ಸುದ್ದಿದಾಹಕ್ಕೆ "ವೇಟು ನ್ಯೂಸ್"

ಟೀಮ್​​ ವೈ.ಎಸ್​​.

0

ಕೆಲವು ವರ್ಷಗಳ ಹಿಂದೆಇಂಟರ್​​ನೆಟ್​​ ಇಷ್ಟುಜನಪ್ರಿಯವಾಗಿರಲಿಲ್ಲ. ಆಗ ಸುದ್ದಿ ಸಮಚಾರಕ್ಕಾಗಿ ರೇಡಿಯೋ ಮತ್ತು ನ್ಯೂಸ್​ ​ಪೇಪರ್​​ಗಳನ್ನು ಅವಲಂಭಿಸಬೇಕಿತ್ತು. ಆದರೆ ಇದು ಡಿಜಿಟಲ್​​ ಯುಗ. ಮಾಹಿತಿಯ ಕಣಜವೇ ನಮ್ಮ ಮುಂದೆ ನಿಂತಿದೆ. ಎಕ್ಸೇಲಾ.ಕಾಮ್​​ನ ವರದಿಯಂತೆ ಪ್ರತಿನಿಮಿಷಕ್ಕೆ ಟ್ವೀಟರ್​​ನಲ್ಲಿ 320 ಅಕೌಂಟ್​​ಗಳನ್ನುತೆರೆಯಲಾಗುತ್ತಿದೆ. ಪ್ರತಿಕ್ಷಣ 47,000 ಟ್ವೀಟ್​ಗಳು ಶೇರ್​ ಆಗ್ತಿವೆ. 8,433ಶೇರ್​​ ಮತ್ತು 1.03 ಮಿಲಿಯನ್​​ ವಿಡಿಯೋಗಳು ಕಾಣ ಸಿಗುತ್ತವೆ.

ಓದುಗರ ಅಗತ್ಯಗಳಿಗೆ ಅನುಗುಣವಾಗಿ ಸ್ಥಳೀಯ ಮತ್ತು ಜಾಗತೀಕ ಸುದ್ದಿಗಳನ್ನು ಅಪ್ಡೇಟ್​​ ಮಾಡಲು ಹಲವಾರು ವೇದಿಕೆಗಳಿವೆ. ಕೆಲವರು ನೈಜಸುದ್ದಿಯನ್ನು ಪ್ರಕಟಿಸುತ್ತಾರೆ ಮತ್ತು ಕೆಲವರು ಅದನ್ನು ತರ್ಜುಮೆ ಮಾಡಿ ಓದುಗರಿಗೆ ಆಯಾ ಭಾಷೆಯಲ್ಲಿ ನೀಡುತ್ತಾರೆ. ಇದಲ್ಲದೇ ಮತ್ತೊಂದು ವಿಧಾನವಿದೆ. ಶಾರ್ಟ್​ಫಾರ್ಮ್​ ಮತ್ತು ಸ್ಥಳೀಯ ಅಥವಾ ದೇಶಿಭಾಷೆಯ ಮೂಲಕ ಅದನ್ನು ಜನರಿಗೆ ತಲುಪಿಸೋ ಕೆಲಸ. ಯೆಸ್! ಈಗ ವೇಟೂ ನ್ಯೂಸ್ ಇದೇ ಹಾದಿಯಲ್ಲಿ ಹೆಜ್ಜೆ ಇಡುತ್ತಿದೆ.

ಏನಿದು ವೇಟೂನ್ಯೂಸ್..?

