ಬದಲಾವಣೆಗಾಗಿ ಕೆಟಲಿಸ್ಟ್

ಟೀಮ್​ ವೈ.ಎಸ್​. ಕನ್ನಡ

ಬದಲಾವಣೆಗಾಗಿ ಕೆಟಲಿಸ್ಟ್

Saturday February 13, 2016,

2 min Read

ಹೇಗೆ 2 ಲಕ್ಷ ರೂಪಾಯಿಗಳಿಗಿಂತಲೂ ಕಡಿಮೆಆದಾಯದ ಕುಟುಂಬಗಳಿಂದ ಬಂದ ಹುಡುಗಿಯರು ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು ಗೋಲ್ಡಮನ್ ಸ್ಯಾಚ್‍ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸುತ್ತಾರೆ..? ಅಥವ ಸಾಮಾಜಿಕ ಮತ್ತು ಆರ್ಥಿಕ ಸ್ತರದಲ್ಲಿ ಬೆಳೆಯುವ ಕನಸನ್ನಾದರೂ ಕಾಣುತ್ತಾರೆ..?

ಸಹಸ್ರಾರು ವಕ್ರತೆಗಳ ಹೊರತಾಗಿಯೂ ನಾಲ್ಕು ಹುಡುಗಿಯರು ತಮ್ಮ ಮನಸ್ಸನ್ನು ತಮ್ಮ ಗುರಿಯತ್ತಲೇ ಸ್ಥಾಪಿಸಿದ್ದರು. ಸ್ವಾತಿ, ಕವಿತಾ, ನೀಲು ಮತ್ತು ಪೂಜಾ ಇವರಲ್ಲಿಯ ಸಾಮ್ಯತೆಯೇನು? ಈ ನಾಲ್ವರೂ ಬಡತನ ರೇಖೆಯ ಕೆಳಮಟ್ಟದ ಕುಟುಂಬದಿಂದ ಬಂದವರು. ಆದರೂ ಪರಿಶ್ರಮ, ಉನ್ನತ ಶೈಕ್ಷಣಿಕ ದಾಖಲೆ ಮತ್ತು ಕೆಟಲಿಸ್ಟ್‍ನ ಸ್ವಲ್ಪ ನೆರವಿನೊಂದಿಗೆ ತಮ್ಮ ಪ್ರತಿಕೂಲತೆಯನ್ನು ಹೋಗಲಾಡಿಸಿದ್ದಾರೆ. ಇವರ ವಿಚಾರದಲ್ಲಿ ಆಕಾಶವೇ ಮಿತಿ ಎಂಬ ನಾಣ್ನುಡಿಯು ವಾಸ್ತವಕ್ಕೆ ತಿರುಗಿದೆ.

ಸ್ವಾತಿ ಶಿಂದೆ ಮಹಾರಾಷ್ಟ್ರದದಾಪೋಲಿ ಎಂಬ ಆಕರ್ಷಣೀಯ ಪಟ್ಟಣದವಳು. ಈ ಹಿಂದೆ ಅವಳ ಕುಟುಂಬವು ರೂ. 36,000 ವಾರ್ಷಿಕಆದಾಯವನ್ನು ಹೊಂದಿತ್ತು.ಹಾಗೂ ಹೀಗೂ ಪುಣೆಯಇಂಜಿನಿಯರಿಂಗ್‍ಕಾಲೇಜಿನಲ್ಲಿ ಮೆಕ್ಯಾನಿಕಲ್‍ನಲ್ಲಿಇಂಜಿನಿಯರಿಂಗ್‍ಪದವಿ ಪಡೆದ ಅವಳು ಐ.ಒ.ಸಿ.ಎಲ್.ನಲ್ಲಿಉದ್ಯೋಗ ಪಡೆದುವಾರ್ಷಿಕ 8.50 ಲಕ್ಷ ರೂಪಾಯಿಗಳ ಆದಾಯವನ್ನು ಪಡೆಯುತ್ತಿದ್ದಾಳೆ.

