ವಿಶ್ವದ ವಿಭಿನ್ನ ಕಥೆ ಹೇಳುವ ಕವಿತಾ..!

ಟೀಮ್​​ ವೈ.ಎಸ್​. ಕನ್ನಡ

ವಿಶ್ವದ ವಿಭಿನ್ನ ಕಥೆ ಹೇಳುವ ಕವಿತಾ..!

Thursday December 03, 2015,

3 min Read

ದೇಶ ಸುತ್ತ ಬೇಕು ಕೋಶ ಓದಬೇಕು ಎಂಬ ಮಾತು ನಮಗೆಲ್ಲಾ ಗೊತ್ತು. ಜಗತ್ತು ಸುತ್ತುವ ಆಸೆ ಯಾರಿಗೇ ತಾನೇ ಇರಲ್ಲ ಹೇಳಿ. ಎಲ್ಲರಿಗೂ ಇಂತಹ ಆಸೆ ಇರುತ್ತದೆ. ಆದರೆ ಕೆಲವರಿಗಷ್ಟೇ ಇಂತಹ ಭಾಗ್ಯ ಒದಗಿ ಬರುತ್ತದೆ. ಆದರೆ ನಾವ್ ಹೇಳ ಹೊರಟಿರುವವರ ಇವರ ಕಥೆ ತುಂಬಾ ವಿಭಿನ್ನ. ವಿವಿಧ ದೇಶದ ಇನ್ನೊಂದು ಮುಖ, ಅಂದರೆ ಯಾರಿಗೂ ಗೊತ್ತಿರದ ಕಥೆಯನ್ನು ಹೇಳುವ ಸಾಹಸ ಇವರು ಮಾಡಿದ್ದಾರೆ. ದೆಹಲಿಯ ಮಾರವಾಡಿ ಪರಿವಾರದಲ್ಲಿ ಜನಿಸಿದ್ದ ಕವಿತಾ, ನಿಜಕ್ಕೂ ತುಂಬಾ ಅದೃಷ್ಟವಂತೆ. ಯಾಕಂದ್ರೆ ಅವರಿಗೆ ಹೊರ ದೇಶಗಳಲ್ಲಿ ಹೋಗಿ ವ್ಯಾಸಾಂಗ ಮಾಡುವಂತಹ ಅವಕಾಶ ಅವರಿಗೆ ಸಿಕ್ತು. ಅವರ ಓದು ಸೆಂಟ್ ಕ್ಸೇವಿಯರ್​​ನಿಂದ ಆರಂಭವಾಗಿ ಜಾರ್ಜ್ ವಾಶಿಂಗ್ಟನ್ ವಿಶ್ವವಿದ್ಯಾಲಯದಲ್ಲಿ 2007ರಲ್ಲಿ ಅಂತ್ಯವಾಗುತ್ತದೆ. ಆಗಲೇ ಅವರಿಗೆ ದೇಶ ಸುತ್ತುವ ಭಾಗ್ಯ ಒದಗಿ ಬಂತು. ಅವರು ಬ್ಯಾಂಕಿಂಗ್ ಮತ್ತು ಅಕೌಂಟ್ಸ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ರು. ಮತ್ತೊಂದೆಡೆ ಮುಂಬೈನಲ್ಲಿ ಅನುರಾಗ್ ಕಶ್ಯಪ್ ಅವರ ಜೊತೆ ಮುಖ್ಯ ಆರ್ಥಿಕ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ರು. ಅದೇ ವರ್ಷ ಸಿನಿ ರೂಟ್ ಕ್ಯಾಪಿಟಲ್ ಅಡ್ವೈಸರಿ ಸಂಸ್ಥೆಯ ಸಹ ಸಂಸ್ಥಾಪಕರಾದ್ರು. ಅಷ್ಟಕ್ಕೆ ಅವರು ಸುಮ್ಮನಿರಲಿಲ್ಲ, ವಿಶ್ವಾದ್ಯಂತ ಇರುವ ನಾಗರಿಕರಿಗೆ ಆಯಾ ದೇಶದ ಯಾರಿಗೂ ಗೊತ್ತಿರದ ಅದ್ಭುತ ಕಥೆಗಳನ್ನು ಬರೆಯಲು ವೇದಿಕೆ ಒದಗಿಸಿಕೊಟ್ರು. ಆ ದೇಶವನ್ನು ಜನರನ್ನು ನೋಡುವ ದೃಷ್ಟಿಕೋನವನ್ನು ಬದಲಿಸಿಬಿಟ್ರು..