ವೇಟೂ ನ್ಯೂಸ್ ಒಂದು ಮೊಬೈಲ್ ಆ್ಯಪ್​​. ಈ ಆ್ಯಪ್​​ ಮೂಲಕ ಭಾರತದ ವಿವಿಧ ಸೋರ್ಸ್​ಗಳಿಂದ ಸುದ್ದಿ ಪಡೆದು ಸ್ಥಳೀಯ ಭಾಷೆಯಲ್ಲಿ ಮ್ಯಾಗಝೀನ್​ ರೀತಿಯಲ್ಲಿ ಸುದ್ದಿಯನ್ನುಕೊಡುವ ವ್ಯವಸ್ಥೆ. ಸ್ಮಾರ್ಟ್​ಫೋನ್​​ಗಳ ಮೂಲಕ ಸಿಟಿ ಮತ್ತು ದೊಡ್ಡನಗರಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಸುದ್ದಿಯನ್ನುನೀಡಲಾಗುತ್ತದೆ. ಉಚಿತ ಇಂಟರ್ನೆಟ್​​ ಸುದ್ದಿ ರವಾನಿಸುವಲ್ಲಿ ಸಾಕಷ್ಟು ಹೆಸರು ಮಾಡಿರುವ ಪೇರೆಂಟ್​​ ಕಂಪನಿ ವೇಟೂ ಎಸ್ಎಂಎಸ್​​ನ ಉಡುಗೊರೆ ಇದು.

ರಾಜು ವನಪಾಲ ಮೊದಲ ಜೆನೆರೇಷನ್​​ನ ಉದ್ಯಮಿ. 2006 ರಲ್ಲಿ ವೇಟೂ ಎಸ್ಎಮ್ಎಸ್ ಎಂಬ ಉಚಿತ ಆನ್​ಲೈನ್​​ ಸಂದೇಶ ರವಾನಿಸುವ ಸಂಸ್ಥೆ ಸ್ಥಾಪಿಸಿ ಟ್ರೆಂಡ್​ ಸೆಟ್ಟರ್​​ ಆದರು. ಸದ್ಯಇದರಿಂದ 40 ಮಿಲಿಯನ್​​ ಬಳಕೆದಾರರು ಪ್ರಯೋಜನ ಪಡೆದಿದ್ದಾರೆ. ವಿಜಯವಾಡದ ಸಣ್ಣ ಹಳ್ಳಿಯ ರೈತರ ಕುಟುಂಬದಿಂದ ಬಂದ ರಾಜು, ಆನ್​​ಲೈನ್ ಮೂಲಕ ಸಾಮಾಜಿಕ ಅಧ್ಯಯನ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಓ ಆಗಿದ್ದಾರೆ. ಅಷ್ಟೇ ಅಲ್ಲದೆ ಬ್ಯುಸಿನೆಸ್​​ನಲ್ಲಿ ಹೊಸ ಹೊಸ ಸ್ಟ್ರಾಟರ್ಜಿಗಳನ್ನು ಬಳಸಿ ಆ ಮೂಲಕ ಯಶಸ್ಸು ಸಾಧಿಸುತ್ತಿದ್ದಾರೆ. ಭಾರತದ ಅಭಿವೃದ್ಧಿಯ ಬಗ್ಗೆ ದೊಡ್ಡ ಕನಸುಗಳನ್ನುಕಟ್ಟಿದ್ದಾರೆ. ಅಲ್ಲದೇ ಭಾರತದ ಇಂಟರ್ನೆಟ್​​ ಕ್ಷೇತ್ರದಲ್ಲಿ ಬಿಲಿಯನ್​ ಡಾಲರ್​​ ಕಂಪನಿ ಕಟ್ಟುವ ಮಹದಾಸೆ ಹೊಂದಿದ್ದಾರೆ ರಾಜು.

