ನಾವು ಯಾರಿಗೂ ಕಮ್ಮಿ ಇಲ್ಲ – ಚಿಕ್ಕವರೆಲ್ಲಾ ಜಾಣರಲ್ಲ

ಟೀಮ್​ ವೈ.ಎಸ್​. ಕನ್ನಡ

ನಾವು ಯಾರಿಗೂ ಕಮ್ಮಿ ಇಲ್ಲ – ಚಿಕ್ಕವರೆಲ್ಲಾ ಜಾಣರಲ್ಲ

Friday February 19, 2016,

4 min Read

ನೈಜ ಜೀವನ ಸಿನಿಮಾಗಳಂತಲ್ಲ. ಅಲ್ಲಿ ನಟರಿಗೆ ವಯಸ್ಸಾದಂತೆ, ಪೋಷಕ ಪಾತ್ರಗಳಲ್ಲಿ ನಟಿಸತೊಡಗುತ್ತಾರೆ. ಆದ್ರೆ ನಿಜ ಜೀವನದಲ್ಲಿ ವಯಸ್ಸಾಗುತ್ತಿದ್ದಂತೆಯೇ ಹಿರುಯ ನಾಗರಿಕರು ಪ್ರಾಮುಖ್ಯತೆಯನ್ನೇ ಕಳೆದುಕೊಳ್ತಾರೆ. ಮಾಧ್ಯಮ, ಉದ್ಯಮ ಅಥವಾ ಜಾಹೀರಾತು ಎಲ್ಲೇ ಆಗಲೀ ಯುವಪೀಳಿಗೆಯನ್ನು ಓಲೈಸತೊಡಗುತ್ತಾರೋ, ಅಲ್ಲಿ ಹಿರಿಯರಿಗೆ ಜಾಗ ಇಲ್ಲ ಎಂದೇ ಅರ್ಥ.

ಇನ್ನು ಹತ್ತು ವರ್ಷಗಳಲ್ಲಿ ಹಿರಿಯರ ಜನಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಲಿದೆ. ಇವರೇ ಹಿಂದೆ ದೊಡ್ಡ ದೊಡ್ಡ ಕಂಪನಿಗಳನ್ನು ಕಟ್ಟಿ, ಹಲವು ದಾಖಲೆಗಳನ್ನು ಮಾಡಿ, ಅಷ್ಟೇ ಯಾಕೆ ತಮ್ಮ ಹಿರಿಯರ ಮಾತುಗಳನ್ನೂ ಧಿಕ್ಕರಿಸಿ, ಹೊಸ ಹಾದಿಯಲ್ಲಿ ನಡೆದಿದ್ದವರು. ಇಂತವರು ಸುಮ್ಮನೆ ಕುಳಿತುಕೊಂಡು ನಿವೃತ್ತ ಜೀವನ ನಡೆಸಲು ಇಷ್ಟ ಪಡ್ತಾರಾ? ಆರೋಗ್ಯ ಹದಗೆಟ್ಟಾಗ ಮಕ್ಕಳು ಕೆಲಸಕ್ಕೆ ರಜೆ ಹಾಕಿ ನಮ್ಮನ್ನು ನೋಡಿಕೊಳ್ಳಲಿ ಅಂತ ನಿರೀಕ್ಷಿಸುತ್ತಾರಾ? ಖಂಡಿತಾ ಇಲ್ಲ.

ಅವಕಾಶಕ್ಕಾಗಿ ಎದುರು ನೋಡುತ್ತಿರುವ ಒಬ್ಬ ನವೋದ್ಯಮಿಗೆ ಇದು ಸುವರ್ಣಾವಕಾಶ. ಯುನೈಟೆಡ್ ನೇಷನ್ಸ್ ಪಾಪುಲೇಷನ್ ಫಂಡ್ ಮತ್ತು ಹೆಲ್ಪ್ ಏಜ್ ಇಂಟರ್‍ನ್ಯಾಷನಲ್ ಸಂಸ್ಥೆಗಳ ಜಂಟಿ ವರದಿಯಲ್ಲಿ, ‘ಭಾರತದಲ್ಲಿ ಸದ್ಯ 10 ಕೋಟಿ ಮಂದಿ ಹಿರಿಯ ನಾಗರಿಕರಿದ್ದಾರೆ. 2050ರ ಹೊತ್ತಿಗೆ ಈ ಸಂಖ್ಯೆ ಶೇಕಡಾ 20ರಷ್ಟು ಏರಿಕೆಯಾಗಿ, 32 ಕೋಟಿ ದಾಟಲಿದೆ’ ಎಂದು ಉಲ್ಲೇಖಿಸಲಾಗಿದೆ.

