ಕಸದ ಸಮಸ್ಯೆ ನಿವಾರಿಸಲು ಕೈತುಂಬಾ ಸಂಬಳ ಬರೋ ಕೆಲಸ ಬಿಟ್ಟ ಇಬ್ಬರು ಭಾರತೀಯರು..!

ಟೀಮ್​​ ವೈ.ಎಸ್​​​.

ಕಸದ ಸಮಸ್ಯೆ ನಿವಾರಿಸಲು ಕೈತುಂಬಾ ಸಂಬಳ ಬರೋ ಕೆಲಸ ಬಿಟ್ಟ ಇಬ್ಬರು ಭಾರತೀಯರು..!

Monday September 28, 2015,

4 min Read

ಕಸದ ಸಮಸ್ಯೆ ಮಾಡಿರೋ ಅವಾಂತರ ಅಷ್ಟಿಷ್ಟಲ್ಲ. ಬೆಂಗಳೂರಿನ ಜನ ಕಸ ವಿಲೇವಾರಿಗೆ ಜಾಗವಿಲ್ಲದೆ ಪರದಾಟ ನಡೆಸುತ್ತಿದ್ದಾರೆ. ಇದು ಕೇವಲ ಬೆಂಗಳೂರಿನ ಸಮಸ್ಯೆ ಮಾತ್ರ ಅಲ್ಲ.. ಇಡೀ ಭಾರತವೇ ಕಸದ ಸಮಸ್ಯೆಯಿಂದ ಕಂಗೆಟ್ಟಿದೆ. ಹಾಗಂತ ಈ ಕಸವನ್ನು ಹಾಗೇ ಬಿಡುವ ಹಾಗಿಲ್ಲ. ಅದಕ್ಕೊಂದು ಮುಕ್ತಿ ಕೊಡಬೇಕು. “ಬನ್ಯನ್” ಇದು ಯಾರ ಹಂಗೂ ಇಲ್ಲದೆ, ಯಾವುದೇ ಸುದ್ದಿ ಇಲ್ಲದೆ ಕಸದ ಸಮಸ್ಯೆಗೆ ಮುಕ್ತಿ ನೀಡುವ ಪ್ರಯತ್ನ ಮಾಡುತ್ತಿದೆ. ಹೈಟೆಕ್ನಾಲಜಿಯನ್ನು ಬಳಿಸಿಕೊಂಡು, ಕಸದ ಮರುಬಳಕೆಯ ವೈಜ್ಞಾನಿಕ ರೀತಿಯನ್ನು ತಿಳಿಸಿಕೊಡುವ ಕೆಲಸ ಮಾಡುತ್ತಿದೆ. ಕಸದಿಂದ ರಸ ತೆಗೆಯುವ ಪ್ರಯತ್ನದಲ್ಲಿ ಆಗೋ ಲಾಭ ಮತ್ತು ಸದ್ಭಳಕೆಯ ಬಗ್ಗೆ ಸರಳವಾಗಿ ತಿಳಿಸಿಕೊಡುತ್ತಿದೆ.

ಬನ್ಯನ್ ಸಂಸ್ಥೆಯ ಸಹಸಂಸ್ಥಾಪಕ ಮತ್ತು ಸಿಇಒ ಮಣಿ ವಾಜಿಪೇಯಿ ಹೇಳುವಂತೆ “ ಅನೌಪಚಾರಿಕ ವಲಯಗಳಲ್ಲಿ ಕಸದ ಸಮಸ್ಯೆಯನ್ನು ವೈಜ್ಞಾನಿಕವಾಗಿ ತಿಳಿಹೇಳಿ ಅದ್ರ ಮರುಬಳಕೆ ಮತ್ತು ಉಪಯೋಗವನ್ನು ತಿಳಿಸಿಕೊಡುವ ಉದ್ದೇಶ ಹೊಂದಲಾಗಿದೆ. ಅಷ್ಟೇ ಅಲ್ಲ ಇದರಿಂದ ಬರುವ ಆದಾಯದ ಬಗ್ಗೆಯೂ ಜನರಿಗೆ ತಿಳಿ ಹೇಳುವ ಪ್ರಯತ್ನ ನಡೆಯುತ್ತಿದೆ.”

image


"ಬನ್ಯನ್"​​​ ಕನಸು ಹುಟ್ಟಿಕೊಂಡ ಕಥೆ..

