ಧಮ್​ ಮಾರೋ ಧಮ್​...ಆರೋಗ್ಯಕ್ಕೆ ಹಾನಿ ಮಾಡದ ಸಿಗರೇಟ್​ ಕಥೆ..!

ವಿಸ್ಮಯ

0

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ. ಸಿಗರೇಟ್ ಪ್ಯಾಕ್ ಮೇಲೆ ಹೀಗೆ ಬರೆದಿರುತ್ತದೆ. ಆದರೆ ನಾವು ಇವತ್ತು ನಿಮಗೊಂದು ಸಿಗರೇಟ್ ಕಥೆ ಹೇಳೋಕ್ಕೆ ಹೊರಟಿದ್ದೇವೆ. ಇದು ನಿಮ್ಮ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಈ ಸಿಗರೇಟ್‍ನ್ನು ಸೇದಿ ಬಿಟ್ರೆ ಜೀವಕ್ಕೆ ತುಂಬ ಒಳ್ಳೆಯದು. ಅರೇ ಇದೇನಾಪ್ಪ ಇವರು ವಿಶ್ವದ್ಯಾಂತ ಧೂಮಪಾನ ಮಧ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಅಂತ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಇವರು ಸಿಗರೇಟ್ ಸೇವನೆ ಆರೋಗ್ಯಕ್ಕೆ ಉತ್ತಮ ಅಂತಿದ್ದಾರೆ ಅಂತ ಕನ್‍ಫ್ಯೂಸ್ ಆದ್ರಾ..! ಹೌದು, ನಾವು ಹೇಳೋಕ್ಕೆ ಹೊರಟಿರೋ ಸಿಗರೇಟ್ ನಿಮ್ಮ ಆರೋಗ್ಯಕ್ಕೆ ಉತ್ತಮವಂತೆ.. ನಿಮ್ಮ ದೇಹಕ್ಕೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ..

ಅಂದಹಾಗೇ ಬೆಂಗಳೂರಿನ ಅರಮನೆ ಮೈದಾನದಲ್ಲಿ 3 ದಿನಗಳ ಕಾಲ ಗ್ಲೋಬಲ್ ವೆಲ್​ನೆಸ್ ಕಾರ್ಯಕ್ರಮ ನಡೆಯಿತು. ಇಲ್ಲಿಗೆ ಬಂದ್ರೆ ಎಲ್ಲರೂ ಧಮ್ ಹೊಡೆಯೋವರೆ. ಪಕ್ಕದಲ್ಲಿ ಸಿಗರೇಟ್ ವ್ಯಾಪಾರ ಬೇರೆ. ಅದು ಇಷ್ಟೊಂದು ರಾಜಾರೋಷವಾಗಿ..? ಏನಾಪ್ಪ ಇವ್ರ ಕಥೆ..? ಇಲ್ಲಿ ಸಿಗರೇಟ್ ವ್ಯಾಪರಕ್ಕೆ ಯಾರಪ್ಪ ಅವಕಾಶ ಕೊಟ್ಟಿದ್ದು? ಯಾರು ಅನ್ನೋ ಪ್ರಶ್ನೆ ಮಾಡಿ. ಅದೇ ಪ್ರಶ್ನೇಯನ್ನೇ ನಾವು ಕೇಳಿ ಬಿಟ್ಟಿವಿ.. ಆಗ ಅಲ್ಲೊಬ್ಬ ಚಿಗುರು ಮೀಸೆ ಹುಡುಗ ಈ ಸಿಗರೇಟ್ ಬಗ್ಗೆ ವಿವರಿಸುತ್ತಾ ಹೋದ ನೋಡಿ..

ಇದು ಮೊದಲ ಆಯುರ್ವೇದಿಕ್ ಸಿಗರೇಟ್.. ಇದರಲ್ಲಿ ಆರೋಗ್ಯಕ್ಕೆ ಹಾನಿ ಉಂಟು ಮಾಡುವಂತಹ ಯಾವುದೇ ಅಂಶಗಳು ಇಲ್ಲ.. ಇದು ಸಂಪೂರ್ಣ ಸಾವಯವ ಸಿಗರೇಟ್.. ಫ್ರಾನ್ಸ್ ದೇಶದ ಸಂಸ್ಥೆ ಇಂತಹದೊಂದು ಹೊಸ ಪ್ರಯೋಗ ಮಾಡಿದೆ.. ಇದು ಎಲ್ಲರಿಗೂ ಇಷ್ಟವಾಗುತ್ತೆ ಅಂತ ಸಂಸ್ಥೆಯ ಮಾಲೀಕ ಪಿಯೂಷ್..