ಪ್ರಪಂಚದಲ್ಲಿ ಭಾರತದ ಇಂಟರ್ನೆನ್​​ ಮಾರ್ಕೆಟ್​​ಗೆ ಎರಡನೇ ಸ್ಥಾನವಿದೆ. ಮುಂದಿನ ದಿನಗಳಲ್ಲಿ ಇಂಟರ್ನೆಟ್​​ ಬಳಕೆದಾರರು ಹೆಚ್ಚಾಗುತ್ತಾರೆ. ಹಳ್ಳಿಯಜನರು, ವಯಸ್ಸಾದವರು, ಪುರುಷರು, ಮಹಿಳೆಯರು ಸೇರಿದಂತೆ ಎಲ್ಲರೂ ಬಳಕೆದಾರರಾಗುತ್ತಾರೆ. ,ಮೊಬೈಮ್​ ಮತ್ತು ಆಡುಭಾಷೆಯ ಸುದ್ದಿಗಳು ಬೇಗ ಜನರನ್ನು ತಲುಪುತ್ತದೆ. ಇಂದುಸುದ್ದಿವಾಹಿನಿಗಳಲ್ಲಿ ಗಮನಿಸಿರುವಂತೆ, ನೋಡಿರುವಂತೆ, ಕೇಳಿರುವಂತೆ, ಪ್ರಚಲಿತ ಸುದ್ದಿಗಳೆಲ್ಲವೂ ಪ್ರಾದೇಶಿಕತೆ ಮತ್ತು ಭಾಷೆಯ ಮೇಲೆ ನಿಂತಿದೆ.

ಇದು ಹೇಗೆ ಕೆಲಸ ಮಾಡುತ್ತದೆ?

ವೇಟುನ್ಯೂಸ್ 30 ಜನರನ್ನುಒಳಗೊಂಡ ಒಂದು ತಂಡವಾಗಿದ್ದು, 19 ಜನರು ಸಂಪಾದಕೀಯ ವಿಭಾಗದಲ್ಲಿದ್ದು, ಉಳಿದವರು ಮೊಬೈಲ್​​ ಡೆವಲಂಪ್​​ಮೆಂಟ್​​ ಮತ್ತು ಆಡಳಿತ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಈ ತಂಡ ಆರಂಭದಲ್ಲಿ ಆಟೋಮ್ಯಾಟಿಕ್​​ ನ್ಯೂಸ್​​​​ ​​​​ಪೋರ್ಟಲನ್ನು ಚಾಲನೆಗೆ ತರೋ ಯೋಜನೆಯಲ್ಲಿದ್ದರು. ನಂತರ ಮ್ಯಾನ್ಯುಯಲ್ ಆಗಿ ಸಂಪಾದಕೀಯ ವಿಭಾಗದ ಮೂಲಕ ಪ್ರಾರಂಭಿಸೋ ಯೋಚನೆಗೆ ಮುನ್ನುಡಿ ಬರೆದರು. "ನಮ್ಮ ವೃತ್ತಿ ನಿರತ ತಂಡದವರು ಬೇರೆ ಬೇರೆ ಕಡೆಯಿಂದಲೂ ಸುದ್ದಿಯನ್ನು ಹುಡುಕುತ್ತಾರೆ. ಟಿವಿ ,ವೆಬ್​​ಸೈಟ್​​ಗಳು, ಬ್ಲಾಗ್​ಗಳಲ್ಲಿ ಸ್ಟೋರಿಗಳನ್ನು ಹುಡುಕುತ್ತಾರೆ. ಅದು ಕೂಡ 400 ಪದಗಳಿಗೆ ಸೀಮಿತವಾಗಿರುತ್ತೆ. ಆ ಮೂಲಕ ಹೆಚ್ಚು ಓದುಗರನ್ನು ಸೆಳೆಯುವ ತಂತ್ರ ಇದಾಗಿದೆ. ಇದರಿಂದ ಕಡಿಮೆ ಸಮಯದಲ್ಲಿ ದೊಡ್ಡ ಬರಹಗಳ ಬದಲಿಗೆ ಶಾರ್ಟ್ ಅಂಡ್​​ ಸ್ವೀಟ್​​ ಆಗಿ ಸಣ್ಣಬರಹಗಳ ಮೂಲಕ ವಿಶ್ವದಲ್ಲಿ ನಡೆಯುವ ಸುದ್ದಿಯನ್ನು ಕ್ಷಣ ಮಾತ್ರದಲ್ಲಿ ತಿಳಿಸುವ ಕೆಲಸ ನಡೆಯುತ್ತಿದೆ.