ಬನ್ಯನ್ ಅನ್ನೋ ಸಂಸ್ಥೆ ಹುಟ್ಟಿಕೊಂಡ ಕಥೆಯೇ ರೋಚಕ. ಮಣಿ ಭಾರತ ಪ್ರವಾಸದಲ್ಲಿದ್ರು. ಆದ್ರೆ ಈ ವೇಳೆ ಅವರಿಗೆ ಪ್ರವಾಸದ ಅನುಭವಕ್ಕಿಂತ ಹೆಚ್ಚಾಗಿ ಕಸದಿಂದಾಗಿ ಹುಟ್ಟಿಕೊಂಡ ಕೊಳಕುತನದ ಬಗ್ಗೆ ಬೇಜಾರು ಹೆಚ್ಚಾಗಿ ಕಾಣುತ್ತಿತ್ತು. ಇದನ್ನೆಲ್ಲಾ ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡ ಮಣಿ ವೈಜ್ಞಾನಿಕವಾಗಿ ಕಸದ ಮರು ಬಳಕೆ ಮಾಡುಲು ಇಲ್ಲಿ ಅವಕಾಶವಿದೆ ಅನ್ನೋದನ್ನ ಅರಿತುಕೊಂಡು ಬಿಟ್ರು. ಆದ್ರೆ ಎಲ್ಲಿಂದಲೋ ಕೆಲಸ ಆರಂಭಿಸುವ ಬದಲು ಸಮಸ್ಯೆ ಎಲ್ಲಿ ಹುಟ್ಟಿಕೊಂಡಿದೆಯೋ ಅಲ್ಲಿಂದಲೇ ಕೆಲಸ ಆರಂಭಿಸಬೇಕು ಅಂತ ನಿರ್ಧಾರ ಮಾಡಿಬಿಟ್ರು.

ಆರಂಭದಲ್ಲಿ ಮಣಿ ಒಬ್ಬರೇ ಈ ಕೆಲಸ ಮಾಡಲು ಆರಂಭಿಸಿದ್ರು. ಬನ್ಯನ್ ಸ್ಟೀವ್ ಬ್ಲಾಂಕ್​​ರ ಲೀನ್ ಲಾಂಚ್ ಪ್ಯಾಡ್ ಪ್ರೋಗ್ರಾಂ ಮತ್ತು ಕೊಲಂಬಿಯಾ ಬ್ಯುಸಿನೆಸ್ ಸ್ಕೂಲ್​​ನ ಗ್ರೀನ್ ಹೌಸ್ ಇನ್​ಕ್ಯುಬೆಟರ್​​ ಬ್ಯುಸಿನೆಸ್ ಮಾಡೆಲ್​ನ್ನು ಆಯ್ಕೆ ಮಾಡಿಕೊಂಡಿತ್ತು. ಮಣಿಯ ಈ ಕೆಲಸಕ್ಕೆ 6 ತಿಂಗಳ ನಂತರ ರಾಜ್ ಮದನ್​ಗೋಪಾಲ್ ಅನ್ನೋ ಟೆಕ್ಕಿಯ ಸಹಾಯ ಸಿಕ್ಕಿತ್ತು. ಮದನ್ ಗೋಪಾಲ್ ಭಾರತದಲ್ಲಿದ್ದ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವ ಪ್ಲಾನ್​ಗಳ ಮೇಲೆ ಕೆಲಸ ಮಾಡುತ್ತಿದ್ದರು.