ಕವಿತಾಖಾಂಡೇಕರ್‍ಎಂಟುಜನರತನ್ನಕುಟುಂಬದೊಂದಿಗೆಮಧ್ಯ ಮುಂಬಯಿಯಒಂದೇಕೋಣೆಯ ಮನೆಯಲ್ಲಿ ವಾಸಿಸುತ್ತಿದ್ದಳು. ಅವಳ ತಂದೆಯು ವಾಹನ ಚಾಲಕನಾಗಿದ್ದುವಾರ್ಷಿಕ 1,20,000 ರೂಪಾಯಿಗಳ ಆದಾಯ ಹೊಂದಿದ್ದರು. ಅವಳು ಬಿ.ಎಮ್.ಸಿ ಶಾಲೆಯಲ್ಲಿಉತ್ತಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಕಠಿಣ ಪರಿಶ್ರಮದೊಂದಿಗೆಸಿವಿಲ್ ಇಂಜಿನಿಯರಿಂಗಿನಪ್ರಖ್ಯಾತಸಂಸ್ಥೆಯಾದ ವ್ಹಿ.ಜೆ.ಟಿ.ಐ.ಗೆ ಸೇರಿದಳು. ಅವಳು ತನ್ನ ಶೈಕ್ಷಣಿಕದಾಖಲೆಗಳನ್ನು ಕಾಪಾಡಿಕೊಳ್ಳುವದರ ಮೂಲಕ ಶಾಪೂರ್ಜಿ ಪಾಲ್ಲೋಮಜಿಯಲ್ಲಿಕಿರಿಯ ಸೈಟ್‍ಇಂಜಿನಿಯರ್ ಆಗಿ ಸ್ಥಾನವನ್ನು ಪಡೆದಿದ್ದಳು.ಎರಡು ವರ್ಷಗಳವರೆಗೆ ಕಾರ್ಯನಿರ್ವಹಿಸಿದ ಬಳಿಕ ಪುಣೆಯಎನ್.ಐ.ಸಿ.ಎಮ್.ಎ.ಆರ್. ನಲ್ಲಿಸ್ನಾತಕೋತ್ತರ ಪದವಿಯನ್ನು ಪಡೆದಳು. ಇಂದು ಅವಳು ಸ್ಯಾಮ್‍ಸಂಗ್ ಬಿಲ್ಡರ್ಸ್‍ಸಂಸ್ಥೆಯಲ್ಲಿವಸತಿಮತ್ತು ವಾಣಿಜ್ಯಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾಳೆ.

image


ನೀಲೂಖೇಡ್, ಮಹಾರಾಷ್ಟ್ರದಸೋಲಾಪುರಪಟ್ಟಣದಲ್ಲಿ ಬೆಳೆದವಳು. ಅವಳ ಮನೆಯ ಪರಿಸ್ಥಿತಿಯು ಕೆಟಲಿಸ್ಟ್‍ನ ಅವಳ ಸಹಚಾರಿಯಷ್ಟೇ ಕರಾಳವಾಗಿತ್ತು. ಅವಳತಂದೆಯುರೋಗಗ್ರಸ್ತನಾಗಿದ್ದುಅವನ ಸಂಧಿವಾತರೋಗವುಅವನ ಸಾಮಥ್ರ್ಯವನ್ನುಮೊಟಕುಗೊಳಿಸಿತ್ತು.ಅವಳತಂದೆಯುಇದ್ದೊಂದುತುಂಡುಜಮೀನನ್ನುಗೇಣಿಗೆಇನ್ನೊಬ್ಬರೈತನಿಗೆ ನೀಡಿದ್ದನು. ಈ ಗೇಣಿಯು ಸಂಪೂರ್ಣವಾಗಿಮಳೆಯ ಪ್ರಮಾಣ ಮತ್ತು ಬೆಳೆಯನ್ನು ಅವಲಂಬಿಸಿತ್ತು. ಇದು ಹೆಚ್ಚೆಂದರೂವರ್ಷಕ್ಕೆ 75,000 ರೂಪಾಯಿಗಳನ್ನು ದಾಟುತ್ತಿರಲಿಲ್ಲ.

