ಇವರು ಕೇವಲ ಆಟೋ ಡ್ರೈವರ್​ ಅಲ್ಲ- ಎಲ್ಲರಿಗೂ ಮಾದರಿ ವ್ಯಕ್ತಿ..!

ಟೀಮ್​​ ವೈ.ಎಸ್​. ಕನ್ನಡ

0

ಆಟೋ ಡ್ರೈವರ್​ಗಳನ್ನು ಸಮಾಜ ನೋಡುವ ದೃಷ್ಟಿಯೇ ಬೇರೆ. ಶೇಕಡಾ 99ರಷ್ಟು ಜನ ಆಟೋ ಡ್ರೈವರ್​ಗಳನ್ನು ನೋಡೋದು ಕೆಟ್ಟ ದೃಷ್ಟಿಯಿಂದಲೇ. ಆದ್ರೆ ತಮಿಳುನಾಡಿನ ಆಟೋ ಡ್ರೈವರ್ ಮಾತ್ರ ಎಲ್ಲರಿಗಿಂತಲೂ ಡಿಫರೆಂಟ್. ಹೆಸರು ಜಿ. ಅಣ್ಣಾದೊರೈ ಆಲಿಯಾಸ್ ಆಟೋ ಅಣ್ಣಾದೊರೈ. ಹೇಳಿವಷ್ಟು ಎಜುಕೇಷನ್ ಕೂಡ ಇಲ್ಲ. ಪಿಯುಸಿ ಡ್ರಾಪ್ಔಟ್ ಸ್ಟೂಡೆಂಟ್. ಆಟೋ ಓಡಿಸೋದು ಇವರ ಕೆಲಸ. ಆದ್ರೆ ಅಣ್ಣಾದೊರೈ ಆಟೋ ಮಾಮೂಲಿ ರಿಕ್ಷಾಗಳಂತಿಲ್ಲ. ಈ ಆಟೋದ ಪೂರ್ತಿ ಇರೋದು ಮ್ಯಾಗಝೀನ್​ಗಳು, ಪುಸ್ತಕಗಳು. ಇದರ ಜೊತೆಗೆ ಅಣ್ಣಾ ಆಟೋದಲ್ಲಿ ಚಿಕ್ಕ ಟಿ.ವಿ ಜೊತೆಗೆ ವೈ-ಫೈ ಕನೆಕ್ಷನ್ ಕೂಡ ಇದೆ.

2012ರಿಂದ ಅಣ್ಣಾ ಆಟೋ ಓಡಿಸುವ ಕೆಲಸ ಮಾಡ್ತಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಅಣ್ಣಾ ಸಾಗಿದ ದಾರಿ ಬಹು ದೊಡ್ಡದು. 31 ವರ್ಷದ ಅಣ್ಣಾದೊರೈ ಚೆನ್ನೈ ಮಂದಿ ಪ್ರೀತಿಸುವ ಆಟೋಡ್ರೈವರ್ ಆಗಿ ಬೆಳೆದು ನಿಂತಿದ್ದಾರೆ. ಅಷ್ಟೇ ಅಲ್ಲ ಸಾಮಾಜಿಕ ಜಾಲ ತಾಣಗಳಲ್ಲೂ ಅಣ್ಣಾ ಸೂಪರ್ ಸ್ಟಾರ್. ಅಣ್ಣಾ ಫೇಸ್​ಬುಕ್ ಅಕೌಂಟ್​ಗೆ 10,000ಕ್ಕೂ ಅಧಿಕ ಫಾಲೋವರ್​ಗಳಿದ್ದಾರೆ. ಇಲ್ಲಿ ತನಕ ಅಣ್ಣಾ 40 ಭಾಷಣಗಳನ್ನು ಮಾಡಿದ್ದಾರೆ. ವೊಡಾಫೋನ್, ಹ್ಯುಂಡಾಯ್, ರಾಯಲ್ಎನ್​ಫೀಲ್ಡ್ ಸೇರಿದಂತೆ ಹಲವು ಕಂಪನಿಗಳ ಉದ್ಯೋಗಿಗಳಿಗೆ ಅಣ್ಣಾ ಭಾಷಣ ಮಾಡಿದ್ದಾರೆ ಅಂದ್ರೆ ಅವರ ಸಾಮರ್ಥ್ಯವನ್ನು ನೀವೇ ಲೆಕ್ಕಹಾಕಿ..!

