ಕಾರ್ಮಿಕರ ಮಾಮಿಕ ಕಥೆ..!

ಟೀಮ್​​ ವೈ.ಎಸ್​​.ಕನ್ನಡ

ಕಾರ್ಮಿಕರ ಮಾಮಿಕ ಕಥೆ..!

Thursday November 26, 2015,

3 min Read

ನಾವು 30ನೇ ವಯಸ್ಸಿನವರಾಗಿದ್ದರೂ ಮಾನವಶಾಸ್ತ್ರ ಅಥವಾ ಪುರಾತತ್ವದಲ್ಲಿ ಪಿಎಚ್‍ಡಿ ಪಡೆಯುವ ಹುಚ್ಚುಹಠ ಕಷ್ಟಮಯವಾಗಿರುವುದಿಲ್ಲ. ಏಕೆಂದರೆ, ನಾವು ಯಾವ ಮಾರ್ಗವನ್ನು ಆಯ್ದುಕೊಂಡರೂ ಅದರಲ್ಲಿ ಏನಾದರೂ ಸಾಧಿಸುತ್ತೇವೆ ಎಂಬ ನಂಬಿಕೆ ನಮ್ಮಲ್ಲಿರುತ್ತದೆ. ಆದರೆ ಒಬ್ಬ ಕಾರ್ಮಿಕನ ಜೀವನದಲ್ಲಿ ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಲೀ, ಐಶಾರಾಮಿ ಜೀವನಕ್ಕಾಗಲೀ, ಮೂಲಭೂತ ಸೌಕರ್ಯಗಳು, ತಮಗೆ ಇಷ್ಟವಾಗುವ ಕೆಲಸಗಳೆಲ್ಲಾ ಒಂದು ಕನಸಾಗಿಯೇ ಉಳಿದುಬಿಡುತ್ತದೆ. ನಮ್ಮ ವೃತ್ತಿ ಜೀವನ 35ರಿಂದ ಶುರುವಾದರೆ, ಕಾರ್ಮಿಕರ ವೃತ್ತಿ ಜೀವನ 30ಕ್ಕೇ ಮುಗಿದು ಸುಟ್ಟುಹೋಗಿರುತ್ತದೆ. ಕಾರ್ಮಿಕರ ಜೀವನದಲ್ಲಿ, ಅಂದಿನ ಕೂಲಿ ಸಂಭಾವನೆ ಅಂದೇ ಜೀವನಕ್ಕೆ ಬೇಕಾಗಿ ಖರ್ಚಾಗುವ ಕಾರಣ, ಅವರು ಬೇರೆಡೆ ಕೆಲಸ ಹುಡುಕಲು ಸಾಧ್ಯವಾಗುವುದಿಲ್ಲ. ತಮ್ಮ ಸಾಮಥ್ರ್ಯವನ್ನು ಗರಿಷ್ಠ ಮಟ್ಟದಲ್ಲೇ ಉಪಯೋಗಿಸಬೇಕಾದ ಪರಿಸ್ಥತಿ ಅವರಿಗೆ ಎದುರಾಗಿರುತ್ತದೆ ಎಂದು ಲೇಬರ್ನೆಟ್‍ನ ಸಹಸಂಸ್ಥಾಪಕಿ ಗಾಯತ್ರಿ ವಾಸುದೇವ್ ಹೇಳುತ್ತಾರೆ.

image


ತಮ್ಮ ವೃತ್ತಿ ಜೀವನದ ಆರಂಭಿಕ ಹಂತಗಳಲ್ಲಿ ಕೊಡಗಿನ ಒಂದು ಹಳ್ಳಿಯಲ್ಲಿ 6 ತಿಂಗಳ ಕಾಲ ವಾಸವಿದ್ದರು. ಆಗ ಅಲ್ಲಿನ ಕಾರ್ಮಿಕರ ಸಮಸ್ಯೆಗಳು, ಅವರ ಜೀವನದ ಗಣಮಟ್ಟ, ಅಗತ್ಯಗಳು, ಜೀವನಶೈಲಿ ಬಗ್ಗೆ ತಿಳಿದುಕೊಳ್ಳಲು ಗಾಯತ್ರಿಯವರು ಬಯಸಿದರು. ಅವರು ಸಂಶೋಧಕರಾಗಿ ಮಾತ್ರವಲ್ಲದೆ ಭಾರತೀಯ ಕಾರ್ಮಿಕ ಸಂಘಟನೆಯೊಂದಿಗೆ ಮೂವ್ಮೆಂಟ್ ಆಫ್ ಆಲ್ಟರ್ನೇಟಿವ್ ಫಾರ್ ಯೂತ್ ಅವೇರ್ನೆಸ್(ಮಾಯಾ)ದ ಲೇಬರ್ನೆಟ್ ಸ್ಥಾಪಿಸಿದ್ದಾರೆ. ನಗರದ ಹೊರ ವಲಯಗಳಲ್ಲಿ, ಶೇ 85-90% ಕಾರ್ಮಿಕರು ಶಾಲಾಕಾಲೇಜುಗಳನ್ನು ಅರ್ಧಕ್ಕೆ ಬಿಟ್ಟವರು. ಹೀಗೇ ಮುಂದುವರೆದರ 2017ರ ಹೊತ್ತಿಗೆ 500 ದಶಲಕ್ಷ ಜನರಲ್ಲಿ ಶೇ 90ರಷ್ಟು ಕಾರ್ಮಿಕರು ತಯಾರಾಗಿಬಿಡುತ್ತಾರೆ.