ನೀಲೂ ಪುಣೆಯ ಪ್ರತಿಷ್ಠಿತಕಾಲೇಜಿನಲ್ಲಿ ಪ್ರವೇಶ ಪಡೆದಳು. ಅವಳು ತನ್ನ ಸ್ವಂತ ಪ್ರತಿಭೆಯಿಂದ ಪುಣೆಯ ಸಿ.ಒ.ಇ.ಪಿ. ಇಂಜಿನಿಯರಿಂಗ್‍ಕಾಲೇಜಿನಲ್ಲ್ಲಿ ಪ್ರವೇಶ ಪಡೆದಳು. ಆದರೂಇಂಗ್ಲೀಷಿನಲ್ಲಿಯಸಂಭಾಷಣೆ ಮತ್ತುಹಣಕಾಸಿನ ಬಿಕ್ಕಟ್ಟುಗಳು ಸವಾಲಾಗಿ ಪರಿಣಮಿಸಿದವು. ಇದೇ ಸಂದರ್ಭದಲ್ಲಿಕೆಟಲಿಸ್ಟ್‍ಅವಳಿಗೆ ಪಾಠದ ಮತ್ತುವಸತಿಯ ಶುಲ್ಕಕ್ಕೆ ಸಹಾಯಧನವನ್ನು ಒದಗಿಸಿತು. ಅವಳು ಇಂಗ್ಲೀಷಿನಲ್ಲಿಸುಲಭವಾಗಿ ಸಂಭಾಷಣೆ ಮಾಡಲು ಮತ್ತುಆತ್ಮವಿಶ್ವಾಸ ಬೆಳೆಸಿಕೊಳ್ಳಲು ತರಬೇತಿಯನ್ನೂ ಪಡೆದುಕೊಂಡಳು. ಇದರೊಂದಿಗೆ ಎಚ್.ಎಸ್.ಬಿ.ಸಿ ಮಾರ್ಗದರ್ಶಕರಿಂದತನ್ನ ಭವಿಷ್ಯದಯೋಜನೆಯಕುರಿತುಮಾರ್ಗದರ್ಶನವನ್ನೂ ಪಡೆದಳು.

ಅವಳ ಗಮನಾರ್ಹ‘ಕ್ಯಾಟ್’ಅಂಕಗಳು ಅವಳು ಐ.ಐ.ಎಮ್.ನಲ್ಲಿಅರ್ಥಶಾಸ್ತ್ರದಲ್ಲಿಎಮ್.ಬಿ.ಎ. ಪದವಿಯನ್ನುಪಡೆಯುವದನ್ನುಖಚಿತಗೋಳಿಸಿದವು. ಅನಂತರ ಅವಳು ಹಿಂದಿರುಗಿ ನೋಡಿದ್ದೇಇಲ್ಲ. ಅವಳು ಗೋಲ್ಡಮನ್ ಸ್ಯಾಚ್ ಸಂಸ್ಥೆಯಲ್ಲಿ ವಾರ್ಷಿಕ 13 ಲಕ್ಷ ರೂಪಾಯಿಗಳ ವರಮಾನದೊಂದಿಗೆ ಸೇರಿಕೊಂಡಳು. ಇದರೊಂದಿಗೆ ಸಂಸ್ಥೆಯುಅವಳಿಗೆ ಅಮೆರಿಕೆಯಲ್ಲಿ ವಸತಿ ಸೌಲಭ್ಯವನ್ನೂ ನೀಡಿತು. ಪ್ರಸ್ತುತಉದ್ಯೋಗಜಗತ್ತಿನಏಣಿಯೇರಿದಇವಳು ಮುಂಬಯಿಯಡೂಚೆ ಬ್ಯಾಂಕಿನಲ್ಲಿಕಾರ್ಯನಿರ್ವಹಿಸುತ್ತಿದ್ದಾಳೆ.

