ಭಾರತದಲ್ಲಿ ಡಿಜಿಟಲ್‌ ಕೂಪನ್‌ಗಳಿಗೆ ಬೇಡಿಕೆ ಹೆಚ್ಚಿಸುವಲ್ಲಿ ಮೊಬೈಲ್‌ ವೇದಿಕೆಗಳ ಪಾತ್ರ

ಟೀಮ್ ವೈ.ಎಸ್​. ಕನ್ನಡ

0


ಭಾರತದ ಮಾರುಕಟ್ಟೆಯಲ್ಲಿ ಡಿಜಿಟಲ್ ಕೂಪನ್‌ಗಳು ನಿಧಾನವಾಗಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಡಿಜಿಟಲ್ ಕೂಪನ್‌ಗಳಿಂದ ಗ್ರಾಹಕರಿಗೆ ಅದೆಷ್ಟೋ ಮಟ್ಟದ ಉಳಿತಾಯವಾಗುತ್ತದೆ. ಅಲ್ಲದೇ ಈ ರೀತಿಯ ಡಿಜಿಟಲ್ ಕೂಪನ್‌ಗಳನ್ನು ಬಿಡುತ್ತಿರುವ ಸಂಸ್ಥೆಗಳಿಂದ ಉದ್ಯಮಗಳೂ ಸಹ ಮಾರುಕಟ್ಟೆಯಲ್ಲಿ ದಾಖಲೆಯ ಏರಿಕೆ ಕಂಡಿವೆ.

ಪೆಪ್ಪರ್ ವುಡ್ ಪಾರ್ಟ್‌ನರ್ಸ್ ಬಿಡುಗಡೆ ಮಾಡಿರುವ ಅಂಕಿಅಂಶಗಳ ವರದಿಯ ಪ್ರಕಾರ ಡಿಜಿಟಲ್ ಕೂಪನ್‌ಗಳು ಮಾರುಕಟ್ಟೆಯಲ್ಲಿ ದಾಖಲೆಯ ಬೆಳವಣಿಗೆ ಕಂಡಿದೆ. ಈ ಬೆಳವಣಿಗೆ 2011ರಲ್ಲಿ ಶೇ.629ರಷ್ಟಿತ್ತು. ಆದರೆ ಇನ್ನೂ ಹಲವು ಕಂಪನಿಗಳು ಇನ್ನೂ ಸಹ ಪತ್ರಿಕೆಗಳಲ್ಲಿ ಜಾಹೀರಾತು ನೀಡುವಂತಹ ಹಳೆಯ ಪದ್ಧತಿಗಳಿಗೇ ಇನ್ನೂ ಅಂಟಿಕೊಂಡಿದೆ. ಈ ಸಂಸ್ಥೆಗಳಿಗೆ ತಮ್ಮ ಮಾರಾಟವನ್ನು ಹೆಚ್ಚಿಸಿಕೊಳ್ಳುವಲ್ಲಿ ಡಿಜಿಟಲ್ ಕೂಪನ್‌ಗಳ ಮಹತ್ವ ಏನು ಎಂಬುದರ ಬಗ್ಗೆ ತಿಳಿಯಬೇಕಿದೆ. ಭಾರತ ಸೇರಿದಂತೆ ಎಲ್ಲೆಡೆ ಮುದ್ರಣ ಮಾಧ್ಯಮದ ಪ್ರಭಾವ ಕಮ್ಮಿಯಾಗುತ್ತಿದೆ ಎಂದು ಹೇಳಲಾಗುತ್ತಿರುವ ಈ ದಿನಗಳಲ್ಲಿ ಡಿಜಿಟಲ್ ಕೂಪನ್‌ಗಳ ಮಹತ್ವವನ್ನು ಅರಿಯುವುದು ಅತ್ಯಂತ ಅವಶ್ಯಕವೂ ಆಗಿದೆ. ಈ ಕ್ಷೇತ್ರಕ್ಕೆ ಹೆಚ್ಚಿನ ಅವಕಾಶವೂ ಇದೆ.

