ಕರ್ನಾಟಕದಲ್ಲಿ ಹೈಪರ್ ಲೂಪ್ ಕಾರಿಡಾರ್ಸ್ –ಪ್ರಿಯಾಂಕ್ ಖರ್ಗೆ ಇಂಗಿತ

ಕರ್ನಾಟಕದಲ್ಲಿ ಹೈಪರ್ ಲೂಪ್ ಕಾರಿಡಾರ್ಸ್ –ಪ್ರಿಯಾಂಕ್ ಖರ್ಗೆ ಇಂಗಿತ

Friday November 17, 2017,

3 min Read

image


ಕರ್ನಾಟಕ ಸರ್ಕಾರ ವರ್ಜಿನ್ ಹೈಪರ್ ಲೂಪ್ ಒನ್ ಜೊತೆ ಕಾರ್ಯಸಾಧ್ಯತೆಯ ಅಧ್ಯಯನ ನಡೆಸಲಿದ್ದು, ಸಿಒಇ ಅನ್ನು ಎಐ ಆ್ಯಂಡ್‌ ಡೇಟಾ ಸೈನ್ಸ್ ಗೋಸ್ಕರ ಐಬಿಎಂ, ಇಂಟೆಲ್, ಮತ್ತು ನಾಸ್ಕಾಮ್ ಸಹಭಾಗಿತ್ವದಲ್ಲಿ ಪ್ರಾರಂಭಿಸುತ್ತಿದೆ.

ನಿಮಗೆ ಗೊತ್ತಾ? ಸಂಚಾರ ದಟ್ಟಣೆಯಿಂದಾಗಿ ಬೆಂಗಳೂರಿನ ಜನರು ಗಂಟೆಗಳಿಗೆ 60 ಕೋಟಿ ಹಾಗೂ ವರ್ಷಕ್ಕೆ 3,700 ಕೋಟಿ ರೂಗಳನ್ನು ಕಳೆದುಕೊಳ್ಳುತ್ತಿದ್ದಾರೆ.

ಈ ಒಂದು ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಕರ್ನಾಟಕ ಸರ್ಕಾರ ಸತತವಾಗಿ ಪ್ರಯತ್ನಿಸುತ್ತಿದ್ದು, ಇದೀಗ ಅಧ್ಯಯನಕ್ಕಾಗಿ ವರ್ಜಿನ್ ಹೈಪರ್ ಲೂಪ್ ಒನ್ ಅನ್ನು ಕರೆತಂದಿರುವುದು ಸರ್ಕಾರದ ಅಭೂತಪೂರ್ವ ಕ್ರಮವಾಗಿದೆ. ಇಲ್ಲಿ ಹೆಚ್ಚಿರುವ ದಟ್ಟಣೆಯಿಂದ, ಬಾಟಲ್ ನೆಕ್ ಮಾರ್ಗದಿಂದ ಹೇಗೆ ಮುಕ್ತಗೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ಇರುತ್ತದೆ.

ಮಳೆ ಬಂದಾಗ ನಗರದ ಪ್ರಮುಖ ಆಧಾರರಚನೆ ಸಲೀಸಾಗಿ ನಾಶವಾಗುತ್ತದೆ. ಟ್ರಾಫಿಕ್ ಜಾಮ್ ಹೆಚ್ಚಾಗಿ ಕೆಲವು ಸಾರಿ ಪ್ರಯಾಣಿಕರು 30 ಕೀ.ಮೀ ದೂರ ಸಂಚರಿಸಲು 3 ಗಂಟೆ ತೆಗೆದುಕೊಳ್ಳಬೇಕಾಗುತ್ತದೆ. ‘ಯುವರ್ ಸ್ಟೋರಿ’ ಈ ಸಂಖ್ಯೆಗಳನ್ನು ಪರಿಶೀಲಿಸಲು ಸಾಧ್ಯವಿಲ್ಲ. ಆದರೆ ಕಿಕ್ಕಿರಿದ ನಗರವನ್ನು ಈ ಸಮಸ್ಯೆಗಳಿಂದ ಮುಕ್ತಗೊಳಿಸುವ ಬಗ್ಗೆ ಅಪಾರ ನಂಬಿಕೆ ಇಟ್ಟಿದೆ.