image


ಹೌದು ಎಷ್ಟೋ ದೇಶಗಳ ಬಗ್ಗೆ ಇರುವ ನಕರಾತ್ಮಕ ಭಾವನೆಯನ್ನು ಬದಲಿಸುವಂತಹ ಕಥೆಗಳು ಇಲ್ಲಿ ಹೊರಬಂದಿವೆ. ಅವರು ಹೇಳುವ ಪ್ರಕಾರ "ಪ್ರತಿ ದೇಶದ ನಗರ ಅದರೊಳಗೆ ಅದೊಂದು ಥರ ವಿಶಿಷ್ಟವಾಗಿರುತ್ತದೆ. ಅಂತಹ ಅದ್ಭುತ ಕಥೆಗಳ ಮೇಲೆ ಬೆಳಕು ಚೆಲ್ಲುವ ಆಸೆ ಅವರದು. ಗೊತ್ತು-ಗೊತ್ತಿಲ್ಲದ ಹಾಗೆ, ಪ್ರಂಪಚದಿಂದ ಮರೆಯಾಗಿ ಉಳಿದಿರುವ ತೆರೆಮರೆಯ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಅವರ ಗೆಳತಿ ಫರ್ಹಾ ಮತ್ತು ಪ್ರಾಚಿ ವಿಮೈಂಡ್ ನಂತಹ ವೇದಿಕೆಯನ್ನು ಮುಂದೆ ತರಲು ಪ್ರೇರಣೆಯಾದ್ರು".

ವಿಶ್ವದೆಲ್ಲಡೆ ಇರುವ ನಾಗರಿಕರು ವರದಿ ಮಾಡಲು ಇರುವ ಸಾಮಾಜಿಕ ವೇದಿಕೆ ವಿ ಮೈಂಡ್..

ಅವರೇ ಹೇಳುವ ಪ್ರಕಾರ "ನಮ್ಮಗೆ ತಿಳಿದಿರುವ ಅಲ್ಪಸ್ವಲ್ಪ ಜ್ಞಾನದಿಂದಾಗಿ ನಾವು ಆ ದೇಶಗಳನ್ನು ಅಳೆಯುತ್ತೇವೆ. ಅದರ ಬಗ್ಗೆ ಒಂದು ಚಿತ್ರಣವನ್ನು ತಲೆಯಲ್ಲಿ ಇಟ್ಟುಕೊಂಡಿರುತ್ತೇವೆ. ಜನರ ಇಂತಹ ಭ್ರಮೆ ಸುಳ್ಳು ಅಲ್ಲಿನ ವಾಸ್ತವ ಸ್ಥಿತಿಯನ್ನು ತಿಳಿಸುವಂತಹ ಕೆಲಸ, ಜನರಲ್ಲಿರುವ ಭ್ರಮೆಯನ್ನು ಒಡೆಯಬೇಕೆಂಬುದು ನನ್ನಾಸೆಯಾಗಿತ್ತು. ಹಾಗಾಗಿ ನನ್ನ ಸೀಮಿತ ಮಾಹಿತಿಗಿಂತ ಹೆಚ್ಚಿನದನ್ನು ಜನರಿಗೆ ತಿಳಿಸುವ ಆಸೆ ನನ್ನಾಗಿತ್ತು. ಆ ದೇಶ ನಗರಗಳ ಬಗ್ಗೆ ಸತ್ಯ ಸಂಗತಿಗಳನ್ನು ತಿಳಿಸುವ ಸಲುವಾಗಿ ವಿಮೈಂಡ್ ನಂತಹ ಸಮಾಜಿಕ ವೇದಿಕೆ ಆರಂಭಿಸುವ ವಿಚಾರ ಬಂತು. ಈ ಮಾಧ್ಯಮದ ಮೂಲಕ ಆಯಾ ದೇಶದ ಬಗ್ಗೆ ಗೊತ್ತಿರದ, ತೆರೆಮರೆಯ ಸತ್ಯ ಕಥೆಗಳನ್ನು ಹೊರತರುವುದು ನಮ್ಮ ಉದ್ದೇಶವಾಗಿತ್ತು. ಉದಾಹರಣೆಗೆ ಆಫ್ರಿಕಾ ಎಂದರೆ ಏಡ್ಸ್​​​ನ ತವರೂರು ಎಂದು ಸೇರಿಸಿ ಬಿಡ್ತಿವಿ. ಆದರೆ ಆ ದೇಶದಲ್ಲಿ ಅನೇಕ ಅನನ್ಯ ಅದ್ಭುತ ಸಂಗತಿಗಳು ಜನರಿಗೆ ತಿಳಿದಿಲ್ಲ. ಅಂತಹ ಕಥೆಗಳನ್ನು ನಾವು ಅನಾವರಣಗೊಳಿಸಿದ್ದೇವೆ"..

ವಿದೇಶ ಪ್ರಯಾಣದ ಅನುಭವದಿಂದ ಬದಲಾಯಿತು ಕವಿತಾರ ದೃಷ್ಟಿಕೋನ...