ಆಸಕ್ತಿದಾಯಕ ವಿಚಾರ ಎಂದರೆ ವೆಬ್‌ಸೈಟ್‌ಗಳಲ್ಲಿ ಮೊಬೈಲ್ ಟ್ರಾಫಿಕ್ ಮತ್ತು ಆಕರ್ಷಣೆಯಲ್ಲಿ ಅಸಾಧಾರಣ ಬೆಳವಣಿಗೆ ಕಂಡುಬಂದಿದೆ. ಇದು ಡಿಜಿಟಲ್ ಕೂಪನ್‌ಗಳ ಬೇಡಿಕೆ ಮತ್ತು ಜನಪ್ರಿಯತೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತಿದೆ. 2015ರ ಆಗಸ್ಟ್‌ ನಲ್ಲಿ ಶಾಪ್‌ ಪೈರಟ್.ಕಾಮ್ ಒಂದು ಮಾರ್ಕೆಟ್ ಸರ್ವೇ ನಡೆಸಿತ್ತು. ಇದರಲ್ಲಿ ದೆಹಲಿ ಮತ್ತು ಮುಂಬೈನ 25 ರಿಂದ 40 ವರ್ಷ ವಯಸ್ಸಿನ ವಾರ್ಷಿಕ ಆರು ಲಕ್ಷ ರೂ. ಆದಾಯ ಹೊಂದಿರುವ 100 ಮಂದಿ ಭಾಗಿಯಾಗಿದ್ದರು. ಇವರಲ್ಲಿ ಶೇ.60ರಷ್ಟು ಮಂದಿ ತಾವು ತೆಗೆದುಕೊಳ್ಳುವ ಉತ್ಪನ್ನಗಳಿಗಾಗಿ ಎಂದೂ ಕೂಪನ್‌ಗಳನ್ನು ಖರೀದಿಸಿಯೇ ಇರಲಿಲ್ಲ. ಆದರೆ ಆಶ್ಚರ್ಯಕರ ವಿಚಾರ ಎಂದರೆ ಶೇ.42ರಷ್ಟು ಜನ ಡಿಜಿಟಲ್ ಕೂಪನ್ ವ್ಯವಸ್ಥೆಗೆ ಒಳಪಟ್ಟಿದ್ದರು ಮತ್ತು ಕೂಪನ್‌ಗಳನ್ನು ಬಳಸುತ್ತಿದ್ದರು. ಇವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಮೊಬೈಲ್‌ ವೇದಿಕೆಯನ್ನು ಬಳಸಿಕೊಂಡು ಕೂಪನ್‌ಗಳ ಸಹಾಯದಿಂದ ಉತ್ಪನ್ನಗಳನ್ನು ಖರೀದಿಸುತ್ತಿದ್ದರು. ಇದು ಡಿಜಿಟಲ್ ಕೂಪನ್ ಮಾರ್ಕೆಟ್ ವೇಗವಾಗಿ ಬೆಳೆಯುತ್ತಿದೆ ಮತ್ತು ಗ್ರಾಹಕರು ಕೂಪನ್‌ಗಳ ಬಳಕೆಗಾಗಿ ಮೊಬೈಲ್‌ಗಳ ಮೂಲಕ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ.

ಭಾರತದಲ್ಲಿ ಡಿಜಿಟಲ್ ಕೂಪನ್ ಮಾರುಕಟ್ಟೆ ಅಮೇರಿಕಾದ ಮಾರುಕಟ್ಟೆಗೆ ಸ್ಪರ್ಧೆಯೊಡ್ಡುತ್ತಿದೆ. ಡಿಜಿಟಲ್ ಉದ್ಯಮಗಳ ಬಗ್ಗೆ ರಹಸ್ಯವಾಗಿ ಅನಾಲಿಸಿಸ್ ಮಾಡುವ ಇ- ಮಾರ್ಕೆಟ್ ವೊಂದರ ಪ್ರಕಾರ 2012ರಲ್ಲಿ 92.5 ಮಿಲಿಯನ್ ಜನ ಡಿಜಿಟಲ್ ಕೂಪನ್‌ಗಳನ್ನು ಬಳಸಿದ್ದಾರೆ. ಅಲ್ಲದೇ 2010ರಲ್ಲಿ 12.3 ಮಿಲಿಯನ್ ಇದ್ದ ಮೊಬೈಲ್‌ ಕೂಪನ್‌ ಬಳಕೆದಾರರ ಸಂಖ್ಯೆ 2014ರಲ್ಲಿ 53.2 ಮಿಲಿಯನ್‌ಗೆ ಏರಿಕೆಯಾಗಿದೆ.