ಮಣಿ ಮತ್ತು ಮದನ್ ಗೋಪಾಲ್ ತಮ್ಮ ಹಳೆಯ ದಿನಗಳನ್ನು ಕೂಡ ನೆನಪು ಮಾಡಿಕೊಳ್ಳುತ್ತಾರೆ. 2002ರಲ್ಲಿ ನೆವಾರ್ಕ್​ನ ಡಲ್ವಾರೆ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕ್ ಇಂಜಿನಿಯರಿಂಗ್​​ನಲ್ಲಿ ಪಿ.ಎಚ್.ಡಿ ಮಾಡ್ತಾ ಇದ್ರು. ಮದನ್​​ಗೋಪಾಲ್​​​ ಮೆಕ್ಯಾನಿಕಲ್​​​ ಇಂಜಿಯರ್ ಆಗಿದ್ದರು. ಆದಾಗಲೇ ಇವರಿಬ್ಬರ ನಡುವಿನ ಗೆಳೆತನ ಗಟ್ಟಿಯಾಗಿತ್ತು. ಹೀಗಾಗಿ ಇವರಿಬ್ಬರ ಆಲೋಚನೆಗಳು ಒಂದೇ ಆಗಿತ್ತು. ಕಲಿಕೆಯ ಸಮಯದಲ್ಲಿ ಕ್ಲಾಸ್​​ಗೆ ಹೋಗದೆ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಅದಕ್ಕೊಂದು ಮುಕ್ತಿ ಹಾಡುವ ಕನಸುಗಳನ್ನು ಕಾಣುತ್ತಿದ್ದರು.

ಕಾಲೇಜು ದಿನಗಳು ಮುಗಿದ ಮೇಲೆ ಮಣಿ ಮತ್ತು ರಾಜ್ ದಾರಿ ಕವಲಾಗಿ ಹೋಗಿತ್ತು. ಮಣಿ ಸ್ಯಾನ್ ಡಿಗೋದಾ ಕ್ವಾಲ್ಕಂನಲ್ಲಿ ಕೆಲಸಕ್ಕೆ ಸೇರಿಕೊಂಡ್ರು. ರಾಜ್ ಸೀಟಲ್​ನಲ್ಲಿ ಕೆಲಸ ಮಾಡ ತೊಡಗಿದ್ರು. ಆದ್ರೆ ವೇಸ್ಟ್ ಮ್ಯಾನೇಜ್​ಮೆಂಟ್ ಬಗ್ಗೆ ಕಾಣುತ್ತಿದ್ದ ಕನಸುಗಳು ಕಮರಿ ಹೋಗಿರಲಿಲ್ಲ. ಹೀಗಿರುವಾಗ 10 ವರ್ಷಗಳ ನಂತ್ರ ಫೋನ್ ಮಾತುಕತೆಯಲ್ಲಿ ಮಣಿ ರಾಜ್​ಗೆ ವೇಸ್ಟ್ ಮ್ಯಾನೇಜ್​ಮೆಂಟ್​ನ ಬ್ಯುಸಿನೆಸ್ ಮಾಡೆಲ್ ಬಗ್ಗೆ ಹೇಳಿಬಿಟ್ರು. ಭಾರತದಲ್ಲಿನ ಕಸದ ಸಮಸ್ಯೆಯನ್ನು ಪರಿಹರಿಸುವ ವೈಜ್ಞಾನಿಕ ದಾರಿಯ ಬಗ್ಗೆ ಹೇಳಿದ್ರು. ಅಷ್ಟೇ ಅಲ್ಲ ಬರ್ಕ್ಲೇ ಮತ್ತು ಕೊಲಂಬಿಯಾ ಬ್ಯುಸಿನೆಸ್ ಸ್ಕೂಲ್ ಜೊತೆಗೆ ನಡೆಸಿದ ಅಧ್ಯಯನದ ಬಗ್ಗೆಯೂ ಹೇಳಿದ್ರು.