ಹಲವು ದೇಶಗಳ ಸುತ್ತಿರುವ ಕವಿತಾ ಹೇಳುವುದೇನೆಂದರೆ "ಜಗತ್ತಿನಲ್ಲಿ ಯಾವ ದೇಶವು ಹೆಣ್ಣುಮಕ್ಕಳಿಗೆ ಸುರಕ್ಷಿತವಾಗಿಲ್ಲ. ಎಲ್ಲ ದೇಶಗಳಲ್ಲೂ ಮಹಿಳೆಯರನ್ನು ಚೇಡಿಸುವುದು ಸಾಮಾನ್ಯವಾಗಿದೆ. ಇದು ಜಾಗತಿಕ ಸಮಸ್ಯೆ. ಇದು ಕೇವಲ ಭಾರತದಲ್ಲಿ ಮಾತ್ರ ಸೀಮಿತವಾಗಿಲ್ಲ. ಭಾರತಕ್ಕಿಂತ ಹೆಚ್ಚು ಹೊರ ದೇಶಗಳಲ್ಲಿ ಇಂತಹ ಅನುಭವಗಳು ಆಗುತ್ತವೆ. ಇದಕ್ಕೆ ನಾನೇ ಸಾಕ್ಷಿ. ಆದರೇ ಇದು ಕೇವಲ ಒಂದು ದೇಶಕ್ಕೆ ಸೀಮಿತವೆಂದು ಭಾವಿಸಿ ಆ ದೇಶ ಸುರಕ್ಷಿತವಲ್ಲ ಎಂದು ಭಾವಿಸುವುದು ತಪ್ಪು ಎನ್ನುತ್ತಾರೆ. ಉದಾಹರಣೆಗೆ ನೈರೋಬಿ ದೇಶ ಕಳ್ಳತನ ಸುಲಿಗೆ ದರೋಡೆಗೆ ತುಂಬಾ ಹೆಸರುವಾಸಿ. ಆದರೆ ಅಲ್ಲಿ ಹೋದಮೇಲೆ ನಾನು ನೋಡಿದ ದೃಶ್ಯಗಳೆ ಬೇರೆ. ಆಫ್ರಿಕಾದ ಅತ್ಯಂತ ದೊಡ್ಡ ಐಟಿ ಹಬ್ ಎಂದರೆ ಅದು ನೈರೋಬಿ. ಅಷ್ಟೇ ಅಲ್ಲ ನೈರೋಬಿ ಟ್ರಾಫಿಕ್ ಜಾಮ್​ಗೂ​​ ಅತ್ಯಂತ ಹೆಸರುವಾಸಿ. ಅಲ್ಲಿ ಜನರು ಹೆಚ್ಚಾಗಿ ಟ್ಯಾಕ್ಸಿ ಬಳಸುತ್ತಾರೆ. ಗಂಟೆಗಟ್ಟಲ್ಲೆ ಟ್ಯಾಕ್ಸಿಯಲ್ಲೇ ಟೆಕ್ಕಿಗಳು ಸಮಯ ಕಳೆದು ಬಿಡುತ್ತಾರೆ. ಆದರೆ ಅಲ್ಲಿನ ಎಲ್ಲ ಟ್ಯಾಕ್ಸಿಯಲ್ಲಿ ಉಚಿತ ವೈಫೈ ಸಿಗುತ್ತೆ. ಟೆಕ್ಕಿಗಳು ಟ್ಯಾಕ್ಸಿಯಲ್ಲೆ ತಮ್ಮ ಕೆಲಸ ಮುಗಿಸಬಹುದು. ಟ್ಯಾಕ್ಸಿಯಲ್ಲಿ ವೈಫೈ ಕೊಡುವಂತಹ ವಿಶಿಷ್ಟ ನಗರ ನೈರೋಬಿ".

ಕವಿತಾ ಅವರು ವಿಮೈಂಡ್​ನಂತಹ ವೇದಿಕೆ ಒದಗಿಸಿರುವುದರಿಂದ, ಈ ವೆಬ್​ಸೈಟ್​​ನಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿರುವ ನಾಗರೀಕರು ಆಯಾ ದೇಶಗಳ ಬಗ್ಗೆ ತಮ್ಮ ಅನುಭ, ಜನರಿಗೆ ಗೊತ್ತಿಲ್ಲದ ಇನ್ನೊಂದು ಸಂಗತಿಯ ಬಗ್ಗೆ ಬರೆಯಬಹುದು. ತಮ್ಮ ಬ್ಯೂಸಿ ಬದುಕಿನಲ್ಲಿ, ಯೋಗ, ಜಾಗಿಂಗ್, ಸೇರಿದಂತೆ ಶಾರೂಖ್ ಖಾನ್ ಸಿನಿಮಾ ನೋಡುವ ಕವಿತಾ, ಪುಸ್ತಕ ಓದುವುದನ್ನು ಇಷ್ಟ ಪಡ್ತಾರೆ. ಅವರ ಪ್ರತಿ ಹೆಜ್ಜೆಯಲ್ಲೂ ಏನಾದ್ರು ಹೊಸದನ್ನು ಮಾಡಬೇಕು ಎಂದು ಬಯಸುತ್ತಾರೆ. ಕವಿತಾ ತಮ್ಮ ವಿಚಾರದಿಂದ, ಯೋಚನೆಯ ವಿಭಿನ್ನ ಲಹರಿಯಿಂದ, ಜನರು ವಿಶ್ವವನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸಿದ್ದಾರೆ.

ಲೇಖಕರು: ಪ್ರಿಯಾಂಕ ಪರುತಿ

ಅನುವಾದ: ಎನ್.ಎಸ್.ರವಿ