image


60 ದಾಟಿದವರಿಗಾಗಿ ಒಂದು ಉದ್ಯಮ

ಕಳೆದ ಕೆಲ ವರ್ಷಗಳಿಂದೀಚೆಗೆ 60 ದಾಟಿದವರನ್ನೇ ಕೇಂದ್ರವಾಗಿಸಿಕೊಂಡು ಕೆಲ ಸ್ಟಾರ್ಟಪ್‍ಗಳು ಪ್ರಾರಂಭವಾದ್ವು. ಅವರಿಗಾಗಿ ಒಂದು ಸಾಮಾಜಿಕ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಅಥವಾ ಅವರಿಗಾಗಿಯೇ ಕೆಲ ಸೇವೆಗಳನ್ನು ಕಲ್ಪಿಸುವ ಕೆಲಸಗಳೂ ನಡೆದವು. ತಮ್ಮ ಕುಟುಂಬದಲ್ಲಿನ ಸಮಸ್ಯೆಗಳನ್ನೇ ಗಮನದಲ್ಲಿಟ್ಟುಕೊಂಡು ಯುವಪೀಳಿಗೆಯ ಮಂದಿಯೇ ಗುಡ್‍ಹ್ಯಾಂಡ್ಸ್, ಸೀನಿಯರ್ ಶೆಲ್ಫ್, ಪ್ರಮತಿ ಕೇರ್, ಸೀನಿಯರ್ ವಲ್ರ್ಡ್ ಮತ್ತು ಸಿಲ್ವರ್ ಟಾಕೀಸ್‍ನಂತಹ ಕಂಪನಿಗಳ ಮೂಲಕ ಹಿರಿಯ ನಾಗಕರಿಗರಿಗೆ ನಾನಾ ಸೇವೆ ಒದಗಿಸಲು ಮುಂದಾದ್ರು.

ಆದ್ರೆ 51 ವರ್ಷದ ವ್ಲಾದಿಮಿರ್ ರುಪ್ಪೊ ಅವರು ಎಲ್ಲರಿಗಿಂತ ಭಿನ್ನ. ಯಾಕಂದ್ರೆ ಈ ವಿಷಯ ಅವರಿಗೆ ತುಂಬಾ ವೈಯಕ್ತಿಕವಾದುದು. ‘ನಾನು ಎಲ್ಲದಕ್ಕೂ ನನ್ನ ಮಕ್ಕಳ ಮೇಲೆ ಅವಲಂಬಿಸಲು ಇಷ್ಟಪಡುವುದಿಲ್ಲ.’ ಅಂತಾರೆ ಅವರು. ಕಳೆದ 16 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ವ್ಲಾದಿಮಿರ್ ‘ಬ್ಯೂಟಿಫುಲ್ ಇಯರ್ಸ್’ ಕಂಪನಿ ಪ್ರಾರಂಭಿಸಿದ್ದಾರೆ. ಹಿರಿಯ ನಾಗರಿಕರ ಜೀವನವನ್ನು ಮತ್ತು ಅವರಿಗಾಗಿ ಶ್ರಮಿಸುವವ ಜೀವನವನ್ನು ಸುಧಾರಿಸಲು, ಅವರ ನಡುವೆ ಉತ್ತಮ ಸಂಬಂಧ ಬೆಸೆಯಲು, ವಿನೂತನ ಉತ್ಪನ್ನಗಳನ್ನು ಪರಿಚಯಿಸಿ, ಹಿರಿಯರಿಗೆ ಅವಶ್ಯಕವೆನಿಸುವ ಎಲ್ಡರ್ ಕೇರ್ ಸರ್ವೀಸ್‍ಗಳನ್ನು ಸಂಪರ್ಕಿಸಿ ಕೊಡುವ ಕೆಲಸ ಮಾಡುತ್ತದೆ ಈ ಬ್ಯೂಟಿಫುಲ್ ಇಯರ್ಸ್. ವ್ಲಾದಿಮಿರ್ ಮಾತುಗಳಲ್ಲೇ ಹೇಳೋದಾದ್ರೆ ಹಿರಿಯ ನಾಗರಿಕರಿಗೆ ಇದೊಂಥರಾ ಟ್ರಿಪ್‍ಅಡ್ವೈಸರ್ ಹಾಗೂ ಜೊಮಾಟೋ ಇದ್ದಂತೆ.

