ರಾಕ್ಎನ್​ಶಾಪ್‍ ಆನ್ಲೈನ್ ಬೆಲೆಬಾಳುವ ವಿಲಾಸಿ ವಿಭಾಗದಲ್ಲಿ ಮಹತ್ವಕಾಂಕ್ಷಿ ಗ್ರಾಹಕರನ್ನು ಗುರಿಯಾಗಿಸಿದೆ

ಟೀಮ್​ ವೈ.ಎಸ್​. ಕನ್ನಡ

ರಾಕ್ಎನ್​ಶಾಪ್‍ ಆನ್ಲೈನ್ ಬೆಲೆಬಾಳುವ ವಿಲಾಸಿ ವಿಭಾಗದಲ್ಲಿ ಮಹತ್ವಕಾಂಕ್ಷಿ ಗ್ರಾಹಕರನ್ನು ಗುರಿಯಾಗಿಸಿದೆ

Wednesday December 23, 2015,

3 min Read


ಭಾರತದಲ್ಲಿ ವಿಲಾಸಿ ಬ್ರ್ಯಾಂಡ್‍ಗಳು ವಿಕಸನ ಹೊಂದುತ್ತಿವೆ. 2013ರ ಪ್ರೈಸ್‍ವಾಟರ್‍ಹೌಸ್​ಕೂಪರ್​ನ

ವಿಶ್ವಉಡುಪುಗಳ ಚಿಲ್ಲರೆ ಉದ್ಯಮದ ಅಧ್ಯಯನವು, ಸಮೀಕ್ಷೆಗೊಳಪಟ್ಟ 42 ಪ್ರತಿಶತ ಭಾರತೀಯರು, ಸೆಲೆಬ್ರೆಟಿ ಶೈಲಿ ಮತ್ತುಬ್ರ್ಯಾಂಡ್‍ಗಳಿಂದ ಪ್ರಭಾವಿತರಾಗುತ್ತಾರೆಂದು ತಿಳಿಸಿದೆ.ಇವರಲ್ಲಿ ಶೇಕಡಾ 40ರಷ್ಟು ಜನರು ಮಹಾನಗರಗಳ ಹೊರಗಿನವರಾಗಿದ್ದು, ಎರಡನೇ ಮತ್ತು ಮೂರನೇ ಶ್ರೇಣಿಯ ನಗರಗಳಿಗೆ ಸೇರಿದ್ದಾರೆ. ಇನ್ನೊಂದು ಅಧ್ಯಯನದ ಪ್ರಕಾರ ಪ್ರತಿ ವರ್ಷ, 80 ದಶಲಕ್ಷ ಡಾಲರಿನ ವಿಲಾಸಿ ಇ-ವಾಣಿಜ್ಯ ವಹಿವಾಟು ಭಾರತದಿಂದಲೇ ನಡೆಯುತ್ತದೆ. ಮಾಡೆಲ್, ಅಭಿನೇತ್ರಿ, ವಾಣಿಜ್ಯ ವಿಶ್ಲೇಷಕಿ ಮತ್ತು ಇತ್ತೀಚೆಗೆ ಉದ್ಯಮಿಯಾಗಿ ಬದಲಾಗಿರುವ ಪ್ರಿಯಾ ಸಚ್​ದೇವ್​ , RockNShop ಎಂಬ ವಿಲಾಸಿ ಫ್ಯಾಷನ್ ಮತ್ತು ಜೀವನ ಕ್ರಮದ ವಸ್ತುಗಳ ಆನ್ಲೈನ್‍ ಮಳಿಗೆಯನ್ನು ತೆರೆದಿದ್ದಾರೆ.