ಹೌದು ಈ ಉತ್ತರ ಕೇಳಿ ಆಶ್ಚರ್ಯ ಆಯಿತು.. ಫ್ರಾನ್ಸ್ ಮೂಲದ ಸಂಸ್ಥೆ ಇದೇ ಮೊದಲ ಬಾರಿಗೆ ತುಳುಸಿ ಗುಲಾಬಿ ಹೂವಿನ ದಳ, ಗ್ರೀನ್‍ಟೀಗಳಿಮದ ಸಾವಯವ ಸಿಗರೇಟ್ ತಯಾರಿಸಿ ಎಕ್ಸಪೋನಲ್ಲಿ ಇಳಿದಿವೆ. ಇದು ಸಿಗರೇಟ್‍ಗೆ ಪರ್ಯಾಯವಾಗಲಿದೆ ಅನ್ನೋದು ಸಂಸ್ಥೆಯ ಮಾತು..

ಇದನ್ನು ಓದಿ: ಅನಾರೋಗ್ಯದಿಂದ ಬಳಲುತ್ತಿದ್ರೆ ಜಸ್ಟ್ ಒಂದು ಕಾಲ್ ಮಾಡಿ- ಮನಗೆ ಬರ್ತಾರೆ ನರ್ಸ್ ಹಾಗೂ ವೈದ್ಯರು..!

ಹೇಗೆ ಬಂತು ಈ ಹೊಸ ಐಡಿಯಾ..?

ಮೊದಲ ಈ ಹುಡುಗರು ಅಂಗಡಿಯಲ್ಲಿ ಸಿಗುವ ಸಿಗರೇಟ್‍ಗಳನ್ನೇ ಸೇದುತಿದ್ದರಾಂತೆ.. ಆನಂತ್ರ ಯಾಕೆ ನಾವು ಆರೋಗ್ಯಕ್ಕೆ ಕೆಡುಕು ಉಂಟು ಮಾಡುವ ಸಿಗರೇಟ್ ಸೇದಬೇಕು ಅಂತ ಯೋಚನೆ ಮಾಡಿ.. ಸೇದುವುದಾದ್ರೆ ಒಳ್ಳೆಯದ್ದನ್ನೇ ಸೇದೋಣ ಅಂತ ಇವರೇ ಸೇರಿ ಆಯುರ್ವೇದಿಕ್ ಸಿಗರೇಟ್ ತಯಾರಿಸಿದ್ರು.. ಅನ್ನದ ಪೇಪರ್ ಬಳಸಿ ತಯಾರಿಸಿ, ತುಳಸಿ, ಪುದೀನಾ ಗ್ರೀನ್ ಟೀ ಹಾಕಿ ಆಯುರ್ವೇದಿಕ್ ಸಿಗರೇಟ್ ತಯಾರಿಸಿದ್ರು.PATENTಪ್ರೊಡಕ್ಟ್ ಎಂಬ ಹೆಸರಿನಲ್ಲಿ ತಯಾರಿ ಮಾಡಿದ್ದಾರೆ..

ಹೇಗಿದೆ ರೆಸ್ಪಾನ್ಸ್..?

ಇನ್ನು ಗ್ಲೋಬಲ್ ವೆಲ್​ನೆಸ್‍ನಲ್ಲಿ ಆಯುಷ್ ಮೇಳವನ್ನು ಆಯೋಜಿಸಲಾಗಿತ್ತು.. ಸುಮಾರು 300 ಆಯುರ್ವೇದಿಕ್ ಮಳಿಗೆಗಳು ಇದ್ದವು.. ಔಷಧಿ ವಸ್ತುಗಳು, ಸೌಂದರ್ಯ ಉತ್ಪನ್ನಗಳು ಇದ್ದವು.. ಆದ್ರೆ ಇಲ್ಲಿನ ಆಯುರ್ವೇದಿಕ್ ಸೀಗರೇಟ್‍ಗೆ ಮಾತ್ರ ಸಖತ್ ರೆಸ್ಪಾನ್ ಇತ್ತು.. ಎಲ್ಲಿ ನೋಡಿದ್ರು ಎಲ್ಲರ ಕೈ ನಲ್ಲಿ ಸಿಗರೇಟ್ ಇತ್ತು.. ಇನ್ನು ಯಾವುದೇ ಭೇದಬಾವ ಇಲ್ಲದೇ ಎಲ್ಲರೂ 5-10 ಸಿಗರೇಟ್‍ಗಳನ್ನು ಕೊಂಡುಕೊಳ್ಳುತ್ತಿದ್ರು.. ಹುಡುರು ಹುಡುಗಿಯರು ಅನ್ನೋ ಭೇದವಿಲ್ಲದೇ ಪ್ರತಿಯೊಬ್ಬರು ಖರೀದಿಸಿದ್ರು..