ವೇಟು ನ್ಯೂಸ್​​​ ತಂಡ ಈಗಾಗಲೇ ಹಲವಾರು ಮೊಬೈಲ್​​ಗಳಲ್ಲಿ ಈ ಆ್ಯಪ್​​ಗಳನ್ನು ಪೈಲಟ್​​​ ಕಾಪಿಯಂತೆ ಬಿಡುಗಡೆ ಮಾಡಿದೆ. ಈಗಾಗಲೇ 5000 ಜನರು ಅದನ್ನುಬಳಸುತ್ತಿದ್ದಾರೆ. ಆ ಮೂಲಕ ಗ್ರಾಹಕರ ಫೀಡ್​ ಬ್ಯಾಕ್​​ ಮೇಲೆ ವೇಟು ನ್ಯೂಸ್​ ತಂಡ ಕೆಲಸ ನಿರ್ವಹಿಸುತ್ತಿದೆ. 400 ಪದಗಳ ಲೇಖನದ ಜೊತೆಗೆ ಫೋಟೋ ಗ್ಯಾಲರಿಗಳು ಮತ್ತು ವಿಡಿಯೋಗಳನ್ನು ಅಪ್ಲೋಡ್​​ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಓದುಗರು ನ್ಯೂಸ್​ ಹೆಡ್​​ಲೈನ್​​ ಮೇಲೆ ಕ್ಲಿಕ್​ ಮಾಡಿದ್ರೆ ವಿಸ್ತಾರವಾದ ಮೂಲ ಲೇಖನವನ್ನುಓದಬಹುದು. ಅಲ್ಲದೇ 2 ಜಿ, 3 ಜಿ ಮತ್ತು ವೈಫೈಯಲ್ಲಿ ಇಮೇಜ್ ಆಪ್ಟಿಮೈಸ್​​ ಜೊತೆಗೆ ಇನ್ನಿತರ ತಂತ್ರಜ್ಞಾನವನ್ನು ಬಳಸಬಹುದು.

ಒಳನೋಟ

ಶಾರ್ಟ್​ಫಾರ್ಮ್​ನ ವಿಶ್ಯೂಯಲ್​ ಮತ್ತು ಬರಹಗಳು ಓದುಗರಲ್ಲಿ ಹೆಚ್ಚು ಒಲವು ಮೂಡಿಸುತ್ತಿದೆ. ಜನರಿಗೆ ಈಗ ಹೆಚ್ಚು ಸಮಯವಿಲ್ಲದ ಕಾರಣ ಓದುಗರನ್ನು ಬೇಗ ತಲುಪುತ್ತದೆ. ಅಲ್ಲದೇ ಈಗಾಗಲೇ ಪ್ರಸಿದ್ದಿಯಾಗಿರುವ ಟ್ವೀಟರ್ ,ವೈನ್, ಸ್ನ್ಯಾಪ್​ ಚಾಟ್​​ನ ಸಹಾಯದಿಂದಲೂ ನಮ್ಮ ಆ್ಯಪ್​​ನ್ನು ಬಳಸಬಹುದು. ಜಾಗತಿಕ ಮಟ್ಟದಲ್ಲಿ ಸಿರ್ಕಾ ಮೊದಲ ಬಾರಿಗೆ ಈ ರೀತಿ ಶಾರ್ಟ್​ ಫಾರ್ಮ್ ನ್ಯೂಸ್​​ ಪೋರ್ಟಲ್​ ಆರಂಭಿಸಿತ್ತು.