ಅಲ್ಲಿ ಕೆಲಸ ಮಾಡುವವರಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯ ಹಾಗೂ ಒಳ್ಳೆಯ ಭವಿಷ್ಯವಿರುವುದಿಲ್ಲ. ಹಾಗಾಗಿ ಕೆಲಸಗಳನ್ನು ಆಗಾಗ್ಗೆ ಬದಲಾಯಿಸಿ ಜೀವನದಲ್ಲಿ ಏನೂ ಉಳಿಯದಂತೆ ಮಾಡಿಕೊಳ್ಳುತ್ತಾರೆ.

ಲೇಬರ್ನೆಟ್ ಇತರೆ ಸಂಸ್ಥೆಗಳೊಂದಿಗೆ ಉದ್ಯೋಗ ಬಯಸುವ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಕಾರ್ಮಿಕರನ್ನು ಒಟ್ಟುಗೂಡಿಸಿ ಕಾಲ್‍ಸೆಂಟರ್‍ಗಳ ಸಹಾಯದಿಂದ ವೇದಿಕೆ ಒದಗಿಸುತ್ತದೆ. ಲೇಬರ್ನೆಟ್ ಮುಖಾಂತರ ಕೆಲಸವನ್ನು ಕೊಡಿಸುವುದು ಮಾತ್ರವಲ್ಲ, ಅಲ್ಲಿನ ಕಾರ್ಮಿಕರ ದೃಷ್ಟಿಯಲ್ಲಿ ಅವರು ಮಾಡುವ ಕೆಲಸ ಯಾರಿಗಿಂಲೂ ಕಮ್ಮಿ ಇಲ್ಲ ಎಂಬ ಮನೋಭಾವನೆ ತುಂಬಲಾಗುವುದು. ರಾಷ್ಟ್ರೀಯ ಕುಶಲಾಭಿವೃದ್ಧಿ ನಿಗಮದಡಿ, ಮೈಕಲ್ ಮತ್ತು ಸೂಸನ್ ಡೆಲ್ ಫೌಂಡೇಶನ್‍ನ ಸಹಾಯದಿಂದ ಸುಮಾರು 20 ಲಕ್ಷ ಹಣವನ್ನು ಸಂಗ್ರಹಿಸಿ ಆ ಹಣವನ್ನು ಕಾರ್ಮಿಕರ ತರಬೇತಿ ಹಾಗು ಸಬಲೀಕರಣಕ್ಕೆ ಉಪಯೋಗಿಸಲಾಗುತ್ತಿದೆ. ಅನುಭವೀ ಹಾಗೂ ತಜ್ಞರ ಸಹಾಯದೊಂದಿಗೆ ಕಾರ್ಮಿಕರಿಗೆ ತರಬೇತಿ ನೀಡಿ, ಮಾರುಕಟ್ಟೆಯಲ್ಲಿ ಉದ್ಯೋಗ ಕಲ್ಪಿಸಿಕೊಡಲಾಗುವುದು. ಮಾರುಕಟ್ಟೆಯಲ್ಲಿ ಯಾವಾಗಲೂ ಉತ್ಪಾದನೆಗೆ ಬೆಲೆ ಹೆಚ್ಚು. ಉತ್ಪಾದನೆ ಹೆಚ್ಚಾದರೆ ಜೀವನದ ಗುಣಮಟ್ಟವೂ ಉನ್ನತವಾಗುತ್ತದೆ. ಹಾಗಾಗಿ ಕಾರ್ಮಿಕರ ವೇತನ ಹೆಚ್ಚಾಗುತ್ತದೆ, ಈ ಹಿನ್ನೆಲೆಯಲ್ಲಿ ವಿವಿಧ ಕೌಶಲ್ಯ ವೃತ್ತಿಪರ ತರಬೇತಿಯನ್ನೂ ನೀಡಲಾಗುತ್ತಿದೆ. ದಿನ ನಿತ್ಯದ ಕೆಲಸದಿಂದ ಸಮಯವನ್ನು ಹೊರತೆಗೆದು ಇದುವರೆಗೂ ಏನೂ ಕಲಿಯಲಾಗಿರಲಿಲ್ಲ, ಹಾಗಾಗಿ ಕಲಿಯುವಾಗಲೇ ದುಡಿಯುವ ಹಾಗೆ ಅನುಕೂಲ ಮಾಡಿಕೊಡಲಾಗಿದೆ. ಅವರವರ ಗುರಿಯನ್ನು ಸಾಧಿಸುವುದಕ್ಕೆ ಬೇಕಾಗುವ ಹೊಸ ಅಂಶಗಳು, ತಂತ್ರಜ್ಞಾನ, ಮತ್ತು ನೈಪುಣ್ಯತೆತಳನ್ನು ಇಲ್ಲಿ ಕಲಿಸಲಾಗುವುದು. ಒಟ್ಟಾರೆ 6 ವರ್ಷಗಳಲ್ಲಿ, ತರಬೇತಿ ಪಡೆಯುತ್ತಿರುವವರ ಸಂಖ್ಯೆ 18000 ದಿಂದ 1.50 ಲಕ್ಷ ವಾಯಿತು. ಈಗ ಒಟ್ಟು 3 ಲಕ್ಷ ಜನ ಇಲ್ಲಿ ತರಬೇತಿ ಪಡೆಯುತ್ತಿದ್ದು, 1000 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಈಗ ದೇಶದ ಮೂಲೆ ಮೂಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಆರಂಭಿಕ ವೇತನ 6000 ರಿಂದ 10000 ರೂಪಾಯಿವರೆಗೂ ಇದೆ.

