ಭೂಮಿ ಮೇಲಿನ ವಿಂಟೆಂಜ್ ಸ್ವರ್ಗ ..

ಪೂರ್ವಿಕಾ

0

ಕಾರ್‍ಗಳು ಅಂದ್ರೆ ಯಾರಿಗೆ ಇಷ್ಟಇಲ್ಲ ಹೇಳಿ..ಈಗಿನ ಕಾಲದಲ್ಲಂತೂ ಎಲ್ಲರ ಮನೆಯಲ್ಲೂ ಕಾರ್‍ ಇದ್ದೇ ಇರುತ್ತೆ. ಕೆಲವರಿಗೆ ಹೊಸ ಕಾರ್‍ಗಳ ಶೋಕಿ ಇದ್ರೆ, ಇನ್ನು ಕೆಲವರಿಗೆ ಹಳೆ ಕಾರ್‍ಗಳ ಶೋಕಿ ಇರತ್ತೆ. ಹಳೆ ಕಾರ್‍ಗಳ ವಿಷ್ಯಕ್ಕೆ ಬಂದ್ರೆ ಅಬ್ಬಾಬ್ಬಾ ಅಂದ್ರೆ ಅದೆಷ್ಟುಕಾರ್​​ಗಳನ್ನ ಕೊಂಡುಕೊಳ್ಳಬಹುದು..? ಒಂದು ,ಎರಡು ಕಾರ್​​ಗಳನ್ನ ಇಟ್ಟುಕೊಳ್ಳಬಹುದು. ಇನ್ನೂ ಹೆಚ್ಚು ಅಂದ್ರೆ ಹತ್ತು ಹದಿನೈದು.. ಆದ್ರೆ ಇಲ್ಲೋಬ್ರು ಇದ್ದಾರೆ. ಅವ್ರು ವಿಂಟೇಜ್‍ ಕಾರ್​​ಗಳ ಸರದಾರ ಅಂದ್ರೆ ತಪ್ಪಾಗೊದಿಲ್ಲ. ಏಕೆಂದ್ರೆ ಇವ್ರ ಬಳಿ ಇರೋದು ಬರೋಬ್ಬರಿ 220 ಕ್ಕೂ ಹೆಚ್ಚು ವಿಂಟೇಜ್‍ಕಾರ್​​​ಗಳು 100ಕ್ಕೂ ಹೆಚ್ಚು ವಿಂಟೇಜ್ ಬೈಕ್ ಗಳು.

ಅಕ್ಷರ ಸಹ ಇದೊಂದು ವಿಂಟೇಜ್‍ ಕಾರ್​ಗಳ ಪ್ರಪಂಚ. ಇವುಗಳ ಸರದಾರ ರವಿಪ್ರಕಾಶ್. ಓದಿದ್ದು ವೈದ್ಯಕೀಯ ಕೋರ್ಸ್​. ಆದ್ರೆ ಮನಸೋತಿದ್ದು ಮಾತ್ರ ಈ ವಿಂಟೇಂಜ್ ಸುಂದರಿಯರಿಗೆ. ಹೌದು ದೇಶದಲ್ಲಿ ಎಲ್ಲೂ ಕಾಣಲು ಸಿಗದೇ ಇರೋ ವಿಶೇಷ ಕಾರ್ ಗಳು,ಬೈಕ್ ಗಳು,ಅಪರೂಪದ ವಸ್ತುಗಳು ರವಿಪ್ರಕಾಶ್‍ ಸಂಗ್ರಹದಲ್ಲಿದೆ. ಲ್ಯಾಂಚೆಸ್ಟರ್, ಜಾಗ್ವಾರ್,ರೋಲ್ಸ್​​ರಾಯ್ ,ಲೂಂಬಿನಿ ,ಹೀಗೆ ಇನ್ನೂ ಅನೇಕ ಕಂಪನಿಯ ಕಾರ್​​​ಗಳು ಇವ್ರ ಮನೆ ಸೇರಿವೆ. 100 ವರ್ಷಕ್ಕೂ ಹಳೆಯ ಕಾರ್‍ಗಳು ರವಿಪ್ರಕಾಶ್‍ ಅವ್ರ ಮನೆ ಶೆಡ್ ಸೇರಿದ್ದು ರಾಜ ಮಹಾರಾಜರು ಬಳಸುತ್ತಿದ್ದ ಕಾರ್‍ಗಳು ರಾಜಕೀಯ ವ್ಯಕ್ತಿಗಳು ಬಳಸಿದ ಕಾರ್‍ಗಳು ಕೂಡ ಇಲ್ಲೇ ಇದೆ.

