ಯಶಸ್ವಿ ಮಹಿಳೆಗೆ ಬೇಕು ಕೆಲವೇ ಸರಳ ಸೂತ್ರಗಳು..

ಟೀಮ್​​ ವೈ.ಎಸ್​​.ಕನ್ನಡ

ಯಶಸ್ವಿ ಮಹಿಳೆಗೆ ಬೇಕು ಕೆಲವೇ ಸರಳ ಸೂತ್ರಗಳು..

Monday December 07, 2015,

3 min Read

ಆಧುನಿಕ ಜಗತ್ತಿನಲ್ಲಿ ವ್ಯಾಪಾರ ವ್ಯವಹಾರಗಳ ವ್ಯಾಪ್ತಿ ಬೆಳೆಯುತ್ತಲೇ ಇದೆ. ಇಲ್ಲಿರುವ ಸ್ಪರ್ಧೆಯಲ್ಲಿ ಎಲ್ಲರಿಗೂ ಪ್ರತ್ಯೇಕ ಅಸ್ಥಿತ್ವವನ್ನ ಕಾಯ್ದುಕೊಳ್ಳುವುದು ಹಾಗೂ ಅದನ್ನ ಬೆಳೆಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅದ್ರಲ್ಲೂ ಉದ್ದಿಮೆಗಳಲ್ಲಿ ಮಹಿಳೆಯರು ಬೆಳೆಯಬೇಕು ಅಂದ್ರೆ ಅವರ ಹಾದಿಯಲ್ಲಿ ಇರುವ ಸವಾಲುಗಳು ನೂರಾರು. ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಮುನ್ನಗ್ಗಲು ಅದಕ್ಕೆ ಕೆಲವು ಅಗತ್ಯ ಕೌಶಲ್ಯಗಳನ್ನ ಮೈಗೂಡಿಸಿಕೊಳ್ಳುವುದು ಅನಿವಾರ್ಯ. ಹಾಗಂತ ಬ್ಯುಸಿನೆಸ್ ಹಾಗೂ ಉದ್ದಿಮೆಗಳಲ್ಲಿ ಮಹಿಳೆಯರು ನಾಯಕತ್ವ ಹೊಂದುವುದು ಅಸಾಧ್ಯ ಅಂತಲ್ಲ. ಕೆಲವೊಂದು ಪಾಠಗಳನ್ನ, ಸೂತ್ರಗಳನ್ನ ತಾಳ್ಮೆಯಿಂದ ಕಲಿತುಕೊಂಡರೆ ಉದ್ದಿಮೆಗಳಲ್ಲಿ ಅಪೂರ್ವವಾದುದನ್ನ ಸಾಧಿಸಬಹುದು.

