ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸುಲಭ ದಾರಿ: ಇದು ಆರ್​ಟಿಓ ಆನ್​​ಲೈನ್​ನಲ್ಲಿ ಕೊಟ್ಟ ರಹದಾರಿ

ವಿಸ್ಮಯ

2

ಬೈಕ್ ಅಂದ್ರೆ ತುಂಬಾ ಇಷ್ಟ..ಆದ್ರೆ ಲೈಸೆನ್ಸ್ ಇಲ್ಲದೇ ಬೈಕ್ ರೈಡ್ ಮಾಡೋಕೆ ಕಷ್ಟ.. ಲೈಸೆನ್ಸ್ ಮಾಡಿಸೋಣ ಅಂದ್ರೆ ಅಲ್ಲಿ ಆರ್ ಟಿ ಓ ಆಫೀಸ್ ಬಳಿ ಉದ್ದ ಉದ್ದ ಕ್ಯೂ ನಿಲ್ಲಬೇಕು. ಜೊತೆಗೆ ಏಜೆಂಟ್ರ ಕಾಟ. ಈ ರೀತಿಯ ಗೊಣಗಾಟ ಇದ್ದೇ ಇರುತ್ತೆ..ಆದ್ರೆ ಇನ್ಮುಂದೆ ಈ ಗೊಣಗಾಟಕ್ಕೆ ಬ್ರೇಕ್ ಬೀಳಲಿದೆ. ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಇನ್ಮುಂದೆ ನೀವು ಪರದಾಡಬೇಕಾಗಿಲ್ಲ.. ದಾಖಲೆಗಳನ್ನ ಹಿಡ್ಕೊಂಡು ಆರ್ ಟಿಓ ಕಚೇರಿಗೆ ಅಲೆದಾಡ್ತಾ ಪಾಡು ಪಡಬೇಕಾಗಿಲ್ಲ. ಯಾಕಂದ್ರೆ ಇದೀಗ ಆನ್ ಲೈನ್ ನಲ್ಲೂ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಬಹುದಾದ ವ್ಯವಸ್ಥೆಯನ್ನ ಸಾರಿಗೆ ಇಲಾಖೆ ಜಾರಿಗೊಳಿಸಿದೆ.

ಇನ್ಮುಂದೆ ಎಲ್ ಎಲ್ ಹಾಗೂ ಡಿಎಲ್ ಪಡಿಯೋದು ತುಂಬಾನೇ ಸುಲಭ.. ಹೌದು ಇದೇ ಮೊದಲ ಬಾರಿಗೆ ಯಲಹಂಕದ ಆರ್ ಟಿ ಒ ಕಛೇರಿಯಲ್ಲಿ ವೆಬ್ ಆಧಾರಿತ ಸಾರಥಿ- 4 ಅನುಷ್ಠಾನಗೊಳಿಸಲಾಗಿದೆ.ಹೀಗಾಗಿ ಇನ್ಮುಂದೆ ಏನ್ ಇದ್ರೂ ಆನ್ ಲೈನ್ ವ್ಯವಸ್ಥೆ.

ಇದನ್ನು ಓದಿ: ಕಾಡಿನ ಗುಹೆಯೊಳಗೆ ಡಿನ್ನರ್ ಪಾರ್ಟಿ...

ಸಾರಥಿಯ ಸವಾರಿ ಹೇಗೆ?

ಸಾರಥಿ -4.. ವೆಬ್ ಹಾಗೂ ಮೊಬೈಲ್ ಆಧಾರಿತ ಅಪ್ಲಿಕೇಶನ್ ಆಗಿದ್ದು, ಗೊಗಲ್ ಪ್ಲೇನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. Rto.kar.nic.in ವೆಬ್ ಸೈಟ್​​ಗೆ ಭೇಟಿ ನೀಡಿ APPLY for LL at RTO YELAHANKA ಆಯ್ಕೆ ಮಾಡಿ ಅರ್ಜಿ ಸಲ್ಲಿಸಬಹುದು. ಜೊತೆಗೆ ಕಂಪ್ಯೂಟರ್ ನಲ್ಲೂ ಅರ್ಜಿ ಸಲ್ಲಿಸಬಹುದು.. ವೆಬ್ ಓಪನ್ ಮಾಡಿದ್ರೆ ಮುಖಪುಟದ ಸಾರಥಿ ನಿಮ್ಮ ಮುಂದೆ ಬರುತ್ತಾನೆ. ನಂತ್ರ ಅಲ್ಲೇ ಆಯ್ಕೆಗಳನ್ನು ಕೊಡಲಾಗಿದೆ.. ಎಲ್ ಎಲ್ ಮತ್ತು ಡಿಎಲ್ ಗೆ ಅರ್ಜಿ ಸಲ್ಲಿಸುವವರು, ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತ್ರ ಅಪ್ಲೀಕೇಶನ್ ಫಿಲ್ ಮಾಡಿದ್ರೆ ಸಾಕು ಅರ್ಜಿಯನ್ನು ಸಲ್ಲಿಸಬಹುದು. ಇನ್ನು ಆನ್ ಲೈನ್ ನಲ್ಲೇ ದಾಖಲಾತಿಗಳನ್ನು ಸಲ್ಲಿಸಬಹುದಾಗಿದೆ.. ನಂತ್ರ ನಿಮಗೆ  ಸೂಕ್ತ ಅನಿಸಿದಾಗ ಆರ್ ಟಿ ಒ ಆಫೀಸ್ ಗೆ ಹೋಗಿ ಆನ್ ಲೈನ್ ನಲ್ಲಿ ಪರೀಕ್ಷೆಯನ್ನ ಬರೆದ್ರೆ ಅಲ್ಲೇ ನಿಮ್ಮಗೆ ಫಲಿತಾಂಶ ಸಿಗಲಿದೆ. ಜೊತೆಗೆ ಪರೀಕ್ಷೆಯಲ್ಲಿ ಪಾಸ್ ಆದ ವ್ಯಕ್ತಿ ಸ್ಮಾಟ್ ಕಾರ್ಡ್ ಪಡೆಯಬಹುದು.

