18 ತಿಂಗಳಲ್ಲೇ 5 ರಿಂದ 500ಕ್ಕೇರಿದ ಗ್ರಾಹಕರ ಸಂಖ್ಯೆ: ಅಭಿವೃದ್ಧಿ ಪಥದಲ್ಲಿ ಜಾಕ್‌ಪೇ..!

ಟೀಮ್​​ ವೈ.ಎಸ್​​.

18 ತಿಂಗಳಲ್ಲೇ 5 ರಿಂದ 500ಕ್ಕೇರಿದ ಗ್ರಾಹಕರ ಸಂಖ್ಯೆ: ಅಭಿವೃದ್ಧಿ  ಪಥದಲ್ಲಿ ಜಾಕ್‌ಪೇ..!

Saturday October 17, 2015,

4 min Read

ಎನ್‌ಸಿಆರ್ ಮೂಲದ ಜಾಕ್‌ಪೇ ಸಂಸ್ಥೆ ಭಾರತದಲ್ಲಿ ಆನ್‌ಲೈನ್ ಪಾವತಿಯನ್ನು ಸುಲಭಗೊಳಿಸುವ ಉದ್ಯಮದಲ್ಲಿ ತೊಡಗಿದೆ. ಸಿಕ್ಯೂಯಾ ಕ್ಯಾಪಿಟಲ್ ಬೆಂಬಲದೊಂದಿಗೆ 2011ರಲ್ಲಿ ಉಪಾಸನಾ ಟಾಕು ಎಂಬುವವರಿಂದ ಸ್ಥಾಪನೆಯಾದ ಸಂಸ್ಥೆ ಜಾಕ್‌ಪೇ. ಅಧಿಕೃತವಾಗಿ 2012ರಲ್ಲಿ ಆನ್‌ಲೈನ್ ಪಾವತಿ ಮಾರ್ಗವನ್ನು ಬಿಡುಗಡೆ ಮಾಡಲಾಯಿತು. 5 ಗ್ರಾಹಕರೊಂದಿಗೆ ಆರಂಭವಾದ ಈ ಸಂಸ್ಥೆ ಪ್ರಸ್ತುತ 500ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ.

ಜಾಕ್​​ಪೇಯ ಮೊದಲ ಉತ್ಪನ್ನ ವೆಬ್​​ಪೇ . ಇದರ ಮೂಲಕ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಬಿಸಿನೆಸ್​​ಗಳಿಗೆ ಆನ್​ಲೈನ್ ಪಾವತಿಯ ಪರಿಹಾರ ನೀಡಿತ್ತು.

ಉಪಾಸನ ಟಾಕು

ಉಪಾಸನ ಟಾಕು


ಇವರ ಎರಡನೇ ಉತ್ಪನ್ನ ಎಂಪೇ, 2013ರಲ್ಲಿ ಬಿಡುಗಡೆಯಾಯಿತು. ಭಾರತದಲ್ಲಿ ಮೊಬೈಲ್ ಫಸ್ಟ್ ಬಿಸಿನೆಸ್ ಮಾಡುವವರಿಗೆ ಸಂಪೂರ್ಣ ಪಾವತಿಯ ಪರಿಹಾರ ಇದಾಗಿತ್ತು. ವ್ಯವಹಾರಗಳನ್ನು ಎಪಿಪಿ ಮುಖಾಂತರ (ಇಲ್ಲಿ ಬಳಕೆದಾರ ಬ್ರೌಸರ್‌ ಅನ್ನು ತೆರೆಯಬೇಕಾದ ಅವಶ್ಯಕತೆ ಇಲ್ಲ) ಅಪ್ಲಿಕೇಶನ್ ಪೇಮೆಂಟ್ ಮಾಡುವ ಅವಕಾಶ ನೀಡುತ್ತಿದೆ ಎಂ ಪೇ. ಉಪಾಸನಾ ಟಾಕು ಅವರ ಜೊತೆ ಯುವರ್ ಸ್ಟೋರಿ ನಡೆಸಿದ ಸಂದರ್ಶನ ಇಲ್ಲಿದೆ.