1920ರಲ್ಲಿ ನೆಹರು ಬಳಸ್ತಿದ್ದ ಕಾರ್‍ ಕೂಡ ರವಿ ಅವ್ರ ಬಳಿ ಇದೆ. ಬಿಕೆನೆರ್, ಫಿರೋಜ್​​​ಗಾಂಧಿ ಬಳಸುತ್ತಿದ್ದ ಕಾರ್ ,ಕುವೆಂಪು ಅವ್ರ ಕಾರ್ ,ದರ್ಬಾಂಗ್ ಮಹಾರಾಜರ ಕಾರ್, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಜಿ .ಆರ್ ಬಳಸಿದ್ದ ಕಾರ್, ಆರ್.ಕೆ.ನಾರಾಯಣ್ ಬಳಸುತ್ತಿದ್ದ ಕಾರ್ ,ಹ್ಯಾನಿ ಪೋರ್ಡ್ ಬಳಸುತ್ತಿದ್ದ ಕಾರ್‍ ಇನ್ನೂ ಅನೇಕ ಕಾರ್​​ಗಳಿಗೆ ರವಿಪ್ರಕಾಶ್‍ ಆಶ್ರಯ ನೀಡಿದ್ದಾರೆ. ಸದ್ಯ ರವಿಪ್ರಕಾಶ್‍ ಬಳಿ ಇರೋ ಎಲ್ಲಾ ಕಾರ್​​ಗಳು ಚಾಲನೆಯಲ್ಲಿದ್ದು, ಎಲ್ಲಾ ಕಾರ್‍ಗಳನ್ನು ರವಿಯೇ ಖುದ್ದಾಗಿ ಹೊಸದರಂತೆ ರೆಡಿ ಮಾಡ್ಸಿದ್ದಾರೆ. ರವಿ ಅವ್ರಿಗೆ ಚಿಕ್ಕದಿನಿಂದಲೂ ವಿಂಟೇಂಜ್‍ಕಾರ್ ,ಬೈಕ್ ಗಳನ್ನ ಸಂಗ್ರಹ ಮಾಡೋ ಹವ್ಯಾಸ. ಇದಕ್ಕೆ ಸಾಥ್ ನೀಡಿದ್ದು ಅವ್ರ ಪತ್ನಿ ಸಬೀನಾ.

1979 ರಲ್ಲಿರವಿಪ್ರಕಾಶ್‍ ಅವ್ರಿಗೆ ಈ ಶೋಕಿ ಆರಂಭವಾಯ್ತು. 40 ಸಾವಿರ ಒಟ್ಟುಗೂಡಿಸಿ ಕಾರ್ ಮದ್ರಾಸ್ ನಿಂದ ಒಂದು ಕಾರ್‍ತೆಗೆದುಕೊಂಡು ಬಂದ ರವಿಪ್ರಕಾಶ್‍ ಇಂದು 220 ಕ್ಕೂ ಹೆಚ್ಚು ಕಾರ್​​ಗಳನ್ನ ಒಟ್ಟುಗೂಡಿಸಿದ್ದಾರೆ. ಅದಷ್ಟೇ ಅಲ್ಲದೆ ಹಾಳಾದ ಸ್ಥಿತಿಯಲ್ಲಿ ಸಿಗೋ ಕಾರ್ ಗಳನ್ನ ಹೊಸದಾಗಿ ಸಿದ್ದ ಪಡಿಸೋದಕ್ಕಾಗಿ ಗ್ಯಾರೆಜ್‍ ಅನ್ನಇಟ್ಟು 8 ಜನರನ್ನ ಕೆಲಸಕ್ಕಿಟ್ಟಿದ್ದಾರೆ. ಅಷ್ಟೇ ಅಲ್ಲದೆ 8 ಶೆಡ್ ಗಳನ್ನ ನಿರ್ಮಾಣ ಮಾಡಿದ್ದಾರೆ. ಇವುಗಳ ಜೊತೆಯಲ್ಲಿ ರಾಜ್‍ದೂತ್ ,ಹಾರ್ಲೇ ,ಇಂಡಿಯನ್ ಬಿ. ಎಂ.ಡಬ್ಲ್ಯೂ ಬೈಕ್ ಗಳು ಕೂಡ ರವಿ ಬಳಿ ಇವೆ. ಇವಷ್ಟೇ ಅಲ್ಲದೆ ಇವುಗಳ ಜೊತೆ ಲ್ಯಾಟೀನ್, ಕಾರ್ ಲೋಗೋಗಳ ಕಲೆಕ್ಷನ್‍ ಕೂಡ ಇವ್ರ ಬಳಿ ಇದೆ.

