ಕ್ರಿಯೇಟಿವ್ ವರ್ಲ್ಡ್​​ನಲ್ಲಿ- ಕ್ರಿಯೇಟಿವ್​​ ವರ್ಕ್..!

ವಿಸ್ಮಯ

0

ಕಲೆ ಅನ್ನೋದು ಹಾಗೇ ಯಾರಿಗೂ ಅಷ್ಟು ಸುಲಭವಾಗಿ ಒಲಿಯುವುದಿಲ್ಲ.. ಆದರೆ ಒಮ್ಮೆ ಕಲೆ ಒಲಿದ್ರೆ ಇಡೀ ವಿಶ್ವವನ್ನೇ ಗೆಲ್ಲಬಹುದು..ಹಲವರು ತಮ್ಮಲ್ಲಿರೋ ಕಲೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುತ್ತಾರೆ.. ಇನ್ನೂ ಕೆಲವರು ಬೇರೆ ವೃತ್ತಿಯಲ್ಲಿ ತೊಡಗಿಸಿ ಕೊಂಡಿದ್ದರೂ ಕಲೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡು ತಮ್ಮ ನಿರಂತರ ಅಭ್ಯಾಸ, ಶ್ರಮಗಳ ಮೂಲಕ ವೃತ್ತಿಪರ ಕಲಾವಿದರಂತಯೇ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಾರೆ.. ಆದ್ರೆ ಇವರು ತಮ್ಮ ನಿರಂತರ ಸಾಧನೆಯಿಂದ ಎಲ್ಲರನ್ನು ಸೆಳೆದುಬಿಡುತ್ತಾರೆ..

ಇತ್ತೀಚಿನ ಕ್ರಿಯೇಟಿವ್ ವರ್ಲ್ಡ್​​ನಲ್ಲಿ ಎಲ್ಲರೂ ಎಲ್ಲವನ್ನು ಕ್ರಿಯೇಟಿವ್ ಹಾಗೇ ಯೋಚನೆ ಮಾಡುತ್ತಾರೆ. ಜೊತೆಗೆ ಕ್ರಿಯೇಟಿವ್ ವರ್ಕ್‍ಗಳನ್ನು ಮಾಡಿ ಎಲ್ಲರ ಗಮನ ಸೆಳೆಯುತ್ತಾರೆ ಅಂತವರಲ್ಲಿ ಜಗದೀಶ್ ಕೂಡ ಒಬ್ಬರು.. ಮೂಲತಃ ಕಲಾವಿದರು.. ಊರು ದಬಾಸ್ ಪೇಟೆ..ವಾಸಸ್ಥಳ ಬೆಂಗಳೂರು.. ತಮ್ಮ ಕ್ರಿಯೇಟಿವ್ ಐಡಿಯಾಗಳನ್ನು ಬಳಸಿ, ಕ್ರಿಯೇಟಿವ್ ವರ್ಕ್‍ಗಳನ್ನು ಮಾಡತ್ತಾರೆ.. ಎಲ್ಲರೂ ಮಾಡುವಂತೆ ನಾನು ಮಾಡುವುದು ಇಷ್ಟವಿಲ್ಲವೆಂದು ಹೇಳುವ ಇವರು ಯುವಜನರಿಗೆ ಸ್ಪೂರ್ತಿಯಾಗಿದ್ದಾರೆ..