ಇದನ್ನು ಓದಿ

ಯಾರೇ ಕೂಗಾಡಲಿ...ಇವನ ಸಾಧನೆಗೆ ಕೊನೆಯೇ ಇಲ್ಲ..

ವ್ಲಾದಿಮಿರ್‍ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಫ್ಟ್‍ವೇರ್ ಎಕ್ಸಿಕ್ಯುಟಿವ್‍ಆಗಿ ಸುಮಾರು 30 ವರ್ಷಗಳ ದುಡಿದ ಸುದೀರ್ಘ ಅನುಭವವಿದೆ. ರಷ್ಯಾದ ಸೇಂಟ್ ಪೀಟರ್ಸ್‍ಬರ್ಗ್ ಹುಟ್ಟಿಗೆ ಬೆಳೆದ ವ್ಲಾದಿಮಿರ್ ಇಸ್ರೇಲ್‍ನ ಜೆರುಸಲೇಮ್‍ನಲ್ಲಿ 12 ವರ್ಷಗಳ ಕಾಲ ಕೆಲಸ ಮಾಡಿದ್ರು. ನಂತರ 2000ರಲ್ಲಿ ಬೆಂಗಳೂರಿಗೆ ಬಂದು ಬ್ರಿಟನ್ ಮೂಲದ ಬಹುರಾಷ್ಟ್ರೀಯ ಕಂಪನಿಯೊಂದರ ಶಾಖೆ ಪ್ರಾರಂಭಿಸಿದ್ರು. ಕ್ರಮೇಣ ಅದು 2200 ಜನರ ದೊಡ್ಡ ತಂಡವೇ ಆಯ್ತು. ಈ ಮೂಲಕ 6 ತಿಂಗಳ ಕಾಂಟ್ರ್ಯಾಕ್ಟ್ ಮೇಲೆ ಕೆಲಸಕ್ಕೆ ಸೇರಿದ್ದ ವ್ಲಾದಿಮಿರ್, ಬರೊಬ್ಬರಿ 16 ವರ್ಷಗಳ ಕಾಲ ಅದೇ ಕಂಪನಿಯಲ್ಲಿ ಮುಂದುವರೆದರು.

ನಂತರ ಇದೇ ಜನವರಿಯಲ್ಲಿ ಸಿಸ್ಕೋ ಕಂಪನಿಯ ಎಂಜಿನಿಯರಿಂಗ್ ವಿಭಾಗದ ವಿಪಿ ಹುದ್ದೆಯಿಂದ ಕೆಳಗಿಳಿದ ಬಳಿಕ, ವ್ಲಾದಿಮಿರ್ ಈಗ ಫುಲ್ ಟೈಮ್ ‘ಬ್ಯೂಟಿಫುಲ್ ಇಯರ್ಸ್’ ಮೇಲೆ ಗಮನ ಹರಿಸುವ ಆಶಯ ಹೊಂದಿದ್ದಾರೆ.