image


2014ರಲ್ಲಿ ಆರಂಭವಾದ ,RockNShop ಶೈಲಿಯಲ್ಲಿ ಶ್ರೀಮಂತರು ಮತ್ತು ಸಮಯದ ಅಭಾವವಿರುವ ಬೆಲೆಬಾಳುವ ಮತ್ತು ವಿಲಾಸಿ ಬ್ರ್ಯಾಂಡಿನ ಗ್ರಾಹಕರನ್ನುಗುರಿಯಾಗಿಟ್ಟುಕೊಂಡಿದೆ. ಈ ವೇದಿಕೆಯಿಂದ ಯಾರು ಬೇಕಾದರೂ ಸುಲಭವಾಗಿ ಹಾಟ್ ಬ್ರ್ಯಾಂಡ್ ಮತ್ತು ಉತ್ಪನ್ನಗಳನ್ನು ಖರೀದಿಸಿ ಅವುಗಳನ್ನು ಮನೆ ಬಾಗಿಲಲ್ಲೇ ಪಡೆಯಬಹುದು ಎನ್ನುತ್ತಾರೆ ಪ್ರಿಯಾ.

ಅಷ್ಟೇ ಅಲ್ಲದೆ ಈ ವೇದಿಕೆಯ ವಿಭಿನ್ನ ವೈಶಿಷ್ಟ್ಯವೆಂದರೆ ದೇಶೀಯ ಮತ್ತು ವಿದೇಶಿ ಬ್ರ್ಯಾಂಡ್‍ಗಳಿಂದ ಆಯ್ದ ಸಂಗ್ರಹ ಇಲ್ಲಿ ದೊರೆಯುತ್ತದೆ ಎಂದು ಅವರು ತಿಳಿಸುತ್ತಾರೆ.

RockNShop ಇಂದು 62ಕ್ಕೂ ಹೆಚ್ಚು ಬ್ರ್ಯಾಂಡ್‍ಗಳನ್ನು ಹೊಂದಿದ್ದು, ಈ ವರ್ಷದ ಕೊನೆಯವರೆಗೆ 100ಕ್ಕೂ ಹೆಚ್ಚು ಬ್ರ್ಯಾಂಡ್‍ಗಳಿಗೆ ಇದನ್ನು ವಿಸ್ತರಿಸಲು ಉದ್ದೇಶಿಸಿದ್ದಾರೆ. RockNShop ಅಂತರಾಷ್ಟ್ರೀಯವಾಗಿ ಬಹು ಬೇಡಿಕೆಯಲ್ಲಿರುವ ಆಸ್ಕರ್ ಡಿ ರೆಂಟಾ, ಸಿಲೈನ್, ಸೇಂಟ್ ಲೋರೆಂಟ್ ಪ್ಯಾರಿಸ್, ವಿಕ್ಟೋರಿಯಾ ಬೆಕ್ಹಾಮ್, ಮಾರ್ಚೆಸಾ, ಸ್ಟೆಲ್ಲಾ, ಮ್ಯಾಕ್​ಕಾಟ್ರ್ನಿ ಮತ್ತಿತರ ಬ್ರ್ಯಾಂಡ್‍ಗಳೊಂದಿಗೆ ಪ್ರತ್ಯೇಕ ಸಹಯೋಗವನ್ನೂ ಹೊಂದಿದೆ. ತನ್ನ ಸಿರಿವಂತ ಜನಸಮೂಹದ ಅಗತ್ಯವನ್ನರಿತ RockNShop ಹೆಸರಾಂತ ಭಾರತೀಯ ವಿನ್ಯಾಸಗಾರರಾದ ಹೇಮಂತ್ & ನಂದಿತಾ, ಸಿದ್ಧಾರ್ಥ ಟೈಟ್ಲರ್, ಕಕೂನ್, ಶಿಫ್ಟ್ ಮತ್ತು ಮೋರ್ಫೆಯಂಥವರೊಡಗೂಡಿ ವಿಶೇಷ ಸಂಗ್ರಹವನ್ನೂ ಹೊರತಂದಿದೆ.

