ? ಅದಕ್ಕೆ ಬೇಕಾದ ಸಹಕಾರ ಏನು ಎಂಬುದರ ಬಗ್ಗೆ ವಿವರಣೆ ಇರಲಿ.

6. ಬರವಣಿಗೆ ನಿಮ್ಮ ಮಾತಿನಂತಿರಲಿ : ವ್ಯಾಪಾರದ ಬಗೆಗಿನ ಹಸಿವು ಪ್ರದರ್ಶಿಸಲು ನಿಮಗೆ ಅವಕಾಶ ಸಿಕ್ಕಿದೆ. ನೀವು ಪ್ರಸ್ತಾಪವನ್ನು ಬರೆಯುವ ಮುನ್ನ ಎಲ್ಲರೆದುರು ಮಾತನಾಡಿದಂತೆ ಅದನ್ನು ಉಚ್ಛರಿಸಿಕೊಳ್ಳಿ.

7. ನಿಮ್ಮ ಧ್ವನಿ ಸಕ್ರಿಯವಾಗಿರಲಿ..ನಿಷ್ಕ್ರಿಯವಲ್ಲ : ಸಲಹೆ ಮತ್ತು ಜವಾಬ್ದಾರಿ ಬಗೆಗಿನ ಹೇಳಿಕೆಗಳು ಸ್ಪಷ್ಟವಾಗಿರಲಿ. ಪರೋಕ್ಷವಾದ ಮಾತುಗಳು ಬೇಡ.

8. ಕಿಸ್ : ನಿಮ್ಮ ಪ್ರಸ್ತಾವನೆ ಸರಳವಾಗಿರಲಿ. ಚಿಕ್ಕ ಚಿಕ್ಕ ಶಬ್ಧಗಳನ್ನು ಬಳಸಿ. ಗೊಂದಲಕಾರಿ ಪದಗಳ ಬಳಕೆ ಬೇಡ.

9. ವಿಭಿನ್ನತೆ ಇರಲಿ : ವಾಕ್ಯ ಹಾಗೂ ಪ್ಯಾರಾಗ್ರಾಫ್‍ಗಳ ಮಧ್ಯೆ ವಿಭಿನ್ನತೆ ಇರಲಿ. ನಿಮ್ಮ ಸಂದೇಶಕ್ಕೆ ಹೆಚ್ಚಿನ ಶಕ್ತಿ ಬರಬೇಕೆಂದಾಗ ನೀವು ವ್ಯಾಕರಣ ನಿಯಮವನ್ನೂ ನೀವು ಉಲ್ಲಂಘಿಸಬಹುದು. ಇದು ನಿಮ್ಮ ವಾಕ್ಯದಲ್ಲಿ ವಿಭಿನ್ನತೆ ಹಾಗೂ ಮಸಾಲೆಯನ್ನು ಹೆಚ್ಚಿಸುತ್ತದೆ.

10. ನಿಮಗೆ ಬೇಕಾದ ಸಹಾಯ ಪಡೆದುಕೊಳ್ಳಿ : ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಕುಟುಂಬಸ್ಥರಿಂದ ನಿಮಗೆ ಬೇಕಾದ ಸಲಹೆ, ಸಹಾಯ ಪಡೆದುಕೊಳ್ಳಿ. ನಿಮ್ಮ ಐಡಿಯಾ ಹಾಗೂ ಶಬ್ಧ ಪ್ರಯೋಗದ ಬಗ್ಗೆ ಇತರರು ಏನು ಹೇಳ್ತಾರೆ ಅನ್ನೋದನ್ನು ಕೇಳಿಸಿಕೊಳ್ಳುವುದು ಬಹುಮುಖ್ಯ.

ಸಾರ್ವಜನಿಕ ವಲಯ ...

ಸಾರ್ವಜನಿಕ ವಲಯದಲ್ಲಿ ನಿಮ್ಮನ್ನು ಪ್ರತ್ಯೇಕಗೊಳಿಸಬಲ್ಲಂತಹ, ವ್ಯತ್ಯಾಸ ತೋರಿಸಬಲ್ಲಂತಹ ಸಂದರ್ಭಗಳು ವಿರಳ. ನಿಮ್ಮ ಕೈಗೆ ತಲುಪಿದ ದಾಖಲೆಯಲ್ಲಿನ ಬಿಟ್ಟ ಸ್ಥಳಗಳನ್ನು ನೀವು ನಿಮಗೆ ಬಂದಿರುವ ಸೂಚನೆಯಂತೆ ಭರ್ತಿ ಮಾಡಬೇಕಷ್ಟೆ. ನಿಯಮಗಳು ಇಲ್ಲಿ ಮತ್ತಷ್ಟು ಕಠಿಣವಾಗುತ್ತಾ ಹೋಗುತ್ತವೆ. ತಪ್ಪು ಹೆಜ್ಜೆ ಇಟ್ಟಲ್ಲಿ ಓಟದಿಂದಲೇ ನೀವು ಹಿಂದೆ ಸರಿಯಬೇಕಾಗಬಹುದು.

image


ನಿಮ್ಮನ್ನು ನೀವು ಮುಂಚೂಣಿಯಲ್ಲಿಡಲು ಸಂದರ್ಭಗಳನ್ನು ಅರಸಬೇಕು. ಸ್ವತಂತ್ರವಾಗಿ ಬರೆಯುವ ಅವಕಾಶ ಸಿಕ್ಕರೂ ಸಿಗಬಹುದು. ಒಮ್ಮೊಮ್ಮೆ ಸೇವೆ ನೀಡಲು ಹಾಗೂ ಹಂಚಿಕೆಗೆ ಅವರು ನಿಮ್ಮ ಐಡಿಯಾಗಳನ್ನು ಕೇಳಬಹುದು. ಹೌದು, ಅಲ್ಲ ಎಂಬ ನಿರ್ದಿಷ್ಟ ಉತ್ತರವನ್ನು ಬಿಟ್ಟು ಬೇರೆ ಪ್ರಶ್ನೆಗಳನ್ನೂ ಕೇಳಬಹುದು. ನಿಮ್ಮ ಬರವಣಿಗೆಯೇ ನಿಮ್ಮ ಯಶಸ್ಸಿಗೆ ಮೆಟ್ಟಿಲಾಗಲಿದೆ.