ಇಷ್ಟು ಹೊತ್ತಿಗೆ ಕಸದ ಪನರ್ ಬಳಕೆಯ ಬಗ್ಗೆ ಜನರಿಗೆ ತಿಳಿ ಹೇಳಲೇ ಬೇಕೆಂದು ಈ ಗೆಳೆಯರು ನಿರ್ಧಾರ ಮಾಡಿಯಾಗಿತ್ತು. ಅದೃಷ್ಟದ ನೆರವು ಸಿಕ್ತು. ಕೊಲಂಬಿಯಾದ ಗ್ರೀನ್​ಹೌಸ್​​ ಇನ್​ಕ್ಯುಬೆಟರ್​​ ಪ್ರಾಜೆಕ್ಟ್​​ನಡಿಯಲ್ಲಿ ಮಣಿ ಮತ್ತು ರಾಜ್​ಗೆ ಹೈದ್ರಾಬಾದ್ ಮತ್ತು ಬೆಂಗಳೂರಿಗೆ ಪ್ರಯಾಣ ಮಾಡುವ ಅವಕಾಶ ಸಿಕ್ತು. ಈ ಪ್ರವಾಸದಲ್ಲಿ ಮಣಿ ಮತ್ತು ರಾಜ್ ಡಜನ್​​ಗಟ್ಟಲೆ ಎಂಎನ್​ಸಿ ಕಂಪನಿಗಳ ಜೊತೆ ಮಾತನಾಡಿದ್ರು. ಹೈದ್ರಾಬಾದ್ ಮತ್ತು ಬೆಂಗಳೂರಿನ ಟೌನ್​ಶಿಪ್ ಮತ್ತು ಪ್ಲಾನ್​​ಗಳ ಬಗ್ಗೆ ತಿಳಿದುಕೊಂಡ್ರು. ಮುನಿಸಿಪಲ್ ಕಾರ್ಪೋರೇಶನ್​ನಿಂದ ಹಿಡಿದು ಖಾಸಗಿ ವೇಸ್ಟ್ ಮ್ಯಾನೇಜ್​​ಮೆಂಟ್​​ ಕಾಂಟ್ರಾಕ್ಟರ್​​ಗಳನ್ನು ಮಾತನಾಡಿಸಿದ್ರು. ಕಸ ಆಯುವವನಿಂದ ಹಿಡಿದು ರದ್ದಿ ಪೇಪರ್ ಮಾರುವವನ ಅನುಭವಗಳನ್ನು ಕೂಡ ಕೇಳಿಕೊಂಡ್ರು. 3 ತಿಂಗಳ ಈ ಅನುಭವ ಮಣಿ ಮತ್ತು ರಾಜ್​​ಗೆ ಹೊಸ ಪಾಠ ಹೇಳಿಕೊಟ್ಟಿತ್ತು. ಇಲ್ಲಿನ ಜನರಿಗೆ ವೈಜ್ಞಾನಿಕ ರೀತಿಯ ವೇಸ್ಟ್ ಮ್ಯಾನೇಜ್​ಮೆಂಟ್ ಬಗ್ಗೆ ತಿಳಿ ಹೇಳಿ ಅದ್ರಲ್ಲಿನ ಉಪಯೋಗ ಮತ್ತು ಅದ್ರಲ್ಲಿ ಲಾಭದ ಬಗ್ಗೆ ವಿವರ ನೀಡಿದ್ರು.