ಯುವರ್​​ಸ್ಟೋರಿ: ನಿಮ್ಮ ಅತ್ಯುತ್ತಮ ಗ್ರಾಹಕರು ಯಾರು ಮತ್ತು ಎಂ.ಪೇ ಬಗ್ಗೆ ಸ್ವಲ್ಪ ವಿವರಿಸಿ

ಉಪಾಸನಾ ಟಾಕು: ಕೇವಲ 5 ಮಂದಿ ಗ್ರಾಹಕರೊಂದಿಗೆ 2012ರ ಏಪ್ರಿಲ್‌ನಲ್ಲಿ ಆರಂಭವಾದ ಜಾಕ್‌ಪೇ ಸಂಸ್ಥೆ ಪ್ರಸ್ತುತ ಜಬಾಂಗ್ ವರ್ಲ್ಡ್, ಹೋಮ್‌ಶಾಪ್18, ಹಂಗಾಮಾ, ಯೆಪ್‌ಮಿ, ಶಾಪ್‌19, ಎಕ್ಸೋಟೆಲ್, ಐಐಎಂಜಾಬ್ಸ್, ಇ2ಇನೆಟ್‌ವರ್ಕ್ಸ್, ಅಮೆರಿಕನ್ ಸ್ವಾನ್, ಅನ್ಸಾಲ್ಸ್ ಸೇರಿದಂತೆ 500ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ.

ಎಂಪೇ, ಆ್ಯಂಡ್ರಾಯ್ಡ್ ಮತ್ತು ಐಫೋನ್‌ ಆ್ಯಪ್‌ಗಳಲ್ಲಿ ಭಾರತ ಏಕೈಕ ಇನ್-ಆ್ಯಪ್ ಪಾವತಿ ಪರಿಹಾರ. ಎಂಪೇಯಲ್ಲಿ ಮೊಬೈಲ್ ವೆಬ್ ಪಾವತಿ ಪರಿಹಾರವೂ ಇದೆ. ಇದರ ಮೂಲಕ ಎಲ್ಲಾ ಜನಪ್ರಿಯ ಮೊಬೈಲ್ ಬ್ರೌಸರ್‌ಗಳಲ್ಲೂ ಕಾರ್ಯನಿರ್ವಹಿಸಬಹುದಾಗಿದೆ. ಎಂ ಪೇ ಬಿಡುಗಡೆಯಾದಾಗಿನಿಂದ ಇಲ್ಲಿವರೆಗೆ 70 ಕೋಟಿ ಮೊಬೈಲ್ ಪಾವತಿಯನ್ನು ಮಾಡಿದೆ. ವ್ಯಾಪಾರಿಗಳ ವೆಬ್‌ಸೈಟ್‌ನಲ್ಲಿ ಕಲೆಕ್ಟ್ ಕಾರ್ಡ್ ಮಾಹಿತಿ, ಇ-ಮೇಲ್ ಬಿಲ್‌, ಅಂತರಾಷ್ಟ್ರೀಯ ಮಲ್ಟಿ ಕರೆನ್ಸಿ ಪಾವತಿ ಮತ್ತು ಪುನರಾವರ್ತಿತ ಬಿಲ್ಲಿಂಗ್‌ಗಳಂತಹ ವೈಶಿಷ್ಟ್ಯಪೂರ್ಣ ಸೇವೆಯನ್ನೂ ನೀಡುತ್ತಿದೆ.

ಯುವರ್​​ ಸ್ಟೋರಿ: ಪಾವತಿ ವಿಭಾಗವನ್ನು ಕೆಲಕಾಲದಿಂದಷ್ಟೇ ನಿರ್ವಹಿಸುತ್ತಿದ್ದೀರಿ. ಅನುಭವ ಹೇಗಿದೆ?