ಶೈನಿಂಗ್​​​

ಸ್ಟಾರ್ ಆಗಿ ಗುರುತಿಸಿಕೊಳ್ಳಲು ಇಚ್ಛಿಸುವ ಮಹಿಳೆ ಮೊದಲು ತಾನು ಕೆಲಸ ಮಾಡುವ ವಲಯದಲ್ಲಿ ಕಠಿಣ ಪರಿಶ್ರಮ ಪಡುವುದು ಅನಿವಾರ್ಯ. ಇಲ್ಲಿ ಗಂಡು ಅಥವಾ ಹೆಣ್ಣು ಅನ್ನುವ ಲಿಂಗ ಬೇಧವಿಲ್ಲದೆ ಸ್ಪರ್ಧೆಗಿಳಿಯಲೇಬೇಕು. ಇದ್ರಿಂದಾಗಿ ಮಹಿಳೆಯು ಆಂತರ್ಯದಲ್ಲಿ ಅಡಗಿರುವ ಕೌಶಲ್ಯಗಳನ್ನ ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು. ಅಲ್ಲದೆ ಬ್ಯುಸಿನೆಸ್ ನಲ್ಲಿ ಒಂದು ಅದ್ಭುತ ತಿರುವನ್ನ ಪಡೆಯಲು ಇದು ನೆರವಾಗುತ್ತದೆ. ಜೊತೆಗೆ ಮಹಿಳೆ ನೇರ ಸ್ಪರ್ಧೆಯೊಡ್ಡುವುದರಿಂದ ತನ್ನೊಳಗಿರುವ ಅಂಜಿಕೆಯನ್ನ ಮೆಟ್ಟಿನಿಂತು ವ್ಯಕ್ತಿಗತವಾಗಿ ಇರುವಿಕೆಯನ್ನ ಸಾಬೀತುಪಡಿಸಿಕೊಳ್ಳಬಹುದು. ಅಲ್ಲದೆ ಇದು ಅವರನ್ನ ಇನ್ನಷ್ಟು ಗಟ್ಟಿಗರನ್ನಾಗಿಸುತ್ತದೆ. ಭಾರತೀಯ ಸಂಸ್ಕೃತಿಗೆ ಒಗ್ಗಿ ಹೋಗಿರುವ ಮಹಿಳೆಯ ಮನಸ್ಥಿತಿಯು ಕೆಲವು ಸಾಮಾಜಿಕ ಬದ್ಧತೆಗಳಿಗೆ ಒಳಪಟ್ಟಿರುತ್ತವೆ. ಆದ್ರೆ ಬದುಕಿನ ವಾಸ್ತವತೆಯಲ್ಲಿ ಇವುಗಳನ್ನ ನಿಭಾಯಿಸುತ್ತಾ ಪ್ರಕಾಶಿಸುವುದು ಅಸಾಧ್ಯ. ಏನಿದ್ರೂ ಪ್ರತಿಕ್ರಿಯಿಸುವ ರೀತಿ, ಸಂಭಾಷಿಸುವ ರೀತಿಯಷ್ಟೇ ಒಬ್ಬ ಮಹಿಳೆಯ ಯಶಸ್ಸಿನಲ್ಲಿ ಮುಖ್ಯವಾಗಿರುತ್ತದೆ.

image


ಸ್ಟಾರ್ ಆಫ್ ಅಟ್ರಾಕ್ಷನ್ 

ಒಂದು ಸಂಘಟಿತ ಸಂಸ್ಥೆಯಲ್ಲಿ ಒಬ್ಬ ಮಹಿಳೆಯ ಕೆಲಸ ಸ್ಟಾರ್ ಆಫ್ ಅಟ್ರಾ ಕ್ಷನ್​​​​ ನಂತಿರಬೇಕು. ಅದ್ರಲ್ಲೂ ನಾಯಕತ್ವದ ಹೊಣೆಗಾರಿಕೆ ಹೊಂದಿರುವಾಕೆ ಕೆಲಸಗಾರರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ರೆ, ಅದ್ಭುತವಾದ ಉತ್ಪಾದನಾ ಕೌಶಲ್ಯವನ್ನ ಪಡೆಯಬಹುದು. ಅಲ್ಲದೆ ಆಕೆ ವ್ಯವಹಾರಗಳ ಕೌಶಲ್ಯ ಹೆಚ್ಚಿಸಿಕೊಳ್ಳಲು ಬ್ಯುಸಿನೆಸ್ ಸ್ಟಡೀಸ್​​​ ಗಳಿಗೆ ಒತ್ತುಕೊಡುವುದು ಅತ್ಯಗತ್ಯ. ಇನ್ನು ಒಂದು ಕಂಪೆನಿಯಲ್ಲಿ ಅನನುಭವಿ ಹಾಗೂ ಯುವ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊಂದಿರುವ ಮಹಿಳೆ ಅವರೊಂದಿಗೆ ಆತ್ಮೀಯವಾಗಿ ನಡೆದುಕೊಂಡರೆ ಕೆಲಸದಲ್ಲಿ ಯಶಸ್ಸು ಪಡೆಯುವುದು ಸರಳವಾಗಲಿದೆ. ಇದ್ರ ಜೊತೆಗೆ ಸಂಸ್ಥೆಯ ಹೊರಗೂ ನೆಟ್ ವರ್ಕ್​ನ್ನ ಅಭಿವೃದ್ಧಿಗೊಳಿಸಿಳ್ಳುವುದೂ ಅತ್ಯಗತ್ಯ.