“ನಾವು ಪ್ರಪಂಚದ ಉನ್ನತ ಬ್ರ್ಯಾಂಡ್, ಉಪಕರಣ ಮತ್ತು ಆಭರಣಗಳನ್ನು ಹೊಂದಿದ್ದೇವೆ. ನಾವು ಸೌಂದರ್ಯ ಪ್ರಸಾಧನಗಳು, ಸುವಾಸನೆಗಳು, ಜೈವಿಕ ಸೌಂದರ್ಯವರ್ಧಕ ಮತ್ತು ತ್ವಚೆಯ ಸಂರಕ್ಷಣಾ ಸಾಮಗ್ರಿಗಳ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದ್ದೇವೆ. ನಾವು ಮಹಾನಗರಗಳಲ್ಲಿ 24ರಿಂದ 48 ಗಂಟೆಗಳಲ್ಲೂ ಮತ್ತು ಎರಡನೇ ಮತ್ತು ಮೂರನೇ ಶ್ರೇಣಿಯ ನಗರಗಳಲ್ಲಿ ಮೂರರಿಂದ ಐದು ದಿನಗಳಲ್ಲಿ ಈ ಉತ್ಪಾದನೆಗಳನ್ನು ತಲುಪಿಸಲು ಸಮರ್ಥರಿದ್ದೇವೆ. ನಾವು ರೂ.1 ಲಕ್ಷದವರೆಗೆ ಬಟವಾಡೆಯ ನಂತರದ ನಗದು ಪಾವತಿಯ(COD)ಸೌಲಭ್ಯವನ್ನು ನೀಡುತ್ತಿದ್ದೇವೆ. ನಾವು ಎಂಟು ಬ್ಯಾಂಕುಗಳೊಂದಿಗೆ ಸುಲಭ ಮಾಸಿಕ ಕಂತಿನ ಆಯ್ಕೆಯನ್ನೂ ನೀಡಿದ್ದೇವೆ. ಸುಲಭ ಹಾಗೂ ಚಿಕ್ಕ ಮಾಸಿಕ ಕಂತುಗಳಲ್ಲಿ ಗ್ರಾಹಕರು ತಮ್ಮನೆಚ್ಚಿನ ಬ್ರ್ಯಾಂಡಿಗೆ ಸೇರಿದ ಉಡುಗೆಗಳನ್ನು ಮತ್ತು ವಿಲಾಸಿ ವಸ್ತುಗಳನ್ನು ಹೊಂದುವ ತಮ್ಮ ಕನಸನ್ನು ನನಸಾಗಿಸಬಹುದು. ನಾವು RockNShop ಮೂಲಕ ಬೆಲೆಬಾಳುವ ಮತ್ತು ವಿಲಾಸಿ ಬ್ರ್ಯಾಂಡ್‍ಗಳು ಮತ್ತು ವಸ್ತುಗಳು ಎಲ್ಲರಿಗೂ ಸಿಗುವಂತೆ ಮತ್ತು ಕೈಗೆಟುಕುವಂತೆ ಮಾಡಿದ್ದೇವೆ”ಎಂದೂ ಪ್ರಿಯಾ ತಿಳಿಸುತ್ತಾರೆ.

ಇವರು 1 ಕೋಟಿ ರೂಪಾಯಿ ಬಂಡವಾಳದೊಂದಿಗೆ ವಿಲಾಸಿ ಬ್ರ್ಯಾಂಡ್‍ಗಳ ಪೋರ್ಟಲ್ ಆರಂಭಿಸಿದರು. ಈ ಹಣವು ವೆಬ್ಸೈಟಿನ ಅಭಿವೃದ್ಧಿ, ಎಲ್ಲಾ ಉತ್ತಮ ಬ್ರ್ಯಾಂಡ್‍ಗಳೊಂದಿಗೆ ಪಾಲುದಾರಿಕೆಯನ್ನು ಹೊಂದಲು ಮತ್ತು ಆಂತರಿಕ ತಂಡದ ರಚನೆಗೆ ವ್ಯಯಿಸಲ್ಪಟ್ಟಿತು.

