ನಗದು ಇಲ್ಲದಿದ್ರೂ ನೋ ಟೆನ್ಷನ್ : ಕ್ಯಾಶ್​ಲೆಸ್​ ಆಗ್ತಿದೆ LPG ಪೇಮೆಂಟ್ 

ಟೀಮ್ ವೈ.ಎಸ್.ಕನ್ನಡ 

0

ಬ್ಯಾಂಕ್, ಎಟಿಎಂಗಳಲ್ಲಿ ಕ್ಯಾಶ್ ಸಿಗ್ತಾ ಇಲ್ಲ, ನಿತ್ಯದ ಖರ್ಚಿಗೆ ಏನ್ಮಾಡೋದು? ಕರೆಂಟ್ ಬಿಲ್ ತುಂಬೋದ್ಹೇಗೆ? ಗ್ಯಾಸ್ ಸಿಲಿಂಡರ್​ಗೆ ದುಡ್ಡು ಕೊಡ್ಬೇಕಲ್ಲ ಅಂತೆಲ್ಲಾ ಚಿಂತೆ ಮಾಡ್ಬೇಡಿ. ಮನೆಬಾಗಿಲಿಗೆ ಗ್ಯಾಸ್ ಸಿಲಿಂಡರ್ ತಂದುಕೊಡುವ ಸಿಬ್ಬಂದಿಗೆ ನೀವು ಇನ್ಮೇಲೆ ನಗದು ರೂಪದಲ್ಲಿ ಹಣ ಕೊಡಬೇಕಾಗಿಲ್ಲ. ಯಾಕಂದ್ರೆ ಅದಕ್ಕೂ ಇ-ಪೇಮೆಂಟ್ ಬರ್ತಾ ಇದೆ. ತಮಿಳುನಾಡಿನಲ್ಲಿ ಇಂಡೇನ್ ಅಡುಗೆ ಅನಿಲ ಸಂಪರ್ಕ ಹೊಂದಿರುವ ಎಲ್ಲರೂ ನಗದು ರಹಿತ ವಹಿವಾಟಿನ ಮೂಲಕ ಕಂಪನಿಗೆ ಹಣ ಪಾವತಿಸಬಹುದು. ರಾಜ್ಯದ ಎಲ್ಲ ಎಲ್​ಪಿಜಿ ಏಜೆಂಟ್​ಗಳು ಗ್ಯಾಸ್ ಸಿಲಿಂಡರ್ ಡೆಲಿವರಿ ಮಾಡುವ ಸಂದರ್ಭದಲ್ಲಿ ಜೊತೆಗೆ ಸ್ವೈಪಿಂಗ್ ಮಷಿನ್ ಅನ್ನು ಕೂಡ ತೆಗೆದುಕೊಂಡು ಬರಲಿದ್ದಾರೆ. 2017ರ ಜನವರಿ 1ರಿಂದ್ಲೇ ಈ ಹೊಸ ಯೋಜನೆ ಜಾರಿಗೆ ಬರಲಿದೆ.

ಎಲ್​ಪಿಜಿ ಏಜೆಂಟ್​ಗಳಿಗೆ ಬ್ಯಾಂಕ್​ಗಳು ಸ್ವೈಪಿಂಗ್ ಮಷಿನ್ ಗಳನ್ನು ಪೂರೈಸಲಿವೆ. ''ನಗದು ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇದಕ್ಕಾಗಿಯೇ ಎಲ್​ಪಿಜಿ ಏಜೆಂಟ್​ಗಳಿಗೆ ಸ್ವೈಪಿಂಗ್ ಮಷಿನ್​ಗಳನ್ನು ಒದಗಿಸಲಾಗ್ತಿದೆ. ಜನವರಿ 1ರಿಂದ ಇದು ಕಾರ್ಯರೂಪಕ್ಕೆ ಬರಲಿದೆ'' ಅಂತಾ ಇಂಡೇನ್ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ''ಸ್ವೈಪಿಂಗ್ ಮಷಿನ್ ಗಳಿಗಾಗಿ ಈಗಾಗ್ಲೇ ಬ್ಯಾಂಕ್​ಗಳಿಗೆ ಆರ್ಡರ್ ನೀಡಲಾಗಿದೆ. ಡೆಲಿವರಿ ಬಾಯ್ಸ್ ಎಲ್​ಪಿಜಿ ಸಿಲಿಂಡರ್ ಜೊತೆಗೇ ಸ್ವೈಪಿಂಗ್ ಮಷಿನ್ ತರಲಿದ್ದಾರೆ'' ಅಂತಾ ಮಾಹಿತಿ ನೀಡಿದ್ದಾರೆ.