ಪೂಜಾ ಪ್ರಕಾಶತನ್ನ ಬಾಲ್ಯದ ಕೆಲಕಾಲವನ್ನುಬೆಂಗಳೂರಿನ ಬಸ್ ನಿಲ್ದಾಣದ ಸೂರಿನಡಿಯಲ್ಲಿಯೇ ಕಳೆದವಳು. ಪಾಲಕರುವಿಚ್ಛೆದಿತರಾದ ನಂತರ ಅವಳು ತನ್ನತಾಯಿಯೊಂದಿಗೆ ಉಳಿದಳು. ಅವಳ ತಂದೆಯು ವೈದ್ಯನಾಗಿದ್ದರೂ ಅವಳ ತಾಯಿಗೆಆತನಿಂದಯಾವುದೇಆಧಾರ ಸಿಗಲಿಲ್ಲ.ಕಂಪ್ಯೂಟÀರ್ ವಿಜ್ಞಾನದಲ್ಲಿಡಿಸ್ಟಿಂಕ್ಷನ್ನಿನೊಂದಿಗೆ ಸುಸಜ್ಜಿತಳಾದ ಅವಳು ವಿದೇಶದಲ್ಲಿಸ್ನಾತಕೋತ್ತರ ಪದವಿಗಾಗಿದಾಖಲಾತಿ ಪಡೆಯುವನಿರ್ಧಾರ ಮಾಡಿದ್ದಳು. ಮೇಲಾಗಿ ಅವಳ ಮಾರ್ಗದರ್ಶಕ ಅವಳಿಗಾಗಿ ಸೂಕ್ತ ಕಾಲೇಜನ್ನು ಗುರುತಿಸಿ,ಮನವಿ ಪತ್ರವನ್ನುತುಂಬುವ ಬಹು ಕಷ್ಟದ ಕೆಲಸದಲ್ಲಿಯೂ ಸಹಕರಿಸಿದರು. ಅನೇಕ ವಿಶ್ವವಿದ್ಯಾಲಯಗಳಿಗೆ ಮನವಿ ಸಲ್ಲಿಸಿ ಕೊನೆಗೆ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಸ್ಥಾನ ಪಡೆದಳು. ಅಮೆರಿಕೆಯಲ್ಲಿಯಾಹೂ ಸಂಸ್ಥೆಯಲ್ಲಿ ಕೆಲಸ ಪಡೆದ ಸ್ವಲ್ಪ ಸಮಯದಲ್ಲೇಕೆಟಲಿಸ್ಟ್‍ನಿಂದ ಪಡೆದಐದು ಲಕ್ಷ ರೂಪಾಯಿಗಳ ಪ್ರಾಯೋಜಕತ್ವದ ಹಣವನ್ನೂ ಮರಳಿ ಕೊಡುವ ಸ್ಥಿತಿ ತಲುಪಿದಳು.