ಪ್ರಸುತ್ತ ಜಗತ್ತಿನಲ್ಲಿ ಪ್ರತಿಯೊಂದು ವಸ್ತುವನ್ನೂ ಕೂಡ ನವೀಕರಿಸಿ ಮತ್ತೆ ಬಳಸಬಹುದಾದಂತಹ ಒಂದಲ್ಲಾ ಒಂದು ವಿಧಾನಗಳು ಅಸ್ತಿತ್ವದಲ್ಲಿವೆ.. ಕಸದಿಂದ ರಸ ಎಂಬುದಾಗಿ ನಮ್ಮ ಹಿರಿಯರು ಹೇಳಿದುದನ್ನೇ ಈಗಿನ ವಿಜ್ಞಾನಿಗಳು ಮತ್ತು ಸಂಶೋಧಕರು, ಅಷ್ಟೇ ಯಾಕೆ ಕಲಾವಿದರು ರೀಸೈಕಲ್ ಎಂಬುದಾಗಿ ಕರೆದ್ದಿದಾರೆ. ಒಂದು ವಸ್ತುವು ಹಾಳಾದ ನಂತರ ಅದನ್ನು ಬೇರೊಂದು ರೀತಿಯಲ್ಲಿ ಬೇರೆ ಉದ್ದೇಶಕ್ಕಾಗಿ ಬಳಸಿಕೊಳ್ಳುವುದೇ ಇದರ ಅರ್ಥ..

ಅಂದಹಾಗೇ ಜಗದೀಶ್‍ರವರು ತಮ್ಮ ಕಲೆಯಿಂದ ಕ್ರಿಯೇಟಿವ್ ಆಗಿ ವಿವಿಧ ಬಗೆಯ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ.. ಸಾಮಾನ್ಯವಾಗಿ ಮರದ ಎಲೆಗಳು ಉದುರಿ ಹೋಗಿದ್ದಾರೆ ನೀವೆಯೇನು ಮಾಡ್ತಿರಾ ಅದನ್ನ ಕಸದ ಬುಟ್ಟಿಗೆ ಅಥವಾ ಬೆಂಕಿ ಹಾಕಿ ಸುಟ್ಟು ಬಿಡ್ತಿರಾ.. ಆದ್ರೆ ಇವರು ಅದೇ ಎಲೆಗಳನ್ನು ಬಳಸಿ ವಸ್ತುಗಳನ್ನು ತಯಾರಿಸುತ್ತಾರೆ.. ಆಲದ ಮರದ ಎಲೆಗಳನ್ನು ಬಳಸಿ ಸುಂದರವಾದ ದೀಪಗಳನ್ನು ತಯಾರಿ ಮಾಡತ್ತಾರೆ.. ಲ್ಯಾಂಪ್‍ಗಳು, ಮೌಸ್ ಪ್ಯಾಡ್, ಸೇರಿದಂತೆ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸುತ್ತಾರೆ.. ಬಣ್ಣ ಬಣ್ಣದ ಲ್ಯಾಂಪ್‍ಗಳು ನಿಜಕ್ಕೂ ಆಕರ್ಷಕವಾಗಿರುತ್ತೆ..

ಇನ್ನು ಕೇವಲ ಎಲೆಗಳಿಂದ ಮಾತ್ರವಲ್ಲದೇ ಕ್ಯಾಸೆಟ್‍ಗಳಿಂದ, ಚಿಪ್ಪಿನಿಂದ, ಕೂಡ ಲೈಟ್‍ಗಳನ್ನು, ಕಿವಿ ಓಲೆ, ಬಾಳೆ, ಸರಗಳನ್ನು ರೆಡಿ ಮಾಡ್ತಾರೆ.. ಅಷ್ಟೇ ಅಲ್ಲದೇ ಯಾವುದೇ ವಸ್ತುಗಳು ವೇಸ್ಟ್ ಆಗಿರೋಲ್ಲ ಅದನ್ನು ಮತ್ತೇ ಮತ್ತೇ ಮರು ಬಳಕೆ ಮಾಡುಬಹುದು.. ಈ ರೀತಿಯ ಕಲಾಕೃತಿಗಳನ್ನು, ವಿನ್ಯಾಸವನ್ನು ಯಾರು ಬೇಕಾದ್ರೂ ಮಾಡಬಹುದು.. ಕಷ್ಟವೇನು ಅಲ್ಲ ಆದ್ರೆ ಇದಕ್ಕೆ ಆಸಕ್ತಿ ಮುಖ್ಯ ಅಂತಾರೆ ಜಗದೀಶ್..