image


ಯಾವುದೇ ಉದ್ಯಮದವರಾದರೂ ನಮ್ಮಲ್ಲಿ ನುರಿತ ಕೆಲಸಗಾರರಿರಬೇಕೆಂದು ಆಶಿಸುತ್ತಾರೆ. ತಮ್ಮ ಕಾರ್ಖಾನೆಯಲ್ಲಿ ಮಾತ್ರವಲ್ಲದೆ ತಮ್ಮ ಸಮಾಜದ ಅಭಿವೃದ್ಧಿಗೂ ನಾಂದಿ ಹಾಡಬೇಕೆಂದು ಅವರು ಬಯಸುತ್ತಾರೆ. ಲೇಬರ್ನೆಟ್‍ನಿಂದ ತರಬೇತಿ ಪಡೆದು ಬಂದ ಕೆಲಸಗಾರರ ಮೌಲ್ಯಮಾಪನ ಮಾಡಿದಾಗ, ಉತ್ಪಾದನೆ ಹೆಚ್ಚಾಗಿ, ತ್ಯಾಜ್ಯದ ಸಂಖ್ಯೆ ಕುಸಿದಿತ್ತು. ನಮ್ಮಲ್ಲಿ ತರಬೇತಿ ಪಡೆಯುವವರಲ್ಲಿ ಶೇ 40-50% ಮಹಿಳೆಯರಿದ್ದಾರೆ. ಅವರ ಆತ್ಮವಿಶ್ವಾಸ ಹೆಚ್ಚಿದೆ, ಸಬಲವಾಗಿದ್ದಾರೆ, ಮತ್ತು ಅವರ ಮೇಲ್ನೋಟವೂ ನವೀಕೃತವಾಗಿದೆ. ತಮಗೆ ಸಿಕ್ಕ ಸಮಯವನ್ನು ಉಪಯೋಗಿಸಿಕೊಂಡು ಅರೆಕಾಲಿಕ ಉದ್ಯೋಗಗಳನ್ನು ಮಾಡುತ್ತಿದ್ದಾರೆ. ನಮ್ಮಲ್ಲಿ ಕೆಲಸ ಕಲಿತು ನಿವೃತ್ತರಾದ ಅನೇಕರು ಈಗ ಉದ್ಯಮಿಗಳಾಗಿದ್ದಾರೆ. ಹಾಗಾಗಿ ಅವರ ಆದಾಯ ಹಾಗೂ ಜೀವನದ ಗುಣಮಟ್ಟ ವೃದ್ಧಿಸಿದೆ. ಲೇಬರ್ನೆಟ್ ಕಾರ್ಮಿಕರು ನಿರಂತರವಾಗಿ ತರಬೇತಿ ಪಡೆದು, ನಿರಂತರವಾಗಿ ಬೆಳೆಯಲು ತಮ್ಮನ್ನು ತಾವು ನಿರಂತರವಾಗಿ ಕೆಲಸದಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಬೆಳೆಯುತ್ತಿದ್ದಾರೆ. ಲೇಬರ್ನೆಟ್ ಕಾರ್ಮಿಕರ ಕೆಲಸ ಹಾಗೂ ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಕಾರ್ಮಿಕರನ್ನು ಕೆಲಸಕ್ಕಿಟ್ಟುಕೊಳ್ಳುವುದಕ್ಕೂ ಮುನ್ನ ಅವರ ಕೆಲಸದ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ. ಹೀಗಾಗಿಯೇ ಕಾರ್ಮಿಕರಿಗೆ ಅವಶ್ಯ ತರಬೇತಿ ಕೊಟ್ಟು, ಕೆಲಸ ದೊರೆಯುವಂತೆ ಮಾಡಲು ಲೇಬರ್‍ನೆಟ್ ಶ್ರಮಿಸುತ್ತಿದೆ.

ಲೇಖಕರು: ಬಿಂಜಾಲ್​​ ಷಾ

ಅನುವಾದಕರು: ವಿಶಾಂತ್​​​