ಹೈಪರ್ ಲೂಪ್ ಪ್ರವೇಶಿಸುವುದರಿಂದ ಇದರಲ್ಲಿ ಕಾಂತೀಯ ತಂತ್ರಜ್ಞಾನ ಬಳಸುವುದರಿಂದ ಟ್ಯೂಬ್ ಗಳು ಹೈ ಸ್ಪೀಡ್ ನಲ್ಲಿ ಚಲಿಸುತ್ತವೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ‘ಬೆಂಗಳೂರು ಟೆಕ್ ಸಮ್ಮಿಟ್’ ಸಮ್ಮೇಳನದಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಿರುವ ಕರ್ನಾಟಕ ಜೈವಿಕ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಹೈಪರ್ ಲೂಪ್ ಒನ್ ಜೊತೆ ಕಾರ್ಯಸಾಧ್ಯತೆಯ ಅಧ್ಯಯನ ನಡೆಸಲಿದ್ದು, ಇದು ಬಹುಬೇಗ ಸಿದ್ಧವಾಗುತ್ತಿದೆ. ಇದಾದ ನಂತರ ರಾಜ್ಯದಾದ್ಯಂತ ಹೈಪರ್ ಲೂಪ್ ಕಾರಿಡಾರ್ ಸ್ಥಾಪಿಸುವುದರ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

ಬಿಲ್ಲಿಂಗ್ ಮಾಡುವುದರಲ್ಲಿ ಭಾರತದಲ್ಲೇ ಇದು ದೊಡ್ಡದು. 100 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ಸ್ ಗಳ ಜೊತೆ 200 ದೊಡ್ಡ ಮತ್ತು ಮಧ್ಯಮ ಗಾತ್ರದ ತಂತ್ರಜ್ಞಾನ ಕಂಪನಿಗಳನ್ನು ಈ ಇವೆಂಟ್ ನಲ್ಲಿ ಪ್ರದರ್ಶಿಸಲಾಗುವುದು ಎಂದು ಅವರು ಪ್ರಸ್ತಾಪಿಸಿದ್ದಾರೆ.

ಹೈಪರ್ ಲೂಪ್ ಬರುವುದರಿಂದ ನಾವು ಚೆನ್ನೈನಿಂದ ಬೆಂಗಳೂರಿಗೆ ಕೇವಲ 23 ನಿಮಿಷಗಳಲ್ಲಿ ಪ್ರಯಾಣಿಸಬಹುದು. ಅಂದಹಾಗೆ ಈ ಒಂದು ಪರಿಕಲ್ಪನೆಯನ್ನು ತಂದವರು, ಪರಿಚಯಿಸಿದವರು ಎಲಾನ್ ಮಸ್ಕ್. ಇಂತಹ ವ್ಯವಸ್ಥೆ ಬರುವುದರಿಂದ ನಮಗೆ ಏರ್ ಟ್ರಾವೆಲ್ ನಲ್ಲಿ ಸಿಗುವಷ್ಟೇ ವೇಗ, ಅನುಭವ ಇದರಲ್ಲಿಯೂ ಸಿಗುತ್ತದೆ.