ಬಿಡುಗಡೆಯಾದ ಒಂದೂವರೆ ವರ್ಷದ ನಂತರ ಈ ವೇದಿಕೆ ಈಗ ವಿಸ್ತರಣೆಯ ಹಂತದಲ್ಲಿದೆ. “ನಾವು ಇತ್ತೀಚೆಗೆ ಸೌಂದರ್ಯ ವಿಭಾಗವನ್ನುಬಿಡುಗಡೆಗೊಳಿಸಿದ್ದು ಶೀಘ್ರವೇ ಮಕ್ಕಳ ಪ್ರೀಮಿಯಂ ವಿಭಾಗ ಹಾಗೂ ಗೃಹಾಲಂಕಾರವನ್ನೂ ಬಿಡುಗಡೆಗೊಳಿಸಲಿದ್ದೇವೆ”ಎಂದು ಪ್ರಿಯಾ ತಿಳಿಸಿದರು.

ಈ ವೇದಿಕೆಯ ವಾರ್ಷಿಕ ವಹಿವಾಟು ರೂ. 70 ಲಕ್ಷ ಮೀರಿದ್ದು, ಮುಂಬರುವ ಎರಡು ವರ್ಷಗಳಲ್ಲಿ ನಿವ್ವಳ ವಾಣಿಜ್ಯ ಮೊತ್ತವನ್ನುಹತ್ತು ಪಟ್ಟು ಬೆಳೆಸುವ ಗುರಿಯನ್ನು ಹೊಂದಿದ್ದಾರೆ.

ಮಾರುಕಟ್ಟೆ ಮತ್ತು ಸ್ಪರ್ಧೆ

2007ರ 3.66 ದಶಕೋಟಿ ಡಾಲರಿನಿಂದ, ಐಷಾರಾಮಿ ವಸ್ತುಗಳ ಮಾರುಕಟ್ಟೆ, 2012ರಲ್ಲಿ 7.58 ದಶಕೋಟಿ ಡಾಲರಿನೊಂದಿಗೆ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ. CII-IMRB ವರದಿಯಂತೆ, 2013ರ ಆರ್ಥಿಕ ಮಂದಗತಿಯು ವಿಲಾಸಿ ವಸ್ತುಗಳ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದರೂ ನಂತರ 2014ರಲ್ಲಿ ಚೇತರಿಸಿಕೊಂಡು ತನ್ನ ಬೆಳವಣಿಗೆಯನ್ನು ಮುಂದುವರೆಸಿದೆ. ವರ್ಷಂಪ್ರತಿ 30 ಪ್ರತಿಶತದ ಬೆಳವಣಿಗೆಯೊಂದಿಗೆ ಭಾರತದಲ್ಲಿ ವಿಲಾಸಿ ಭೋಗ ವಸ್ತುಗಳ ಮಾರುಕಟ್ಟೆಯು 2016ರ ವರೆಗೆ 35 ದಶಕೋಟಿ ಡಾಲರಿನ ವ್ಯವಹಾರವನ್ನುದಾಟುವ ಅಪೇಕ್ಷೆ ಹೊಂದಿದೆ.

ಭಾರತಕ್ಕೆತಮ್ಮ ಉತ್ಪಾದನೆಗಳನ್ನು ಸಾಗಿಸುವ ನೆಟ್ ಅ ಪೋರ್ಟರ್, ಗಿಲ್ಟ್ ಹಾಗೂ ಶಾಪ್ ಬಾಬ್‍ ಇತ್ಯಾದಿ ಕಂಪನಿಗಳೊದಿಗೆ ಜಾಗತಿಕ ಪೈಪೋಟಿಯಿದೆ. ಇದರ ಹೊರತಾಗಿ ಆಬ್ಸ್ಟೋರ್, ಸ್ಟೈಲಿಸ್ಟಾ, ಎಲಿಟಿಫೈ, ಪೆರಿನಾ ಪಾಪ್‍ಅಪ್ ಶಾಪ್, ಎಕ್ಸ್ಲೂಸೀವ್ಲಿ ಮತ್ತು ಡಾರ್ವೇಯ್ಸ್‍ ಇತ್ಯಾದಿ ಪೋರ್ಟಲ್‍ಗಳೂ ಅಂತರಾಷ್ಟ್ರೀಯ ವಿಲಾಸಿ ವಸ್ತುಗಳ ಮಾರುಕಟ್ಟೆಯಲ್ಲಿವೆ. ಇದಷ್ಟೆ ಅಲ್ಲದೇ ಫ್ಯಾಷನ್‍ಆಂಡ್‍ಯೂ, ಎಂಪಿರಿಯೋ ಮಾಲ್, ಮತ್ತಿತರರೂ ವಿಲಾಸಿ ಉತ್ಪನ್ನಗಳ ವಹಿವಾಟಿನಲ್ಲಿದ್ದು RockNShopಗೆ ಪರೋಕ್ಷ ಸ್ಪರ್ಧೆಯನ್ನು ನೀಡುತ್ತಿವೆ.