ಆದರೆ 2015 ರಲ್ಲಿ ಭಾರತದಲ್ಲಿ ಟೈಗರ್​​ ಗ್ಲೋಬಲ್​​ನಿಂದ 20 ಮಿಲಿಯನ್​​ ಯುಎಸ್​​ಡಿಗಳಿಸಿದ ಕೀರ್ತಿ "ನ್ಯೂಸ್ ಇನ್​ ಶಾರ್ಟ್​ "ಗೆ ಸಲ್ಲುತ್ತದೆ. ಇತ್ತಿಚೆಗಷ್ಟೆ "ನ್ಯೂಸ್​​ ಇನ್​ ಶಾರ್ಟ್​" ಎಂದು ಪುನಃ ಬ್ರ್ಯಾಂಡಿಂಗ್​​ ಮಾಡಿಕೊಂಡಿತು. ಆ ಮೂಲಕ ತನ್ನ ನ್ಯೂಸ್​ ಕ್ಷೇತ್ರವನ್ನು ವಿಸ್ತರಿಸಿ ಕೊಂಡು ಹೊಸ ವಿಷಯಗಳನ್ನು ಸೇರಿಸಿಕೊಂಡಿತು. "ಆಸಮ್ಲೀ" ಕೂಡ ಆಟೋಮೆಟೆಡ್​​ ಫಾರ್ಮೆಟ್​​ ಮೂಲಕ ಹೆಚ್ಚು ಜನಪ್ರಿಯತೆಗಳಿಸಿದೆ. ಭಾರತದಲ್ಲಿ "ನ್ಯೂಸ್​​ಹಂಟ್" ಈ ರೀತಿಯ ಸುದ್ದಿಮಾಧ್ಯಮಗಳಿಗೆ ಮುನ್ನುಡಿ ಬರೆಯಿತು. ಇದು ಪುಸ್ತಕದ ಮಾದರಿಯಲ್ಲಿ ನ್ಯೂಸನ್ನು ಆಡುಭಾಷೆಯ ಮೂಲಕ ತಲುಪಿಸುತ್ತದೆ. ಕಳೆದ ವರ್ಷ 100 ಕೋಟಿಗಳಿಕೆ ಮತ್ತು ಈ ವರ್ಷ ಫೆಬ್ರವರಿಯಲ್ಲಿ 250 ಕೋಟಿಗೆ ಆದಾಯವನ್ನು ಏರಿಸಿಕೊಂಡಿದೆ.

ರಾಜು ಅವರ ಪ್ರಕಾರ, " ಭಾರತದಲ್ಲಿ ಪ್ರಾದೇಶಿಕ ವಿಷಯಗಳಿಗೆ ಹೆಚ್ಚು ಮಾರುಕಟ್ಟೆ ಇದೆ ಮತ್ತು ಇದನ್ನು 3-4 ಜನ ಬಹುದೊಡ್ಡ ಬ್ಯುಸಿನೆಸ್​​ ಮ್ಯಾನ್​​ಗಳು ಮಾತ್ರಉಪಯೋಗಿಸಿಕೊಳ್ಳುತ್ತಿದ್ದಾರೆ. ಗೂಗಲ್​​ನ ಟಾಪ್ 10 ನ್ಯೂಸ್​​ ಸ್ಟೋರ್​​ಗಳಲ್ಲಿ ವರ್ನಾಕ್ಯೂಲರ್​ ಆ್ಯಪ್​​ ಮುಂಚೂಣಿಯಲ್ಲಿದೆ. ಆದರೆ 2 ವರ್ಷದ ಹಿಂದೆ ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿ ಇತ್ತು ಅಂತ ಹೇಳ್ತಾರೆ