ಇದು ವಯಸ್ಸಿನ ವಿಷಯವಲ್ಲ

‘ನಾನು ನನ್ನ ಆಂಟಿ ಕಥೆ ಹೇಳಲಾ? ಅವರಿಗೀಗ 86 ವರ್ಷ ವಯಸ್ಸು. ‘ಪ್ರತಿ ಬಾರಿ ಕನ್ನಡಿಯಲ್ಲಿ ನನ್ನನ್ನು ನೋಡಿಕೊಂಡಾಗಲೂ, ಯಾರು ಈ ಕುರೂಪಿ ಮುದುಕಿ ಅಂತನ್ನಿಸುತ್ತೆ ಅಂತ ಅವರೇ ನನಗೊಮ್ಮೆ ಹೇಳಿದ್ರು, ಈಗ್ಗೆ 60, 70 ವರ್ಷಗಳ ಹಿಂದೆ ನಾನು ಎಂತಹಾ ವ್ಯಕ್ತಿಯಾಗಿದ್ದೆನೋ, ಈಗಲೂ ಅದೇ ವ್ಯಕ್ತಿಯೇ. ಆದ್ರೆ ಬೇರೆಯವರು ಮಾತ್ರ ನನ್ನಲ್ಲಿ ಒಬ್ಬ ಮುದುಕಿಯನ್ನು ಕಾಣ್ತಾರೆ. ನಾನಲ್ಲ.’ ಹಿರಿಯ ನಾಗರಿಕರನ್ನು ಕಿರಿಯರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರಾ?’ ಅಂತ ಕೇಳ್ತಾರೆ ವ್ಲಾದಿಮಿರ್. ಅದೇ ಪ್ರಶ್ನೆಯೇ ಅವರನ್ನು ತಾವು ಕೂಡಿಟ್ಟ ಹಣದಿಂದ ಬ್ಯೂಟಿಫುಲ್ ಇಯರ್ಸ್ ಪ್ರಾರಂಭಿಸಲು ಸ್ಫೂರ್ತಿ ನೀಡಿದ್ದು ಕೂಡ.

ಈ ವೇದಿಕೆಯನ್ನು ಹಿರಿಯ ನಾಗರಿಕರು ಉಚಿತವಾಗಿ ಬಳಸಬಹುದು. ಆದ್ರೆ ವ್ಲಾದಿಮಿರ್ ಇ-ಕಾಮರ್ಸ್ ಮೂಲಕ ಹಣ ಗಳಿಸುವ ನಿರೀಕ್ಷೆ ಹೊಂದಿದ್ದಾರೆ. ‘ನಮ್ಮ ಇ-ಕಾಮರ್ಸ್‍ನಲ್ಲಿ ಲೆನ್ಸ್ ಇರುವ ನೇಲ್ ಕಟ್ಟರ್, ಬುಕ್ ಹೋಲ್ಡರ್, ಟ್ಯಾಬ್ಲೆಟ್ ಕಟ್ಟರ್, ಮೋಟರ್ ಅಳವಡಿಸಿರುವ ವೀಲ್‍ಚೇರ್... ಹೀಗೆ ನಾನಾ ರೀತಿಯಲ್ಲಿ ಹಿರಿಯ ನಾಗರಿಕರಿಗೆ ನೆರವಾಗುವ ಉತ್ಪನ್ನಗಳು ಲಭ್ಯ. ಸ್ಥಳೀಯವಾಗಿ ಉತ್ಪಾದಿಸುವ ಉಪಕರಣಗಳು, ಉತ್ಪನ್ನಗಳು ಮಾತ್ರವಲ್ಲ, ಬ್ಯೂಟಿಫುಲ್ ಇಯರ್ಸ್ ವಿದೇಶಗಳಿಂದ ಹೈಟೆಕ್ ಉತ್ಪನ್ನಗಳನ್ನೂ ಆಮದು ಮಾಡಿಕೊಡುತ್ತೇವೆ’ ಅಂತ ತಮ್ಮ ಮಾತು ಮುಂದುವರಿಸುತ್ತಾರೆ ವ್ಲಾದಿಮಿರ್.

ಸಾಮಾನ್ಯವಾಗಿ ಹಿರಿಯ ನಾಗರಿಕರಿಗೆ ಉತ್ಪನ್ನಗಳನ್ನು ಖರೀದಿಸುವವರಿಗೆ ಅದರ ಉಪಯೋಗಗಳ ಕುರಿತು ಸಂಪೂರ್ಣ ಮಾಹಿತಿ ಇರಲ್ಲ. ಹೀಗಾಗಿಯೇ ಅಂತಹವರಿಗೆ ನೆರವಾಗಲೆಂದೇ ಫಿಸಿಯೊಥೆರಪಿಸ್ಟ್ಸ್, ಮನೆಯಲ್ಲೇ ಡಯಾಗ್ನೋಸ್ಟಿಕ್ ಸೇವೆ ನೀಡುವವರ, ವೈದ್ಯಕೀಯ ಉಪಕರಣಗಳ ಪೂರೈಕೆದಾರರ ಹಾಗೂ ಇತರೆ ಸೇವಾದಾರರ ಪಟ್ಟಿ ಕೊಡಲಾಗುತ್ತೆ. ಜೊತೆಗೆ ದೊಡ್ಡ ಆಸ್ಪತ್ರೆಗಳಲ್ಲಿ, ಬ್ಯಾಂಕ್ ಹಾಗೂ ರಿಯಲ್ ಎಸ್ಟೇಟ್ ಕಂಪನಿಗಳಲ್ಲೂ ಜಾಗೃತಿ ಅಭಿಯಾನ ಕೈಗೊಳ್ಳಲು ವ್ಲಾದಿಮಿರ್ ಚಿಂತಿಸಿದ್ದಾರೆ.

