ಗರ್ಭಿಣಿಯರ ಆರೋಗ್ಯದ ಕಾಳಜಿವಹಿಸುವ mhealth

ಅಗಸ್ತ್ಯ

ಗರ್ಭಿಣಿಯರ ಆರೋಗ್ಯದ ಕಾಳಜಿವಹಿಸುವ mhealth

Saturday February 27, 2016,

2 min Read

ಟ್ಯಾಕ್ಸಿ, ಆಟೋ, ಶೌಚಾಲಯಗಳ ಹುಡುಕಾಟಕ್ಕೆ, ಮಾಹಿತಿ ಪಡೆಯಲು ಮೊಬೈಲ್ ಅಪ್ಲಿಕೇಷನ್‍ಗಳಿವೆ. ಇದೀಗ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿವಹಿಸಲೊಂದು ಮೊಬೈಲ್ ಅಪ್ಲಿಕೇಷನ್ ಹುಟ್ಟಿಕೊಂಡಿದೆ.

ಹೌದು, ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿನ ಗರ್ಭಿಣಿ ಮಹಿಳೆಯರು ಹಾಗೂ ಶಿಷುವಿನ ಆರೋಗ್ಯ ಕಾಳಜಿಗಾಗಿ ಬಿಬಿಎಂಪಿ, ವರ್ಲ್ಡ್​​ ವಿಜ್ಹನ್ ಇಂಡಿಯಾ ಸಹಯೋಗದಲ್ಲಿ `ಎಂ-ಹೆಲ್ತ್' ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಸರ್ಕಾರಿ ಆಸ್ಪತ್ರೆಗಳ ವ್ಯಾಪ್ತಿಯಲ್ಲಿನ ಗರ್ಭಿಣಿ ಮಹಿಳೆಯರ ಸಂಪೂರ್ಣ ವಿವರ, ಮಗುವಿನ ವಿವರ, ಲಸಿಕೆ ಹಾಗೂ ಚುಚ್ಚುಮದ್ದು ಹಾಕಿಸಬೇಕಾದ ದಿನಾಂಕದಿಂದ ಹಿಡಿದು ಪ್ರತಿಯೊಂದು ಮಾಹಿತಿಯನ್ನೂ ಆ್ಯಪ್ ಮೂಲಕವೇ ಪಡೆಯಬಹುದು. ಗರ್ಭಿಣಿಯರಲ್ಲಿ ಆರೋಗ್ಯ ಕಾಳಜಿ ಕುರಿತು ಜಾಗೃತಿ ಮೂಡಿಸಲು ಅನುಕೂಲವಾಗುವಂತೆ ಹಾಗೂ ನವಜಾತ ಶಿಶುಗಳ ಆರೋಗ್ಯ ಸುಧಾರಣೆಗಾಗಿ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

image


42 ಸಾವಿರ ಜನರಿಗೆ ಪ್ರಯೋಜನ:

ವರ್ಲ್ಡ್​​ ವಿಷನ್ ಇಂಡಿಯಾ, ಬಾಕ್ಸ್ಟರ್ ಫೌಂಡೇಷನ್ ಮತ್ತು ಬಿಬಿಎಂಪಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಮೊಬೈಲ್ ಆ್ಯಪ್‍ನಿಂದ ಬೆಂಗಳೂರಿನ 17 ಕೊಳಗೇರಿ ಪ್ರದೇಶದ ನಾಗರಿಕರು ಸೇರಿದಂತೆ 42,700 ಮಂದಿ ಇದರ ಉಪಯೋಗ ಪಡೆಯಲಿದ್ದಾರೆ.

ಇದನ್ನು ಓದಿ

ಬಿಯರ್ ಕುಡಿದು ಬೋರ್ ಆಗಿದ್ರೆ ಬಿಯರ್ ಕೇಕ್ ತಿನ್ನಿ.. 

ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ:

ಗರ್ಭಿಣಿ ಹಾರೈಕೆ, ಮಗು ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ಆ್ಯಪ್ ಮೂಲಕ ದೊರೆಯಲಿದೆ. ಎಲ್ಲಾ ತಾಯಂದಿರ ದತ್ತಾಂಶ ಶೇಖರಿಸಿದ್ದು ಹೆರಿಗೆ ಆಗುವವರೆಗೂ ಸಲಹೆ-ಸೂಚನೆ ಆ್ಯಪ್ ಮೂಲಕ ಕಳುಹಿಸಲಾಗುವುದು. ಚುಚ್ಚುಮದ್ದು, ಪೋಲಿಯೊದಂತಹ ಲಸಿಕೆ ಹಾಕಿಸಲು ಆ್ಯಪ್ ಮೂಲಕ ಅಲರ್ಟ್ ಕೂಡ ಮಾಡಲಾಗುತ್ತದೆ.

image


ಮೊದಲು 3 ಆರೋಗ್ಯ ಕೇಂದ್ರಗಳಿಗೆ ಸೀಮಿತ:

ಸದ್ಯ ಬಿಡುಗಡೆ ಮಾಡಲಾಗಿರುವ ಮೊಬೈಲ್ ಅಪ್ಲಿಕೇಷನ್ ಬೆಂಗಳೂರಿನ 3 ಆರೋಗ್ಯ ಕೇಂದ್ರಗಳಿಗಷ್ಟೇ ಸೀಮಿತವಾಗಿದೆ. ಗಂಗೊಂಡಲನಹಳ್ಳಿ, ಆವಲಹಳ್ಳಿ ಹಾಗೂ ಪಂತರಪಾಳ್ಯ ವಾರ್ಡ್‍ನ 3 ಆರೋಗ್ಯ ಕೇಂದ್ರಗಳಿಗೆ ಸೀಮಿತಗೊಳಿಸಲಾಗಿದೆ. ಈ ವ್ಯಾಪ್ತಿಯ 12 ಕಿರು ಆರೋಗ್ಯ ಸಹಾಯಕರು, 24 ಆಶಾ ಕಾರ್ಯಕರ್ತಯರು ಕಾರ್ಯಕ್ರಮದಲ್ಲಿ ತೊಡಗಿದ್ದು, ಒಟ್ಟು 25 ಮೊಬೈಲ್‍ಗಳನ್ನು ಆರೋಗ್ಯ ಸಹಾಯಕರಿಗೆ ಉಚಿತವಾಗಿ ವಿತರಣೆ ಮಾಡಲಾಗಿದೆ. ಅವರು ಆ ಮೊಬೈಲ್‍ನ ಮೂಲಕ ತಮ್ಮಲ್ಲಿಗೆ ಬರುವ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಸಂಪೂರ್ಣ ಮಾಹಿತಿ ನಮೂದಿಸಲಿದ್ದಾರೆ. ಆ ಮಾಹಿತಿಯಾಧಾರಿಸಿ ತಮ್ಮಲ್ಲಿಗೆ ಚಿಕಿತ್ಸೆಗೆ ಬರುವರು ಮತ್ತೆ ಇನ್ಯಾವಾಗ ಪರೀಕ್ಷೆಗೆ ಬರಬೇಕು ಮತ್ತು ಅಲ್ಲಿಯವರೆಗೆ ಯಾವ ಔಷಧ ತೆಗೆದುಕೊಳ್ಳಬೇಕು ಎಂಬುದನ್ನು ಅಪ್ಲಿಕೇಷನ್ ಅಲರ್ಟ್ ಮಾಡಲಿದೆ.

ಇದೇ ಮೊದಲು:

ಈ ರೀತಿ ಆರೋಗ್ಯ ಸಂಬಂಧಿ ಅದರಲ್ಲೂ ಗರ್ಭಿಣಿಯರಿಗಾಗಿ ಮೊಬೈಲ್ ಅಪ್ಲಿಕೇಷನ್ ಹುಟ್ಟು ಹಾಕಿರುವುದು ರಾಜ್ಯದಲ್ಲಿ ಇದೇ ಮೊದಲು. ಬೆಂಗಳೂರಿನಲ್ಲಿ ಸದ್ಯ ಎಂ-ಹೆಲ್ತ್ ಅಪ್ಲಿಕೇಷನ್ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಬೇರೆ ನಗರಗಳಿಗೂ ಅದು ವಿಸ್ತರಿಸಲಾಗುತ್ತದೆ ಎಂದು ವರ್ಲ್ಡ್​​ ವಿಷನ್ ಇಂಡಿಯಾದವರು ಹೇಳುತ್ತಾರೆ.

ಸಮಾಜ ಸೇವೆಯೇ ಗುರಿ:

ಅಲ್ಲದೆ ಸಾಮಾಜಿಕ ಸ್ವಯಂ ಸೇವಾ ಸಂಸ್ಥೆಯಾಗಿರುವ ವರ್ಲ್ಡ್​​ ವಿಷನ್ ಸಮಾಜದಲ್ಲಿನ ಬಡ ಮತ್ತು ನ್ಯಾಯವಂಚಿತ ಮಕ್ಕಳ ಆರೋಗ್ಯ ವೃದ್ಧಿಗೆ ಕೆಲಸ ಮಾಡುತ್ತಿದೆ. ಅಲ್ಲದೆ, ವಿಶ್ವದ 100 ದೇಶಗಳಲ್ಲಿ ಸೇವೆ ಮಾಡುತ್ತಿದೆ. ಭಾರತದಲ್ಲಿ 1962ರಿಂದ ತನ್ನ ಕಾರ್ಯವನ್ನು ನಿರ್ವಗಿಸುತ್ತಿದ್ದು, 26 ರಾಜ್ಯದ 163 ಜಿಲ್ಲೆಯ 26 ಲಕ್ಷಕ್ಕು ಅಧಿಕ ಮಕ್ಕಳ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಇಂದು 5300 ನಗರ, ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯದ ಸ್ಥಳಗಳಲ್ಲಿ ಅಸ್ತಿತ್ವ ಹೊಂದಿದ್ದು, ಸಮುದಾಯಗಳ ಅಭಿವೃದ್ಧಿಗೆ ಧೀರ್ಘಾವಧಿ ಪರಿಹಾರ ಮತ್ತು ಪ್ರಾಕೃತಿಕ ವಿಪತ್ತುಗಳಿಗೆ ತಕ್ಷಣದ ನೆರವು ನೀಡುತ್ತಿದೆ.

ಇದನ್ನು ಓದಿ

1. ಹೆಲಿಕಾಪ್ಟರ್ ವಿನ್ಯಾಸಕಿ, ಸಾರಸ್ವತ ಲೋಕದ ಸಾಧಕಿ.. ಗಂಡುಮೆಟ್ಟಿದ ನೆಲದ ದಿಟ್ಟ ವನಿತೆ ನೇಮಿಚಂದ್ರ

2. ರೈಲಿನಲ್ಲಿ ಸಿಗಲಿದೆ ಬಗೆ ಬಗೆಯ ಚಹಾ

3. ಏಳು ಗುಡ್ಡಗಳನ್ನು ಕಡಿದು ರಸ್ತೆ ನಿರ್ಮಿಸಿದ ‘ಭಾಪ್’ಕರ್