ಸವಾಲುಗಳು

ಈ ಕ್ಷೇತ್ರದಲ್ಲಿನ ಪ್ರಮುಖ ಸವಾಲೆಂದರೆ ಸರಿಯಾದ ಪ್ರೇಕ್ಷಕರನ್ನು ಗುರುತಿಸಿ ಅವರನ್ನು ಸರಿಯಾದ ಸಾಮಾಜಿಕ ವೇದಿಕೆಯ ಮೂಲಕ ತಲುಪುವುದೇ ಆಗಿದೆಯೆಂದು ಪ್ರಿಯಾ ನಂಬಿದ್ದಾರೆ.

ಅವರು ಹೇಳುವಂತೆ ಈ ಕ್ಷೇತ್ರದಲ್ಲಿ ಎರಡು ವಿಧದ ಗ್ರಾಹಕರಿದ್ದಾರೆ, ಮೂಲತಃ ಶ್ರೀಮಂತರು ಮತ್ತು ಮಹತ್ವಾಕಾಂಕ್ಷಿ ಗ್ರಾಹಕರು. ಇವರಲ್ಲಿ ಎರಡನೆಯವರು ಭಾವನಾತ್ಮಕ ಖರೀದಿಯಲ್ಲಿ ಪಾಲ್ಗೊಳ್ಳುವವರು. ಮಹತ್ವಾಕಾಂಕ್ಷಿ ಗ್ರಾಹಕರು ಪ್ರೀಮಿಯಂ ಮತ್ತು ವಿಲಾಸಿ ಬ್ರ್ಯಾಂಡಿನ ಸಾಮಗ್ರಿಗಳನ್ನು ಕೊಂಡು ಅದೇತರಹದ ಜೀವನವನ್ನುನಡೆಸಲುಇಚ್ಛಿಸುತ್ತಾರೆ. ಈ ಮಹತ್ವಾಂಕ್ಷಿ ಗ್ರಾಹಕರೇಈ ಕ್ಷೇತ್ರದ ಬಹುಗುಣೀ ಬೆಳವಣಿಗೆಗೆ ಸಹಾಯಕರಾಗಿದ್ದಾರೆ.

“ನಾವು ಈ ಸವಾಲುಗಳನ್ನು ನಿಭಾಯಿಸಿ ನಮ್ಮಗ್ರಾಹಕ ಸಮುಚ್ಚಯದತ್ತ ಗಮನ ಕೇಂದ್ರಿಕರಿಸುತ್ತಿದ್ದೇವೆ. ನಾವು ಬರುವ ತಿಂಗಳುಗಳಲ್ಲಿ ಪರಾಕಾಷ್ಠೆಯನ್ನು ಮುಟ್ಟಿಈ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಲಿದ್ದೇವೆ”ಎಂದು ಪ್ರಿಯಾ ಹೇಳುತ್ತಾರೆ.


ಲೇಖಕರು: ತೌಸಿಫ್​​ ಅಲಂ

ಅನುವಾದಕರು: ಸುಘೋಶ್​​