ಇಂದುಕೆಟಲಿಸ್ಟ್‍ಒಬ್ಬಂಟಿಯಾಗಿಲ್ಲ. ನಿಧಾನವಾಗಿಆದರೆ ನಿಶ್ಚಿತವಾಗಿ ಭಾರತದಲ್ಲಿಕೌಶಲ್ಯಾಭಿವೃದ್ಧಿಕ್ಷೇತ್ರವು ವೇಗವನ್ನು ಪಡೆಯುತ್ತಿದೆ. ಒಂದುದೇಶಕ್ಕೆಅದರಯುವಕರಉದ್ಯೋಗಶೀಲತೆಯನ್ನು ಬೆಳೆಸುವ ಅವಶ್ಯಕತೆಯಿದೆ. ಕೆಟಲಿಸ್ಟ್ ಸಂಸ್ಥೆಯು 2007ರಲ್ಲಿ ಆರಂಭವಾಯಿತು. ಇದುಇಂಜಿನಿಯರಿಂಗ್, ವೈದ್ಯಕೀಯ, ವಾಸ್ತುಶಿಲ್ಪ ಮತ್ತುಚಾರ್ಟೆಡ್‍ಅಕೌಂಟಂಟ್‍ಕ್ಷೇತ್ರದಲ್ಲಿಉನ್ನತ ವ್ಯಾಸಾಂಗ ಮಾಡಲಿಚ್ಛಿಸುವಯುವತಿಯರಉದ್ಯೋಗಾರ್ಹತೆಯನ್ನುಬೆಳೆಸುವ ನಿಟ್ಟಿನಲ್ಲಿಕಾರ್ಯನಿರತವಾಗಿದೆ. ಈ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಯುಇಂತಹಯುವತಿಯರಇಂಗ್ಲೀಷ್ ಮಾತನಾಡುವಕೌಶಲ್ಯಕ್ಕೆಸಾಣೆ ಹಿಡಿಯುವದಷ್ಟೇಅಲ್ಲದೇಅವರನ್ನುಸ್ಪರ್ಧಾತ್ಮಕ ಪರೀಕ್ಷೆ ಮತ್ತುಉದ್ಯೋಗ ಸಂದರ್ಶನಗಳಿಗೂ ತರಬೇತುಗೊಳಿಸುತ್ತದೆ. ಇವರುಯೋಗ್ಯ ಶೈಕ್ಷಣಿಕಸಾಧನೆಯನ್ನುತೋರುವಯುವತಿಯರಶೈಕ್ಷಣಿಕಸಂಸ್ಥೆಗಳಲ್ಲಿನ ಶುಲ್ಕಪಾವತಿಗೆ ಮತ್ತು ವಸತಿವ್ಯವಸ್ಥೆಗಾಗಿಸಾಕಷ್ಟು ನಿಧಿಯನ್ನುಜೋಡಿಸುತ್ತಾರೆ. ಇದಿಷ್ಟೇ ಅಲ್ಲದೆಅವರ ಹೆಣ್ಣುಮಕ್ಕಳ ಮತ್ತುತಾಯಂದಿರಆರೋಗ್ಯವಿಮೆ ಮಾಡಿಸುವದರೊಂದಿಗೆಪ್ರತಿಯುವತಿಗೂಒಂದು ಲ್ಯಾಪ್‍ಟಾಪನ್ನೂಕೊಡಿಸುತ್ತಾರೆ.ಇದರಜೊತೆಯಲ್ಲೇಅವರಿಗೆ ಪ್ರತಿಷ್ಠಿತ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಉದ್ಯೋಗ ಮತ್ತುತರಬೇತಿಒದಗಿಸಲೂ ಸಹಕರಿಸುತ್ತದೆÉ. ಸದ್ಯಕ್ಕೆಕೆಟಲಿಸ್ಟ್ ಪುಣೆ, ಮುಂಬಯಿ ಮತ್ತುಬೆಂಗಳೂರು ಹೀಗೆ ಮೂರು ನಗರಗಳಲ್ಲಿ ತನ್ನಕೇಂದ್ರಗಳನ್ನು ಹೊಂದಿದೆ. ಈಗಾಗಲೇ ಈ ಸಂಸ್ಥೆಯ ಸಹಕಾರದಿಂದ 22ಕ್ಕೂ ಹೆಚ್ಚು ಯುವತಿಯರುಪದವಿಯನ್ನು ಗಳಿಸಿ 4 ರಿಂದ 8 ಲಕ್ಷ ರೂಪಾಯಿಗಳ ವಾರ್ಷಿಕಆದಾಯವನ್ನು ಪಡೆಯುತ್ತಿದ್ದಾರೆ.