ಆದ್ರೆ ಅಷ್ಟು ಬೇಗ ಭಾರತದಲ್ಲಿ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಹೀಗಾಗಿ ಮತ್ತೆ ಅಮೆರಿಕಾಕ್ಕೆ ತೆರಳಿದ್ರು. ಅಲ್ಲಿನ ವೇಸ್ಟ್ ಮ್ಯಾನೇಜ್​ಮೆಂಟ್​​ ಯೂನಿಟ್​​ಗಳು​​ ಹೇಗೆ ಕೆಲಸ ಮಾಡುತ್ತವೆ ಅನ್ನೋದನ್ನ ಅರಿತುಕೊಂಡ್ರು. ಪನರ್ ಬಳಕೆಗೆ ತಗಲುವ ವೆಚ್ಚ ಮತ್ತು ಅದ್ರಿಂದ ಬರೋ ಲಾಭದ ಬಗ್ಗೆಯೂ ತಿಳಿದುಕೊಂಡ್ರು. ಕೊನೆಗೂ ಆ ದಿನ ಬಂದೇ ಬಿಡ್ತು. 2013ರ ಜುಲೈನಲ್ಲಿ ಮಣಿ ಮತ್ತು ರಾಜ್ ಮದನ್​ಗೋಪಾಲ್​ ತಮ್ಮ ಕೆಲಸಗಳಿಗೆ ರಾಜಿನಾಮೆ ನೀಡಿ ಭಾರತದಲ್ಲಿ ಬನ್ಯನ್ ಅನ್ನೋ ವೈಜ್ಞಾನಿಕ ವೇಸ್ಟ್ ಮ್ಯಾನೆಜ್​ಮೆಂಟ್​​ ಯೂನಿಟ್ ಅನ್ನು ಹುಟ್ಟಿಹಾಕಿದ್ರು. ಭಾರತದಲ್ಲಿ ಕಸ ತೆಗೆಯಲು ಬರೋ ಟೆಂಡರ್​​ಗಳ ಬಗ್ಗೆ ಮೊದಲು ಅರಿತುಕೊಂಡ್ರು. ಆನಂತ್ರ ಸ್ಯಾನ್​ಫ್ರಾನ್ಸಿಸ್ಕೋದ ಬಯೋಗ್ಯಾಸ್ ಎನರ್ಜಿ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ರೂರ್ಕೆಲಾದ ಸ್ಟೀಲ್ ಪ್ಲಾಂಟ್​ನ ಟೆಂಡರ್ ಪಡೆದುಕೊಂಡ್ರು. ಇಲ್ಲಿಂದ ಆರಂಭವಾಯಿತು ಮಣಿ ಮತ್ತು ರಾಜ್​​ರ ಬನ್ಯನ್ ಸಂಸ್ಥೆಯ ಯಾತ್ರೆ..

ಸುಲಭವಾಗಿ ಮಾಡಲಾಗಿಲ್ಲ ಮೊದಲ ಪ್ರಾಜೆಕ್ಟ್​​​..!

ಆರಂಭದಲ್ಲಿ ಅಂದುಕೊಂಡ ಕೆಲಸವನ್ನು ಅಷ್ಟು ಸುಲಭವಾಗಿ ಮಾಡಿ ಮುಗಿಸೋದಿಕ್ಕೆ ಸಾಧ್ಯವಿಲ್ಲ. ಟೆಂಡರ್, ಮಣಿ ಮತ್ತು ರಾಜ್ ಪಾಲಾಗಿ ಐದು ತಿಂಗಳಾದ್ರು ಸ್ಟೀಲ್ ಪ್ಲಾಂಟ್​ನವರು ಬನ್ಯನ್​ನ ಕೆಲಸಕ್ಕೆ ಅನುಮತಿ ನೀಡಿರಲಿಲ್ಲ. ಆದ್ರೆ ಹಠ ಬಿಡದ ಈ ಗೆಳೆಯರು ಐದು ತಿಂಗಳ ಬಳಿಕ ಅಂದುಕೊಂಡ ಕೆಲಸವನ್ನು ಮೊದಲ ಬಾರಿಗೆ ಆರಂಭ ಮಾಡಿದ್ರು. ಕಂಡ ಕನಸು ಮೊದಲ ಬಾರಿಗೆ ನನಸಾದ ಖುಷಿ ಮಣಿ ಮತ್ತು ರಾಜ್​​ದಾಗಿತ್ತು.

ಭಾರತೀಯ ಉದ್ಯಮಿಗಳು ಯಾಕೆ ಸರ್ಕಾರದಿಂದ ದೂರ ಇರ್ತಾರೆ..?