ವೃತ್ತಿ ಅಥವಾ ಉದ್ದಿಮೆಯಲ್ಲಿ ಮಹಿಳೆಗೆ ಯಶಸ್ಸು ಸಿಗಬೇಕಾದರೆ ತನ್ನ ಸಂಸ್ಥೆಗೆ ಸಂಬಂಧಪಟ್ಟ ನ್ಯೂನ್ಯತೆಗಳನ್ನ ಅರಿತಿರಬೇಕು. ಕಂಪನಿಯಲ್ಲಿ ಆಗಾಗ್ಯೆ ಸಂಬಂಧಪಟ್ಟವರನ್ನ ಚರ್ಚೆಗೆ ಎಳೆದು ಹೊಸ ಆಲೋಚನೆ ಹಾಗೂ ಯೋಜನೆಗಳು ಹೊರಹೊಮ್ಮುವಂತೆ ನೋಡಿಕೊಳ್ಳಬೇಕು. ಇದ್ರ ಹೊರತಾಗಿ ಕೇವಲ ಸಾಂಪ್ರದಾಯಿಕ ಶೈಲಿಯ ಸಂಸ್ಕೃತಿಯ ಅನುಕರಣೆ ಅಥವಾ ಅದ್ರ ನಿರ್ವಹಣೆಗಳಿಂದಷ್ಟೇ ಕಂಪೆನಿಯ ನೆಟ್ ವರ್ಕನ್ನ ಬಲಪಡಿಸುವುದ ಕನಸಿನ ಮಾತು. . ಭಾರತದ ಅದೆಷ್ಟೋ ಯಶಸ್ವಿ ಮಹಿಳೆಯರು ಸಂಪ್ರದಾಯ ಮತ್ತು ವಾಸ್ತವ ಬದುಕನ ನಡುವೆ ಇರುವ ಅಂತರವನ್ನ ತಿಳಿದುಕೊಂಡಿದ್ದರಿಂದಲೇ ಅವರ ಹಾದಿ ಸುಗಮವಾಗಿದೆ.

ಅಧಃಪತನಕ್ಕೆ ತಡೆ ಹೇಗೆ..? 

ಯಾವುದೇ ಒಂದು ನಕ್ಷತ್ರ ತನ್ನ ಆಕರ್ಷಣೆ ಹಾಗೂ ಬಲವನ್ನ ಕಳೆದುಕೊಂಡಾಗ ಮಾತ್ರ ಅದು ಇನ್ನೊಂದು ನಕ್ಷತ್ರದ ಹುಟ್ಟಿಗೆ ಕಾರಣವಾಗುತ್ತದೆ. ಹಾಗೇ ನಾಯಕತ್ವವಹಿಸಿ ಕೆಲಸ ನಿರ್ವಹಿಸುವ ಯಾವುದೇ ಮಹಿಳೆ, ತನ್ನ ತಂಡದಲ್ಲಿರುವ ಪ್ರತಿಯೊಬ್ಬ ಸದಸ್ಯನ ವಿಶ್ವಾಸಗಳಿಸಿದ್ರೆ ಮಾತ್ರ ಚಾರ್ಮ್ ಉಳಿಸಿಕೊಳ್ಳಲು ಸಾಧ್ಯ. ಪ್ರತಿ ಸ್ಟಾರ್ ಮಹಿಳೆಯೂ ತನ್ನದ ಆದ ದೃಷ್ಠಿಕೋನ ಹೊಂದಿರುತ್ತಾಳೆ. ಅದರಂತೆಯೇ ತನ್ನ ಬ್ಯುಸಿನೆಸ್ ಬೆಳೆಯಬೇಕು ಹಾಗೂ ಪರಿಣಾಮಕಾರಿಯಾಗಿರಬೇಕು ಅಂತ ಆಶಿಸುತ್ತಾಳೆ. ಹೀಗಾಗಿ ಅದನ್ನ ತನ್ನ ಸಹವರ್ತಿಗಳೊಂದಿಗೆ ಹಂಚಿಕೊಂಡು ಅಭಿಪ್ರಾಯಗಳನ್ನ ಕಲೆಹಾಕುವುದು ಇಲ್ಲಿ ಬಹಳ ಮುಖ್ಯ. ಈ ಮೂಲಕ ಎಲ್ಲಾ ಹಂತಗಳನ್ನ ಮೀರಿ ಬೆಳೆಯಲಿಚ್ಛಿಸುವ ಯಶಸ್ವೀ ಮಹಿಳೆ ತನ್ನ ತಂಡವನ್ನ ಮೊದಲು ರೂಪುಗೊಳಿಸುವತ್ತ ಗಮನ ನೀಡಬೇಕು. ಇಲ್ಲವಾದಲ್ಲಿ ಯಶಸ್ಸಿನ ಕನಸು ಕಾಣುವ ಮಹಿಳೆ ಎಡವಟ್ಟುಗಳನ್ನ ಮಾಡಿಕೊಳ್ಳುವ ಸಾಧ್ಯತೆಯೇ ಇಲ್ಲಿ ಹೆಚ್ಚು.