ಸದ್ಯ ವ್ಲಾದಿಮಿರ್ ಹಿರಿಯ ನಾಗರಿಕರಿಗಾಗಿಯೇ ಒಂದು ವಿಭಿನ್ನ ವೇದಿಕೆ ಕಲ್ಪಿಸುತ್ತಿದ್ದಾರೆ. ಇಲ್ಲಿ ಹಿರಿಯ ನಾಗರಿಕರ ನಡುವೆ ಒಂದೊಳ್ಳೆ ಬಾಂಧವ್ಯ ಸೃಷ್ಟಿಸಲಾಗುತ್ತೆ. ಒಬ್ಬಂಟಿಯಾಗಿರದೇ ಮತ್ತೊಬ್ಬರ ಒಡನಾಟದಲ್ಲಿರಬಹುದು. ಹಾಗೇ ಹಿರಿಯ ನಾಗರಿಕರೊಂದಿಗೆ ಕಾಲ ಕಳೆಯಬಯಸುವವರಿಗೂ ಇಲ್ಲಿ ಬರಲು ಅವಕಾಶವಿದೆ. ಅದಕ್ಕಾಗಿಯೇ ಬ್ಯೂಟಿಫುಲ್ ಇಯರ್ಸ್ ವೆಬ್‍ಸೈಟ್‍ನಲ್ಲಿ ಬ್ಯೂಟಿಫುಲ್ ಏಜಿಂಗ್ ಅನ್ನೋ ವಿಭಾಗವೂ ಇದೆ.

image


ಕೆಲ ವರ್ಷಗಳ ಹಿಂದೆ 83 ವರ್ಷವಾಗಿದ್ದಾಗ ವ್ಲಾದಿಮಿರ್‍ರ ಆಂಟಿ, ತಮ್ಮ ಪತಿ, ಸಹೋದರಿ, ಮಗ, ಅಳಿಯ... ಹೀಗೆ ಕುಟುಂಬದ ಹಲವು ಸದಸ್ಯರನ್ನು ಕಳೆದುಕೊಂಡರು. ಆದ್ರೂ ಎದೆಗುಂದದೆ ಆ ವಯಸ್ಸಿನಲ್ಲೂ ಕಂಪ್ಯೂಟರ್ ಕಲಿತುಕೊಂಡ್ರು. ಹಾಗೇ ತಮಗಿಷ್ಟವಾದ ವ್ಯಕ್ತಿಗಳ ಕುರಿತು ಆತ್ಮಕಥನ ಬರೆಯುವುದನ್ನು ರೂಢಿಸಿಕೊಂಡ್ರು. ಬರವಣಿಗೆ ಅನ್ನೋದು ಅವರಿಗೆ ಒಂದು ಹೊಸ ಜೀವನವನ್ನೇ ನೀಡಿತು. ಕಳೆದು ಹೋದ ಧ್ವನಿಗಳು ಹಾಗೂ ಪೀಳಿಗೆಗಳಿಗೆ ಆ ಮೂಲಕ ಜೀವ ತುಂಬತೊಡಗಿದ್ರು. ಹೀಗೆ ಅವರು ತಮ್ಮ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮಕ್ಕಳಿಗೆ ಸ್ಫೂರ್ತಿಯಾಗಲಿದ್ದಾರೆ ಅಂತಾರೆ ವ್ಲಾದಿಮಿರ್.