ಬನ್ಯನ್ ಸಾಲಿಡ್ ವೇಸ್ಟ್ ಮ್ಯಾನೇಜ್​ಮೆಂಟ್​​ ಮೂಲಕ ದೇಶದ ಗಮನ ಸೆಳೆದಿತ್ತು. ಸರ್ಕಾರದ ನೆರವಿಲ್ಲದೆ, ಸ್ಥಳೀಯ ಆಡಳಿತ ಸಂಸ್ಥೆಗಳನ್ನು ದೂರವಿಟ್ಟು ಕೆಲಸ ಮಾಡಲು ಆರಂಭಿಸಿತ್ತು. ಆದಾಯದ ಮೂಲವೂ ಬನ್ಯನ್​ಗೆ ಸಿಕ್ಕಿತ್ತು. ಭಾರತದಲ್ಲಿ ವರ್ಷವೊಂದಕ್ಕೆ 6.7 ಮಿಲಿಯನ್ ಟನ್ ಪುನರ್ ಬಳಕೆ ಮಾಡಬಲ್ಲ ಕಸದ ವಿಲೇವಾರಿ ನಡೆಯುತ್ತಿದೆ. ಇದರಿಂದ ಬರುವ ಅಂದಾಜು ಮೊತ್ತವೇ 19000 ಕೋಟಿ ರೂಪಾಯಿ ಅಂದ್ರೆ ಅಚ್ಚರಿ ಆಗುತ್ತದೆ. ಆದ್ರೆ ಇದ್ರ ಬಗ್ಗೆ ಇಲ್ಲಿ ತನಕ ಯಾರೂ ತಲೆಕೆಡಿಸಿಕೊಂಡಿಲ್ಲ. ಸರ್ಕಾರ ಕೂಡ ಈ ಆದಾಯದ ಮೂಲವನ್ನು ಮರೆತಿದೆ.

ಅಚ್ಚರಿ ಅಂದ್ರೆ ಭಾರತದಲ್ಲಿ ಚಿಂದಿ ಆಯುವವರ, ಕಸ ಎತ್ತುವವರುಸಮಾಜದ ಕಣ್ಣಿಗೆ ಸರಿಯಾದ ವ್ಯಕ್ತಿತ್ವದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಕಸದಿಂದ ರಸ ತೆಗೆಯುವ ಬಗ್ಗೆಯೂ ಇನ್ನೂ ಸರಿಯಾದ ಐಡಿಯಾ ಸಿಕ್ಕಿಲ್ಲ. ಭಾರತದಲ್ಲಿ ಸುಮಾರು 70% ಚಿಂದಿಯನ್ನು ಪುನರ್​ಬಳಕೆ ಮಾಡಬಹುದು ಅನ್ನೋದು ಕೂಡ ರಾಜ್ ಮತ್ತು ಮಣಿ ಅಧ್ಯಯನದ ಮೂಲಕ ತಿಳಿದುಕೊಂಡಿದ್ದಾರೆ. ಈ ಪುನರ್ ಬಳಕೆ ವಿಧಾನ ಚೈನ್ ಆಧಾರಿತ ಪದ್ಧತಿಯಲ್ಲಿ ಸಾಗಬೇಕಿದೆ.

ತಾಂತ್ರಿಕವಾಗಿ ಗಟ್ಟಿಯಾಗಿರೋದು ಬನ್ಯನ್ ಯಶಸ್ಸಿನ ಗುಟ್ಟು..!