ಐಎಎಂಎಐ ಮತ್ತು ಕೆಪಿಎಂಜಿ ಸಂಸ್ಥೆಗಳ ಜಂಟಿ ಸಮೀಕ್ಷೆ ಇಂಡಿಯಾ ಆನ್‌ದ ಗೋ- ಮೊಬೈಲ್ ಇಂಟರ್‌ನೆಟ್ ವಿಶನ್ ರಿಪೋರ್ಟ್ 2015ರ ಪ್ರಕಾರ, 2014ರ ಅಂತ್ಯದಲ್ಲಿ ಸರಿಸುಮಾರು 82 ಮಿಲಿಯನ್ ಜನರು 3 ಜಿ ಸೇವೆಗೆ ಸಬ್‌ಸ್ಕ್ರೈಬ್ ಆಗಿದ್ದರು. ಇದರಿಂದ ತಿಳಿಯುವುದೇನೆಂದರೆ ಸ್ಮಾರ್ಟ್‌ಫೋನ್‌ಗಳು ಜನಸಾಮಾನ್ಯರನ್ನೂ ಸಹ ತಲುಪುತ್ತಿವೆ. ಮೈಕ್ರೋಮ್ಯಾಕ್ಸ್, ಲೆನೋವೋ ಮತ್ತು ಲಾವಾ ಮೊಬೈಲ್ ಉತ್ಪಾದನಾ ಸಂಸ್ಥೆಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಫೋನ್‌ಗಳ ಮಾರಾಟ ಮಾಡುತ್ತಿರುವುದರಿಂದ ಮೊಬೈಲ್‌ ವೇದಿಕೆಗಳು ಅದ್ಭುತವಾಗಿ ಬೆಳೆಯುತ್ತಿದೆ. ಇದು ಡಿಜಿಟಲ್ ಕೂಪನ್‌ಗಳು ಶೀಘ್ರದಲ್ಲಿ ಬೆಳವಣಿಗೆ ಸಾಧಿಸಲು ಪ್ರಬಲ ಮಾಧ್ಯಮವಾಗಿದೆ. 2016ರ ಒಳಗೆ ಸ್ಮಾರ್ಟ್ ಫೋನ್‌ಗಳ ಮಾರುಕಟ್ಟೆಯಲ್ಲಿ ಭಾರತ ಅಮೆರಿಕಾ ಮಾರುಕಟ್ಟೆಯನ್ನು ಮೀರಿಸಲಿದೆ. ಅಲ್ಲದೇ ಸ್ಮಾರ್ಟ್ ಫೋನ್‌ಗಳ ಬೆಲೆಯಲ್ಲೂ ಗಣನೀಯ ಇಳಿಕೆ ಕಂಡುಬರಲಿದೆ ಎಂದು ವರದಿ ಮಾಡಿದೆ. ಜಾಗತಿಕ ಸಂಶೋಧನಾ ಸಂಸ್ಥೆ ಇ-ಮಾರ್ಕೆಟರ್. ಇದಕ್ಕೆ ಉದಾಹರಣೆ ಎಂಬಂತೆ ಹಬ್ಬದ ಸೀಸನ್‌ಗಳಲ್ಲಿ ಫ್ಲಿಪ್‌ ಕಾರ್ಟ್, ಅಮೆಝಾನ್ ನಂತಹ ಮೊಬೈಲ್ ಡಿಜಿಟಲ್ ವೇದಿಕೆಗಳಲ್ಲಿ ಶಾಪಿಂಗ್‌ನ ಬೇಡಿಕೆ ಹೆಚ್ಚುತ್ತಿದೆ. ಈ ಎರಡೂ ಸಂಸ್ಥೆಗಳು ಹಬ್ಬದ ಸೀಸನ್‌ನ ಮಾರಾಟ ಆರಂಭವಾದ ಕೆಲವೇ ಗಂಟೆಗಳಲ್ಲಿ 6 ಅಂಕಿಗಳ ದಾಖಲೆಯ ಮಟ್ಟದ ಮಾರಾಟ ಮಾಡಿ ಗಮನ ಸೆಳೆದಿವೆ. ಸೇಲ್ ಆರಂಭವಾದ 10 ಗಂಟೆಗಳಲ್ಲಿ 6 ಮಿಲಿಯನ್ ಗ್ರಾಹಕರು ಫ್ಲಿಪ್ ಕಾರ್ಟ್ ಸಂಸ್ಥೆಯ ವೆಬ್‌ಸೈಟ್‌ಗೆ ಭೇಟಿ ನೀಡಿದ್ದು ಮಿಲಿಯನ್‌ ಗಟ್ಟಲೆ ಉತ್ಪನ್ನಗಳನ್ನು ಕೊಂಡುಕೊಂಡಿದ್ದಾರೆ. ಈ ಎಲ್ಲಾ ಆನ್‌ಲೈನ್ ಕಂಪನಿಗಳ ಮೊಬೈಲ್‌ ಆ್ಯಪ್‌ಗಳು ಸಾಕಷ್ಟು ಜನಪ್ರಿಯತೆ ಪಡೆದಿದೆ.