ಇನ್ನೊಂದು ಪ್ರಮುಖ ವಿಷಯವೆಂದರೆ ಸಾಮಾನ್ಯ ರೈಲಿನ 2/3 ಭಾಗದಷ್ಟು ವೆಚ್ಚ ಇದರಿಂದ ಪಡೆಯಬಹುದಾಗಿದ್ದು, ರಾಜ್ಯ ಆರ್ಥಿಕವಾಗಿಯೂ ಲಾಭ ಕಂಡುಕೊಳ್ಳಬಹುದಾಗಿದೆ ಎಂದು ವರ್ಜಿನ್ ಹೈಪರ್ ಲೂಪ್ ಒನ್ ನ ಆಪರೇಶನ್ ನ ಸೀನಿಯರ್ ವಿಪಿ ನಿಕ್ ಅರ್ಲೆ ಎಂದು ಸಲಹೆ ನೀಡಿದರು. ಅಷ್ಟೇ ಅಲ್ಲ, ಇನ್ನೇನು 6 ವಾರಗಳಲ್ಲಿ ಕಾರ್ಯಸಾಧ್ಯತೆಯ ಅಧ್ಯಯನ ಸಿದ್ಧವಾಗಲಿದ್ದು, ಕಂಪನಿಯು ಸರ್ಕಾರದಿಂದ ಕಾಂಟ್ರಾಕ್ಟ್ ಫಾರ್ಮ್ ಸ್ವೀಕರಿಸುತ್ತದೆ. ಇದನ್ನು ಲೂಪ್ ಇನ್‌ ಫ್ರಾಸ್ಟ್ರಕ್ಚರ್ ನ ಹೊರಗುತ್ತಿಗೆ ಉತ್ಪಾದನೆಯಿಂದ ಸ್ಥಳೀಯ ಕಂಪನಿಗಳಿಗೆ ಖಚಿತಪಡಿಸಲಾಗುತ್ತದೆ. ಇದು ಸ್ಥಳೀಯ ಉದ್ಯೋಗ ಅವಕಾಶಗಳನ್ನು ಸೃಷ್ಟಿ ಮಾಡುತ್ತದೆ ಎಂದು ನಿಕ್ ಭರವಸೆ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ಕರ್ನಾಟಕ ಸರ್ಕಾರ ಇದನ್ನು ನಿಲ್ಲಿಸುವುದಿಲ್ಲ. ಈಗಾಗಲೇ ಎಕ್ಸಲೆನ್ಸ್ ಫಾರ್ ಡೇಟಾ ಸೈನ್ಸ್ ಆ್ಯಂಡ್‌ ಎಐಗಳ ಕೇಂದ್ರವಾದ ಎಂಒಯುಗೆ ಸಹಿ ಹಾಕಲಾಗಿದೆ. ಮೂಲತಃ ಬೆಂಗಳೂರಿನ ಈ ಕೇಂದ್ರಗಳಿಗಾಗಿ ಕರ್ನಾಟಕ ಸರ್ಕಾರ 40 ಕೋಟಿಯನ್ನು ಮೀಸಲಿರಿಸಿದ್ದು, ಎಂಒಯು ಜೊತೆ ನಾಸ್ಕಾಮ್, ಐಬಿಎಂ ಮತ್ತು ಇಂಟೆಲ್ ಕೂಡ ಸಹಿ ಹಾಕಿದ್ದು, ಈ ತಂತ್ರಜ್ಞಾನದಲ್ಲಿ ಸರಿಸುಮಾರು 35,000 ಎಂಜಿನಿಯರ್ ಗಳು ಕಾರ್ಯನಿರ್ವಹಿಸಲಿದ್ದಾರೆ.

ಈ ಕೇಂದ್ರಗಳು ಮತ್ತು ರೀ ಸ್ಕಿಲ್ಲಿಂಗ್ ಕಾರ್ಯಕ್ರಮಗಳನ್ನು ಇಂಡಸ್ಟ್ರಿ ನಿರ್ಧರಿಸುತ್ತದೆ. ಇಂಡಸ್ಟ್ರಿಯು ಈ ಜನರಿಗೆ ಉದ್ಯೋಗ ನೀಡಿ ತರಬೇತಿ ಕೊಡುತ್ತದೆ ಎಂದು ಪ್ರಿಯಾಂಕ ಖರ್ಗೆ ಇದೇ ಸಂದರ್ಭದಲ್ಲಿ ಹೇಳಿದರು. ಹಾಗೆಯೇ ಸ್ಟಾರ್ಟ್ ಅಪ್ ಎಕೊ ಸಿಸ್ಟಂಗಳಿಗೆ ನಿಜವಾದ ಪ್ರತಿಭೆಯಿರುವ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರಗಳಿಂದ ಪ್ರಯೋಜನವಾಗಲಿದೆ ಎಂದು ಹೇಳಿದರು.