ಮಾರ್ಕೆಟಿಂಗ್​​ ಮ್ಯಾಜಿಕ್​​​

ವೇಟು ನ್ಯೂಸ್​ ನಗರಗಳಲ್ಲಿ ಅಷ್ಟೇ ಅಲ್ಲದೇ ತನ್ನ ಸೋದರ ಬ್ರಾಂಡ್ "ವೇಟು ಎಸ್ಎಮ್ಎಸ್" ಮೂಲಕ ಜಾಹೀರಾತು ನೀಡುತ್ತಾ ಮಾರ್ಕೆಟಿಂಗ್​​ ಮಾಡುತ್ತಿದೆ. ನಮ್ಮ ಗ್ರಾಹಕರಿಗೆ ಇದನ್ನು ತಲುಪಿಸಲು ಹೆಚ್ಚು ಹಣ ವ್ಯಯಿಸಬೇಕಿಲ್ಲ. ಈಗಾಗಲೇ ಹೆಸರು ವಾಸಿಯಾಗಿರುವ ವೇಟು ಎಸ್ಎಮ್ಎಸ್​​​ ಮೂಲಕ ಇದರ ಪ್ರಚಾರ ಕೈಗೊಳ್ಳುತ್ತೇವೆ. ಅಷ್ಟೇ ಅಲ್ಲದೇ ಜಾಗತಿಕ ಮಟ್ಟದಲ್ಲಿರುವ ಅನಿವಾಸಿಭಾರತೀಯರಿಗೆ ತಮ್ಮ ನೆಲದ, ಊರಿನ ಸುದ್ದಿ ತಿಳಿಯುವ ಕುತೂಹಲವಿರುತ್ತದೆ. ಅದನ್ನು ನಾವು ತಲುಪಿಸುತ್ತೇವೆ ಅಂತಾರೆ ರಾಜು.

ಮುಂದಿನಯೋಜನೆಗಳು

ವೇಟುನ್ಯೂಸ್ 2-3 ಮಿಲಿಯನ್​​ ಬಳಕೆದಾರರನ್ನು ಹೊಂದುವ ತನಕ ಹಣಗಳಿಸುವುದು ನಮ್ಮ ಆಶಯವಾಗಿರುವುದಿಲ್ಲ. ಆದರೆ ಇದು ಬಿ2ಬಿ ಚಾನೆಲ್​​ಗಳನ್ನು ಆರಂಭಿಸೋ ಉದ್ದೇಶವನ್ನು ಹೊಂದಿದ್ದು, ಆ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಲಿದೆ. ಸದ್ಯ ಪ್ರಾದೇಶಿಕ ಭಾಷೆಯ ಮೇಲೆ ಹೆಚ್ಚು ಕೇಂದ್ರಿಕೃತವಾಗಿದ್ದು, ಆಯಾ ಭಾಷೆಯ ಬರಹದ ಸಾರಾಂಶವನ್ನು ಇಂಗ್ಲೀಷ್​​ನಲ್ಲಿ ಕೊಡಲಾಗುತ್ತದೆ.

"ಅಷ್ಟೇ ಅಲ್ಲದೆ ಕಂಪನಿ ತನ್ನದೇ ಸ್ವಂತ ಐಓಎಸ್ (ಆಪರೇಟಿಂಗ್​​ ಸಿಸ್ಟಮ್) ಆ್ಯಪ್​​ನ್ನು ಬಿಡುಗಡೆಮಾಡುತ್ತಿದೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಬಳಕೆದಾರರನ್ನುಆಕರ್ಷಿಸಬಹುದು. ನಂತರ ಕಂಟೆಂಟ್​​ಗಳನ್ನು ಹೆಚ್ಚಿಸುವುದರ ಜೊತೆಗೆ ಇನ್ನು ಹೆಚ್ಚಿನ ಭಾಷೆಗಳನ್ನುಸೇರಿಬಹುದು" ಎನ್ನುತ್ತಾರೆ ​ ಮುಖ್ಯಕಂಟೆಂಟ್ ಆಫೀಸರ್, ಸುನಿಲ್​​ ಪಾಟೀಲ್

ಇಲ್ಲಿ ಸುದ್ದಿಯೇ ಬಹಳಮುಖ್ಯವಾದದ್ದು. ಸದ್ಯವೇಟು ನ್ಯೂಸ್​ ಹಿಂದಿ , ತೆಲುಗು ಮತ್ತು ಇಂಗ್ಲೀಷ್​​ ಬಾಷೆಗಳಲ್ಲಿ ಲಭ್ಯವಿದೆ. ಇನ್ನುಮುಂದಿನ 45 ದಿನಗಳಲ್ಲಿ 8 ಪ್ರಾದೇಶಿಕ ಭಾಷೆಗಳಲ್ಲಿ ತರುವ ಯೋಜನೆಯಲ್ಲಿ ಮುನ್ನುಗಿದ್ದಾರೆ.


Related Stories