ತಾಂತ್ರಿಕತೆ ಅಪ್​ಡೇಟ್ ಆದಂತೆ ಅಣ್ಣಾ ಆಟೋ ಕೂಡ ಅಪ್ ಟು ಡೇಟ್ ಆಗುತ್ತದೆ. ಓಲ್ಡ್ ಮಹಾಬಲಿಪುರಂ ರಸ್ತೆಯಲ್ಲಿ ಚಲಿಸುವ ಅಣ್ಣಾ ಆಟೋದಲ್ಲಿ ಲ್ಯಾಪ್​ಟಾಪ್, ಟ್ಯಾಬ್, ಐಪ್ಯಾಡ್ ಸೇರಿದಂತೆ ಪ್ರಯಾಣಿಕರು ಬ್ರೌಸಿಂಗ್ ವ್ಯವಸ್ಥೆಗಳನ್ನು ಕೂಡ ಬಳಸಿಕೊಳ್ಳಬಹುದು. ಅಣ್ಣಾ ಆಟೋದಲ್ಲಿರುವ ಈ ವ್ಯವಸ್ಥೆಗಳನ್ನ ಬಳಸಿಕೊಳ್ಳುವವರು ಅದನ್ನು ಬಳಸಿದ ಪ್ರಮಾಣದಂತೆ 10, 15, 20 ಅಥವಾ 25 ರೂಪಾಯಿಗಳನ್ನು ನೀಡಬೇಕಾಗುತ್ತದೆ. ಚಿಲ್ಲರೆ ತೊಂದರೆಯನ್ನು ತಪ್ಪಿಸಿಕೊಳ್ಳಲು ಅಣ್ಣಾ ತನ್ನ ಆಟೋದಲ್ಲೇ ಕಳೆದ ವರ್ಷದಿಂದ ಸ್ವೈಪಿಂಗ್ ಮೆಷಿನ್ ಅನ್ನು ಇಟ್ಟುಕೊಂಡಿದ್ದಾರೆ.

ಇದನ್ನು ಓದಿ: ಸ್ಮಾರ್ಟ್​ ಇದ್ದರಷ್ಟೇ ಸಾಕಾಗೋದಿಲ್ಲ- ದೆಹಲಿ-ಎನ್​ಸಿಆರ್​ನಲ್ಲಿ ಹುಟ್ಟಿದ ಮೊಬೈಲ್​ ಆ್ಯಪ್​ಗಳ ಕಥೆಯನ್ನೂ ಕೇಳಿ..!

ಅಂದಹಾಗೇ ಅಣ್ಣಾ ಕೆಲವು ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ವಿಶಿಷ್ಠ ಆಫರ್​ಗಳನ್ನು ಕೂಡ ನೀಡುತ್ತಾರೆ. ಟೀಚರ್​ಗಳಿಗೆ ದಿನದ ಆಧಾರದ ಮೇಲೆ ಸ್ಪೆಷಲ್ ಡಿಸ್ಕೌಂಟ್ ಇದೆ. ವ್ಯಾಲೆಂಟೈನ್ ದಿನದಂದು ಪ್ರೇಮಿಗಳಿಗೆ ವಿಶೇಷ ಆಫರ್ ನೀಡಲಾಗುತ್ತದೆ. ಮದರ್ಸ್ ಡೇಯಂದು ಮಕ್ಕಳ ಜೊತೆ ಪ್ರಯಾಣಿಸುವ ಅಮ್ಮಂದಿರಿಗೂ ವಿಶೇಷ ರೇಟ್​ಗಳಿರುತ್ತದೆ. ಸದಾ ಗ್ರಾಹಕರ ಸಂತೋಷವನ್ನೇ ಬಯಸುವ ಅಣ್ಣಾ ತಿಂಗಳೊಂದಕ್ಕೆ ಸುಮಾರು 45000ಕ್ಕಿಂತಲೂ ಅಧಿಕ ಆದಾಯ ಸಂಪಾದಿಸುತ್ತಾರೆ. ತನ್ನ ಆಟೋದಲ್ಲಿರುವ ವ್ಯವಸ್ಥೆಗಾಗಿ ಸರಿಸುಮಾರು 9000 ರೂಪಾಯಿಗಳನ್ನು ಖರ್ಚು ಮಾಡುತ್ತಾರೆ.

ಸದ್ಯ ಆಟೋ ಅಣ್ಣಾದೊರೈ ಹೊಸತೊಂದು ಆ್ಯಪ್ಅನ್ನು ಲಾಂಚ್ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ಆ ಮೂಲಕ ಗ್ರಾಹಕರಿಗೆ ತನ್ನ ಆಟೋ ಎಲ್ಲಿದೆ ಮತ್ತು ಎಷ್ಟು ಹೊತ್ತಿಗೆ ಲಭ್ಯವಾಗುತ್ತದೆ ಅನ್ನೋ ಮಾಹಿತಿ ನೀಡುವ ಯೋಜನೆಯನ್ನೂ ಇಟ್ಟುಕೊಂಡಿದ್ದಾರೆ. ಒಟ್ಟಿನಲ್ಲಿ ಅಣ್ಣಾ ಈಗ ತಮಿಳುನಾಡಿನಾದ್ಯಂತ ಆಟೋ ಅಣ್ಣಾನಾಗಿ ಬೆಳೆದಿದ್ದಾರೆ.

ಇದನ್ನು ಓದಿ:

1. ಇದು ಸ್ಟಿಕ್ಕರ್​ ಹಿಂದಿರುವ ಕಥೆ..! ಕರಣ್​ ಶ್ರಮದ ಚರಿತ್ರೆ..!

2. ಐರನ್‌ ಡಿಫಿಶಿಯನ್ಸಿಗೆ ಗುಡ್‌ ಬೈ- ಕೆನಾಡದ "ಲಕ್ಕಿ ಐರನ್‌ ಫಿಶ್‌" ಅನ್ವೇಷಕನಿಗೆ ಹಾಯ್‌ ಹಾಯ್‌..!

3. ಬೀದಿಯಲ್ಲಿ ದಿನಪತ್ರಿಕೆ ಮಾರುತ್ತಿದ್ದ ಶಿವಾಂಗಿ ಈಗ IIT-JEE ಉತ್ತೀರ್ಣೆ..