ದೇಶದಾದ್ಯಂತ 500 ಮತ್ತು 1000 ರೂಪಾಯಿ ನೋಟು ನಿಷೇಧದ ಎಫೆಕ್ಟ್ ಜೋರಾಗಿದೆ. ಜಸಾಮಾನ್ಯರಿಗೆ ಎಟಿಎಂಗಳಲ್ಲಿ ಹಣ ಸಿಗ್ತಾ ಇಲ್ಲ, ಬ್ಯಾಂಕ್​ಗಳಲ್ಲಿ ಉದ್ದುದ್ದ ಕ್ಯೂ ಇದೆ. ಕೆಲವು ಎಟಿಎಂಗಳು ತೆರೆದಿದ್ರೂ ಅದರಲ್ಲಿ ಹಣವೇ ಇಲ್ಲ, ಇನ್ನು ಕೆಲವು ಕಡೆ ಹಣ ತುಂಬಿಸಿ ಗಂಟೆಯಾಗುವುದರಲ್ಲಿ ಎಟಿಎಂ ಖಾಲಿಯಾಗಿರುತ್ತೆ. ಎಟಿಎಂಗಳಿಗೆ ಹಣ ತುಂಬಿಸಿ ಬ್ಯಾಂಕ್ ಗಳು ಸುಸ್ತಾಗಿವೆ. ಬ್ಯಾಂಕ್​ಗಳಿಗೆ ಕೂಡ ಆರ್​ಬಿಐನಿಂದ ಸಾಕಷ್ಟು ಹೊಸ ನೋಟು ಸಿಕ್ತಾ ಇಲ್ಲ.

ಇಷ್ಟೆಲ್ಲಾ ಸಮಸ್ಯೆಗಳಿರೋದ್ರಿಂದ ನಗದು ರಹಿತ ವಹಿವಾಟು ನಿಧಾನವಾಗಿ ಜನಪ್ರಿಯತೆ ಪಡೆದುಕೊಳ್ತಿದೆ. ಫುಡ್ ಜಾಯಿಂಟ್ ಗಳು, ಸಣ್ಣ ಮಳಿಗೆಗಳು ಕೂಡ ಪೇಟಿಎಂ, ಫ್ರೀಚಾರ್ಜ್ ನಂತಹ ಆನ್​ಲೈನ್ ಪೇಮೆಂಟ್ ವೇದಿಕೆಗಳ ಮೂಲಕ ಗ್ರಾಹಕರಿಂದ ಹಣ ಪಾವತಿ ಮಾಡಿಸಿಕೊಳ್ತಿವೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದ್ರೆ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಬದಲಾಗುವ ಸಾಧ್ಯತೆ ಕಂಡುಬರ್ತಿದೆ. ಡಿಜಿಟಲೀಕರಣಕ್ಕೂ ಹೆಚ್ಚಿನ ಪ್ರೋತ್ಸಾಹ ದೊರಕುತ್ತಿದೆ. ಸದ್ಯ ನಗದು ಕೊರತೆ ಇರೋದ್ರಿಂದ ಇಂಡೇನ್ ಗ್ಯಾಸ್ ಹಾಗೂ ತಮಿಳುನಾಡು ಸರ್ಕಾರ ಕೈಗೊಂಡಿರೋ ಹೊಸ ಯೋಜನೆಯನ್ನು ಗ್ರಾಹಕರು ಸ್ವಾಗತಿಸಿದ್ದಾರೆ. 

ಇದನ್ನೂ ಓದಿ... 

ನಾಟಿ ಫ್ಯಾಕ್ಟರಿಯ Naughty ಸ್ಟೋರಿ..!

ನಿಮಗಿಷ್ಟವಿರುವ ಕೆಲಸ ಮಾಡಿ- ಕೈ ತುಂಬಾ ಸಂಬಳ ಪಡೆಯಿರಿ