ಉಪಾಸನಾ ಟಾಕು: ಜಾಗತಿಕವಾಗಿ ಬೆಳೆಸಲು ಪಾವತಿ ಅತೀ ಕಷ್ಟವಾದ ಉದ್ಯಮ. ಅದರಲ್ಲೂ ಭಾರತದಲ್ಲಿ ಈ ಉದ್ಯಮವನ್ನು ಬೆಳೆಸುವುದು ಇನ್ನೂ ಕಷ್ಟ. ಉದ್ಯಮದ ಕುರಿತು ಅದರಲ್ಲೂ ಕಟ್ಟಕಡೆಯ ಗ್ರಾಹಕ ಏನನ್ನು ಬಯಸುತ್ತಿದ್ದಾನೆ ಎಂಬುದನ್ನು ತಿಳಿಯುವುದಕ್ಕಾಗಿ ಒಬ್ಬ ಅನೇಕ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಬಳಕೆದಾರನ ಪಾವತಿ ಅನುಭವ( ನಮ್ಮ ಗ್ರಾಹಕ, ವ್ಯಾಪಾರಿ ಏನನ್ನು ಬಯಸುತ್ತಿದ್ದಾರೆ), ನಮ್ಮ ವೇದಿಕೆಯನ್ನು ಬಳಸಿಕೊಂಡ ವ್ಯಾಪಾರಿಯ ಅನುಭವ, ನಮ್ಮ ಕಾರ್ಯಕಾರಿ ವಿಭಾಗದಿಂದ ಬ್ಯಾಂಕ್‌ಗಳು ಏನನ್ನು ನಿರೀಕ್ಷಿಸುತ್ತಿವೆ?, ನಮ್ಮ ಉತ್ಪನ್ನಗಳ ನಿಯಂತ್ರಕರು ಏನನ್ನು ಬಯಸುತ್ತಿದ್ದಾರೆ?( ನಮ್ಮ ಉತ್ಪನ್ನ ಹೇಗೆ ಕಾರ್ಯನಿರ್ವಹಿಸುತ್ತಿದೆ)ಇತ್ಯಾದಿ ವಿಚಾರಗಳನ್ನು ಗಮನಿಸುತ್ತಲೇ ಇರಬೇಕಾಗುತ್ತದೆ. ಅನುಸರಣೆ, ಉತ್ಪನ್ನದ ನಾವೀನ್ಯತೆ ಮತ್ತು ಗ್ರಾಹಕರಿಗೆ ಅತ್ಯುತ್ತಮ ಮಟ್ಟದ ಸೇವೆ ಒದಗಿಸುವುದು ಅತೀ ಮುಖ್ಯವಾದ ಅಂಶವಾಗಿದೆ.

ಯುವರ್​​ ಸ್ಟೋರಿ: ಬೆಲೆ ಹೇಗೆ ರೂಪುಗೊಂಡಿದೆ?