ಸಮತೋಲನ ಸಾಧಿಸಿದ್ರೆ ಯಶಸ್ಸು 

ಸವಾಲಿನ ಹಾದಿಯಲ್ಲಿ ನಡೆಯಲಿಚ್ಛಿಸುವ ಮಹಿಳೆಗೆ ತನ್ನ ದಾರಿ ಬಗ್ಗೆ ಸಂಪೂರ್ಣ ಅರಿವಿರಬೇಕು. ಬದುಕಿನ ಯಾವುದೇ ಹಂತದಲ್ಲಿ ಇತರೆ ಒತ್ತಡಗಳಿಗೆ ಒಳಗಾಗಿ ತನ್ನ ಕೆಲಸದ ವೇಗ ತಗ್ಗಲು ಅವಕಾಶ ನೀಡಬಾರದು. ಅದ್ರಲ್ಲೂ ಒಬ್ಬ ಮಹಿಳೆಯ ಬದುಕಿನಲ್ಲಿ ಕುಟುಂಬ ವ್ಯವಸ್ಥೆ ಬಹಳ ಮುಖ್ಯವಾಗಿರುತ್ತದೆ. ಒಂದೊಮ್ಮೆ ಮಕ್ಕಳ ಬಗ್ಗೆ ಆಸ್ಥೆ ವಹಿಸಿದ್ದೇ ಆದಲ್ಲಿ ಅದು ಆಕೆಯ ಸಾಧನೆಯ ದಾರಿಗೆ ಅಲ್ಪ ವಿರಾಮವಾಗಿರಬೇಕೇ ಹೊರತು ಪೂರ್ಣವಿರಾಮವಾಗಬಾರದು. ಅಲ್ಲದೆ ಆಕೆ ಸಂಬಂಧಗಳನ್ನ ನಿಭಾಯಿಸುವ ಜವಾಬ್ದಾರಿಯೊಂದಿಗೆ, ತನ್ನ ಇತರೆ ಸವಾಲಗಳನ್ನ ಸಮರ್ಥವಾಗಿ ನಿಭಾಯಿಸಲು ಸಜ್ಜಾಗಿರಬೇಕು.

ಗುರುತ್ವಾಕರ್ಷಣಾ ಬಲದಿಂದ ನೆಲೆನಿಂತ ಒಂದು ನಕ್ಷತ್ರದ ಹುಟ್ಟು ಅಷ್ಟು ಸುಲಭವಾಗಿ ಆಗಿರುವುದಿಲ್ಲ. ಹಾಗೇ ಒಬ್ಬ ಮಹಿಳಾ ನಾಯಕತ್ವದಲ್ಲಿ ಒಂದು ಸಂಸ್ಥೆ ಗಟ್ಟಿಯಾಗಿ ನೆಲೆನಿಲ್ಲುವುದು ಅಷ್ಟು ಸುಲಭವೂ ಅಲ್ಲ. ಸಂದರ್ಭಕ್ಕೆ ತಕ್ಕಂತೆ ಕೋಚಿಂಗ್, ಮೆಂಟರಿಂಗ್ ಗಳನ್ನ ನಡೆಸುತ್ತಾ ಹೋದರೆ ಪ್ರಬಲವಾದ ಸಂಸ್ಥೆ ಕಟ್ಟುವುದು ಕಷ್ಟವೇನಲ್ಲ. ಹೀಗೆ ಮಹಿಳೆಯರು ಉದ್ಯಮ ಅಥವಾ ಬ್ಯುಸಿನೆಸ್ ನಲ್ಲಿ ತೊಡಗಿಸಿಕೊಳ್ಳುವ ಮುನ್ನ ಕೆಲವು ಅಂಶಗಳತ್ತ ಗಮನ ಹರಿಸಿದ್ರೆ, ಸಾಗುವ ದಾರಿ ಯಾವತ್ತೂ ಕಷ್ಟವಲ್ಲ.

ಅನುವಾದಕರು: ಬಿ.ಆರ್​.ಪಿ

    Share on
    close