ಏನ್ ಹೇಳತ್ತಾರೆ ಆಯುರ್ವೇದಿಕ್ ಸಿಗರೇಟ್ ಸೇದಿದದವರು..?

ಸಾಮಾನ್ಯವಾಗಿ ಸಿಗರೇಟ್‍ಗಳಲ್ಲಿ ನಿಕೋಟಿನ್, ಮತ್ತು ಟೋಬ್ಯಾಕೋ ಅಂಶ ಹೆಚ್ಚಾಗಿ ಇರುತ್ತೆ.. ಇದು ಆರೋಗ್ಯಕ್ಕೆ ಹಾನಿಕಾರಕ.. ಕ್ಯಾನ್ಸರ್ ನಂತಹ ಮಾರಕ ಖಾಯಿಲೆ ಬರುತ್ತೆ.. ಆದ್ರೆ ಇದು ಆಯುರ್ವೇದಿಕ್ ಸಿಗರೇಟ್ ಬೇರೆ ಸಿಗರೇಟ್‍ಗಳಿಗೆ ಪರ್ಯಾಯ ಮಾರ್ಗ ಆಗುತ್ತೆ.. ಎಲ್ಲ ಆರೋಗ್ಯಕ್ಕೆ ಒಳ್ಳೆ ಅಂಶಗಳೇ ಇರೋದ್ರಿಂದ ಇದು ಉತ್ತಮ ಅಂತಾರೆ ಜಗದೀಶ್. ಇದನ್ನು ಸೇದುವುದ್ರಿಂದ ಮೈಂಡ್ ರಿಲಾಕ್ಸ್ ಆಗುತ್ತೆ.. ಕೆಟ್ಟ ಅಂಶವನ್ನು ಹೊರ ಹಾಕುತ್ತೆ ಅಂತಾರೆ ಜಗದೀಶ್..

ಅದೇನೆ ಹೇಳಿ ಸಿಗರೇಟ್ ಸೇದಬೇಕು ಅನ್ನೋ ಕ್ರೇಜ್ ಇರೋ ಯುವ ಪೀಳಿಗೆಗೆ ಈ ಆಯುರ್ವೇದಿಕ್ ಸಿಗರೇಟ್ ನಿಜಕ್ಕೂ ಒಳ್ಳೆಯದ್ದು.. ಸಿಗರೇಟ್ ಚಟ ಬಿಡೋಕ್ಕೆ ಆಗ್ತಿಲ್ಲ ಅನ್ನೋವರಿಗೂ ಕೂಡ ಇದು ಪರ್ಯಾಯ ವ್ಯವಸ್ಥೆ ಇದ್ದಂತೆ.. ಒಟ್ಟನ್ನಲ್ಲಿ ಧೂಮಪಾನ ಪ್ರಿಯರಿಗೆ ಇದೊಂದು ಗುಡ್‍ನ್ಯೂಸ್ ಅಲ್ವಾ..

ಇದನ್ನು ಓದಿ

1. ಗರ್ಭಿಣಿಯರ ಆರೋಗ್ಯದ ಕಾಳಜಿವಹಿಸುವ mhealth

2. ಚಿತ್ರ ವಿಚಿತ್ರ ಹೆಸರಿನ ಹೋಟೆಲ್- ಹಾರ್ನ್ ಓಕೆ ಪ್ಲೀಸ್..

3. ಮುಂಬೈ ಕ್ರಿಕೆಟ್​ನಲ್ಲಿ ಕನ್ನಡಿಗನ ಮೋಡಿ..

Related Stories