ವಿಂಟೇಜ್‍ಕಾರ್ ಗಳನ್ನ ಕಲೆಕ್ಷನ್ ಮಾಡೋದು ಅಷ್ಟೇನೂ ಸುಲಭದ ಕೆಲಸವಲ್ಲ. ಯಾಕಂದ್ರೆ ಈ ಕಾರ್‍ಗಳು ರವಿ ಅವ್ರ ಕೈಗೆ ಸಿಗೋ ಮೊದಲು ಈ ಸ್ಥಿತಿಯಲ್ಲಿ ಇರಲಿಲ್ಲ. ತೀರಾ ಕೆಟ್ಟ ಸ್ಥಿತಿಯಲ್ಲಿ ಸಿಗೋ ಕಾರ್‍ಗಳನ್ನ ಪಳ ಪಳ ಅಂತ ಹೊಳೆಯುವಂತೆ ಎಂಟು ಜನ ಮೆಕಾನಿಕ್ ಗಳು ಮಾಡುತ್ತಾರೆ. ಈ ವಿಂಟೇಜ್ ಸುಂದರಿಯರು ಸಿನಿಮಾಗಳಲ್ಲೂ ತಮ್ಮ ಸೌಂದರ್ಯವನ್ನ ಹರಡಿದ್ದಾರೆ. ಉಪೇಂದ್ರ ಅಭಿನಯದ ರಕ್ತಕಣ್ಣೀರು, ಸೂಪರ್ ಸ್ಟಾರ್‍ ರಜನಿಕಾಂತ್‍ ಅಭಿನಯದ ಲಿಂಗಾ, ಅಪ್ಪು ಅಭಿನಯದ ಪರಮಾತ್ಮ, ಹೀಗೆ ಇನ್ನೂ ಅನೇಕ ಸಿನಿಮಾದಲ್ಲಿ ರವಿ ಅವ್ರಕಾರ್​​ಗಳು ಮಿಂಚಿವೆ.

36 ವರ್ಷದಿಂದ ಸಂಗ್ರಹ ಮಾಡಿರೋ ಈ ಕಾರ್​​ಗಳನ್ನ ಜನರ ವೀಕ್ಷಣೆಗೂ ಅವಕಾಶ ಮಾಡಿಕೊಡಬೇಕೆನ್ನೋದು ರವಿ ಆಶಯ. ಕೆಂಗೇರಿ ಬಳಿ ಇರೋ ಮೈಲಸಂದ್ರದಲ್ಲಿ 16 ಎಕರೆ ಜಾಗದಲ್ಲಿ 200 ಕೋಟಿ ವೆಚ್ಚದಲ್ಲ್ಲಿಆಟೋ ಹಿಸ್ಟರಿ ಮ್ಯೂಸಿಯಂ ಮಾಡಲು ರವಿ ಸಿದ್ದರಾಗಿದ್ದಾರೆ. ಸದ್ಯ ಇವ್ರ ಬಳಿ ಇರೋ ಹಳೆ ಕಾರ್​​ಗಳನ್ನ ಕಲೆಕ್ಷನ್‍ ಜೊತೆಯಲ್ಲಿ ಹೊಸ ಕಾರ್​​ಗಳನ್ನ ಪ್ರದರ್ಶನಕ್ಕೆ ಇಡೋ ಆಶಯ ರವಿ ಅವ್ರದ್ದು.

ಈಗಲೂ ವಿವಿಧ ಊರುಗಳಿಗೆ ಇದೇ ಕಾರ್​​​ಗಳಲ್ಲಿ ಭೇಟಿ ನೀಡೋ ರವಿಪ್ರಕಾಶ್ ಫ್ಯಾಮಿಲಿ ಈಗಾಗಲೇ ವಿದೇಶಗಳಲ್ಲಿ ನಡೆಯೋ ಸಾಕಷ್ಟು ಕಾಂಪಿಟೇಷನ್ ಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಾಜ ಮಹಾರಾಜರು ಬಳಸಿರೋ ಇಂತಹ ಅದ್ಬುತ ಕಾರ್‍ಗಳನ್ನ ನೀವು ನೋಡ್ಬೇಕು ಅಂದ್ರೆ ಇನ್ನ ಕೆಲವು ದಿನಗಳು ಕಾಯಲೇ ಬೇಕು. ಆದ್ರೆ ಇಂತಹ ಕಾರ್‍ಗಳು ನಮ್ಮ ನೆಲದಲ್ಲಿರೋದೆ ನಮಗೆ ಹೆಮ್ಮೆಯ ವಿಚಾರ.