ಉಪಾಸನಾ ಟಾಕು: ಮಾರುಕಟ್ಟೆಯಲ್ಲಿ ಬೆಲೆ ಆಧಾರಿತ ಗ್ರಾಹಕರ ಗಳಿಕೆಯೇ ಪ್ರಧಾನವಾಗಿದೆ.ಇದು ಅತೀ ಕೆಳಮಟ್ಟದ ಸ್ಪರ್ಧೆ. ಕಡಿಮೆ ದರದ ನಾಯಕನಾಗಲು ನಾವು ಈ ಉದ್ಯಮದಲ್ಲಿಲ್ಲ. ನಾವು ಉತ್ತಮ ಉತ್ಪನ್ನ ಮತ್ತು ಉತ್ತಮ ಸೇವೆ ಕಡಿಮೆ ದರದಲ್ಲಿ ನೀಡಲು ಸಾಧ್ಯವಿಲ್ಲ ಎಂಬುದನ್ನು ನಂಬುತ್ತೇವೆ. ಕಡಿಮೆ ದರದಲ್ಲಿ ಪಾವತಿ ವಿಧಾನಗಳನ್ನು ಅನುಸರಿಸುವ ವೆಬ್‌ಸೈಟ್‌ಗಳು ಅತೀ ಶೀಘ್ರದಲ್ಲೇ ಅವರ ಬಿಸಿನೆಸ್ ಗುರಿಯನ್ನು ತಲುಪಬಹುದು. ಆದರೆ ಈ ಉದ್ಯಮಗಳು ಯಾವಾಗ ತಮಗೆ ನಷ್ಟವಾಗುತ್ತಿದೆ ಎಂದು ತಿಳಿದುಕೊಳ್ಳುತ್ತಾರೋ ಆಗ ಅವರು ಉತ್ತಮ ಕ್ವಾಲಿಟಿಯ ಕಡೆ ಆಕರ್ಷಿತರಾಗುತ್ತಾರೆ. ಕಡಿಮೆ ಬೆಲೆಗೆ ಉತ್ತಮ ಉತ್ಪನ್ನಗಳು ದೊರೆಯುವುದಿಲ್ಲ ಎಂದು ಅರ್ಥಮಾಡಿಕೊಂಡವರೊಂದಿಗೆ ವ್ಯವಹರಿಸಲು ನಮಗೆ ಸಂತೋಷವಾಗುತ್ತದೆ. ನಮ್ಮ ದರದ ಮಾದರಿಗಳು ನೇರವಾಗಿವೆ. ಪ್ರತಿ ವ್ಯವಹಾರದಲ್ಲೂ ಶೇಕಡಾವಾರು ಶುಲ್ಕವನ್ನು ಪಡೆಯುತ್ತೇವೆ.

ಯುವರ್​ ಸ್ಟೋರಿ: ಭಾರತದಲ್ಲಿ ಆನ್‌ಲೈನ್ ಪಾವತಿಯ ಸಮಸ್ಯೆಗಳನ್ನು ಬಗೆಹರಿಸಲು ಅನೇಕ ಸಂಸ್ಥೆಗಳಿವೆ(ಪೇಯು, ಸಿಟ್ರಸ್‌ಪೇ,ಜಸ್‌ಪೇ, ಇತ್ಯಾದಿ). ಸ್ಪರ್ಧೆಯ ವಿಚಾರದಲ್ಲಿ ನಿಮ್ಮ ದೃಷ್ಟಿಕೋನ ಏನು?

ಉಪಾಸನಾ ಟಾಕು: ಭಾರತದಲ್ಲಿ ಇ-ಕಾಮರ್ಸ್ ವ್ಯವಹಾರಗಳು ನಾಯಿಕೊಡೆಗಳಂತೆ ಬೆಳೆಯುತ್ತಿವೆ. ನಿಷ್ಕ್ರೀಯ ಪಾವತಿಯ ಗೇಟ್‌ವೇಗಳು ದೊಡ್ಡ ತಡೆಯಲ್ಲವೇ ಅಲ್ಲ. 2012ರವರೆಗೆ, ಬ್ಯಾಂಕ್ ಹೊರತುಪಡಿಸಿ ಈ ಉದ್ಯಮದಲ್ಲಿ ಕೇವಲ 2-3 ಕಂಪನಿಗಳು ಮಾತ್ರ ಇದ್ದವು. ಈ ಸಂಸ್ಥೆಗಳು ಬಲು ದುಬಾರಿಯಾಗಿದ್ದವು. ಅಲ್ಲದೇ ತುಂಬಾ ದೊಡ್ಡ ಪ್ರಕ್ರಿಯೆಯಾಗಿತ್ತು.