ಇನ್ಮುಂದೆ ಏಜೆಂಟ್​​ ಕಾಟ ಇರಲ್ವಾ..?

ಇನ್ನು ಈ ಸಾರಥಿಯಿಂದಾಗಿ..ಅಕ್ರಮಗಳು, ಏಜೆಂಟ್ ರ ಕಾಟ ತಪ್ಪಲಿದೆ. ಆರ್ ಟಿ ಓ ಕಛೇರಿಗೆ ಅಲೆದಾಡುವ ಪರಿಸ್ಥಿತಿಯೂ ಇರೋದಿಲ್ಲ. ಸಕಾಲದಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸಲು ಸಾಧ್ಯವಾಗುತ್ತೆ.. ಸಮಯ ವ್ಯರ್ಥ ಕೂಡ ಆಗೋದಿಲ್ಲ.. ಇನ್ನು ಇದು ಸಿಬ್ಬಂಧಿಗಳ ಕೊರತೆಯನ್ನು ನಿರ್ವರಿಸುತ್ತೆ.. ಈ ನಿಟ್ಟಿನಲ್ಲಿ ಸಾರಥಿ-4 ಸಾಕಷ್ಟು ಉಪಯೋಗವಾಗುತ್ತೆ.. ಪದೇ ಪದೇ ಆರ್ ಟಿ ಓ ಕಛೇರಿಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ, ಅವ್ರ ಸಮಯವನ್ನು ಉಳಿತಾಯ ಮಾಡುತ್ತದೆ..ಈ ಹೊಸ ಸಾಫ್ಟವೇರ್ ನಾಗರೀಕರಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ, ದಾಖಲಾತಿ, ಫೋಟೋ, ಸಹಿ, ಆಪ್ಲೋಡ್, ಆನ್ ಲೈನ್ ಮೂಲಕ ಎಲ್ ಎಲ್ ಮತ್ತು ಡಿ. ಎಲ್ಗಳ ಶುಲ್ಕ ಪಾವತಿ, ಪರೀಕ್ಷೆಗಾಗಿ ಮುಂಗಡ ದಿನಾಂಕ ನಿಗಧಿ, ಕಲಿಕಾ ಅನುಜ್ಞಾಪತ್ರದ ಡೌನ್ ಲೋಡ್ ಸೌಲಭ್ಯಗಳನ್ನು ಒದಗಿಸುತ್ತದೆ. ನಾಗರೀಕರು ಶುಲ್ಕ ಪಾವತಿಸಲು ಹಾಗೂ ಪರೀಕ್ಷೆಗೆ ಹಾಜರಾಗಲು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿರುವುದಿಲ್ಲ.. ಈ ಸೌಲಭ್ಯವು ಕಾದಗ ರಹಿತ ಪದ್ಧತಿಯಡೆಗೆ ಒಂದು ಹೆಜ್ಜೆಯಾಗಿರುತ್ತದೆ.

ಕರ್ನಾಟಕದಲ್ಲಿ ಮೊದಲ ಸಾರಥಿಯ ರೈಡ್ ..!

ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಬೆಂಗಳೂರಿನ ಯಲಹಂಕದ ಆರ ಟಿ ಓ ಕಚೇರಿಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಆರ್ ಟಿ ಓನ 59 ಕಛೇರಿಗಳಲ್ಲೂ ಗಣಕೀಕರಣ ಮಾಡಲಾಗುತ್ತೆ. ಇದ್ರಿಂದಾಗಿ ಜನ್ರಿಗೆ ಸುಲಭವಾಗಿ ತಮ್ಮ ಲೈಸನ್ಸ್​​ಗಳನ್ನು ಪಡೆಯಬಹುದಾಗಿದೆ.

ಇದನ್ನು ಓದಿ

1. ಆನ್​ಲೈನ್​ನಲ್ಲಿ ಪೂಜಾ ಸಾಮಗ್ರಿ: ದೇಶ ವಿದೇಶದಲ್ಲೂ ಸತೀಶ್ ಸ್ಟೋರ್ಸ್​ನ ಕಮಾಲ್

2. ಸಾಹಸದ ಹಾದಿಯಲ್ಲಿ ಮೂವರು ಮಹಿಳೆಯರ ಯಶಸ್ವೀ ಯಾನ.. !

3. ಬೆಂಗಳೂರಿನಲ್ಲೊಬ್ಬ ಅಪ್ಪಟ ಕ್ರಿಕೆಟ್ ಅಭಿಮಾನಿ...

Related Stories

Stories by YourStory Kannada