ಸಪೋರ್ಟಿಂಗ್ ಐಡಿಯೇಶನ್, ಇನೊವೇಶನ್, ಇನ್ ವೆನ್ಶನ್

ಆಡಳಿತವನ್ನು ಪ್ರತ್ಯೇಕಿಸಿ ಸರ್ಕಾರವು ವಿವಿಧ ತಂತ್ರಜ್ಞಾನಗಳನ್ನು ನೋಡುತ್ತಿದ್ದು, ರೆವಿನ್ಯೂ ವಿಭಾಗದಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನ ತರಲು ನೋಡುತ್ತಿದ್ದೇವೆ. ನನ್ನ ತಂಡದಿಂದ ನೀಡುತ್ತಿರುವ ಸಲಹೆಯೆಂದರೆ ಸರ್ಕಾರ ಎಲ್ಲಾ ದಾಖಲೆಗಳನ್ನು ಡಿಜಿಟೈಜ್ ಮಾಡಲು ಖಚಿತಪಡಿಸಿಕೊಳ್ಳುತ್ತಿದ್ದೇವೆ ಎಂದು ಪ್ರಿಯಾಂಕ ಖರ್ಗೆ ತಿಳಿಸಿದರು.

ಚಾಲಕರಹಿತ ಕಾರ್ ಗಳಲ್ಲಿ ಕೆಲಸ ಮಾಡಲು ಕರ್ನಾಟಕ ಸರ್ಕಾರವು ಇಂಟೆಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಇ-ಆಡಳಿತಕ್ಕಾಗಿ ಐಬಿಎಂ ಜೊತೆ ವ್ಯಾಟ್ಸನ್ ಪ್ಲಾಟ್ ಫಾರ್ಮ್ ನಲ್ಲಿ ಸಹ ಕೆಲಸ ನಿರ್ವಹಿಸುತ್ತಿದೆ. ಹಾಗೆಯೇ ರಿಯಲ್ ಟೈಮ್ ಡೇಟಾ ಉಪಯೋಗಿಸುತ್ತಿದೆ. ಸರ್ಕಾರ ಇಷ್ಟೆಲ್ಲಾ ದೊಡ್ಡ ಕ್ರಮಗಳನ್ನು ತೆಗೆದುಕೊಳ್ಳಲು ಕಾರಣ ಕಲ್ಪನೆ, ನಾವೀನ್ಯತೆ ಮತ್ತು ಆವಿಷ್ಕಾರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರಬೇಕು. ಕೈಗೆಟಕುವ ಉದ್ಯಮದಲ್ಲಿ ನೈಪುಣ್ಯತೆ ಪಡೆಯಬೇಕು. ನಮ್ಮ ಎಂಜಿನಿಯರ್ ಗಳು ಒಳ್ಳೆಯ ಉದ್ಯೋಗ ಪಡೆಯಬೇಕು ಎಂದು ಖರ್ಗೆ ನುಡಿದರು.

ನಾಸ್ಕಾಮ್ ಜೊತೆ ಐಒಟಿಯಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರ ಸ್ಥಾಪಿಸಲು 18 ತಿಂಗಳುಗಳ ಕಾಲವಕಾಶ ಹೊಂದಿದ್ದು, ರಾಜ್ಯವು ಏರೋಸ್ಪೇಸ್‌, ಸ್ಪೇಸ್ ನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಮಾಡಲು ನೋಡುತ್ತಿದೆ. ಇದರಿಂದ ಎಂಜಿನಿಯರ್ ಗಳು ಉದ್ಯೋಗ ಹೊಂದುವುದಲ್ಲದೆ, ಜಾಗತಿಕವಾಗಿ ಸ್ಪರ್ಧೆ ಮಾಡುವ ಸಾಮರ್ಥ್ಯ‌ ಬೆಳೆಯುತ್ತದೆ ಎಂದರು.