ಹೊಸ ಪೀಳಿಗೆಯ ನೂತನ ಸಂಸ್ಥೆಗಳೆಲ್ಲಾ ದರದ ವಿಚಾರದಲ್ಲಿ ಸ್ಪರ್ಧೆಗಳಿದಿದ್ದಾರೆ. ಆದರೆ ಯಾರೂ ಸಹ ಬಳಕೆದಾರರ ಅನುಭವದಲ್ಲಿ, ವ್ಯಾಪಾರಿಗಳ ಅನುಭವದಲ್ಲಿ ಅಥವಾ ಪಾವತಿಯ ತಂತ್ರಜ್ಞಾನದಲ್ಲಿ ಸುಧಾರಣೆ ತರಲು ಪ್ರಯತ್ನಿಸುತ್ತಿಲ್ಲ. ಹೀಗಾಗಿ ಭಾರತೀಯ ಬಳಕೆದಾರರ, ವ್ಯಾಪಾರಿಗಳ ಅನುಭವದಲ್ಲಿ ಮತ್ತು ಪಾವತಿ ತಂತ್ರಜ್ಞಾನದಲ್ಲಿ ಸುಧಾರಣೆ ತರುವುದು ನಮ್ಮ ಉದ್ದೇಶವಾಯಿತು. ಮೊಬೈಲ್ ಪಾವತಿಗಳಲ್ಲಿ ಸುಧಾರಣೆ ತಂದಿದ್ದೇವೆ. ಕಳೆದ 10 ತಿಂಗಳಿನಲ್ಲಿ ನಮ್ಮ ಉತ್ಪನ್ನದ ಅಭಿವೃದ್ಧಿ ಮತ್ತು ವರ್ತಕರನ್ನು ನಮ್ಮತ್ತ ಸೆಳೆದುಕೊಳ್ಳುವತ್ತ ಪರಿಶ್ರಮಪೂರಿತ ಕಾರ್ಯನಿರ್ವಹಿಸುತ್ತಿದ್ದೇವೆ. ಭಾರತದಲ್ಲಿ ಮೊಬೈಲ್ ಪಾವತಿ ವಿಭಾಗದಲ್ಲಿ ನಾವು ತುಂಬಾ ಮುಂದಿದ್ದೇವೆ ಎಂದು ನಾವು ನಂಬುತ್ತೇವೆ.

ಯುವರ್​​ ಸ್ಟೋರಿ: ನಿಮ್ಮ ತಂಡ ಎಷ್ಟು ದೊಡ್ಡದು ಮತ್ತು ನೀವು ಆ ತಂಡವನ್ನು ಕಟ್ಟಿದ್ದು ಹೇಗೆ?

ಉಪಾಸನಾ ಟಾಕು: ವರ್ತಕರ ಸ್ವಾಧೀನ, ಉತ್ಪನ್ನದ ಅಭಿವೃದ್ಧಿ ಮತ್ತು ವ್ಯಾಪಾರಿ ಕಾರ್ಯವಿಭಾಗದಲ್ಲಿ 19 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವವರ ಸರಾಸರಿ ವಯಸ್ಸು 25. ಅತ್ಯುತ್ಸಾಹದಿಂದ ಮತ್ತು ಉದ್ಯೋಗದ ಕುರಿತು ಕುತೂಹಲ ಹೊಂದಿರುವ ಉದ್ಯೋಗಿಗಳೇ ನಮ್ಮ ಶಕ್ತಿ. ನಮ್ಮ ತಂಡದ ಪ್ರತಿಯೊಬ್ಬರೂ ಶ್ರಮಜೀವಿಗಳಾಗಿದ್ದು, ಸಂಸ್ಥೆಗೆ ಅವರದ್ದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. 2012ರ ಆರಂಭದಲ್ಲಿ ನಮ್ಮ ಉದ್ಯಮವನ್ನು ಆರಂಭಿಸುವಾಗ ಮಾತ್ರ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಈಗ ನೌಕರರ ಸಂದರ್ಶನ ಮಾಡುವಾಗ ಅವರ ಆ್ಯಟಿಟ್ಯೂಡ್, ಬುದ್ಧಿವಂತಿಕೆ ಮತ್ತು ಸಂಸ್ಥೆಯೊಂದಿಗೆ ಹೇಗೆ ಹೊಂದಿಕೊಳ್ಳಬೇಕೆಂಬುದನ್ನು ಪರೀಕ್ಷಿಸಿ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ. ಡಿಗ್ರಿಗಳಿಗಿಂತ ಅವರ ಈ ಗುಣಗಳು ಸಂಸ್ಥೆಗೆ ತುಂಬಾ ಮುಖ್ಯ.