ವಯಸ್ಸು ದೇಹಕ್ಕೆ, ಮನಸ್ಸಿಗಲ್ಲ.

ಭಾತೀಯರು ತಮ್ಮ ಕುಟುಂಬದ ಹಿರಿಯರನ್ನು ತುಂಬಾ ಪ್ರೀತಿಸ್ತಾರೆ ಅನ್ನೋದು ಪ್ರಶ್ನಾರ್ಹ. ಜೊತೆಗೆ ಪ್ರತಿದಿನ ಪತ್ರಿಕೆಗಳ ಅಪರಾಧ ವಿಭಾಗದಲ್ಲಿ ಹಿರಿಯ ನಾಗರಿಕರ ಸಾವುಗಳ ಕುರಿತೂ ಸುದ್ದಿ ಓದುತ್ತಿರುತ್ತೇವೆ. ಅಲ್ಲದೇ ಒಂದು ಕಾಲದ ಪೆನ್ಶನರ್ಸ್ ಪ್ಯಾರಡೈಸ್ ಎನಿಸಿಕೊಂಡಿದ್ದ ಬೆಂಗಳೂರನ್ನೇ ನೋಡಿ, ಇವತ್ತು ಐಟಿ ಕಂಪನಿಗಳು ಹಾಗೂ ಅದಕ್ಕೆ ಸಂಬಂಧಿಸಿದ ಉದ್ಯಮಗಳಿಂದಾಗಿ ಯುವಪೀಳಿಗೆಯ ನಗರವಾಗಿದೆ. ಮುಂಬೈ ಹಾಗೂ ದೆಹಲಿ ಸೇರಿದಂತೆ ಬೇರೆ ಮಹಾನಗರಿಗಳ ಕಥೆಯೂ ಇದೇ ಆಗಿದೆ. ಆದ್ರೆ ಮಧ್ಯಮ ವರ್ಗದ ನಿವೃತ್ತ ಜೀವಗಳು ಸೂರ್ಯಾಸ್ತದೆಡೆಗೆ ಸುಮ್ಮನೇ ಹೆಜ್ಜೆ ಹಾಕುವುದಿಲ್ಲ. ‘ಒಂದು ಸಾವಿರ ಜನರನ್ನು ಮ್ಯಾನೇಜ್ ಮಾಡಹುದು, ಆದ್ರೆ ವ್ಯವಸ್ಥೆಯಿಲ್ಲದ ಕಡೆ 10 ಜನರನ್ನು ಸುಮ್ಮನಿರುಸುವುದೂ ಕಷ್ಟ. ಎಲ್ಲವೂ ಸವಾಲಾಗಿಯೇ ಪರಿಣಮಿಸುತ್ತದೆ. ನನಗದು ತುಂಬಾ ಇಷ್ಟ. ನನ್ನ ಪೀಳಿಗೆ ನಿಮಗಿಂತ ಯಾವುದರಲ್ಲೂ ಕಮ್ಮಿ ಇಲ್ಲ ಅನ್ನೋದನ್ನ ನಾನು ನಮ್ಮ ಯುವಸ್ಟಾರ್ಟಪ್ ಹುಡುಗರಿಗೆ ತಿಳಿಸಬಯಸುತ್ತೇನೆ’ ಅಂತ ನಗುತ್ತಾರೆ ವ್ಲಾದಿಮಿರ್. 

ಇದನ್ನು ಓದಿ

1. ಮೇಕ್ ಇನ್ ಇಂಡಿಯಾ : ಮೇಕ್ ಇನ್ ಕರ್ನಾಟಕ.. ರಾಜ್ಯಕ್ಕೆ ಸಿಕ್ಕಿದೆ 9700 ಕೋಟಿ ರೂ. ಬಂಪರ್ ಹೂಡಿಕೆ

2. ಸಾರಾಯಿ ನಿಷೇಧ ಹಾಗೂ ಬಾಲ್ಯ ವಿವಾಹದ ವಿರುದ್ಧ ಹೋರಾಟ...

3. ಸೂರ್ಯಶಕ್ತಿಯಿಂದ ಉದ್ಯೋಗ ಸೃಷ್ಟಿ, ಕುಗ್ರಾಮಗಳ ಅಭಿವೃದ್ಧಿ