ಮೊಬೈಲ್ ವೇದಿಕೆಗಳ ಮೂಲಕ ಸುಲಭವಾಗಿ ವ್ಯವಹರಿಸುವುದು ಸಾಧ್ಯವಿದೆ. ಅಲ್ಲದೇ ಇದರಲ್ಲಿ ಗ್ರಾಹಕರ ವರ್ತನೆ, ಸ್ಥಳ ಇತ್ಯಾದಿಗಳನ್ನ ಅನುಸರಿಸಿ ಸಮರ್ಪಕವಾದ ಡೀಲ್‌ಗಳೂ ಸಹ ಲಭ್ಯವಿದೆ. ಇದರಿಂದ ಡಿಜಿಟಲ್ ಕೂಪನ್​ಗಳ ಬೆಳವಣಿಗೆಯಲ್ಲಿ ಆಶಾವಾದ ಮೂಡಿದೆ. ಮೊಬೈಲ್‌ಗಳು ಈ ಕೂಪನ್‌ಗಳು ವೇಗವಾಗಿ ಬೆಳೆಯಲು ಸಹಕಾರಿಯಾಗಿದೆ. ಮೊಬೈಲ್‌ಗಳಲ್ಲಿ ಶಾಪ್‌ಪೈರಟ್.ಇನ್, ಹ್ಯಾಪಿಚೆಕೌಟ್.ಕಾಮ್, ಕೂಪನ್ಸ್ ದುನಿಯಾ.ಕಾಮ್ ಇತ್ಯಾದಿ ಆ್ಯಪ್‌ಗಳನ್ನೂ ಸಹ ಬಳಸಬಹುದಾಗಿದೆ. ಮೊಬೈಲ್ ಮುಖಾಂತರ ಎಸ್‌ಎಂಎಸ್‌ ಪ್ರಮೋಷನ್, ಮೊಬೈಲ್ ಆ್ಯಪ್‌ಗಳು ಮತ್ತು ಮೊಬೈಲ್ ಬಾರ್‌ಕೋಡ್‌ಗಳನ್ನು ವಿತರಿಸಲಾಗುತ್ತದೆ. ಈ ಕೂಪನ್‌ಗಳನ್ನು ಬಳಸಿಕೊಂಡು ಶಾಪಿಂಗ್ ಮಾಡಬಹುದಾಗಿದೆ.

ಬೆಳೆಯುತ್ತಿರುವ ಇ-ಕಾಮರ್ಸ್ ಉದ್ಯಮದಲ್ಲಿ ಇಂತಹ ಅವಕಾಶಗಳನ್ನು ವಿಫುಲವಾಗಿ ಬಳಸಿಕೊಳ್ಳುವತ್ತ ಚಿಂತನೆ ನಡೆಸಿರುವ ಕಂಪನಿಗಳು ಡಿಜಿಟಲ್ ಕೂಪನ್‌ಗಳನ್ನು ಆಫರ್ ಮಾಡುತ್ತಿವೆ. ಈ ರೀತಿಯ ಗ್ರಾಹಕರನ್ನು ಸೆಳೆಯುವ ವಿಭಿನ್ನ ಜಾಹೀರಾತಿನ ಮೂಲಕ ತಮ್ಮ ಮಾರಾಟ ಹೆಚ್ಚಿಸಿಕೊಳ್ಳಲು ತಂತ್ರ ಹೂಡಿದೆ.

ಡಿಜಿಟಲ್ ಕೂಪನ್‌ಗಳ ಲಭ್ಯತೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯತೆ ಇದೆ. ಅಲ್ಲದೇ ಇದರಿಂದ ಆಗುವ ದರ ಕಡಿತ ಸೇರಿದಂತೆ ಇತರ ಉಪಯೋಗಗಳ ಕುರಿತಾಗಿ ಗ್ರಾಹಕರಿಗೆ ಅರಿವು ಮೂಡಿಸಬೇಕು. ಪರಿಣಾಮಕಾರಿಯಾಗಿ ಮಾರ್ಕೆಟಿಂಗ್ ಮಾಡುವ ವಿಧಾನಗಳನ್ನು ಅನುಸರಿಸುವುದರಿಂದ ಡಿಜಿಟಲ್ ಕೂಪನ್‌ಗಳ ಹಾದಿ ಇನ್ನಷ್ಟು ಸುಗಮವಾಗಲಿದೆ. ಮುಂದಿನ ಕೆಲ ವರ್ಷಗಳಲ್ಲಿ ಭಾರತೀಯ ಕಂಪನಿಗಳು ಮತ್ತು ಅಂತಿಮ ಹಂತದ ಗ್ರಾಹಕ ಕೂಡ ಡಿಜಿಟಲ್ ಕೂಪನ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.


ಅನುವಾದಕರು: ವಿಶ್ವಾಸ್​

Related Stories

Stories by YourStory Kannada