ಇನ್ನು ಇವ್ರ ಈ ಹಿಂದಿನ ಕ್ರಿಯೇಟಿವ್ ಗುರು ಸೂರ್ಯಪ್ರಕಾಶ್.. ಇವ್ರಿದಂದಲ್ಲೇ ಸಾಕಷ್ಟು ಹೊಸ ಕ್ರಿಯೇಟಿವ್ ಕಲೆಯನ್ನು ಕಲಿತ್ತಿದ್ದು.. ಇಂದು ನಾನು ಬೇರೆ ಬೇರೆ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಕೈಗೊಳ್ಳಲು ಸಾಧ್ಯ ಅಂತಾರೆ.. 30 ವರ್ಷಗಳಿಂದ ಈ ಕಲೆಯನ್ನು ರೂಢಿಸಿಕೊಂಡು ಬಂದಿದ್ದೇನೆ. ಕಳೆದ 8 ವರ್ಷಗಳಿಂದ ಉದ್ಯಮವಾಗಿ ಆರಂಭಿಸಿದ್ದೀನಿ ಅಂತಾರೆ. ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಮಾಡಬಹುದಾದ ಅದೆಷ್ಟೋ ಕಲೆಗಳಿವೆ. ಆದರೆ ಅದಕ್ಕೆ ಒಂದಿಷ್ಟು ಆಸಕ್ತಿ, ಕ್ರಿಯೇಟಿವ್ ಮೈಂಡ್ ಇದ್ರೆ ಸಾಕು ಅಂತಾರೆ.

ಏನ್ ಹೇಳ್ತಾರೆ ಗ್ರಾಹಕರು..?

ಇನ್ನು ಈ ಬಣ್ಣ ಬಣ್ಣದ ಲೈಟ್‍ಗಳು, ಅಲಂಕಾರಿಕ ವಸ್ತುಗಳನ್ನು ಮನೆಯ ಅಂದ ಚೆಂದಕ್ಕೆ ಹಾಕಿದೆ, ಮನೆಯ ಲುಕ್ ಚೇಂಜ್ ಆಗುತ್ತೆ.. ನೋಡೊಕ್ಕೆ ಕಲರ್‍ಫುಲ್ ಆಗಿರೋ ಈ ವಸ್ತುಗಳು ನಿಜಕ್ಕೂ ಇಷ್ಟ ವಾಗುತ್ತೆ.. ಕಸದಿಂದ ರಸವನ್ನು ಮಾಡಬಹುದಾ ಅಂತ ಆಶ್ಚರ್ಯ ಆಗುತ್ತೆ ಅಂತಾರೆ ರೂಪ.. ಕ್ಯಾಸೆಟ್‍ಗಳನ್ನು ಮೂಟೆ ಕಟ್ಟಿ ಹಾಕಿದ್ದೀವಿ, ಆದ್ರೆ ಕ್ಯಾಸೆಟ್‍ಗಳನ್ನು ಬಳಸಿ ಲ್ಯಾಂಪ್‍ಗಳನ್ನು ಕೂಡ ಮಾಡಬಹದು ಅನ್ನೋದು ತಿಳಿತು ಅಂತಾರೆ..

ಅದೇನೆ ಹೇಳಿ ಕಾಲ ಬದಲಾದಂತೆ, ನಾವು ಬದಲಾಗ್ತಾ ಇರುತ್ತಿವಿ.. ಜೊತೆಗೆ ನಾವು ಬೇಡ ಅಂತ ಹೇಳಿ ಬಿಸಾಕಿದ್ದ ವಸ್ತಗಳನ್ನು ಬಳಸಿ ಹೀಗೆ ಅಲಂಕಾರಿಕ ವಸ್ತುಗಳನ್ನೂ ಮಾಡಬಹುದು ಅಂದ್ರೆ, ಇವ್ರ ಈ ಕ್ರಿಯೇಟಿವ್ ಮೈಂಡ್‍ಗೆ ಒಂದು ಸಲಾಂ.

Related Stories