ನಾಸ್ಕಾಮ್ ಅಧ್ಯಕ್ಷ ಆರ್ ಚಂದ್ರಶೇಖರ್ ಮಾತನಾಡಿ, ಎಐ ಆ್ಯಂಡ್‌ ಡೇಟಾ ಸೈನ್ಸ್ ಕ್ರಿಟಿಕಲ್ ತಂತ್ರಜ್ಞಾನಗಳಾಗಿವೆ. ಐಟಿ ಸ್ಪೇಸ್ ನಲ್ಲಿ ಭಾರತ ಪ್ರಬಲವಾದ ಪ್ಲೇಯರ್ ಆಗಿದ್ದು, ಹೊಸ ಹೊಸ ತಂತ್ರಜ್ಞಾನಗಳು ಇಂಡಸ್ಟ್ರಿಯಲ್ಲಿ ಡಾಮಿನೇಟಿಂಗ್ ಆಗಿವೆ. ಅತ್ಯಂತ ಆಳವಾದ ಸಾಮರ್ಥ್ಯ ಹೊಂದಲು, ಭವಿಷ್ಯದಲ್ಲಿ ಹೂಡಿಕೆ ಹೂಡಲು ಇವೆಲ್ಲ ಇಂಡಸ್ಟ್ರಿಗೆ ಬಹುಮುಖ್ಯವಾಗಿವೆ. ಸರ್ಕಾರ ಮತ್ತು ನಾಸ್ಕಾಮ್ ಜೊತೆಗೂಡಿ ಬ್ಲಾಕ್ ಚೈನ್ , ಎಆರ್, ವಿಆರ್ ನಲ್ಲಿ ಸಾಮರ್ಥ್ಯ ಕಟ್ಟಲು ನೋಡುತ್ತಿದೆ. ದೇಶದಲ್ಲಿ ಇನೊವೇಶನ್ ಎಕೊ ಸಿಸ್ಟಂ ಅಭಿವೃದ್ಧಿಯಾಗಲು ಕರ್ನಾಟಕ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದು, ವಿಶ್ವದಲ್ಲಿ ಕರ್ನಾಟಕ ಅತ್ಯುನ್ನತ ಸ್ಥಾನ ಹೊಂದಲು ಕಾರಣವಾಗಿದೆ ಎಂದರು.

ಕಡೆಯದಾಗಿ ಐಬಿಎಂ ಎಂ.ಡಿ. ವನಿತಾ ನಾರಯಣನ್ ಮಾತನಾಡಿ, ಭವಿಷ್ಯದಲ್ಲಿ ಕೌಶಲ್ಯ ಹೊಂದಲು ಜನರಿಗೆ ನಾವು ತರಬೇತಿ ನೀಡುತ್ತಿದ್ದೇವೆ. ಹೇಗೆಂದರೆ ಡೇಟಾ ಸೈನ್ಸ್ ಹಾಗೂ ಎಐ ವಿಶಾಲವಾದ ಸ್ಥಳವಕಾಶ ಹೊಂದಿದ್ದು, ಜನರಿಗೆ ಈ ವಿಷಯಗಳ ಬಗ್ಗೆ ಅರಿವು ಮೂಡಿಸುತ್ತಿದ್ದು, ಅವರ ಪ್ರತಿಭೆಯನ್ನು ಹೊರತರಲು ಈ ಮೂಲಕ ಪ್ರಯತ್ನಿಸುತ್ತಿದ್ದೇವೆ ಎಂದರು.