ಕಸದ ಪುನರ್ ಬಳಕೆ ಸುಲಭವಾಗಿಲ್ಲ ಅನ್ನೋದನ್ನ ತಿಳಿದ ಮೇಲೂ ಬನ್ಯನ್ ಇದೇ ವಿಷಯದಲ್ಲಿ ಸಾಕಷ್ಟು ಮುಂದೆ ನಿಲ್ಲುತ್ತದೆ. ಇದಕ್ಕೆಲ್ಲಾ ಕಾರಣ ತಾಂತ್ರಿಕತೆ ಅನ್ನೋದನ್ನ ಮರೆಯುವ ಹಾಗಿಲ್ಲ. ಬನ್ಯನ್ ಆಂಡ್ರಾಯ್ಡ್ ಮತ್ತು ಇತರೆ ಅನೌಪಚಾರಿಕ ಫ್ಲಾಟ್ ಫಾರ್ಮ್ ಮೂಲಕ ಆ್ಯಪ್​​ನ್ನು ಕೂಡ ಡೆವಲಪ್ ಮಾಡಿದೆ. ಎಸ್ಎಂಎಸ್ ಮೂಲಕವೂ ಕಾರ್ಯಾಚರಣೆ ಮಾಡುತ್ತಿದೆ. ಈ ಎಲ್ಲಾ ತಾಂತ್ರಿಕತೆಯನ್ನು ಬಳಸಿಕೊಂಡು ಡೇಟಾ ಅನಾಲೈಸ್ ಮಾಡಿ ತನ್ನ ಉದ್ದಿಮೆಯನ್ನು ಅಭಿವೃದ್ಧಿಗೊಳಿಸುವ ಪ್ರಯತ್ನ ಮಾಡುತ್ತಿದೆ. ಕಸದ ಪುನರ್ ಬಳಕೆ ಉದ್ಯಮದಲ್ಲಿ ಸಾರಿಗೆ ಮತ್ತು ಇತರೆ ವಿಷಯಗಳು ಸಾಕಷ್ಟು ಖರ್ಚನ್ನು ತಂದುಕೊಡುತ್ತಿವೆ. ಆದ್ರೆ ಖರ್ಚು ಕಡಿಮೆ ಮಾಡಿಕೊಳ್ಳಲು ಜಿಪಿಎಸ್ ಟ್ರಾಫಿಕಿಂಗ್ ವ್ಯವಸ್ಥೆಯನ್ನು ಕೂಡ ಬನ್ಯನ್ ಮಾಡಿಕೊಂಡಿದೆ.

ಆದಾಯದ ಮಾದರಿ..

ಅಂದಹಾಗೇ ಲಾಭವಿಲ್ಲದೆ ಯಾವುದೇ ಉದ್ಯಮವೂ ನಡೆಯುವುದಿಲ್ಲ. ಬನ್ಯನ್ ಕೂಡ ಆದಾಯವನ್ನ ಲೆಕ್ಕಹಾಕುತ್ತಿದೆ. ಮರು ಬಳಕೆ ವಸ್ತುಗಳ ಮೂಲಕ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಚಿಪ್​ಗಳು ಮತ್ತು ರಿ ಪ್ರೊಸೆಸರ್ಸ್ ಹೆಚ್ಚಿನ ಆದಾಯ ತಂದುಕೊಡುತ್ತಿವೆ.

ಸದ್ಯ ಬನ್ಯನ್ ಸಂಸ್ಥೆ ಚಿಕ್ಕ ಮಟ್ಟದಲ್ಲಿ ಕಾರ್ಯಾರಂಭಿಸಿದೆ. ಮುಂದಿನ ದಿನಗಳಲ್ಲಿ ಸುಮಾರು 15000 ಕ್ಕೂ ಅಧಿಕ ಅರೆಕಾಲೀಕ ಕೆಲಸಗಾರರನ್ನು ನೇಮಿಸಿಕೊಳ್ಳುವ ಯೋಜನೆಯಲ್ಲಿದೆ. ಚೈನ್ ಸಿಸ್ಟಮ್​​ನಲ್ಲಿ ನಡೆಯುವ ಮರು ಬಳಕೆ ಉದ್ಯೋಗ ತೆಲಂಗಾಣ ಮತ್ತು ಆಂದ್ರ ಪ್ರದೇಶಕ್ಕೆ ವಿಸ್ತಾರಗೊಳ್ಳುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಒಟ್ಟಿನಲ್ಲಿ ಕೈ ತುಂಬಾ ಬರೋ ಸಂಬಳದ ಲೆಕ್ಕವನ್ನು ಬದಿಗಿಟ್ಟು ಸಮಾಜಕ್ಕೆ ಉಪಯೋಗವಾಗುವ ಮತ್ತು ಲಾಭದಾಯಕ ಉದ್ಯೋಗವನ್ನು ಸೃಷ್ಟಿಸಿದ ಮಣಿ ಮತ್ತು ರಾಜ್​ಗೆ ನಮ್ಮದೊಂದು ಸಲಾಂ..