ಯುವರ್​​ ಸ್ಟೋರಿ: ಮುಂದಿನ ಯೋಜನೆ ಏನು?

ಉಪಾಸನಾ ಟಾಕು: ಭಾರತದಲ್ಲಿ ಮೊಬೈಲ್ ಕಾಮರ್ಸ್ ಕ್ಷೇತ್ರವನ್ನು ಹೆಚ್ಚು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ. ಮುಂದಿನ ಕೆಲವೇ ವರ್ಷಗಳಲ್ಲಿ ಕಂಪ್ಯೂಟರ್ ಬಳಸಿ ಪಾವತಿ ಮಾಡುವುದರ ಬದಲು ಮೊಬೈಲ್ ಮೂಲಕವೇ ಪಾವತಿಸುವ ಭಾರತೀಯರ ಸಂಖ್ಯೆ ಹೆಚ್ಚುತ್ತದೆ. ಭಾರತದ ಅಂತರ್ಜಾಲ ಬಳಕೆದಾರರು ಅಂತರ್ಜಾಲವನ್ನು ಮೊಬೈಲ್ ಮೂಲಕವೇ ಬಳಸುವ ತಂತ್ರಜ್ಞಾನವನ್ನು ಬಳಸುವ ಕಾಲ ದೂರವಿಲ್ಲ.

ಮಾರುಕಟ್ಟೆಗೆ ಕಡಿಮೆ ದರದ ಸ್ಮಾರ್ಟ್ ಫೋನ್‌ಗಳ ಆಗಮನ ಅದರಲ್ಲೂ ವಿಶೇಷವಾಗಿ ಆ್ಯಂಡ್ರಾಯ್ಡ್ ಫೋನ್‌ಗಳ ಬಳಕೆಯ ಮೂಲಕ ಮಿಲಿಯನ್ ಗಟ್ಟಲೆ ಭಾರತೀಯ ಮೊಬೈಲ್ ನಲ್ಲಿನ 2ಜಿ/3ಜಿ ಇಂಟರ್‌ನೆಟ್ ಸೌಲಭ್ಯದ ಮೂಲಕವೇ ಪಾವತಿಸುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಮೊಬೈಲ್ ವೆಬ್‌ಸೈಟ್‌ಗಳು ಮತ್ತು ಮೊಬೈಲ್‌ ಆ್ಯಪ್ಸ್‌ ಗಳಿಂದ ಮಾರಾಟಗಾರರು ತಮ್ಮ ಗ್ರಾಹಕರಿಂದ ಮೊಬೈಲ್ ಮೂಲಕವೇ ಸುರಕ್ಷಿತ ಹಾಗೂ ಸರಳ ಮಾದರಿಯಲ್ಲಿ ಬಿಲ್‌ನ ಮೊತ್ತವನ್ನು ಪಡೆದುಕೊಳ್ಳುವ ವ್ಯವಸ್ಥೆಗೆ ನಿಖರ ಪರಿಹಾರಗಳನ್ನು ಸೃಷ್ಟಿಸುತ್ತಿದ್ದೇವೆ.

ಉಪಾಸನಾ ಟಾಕು ಆತ್ಮವಿಶ್ವಾಸ ಮಾತುಗಳು ಅದೆಷ್ಟೋ ನವ್ಯೋದ್ಯಮದ ಕನಸು ಕಾಣುತ್ತಿರುವ ಯುವಕರಿಗೆ ಮಾದರಿ ಆಗಬಹುದು.