ಟೂರ್ ಪ್ಲಾನಿಂಗ್ ಸೂಪರ್ ಮೈಂಡ್ " INSPIROCK"

ಟೀಮ್​ ವೈ.ಎಸ್​. ಕನ್ನಡ

0

ಪ್ರತಿಯೊಬ್ಬ ಮನುಷ್ಯನಿಗೂ ದೇಶ ಸುತ್ತಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಕೆಲವರಿಗೆ ಸಣ್ಣ ಪ್ರಾಯದಲ್ಲೇ ಇಂತಹ ಅವಕಾಶಗಳು ಸಿಗುತ್ತವೆ. ಕೆಲವರಿಗೆ ಇದೊಂದು ಹಾಬಿಯಾಗಿ ಬಂದಿರುತ್ತದೆ. ಉದ್ಯೋಗದಲ್ಲಿರುವವರಿಗೆ ಕೆಲಸ ಮಾಡಿ ಮಾಡಿ ಸಾಕಾಗಿರುತ್ತದೆ. ಹೀಗೆ ದೈನಂದಿನ ಜಂಜಾಟಗಳಿಂದ ಕೆಲವರು ಸ್ವಲ್ಪ ದಿನ ದೂರ ಇರೋದಕ್ಕೆ ಬಯಸುತ್ತಾರೆ. ತಮ್ಮ ತಮ್ಮ ಫ್ಯಾಮಿಲಿ ಜೊತೆ ಪ್ರವಾಸಿತಾಣಗಳಿಗೆ ಹೋಗಿ ಎಂಜಾಯ್ ಮಾಡ್ಕೊಂಡು ಬರುತ್ತಾರೆ.

ಯಾವುದೇ ಸ್ಥಳಗಳಿಗೆ ಹೋಗಬೇಕಾದರೂ ಪ್ಲಾನಿಂಗ್ ಮಾಡಲೇಬೇಕು. ಇಲ್ಲದಿದ್ದರೆ ನಾವು ಹಣದ ಜೊತೆ ಅಮೂಲ್ಯ ಸಮಯವನ್ನೂ ವ್ಯರ್ಥ ಮಾಡಿದಂತಾಗುತ್ತದೆ ಅಲ್ಲವೇ..? ಹೀಗಾಗಿ ಟೂರ್ ಹೋಗುವ ಮುನ್ನ ಪ್ಲಾನಿಂಗ್ ಮಾಡಲೇಬೇಕು. ಇನ್ಮುಂದೆ ಇಂತಹ ಪ್ಲಾನಿಂಗ್ ಮಾಡೋದಿಕ್ಕೆ ಯೋಚನೆ ಮಾಡಬೇಕಾದ ಅಗತ್ಯವೇ ಇಲ್ಲ. ಇದನ್ನು ಸಾಧ್ಯವಾಗಿಸಿದೆ ಇಂದಿನ ಕಂಪ್ಯೂಟರ್ ಯುಗ. ಭಾರತೀಯ ಮೂಲದ ಇಬ್ಬರು ಸಾಫ್ಟ್​​ವೇರ್ ಎಂಜಿನಿಯರ್ಸ್ ಇಂತಹ ಮೇರು ಸಾಧನೆ ಮಾಡಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರನ್ನು ನಿಬ್ಬೆರಗಾಗುವಂತೆ ಮಾಡಿದ್ದಾರೆ.

ಇನ್ಸ್ಪಿರಾಕ್ ಅಂದರೆ ಏನು..?

ಇನ್ಸ್ಪಿರಾಕ್ ಅಂದ್ರೆ ಒಂದು ವೆಬ್​ಸೈಟ್ ಹೆಸರು. ಇದು ಆನ್​ಲೈನ್​​ ಟ್ರಿಪ್ ಪ್ಲಾನರ್. (ಅಥವಾ ಟ್ರಾವೆಲ್ ವೆಬ್​​ಸೈಟ್) ಅನೂಪ್ ಗೋಯಲ್ ಮತ್ತು ಪ್ರಕಾಶ್ ಸಿಕ್ಚಿ ಅನ್ನೋರು 2012ರಲ್ಲಿ ಇದನ್ನು ಆರಂಭ ಮಾಡಿದ್ರು. ಆದರೆ ಇದರ ಮುಖ್ಯ ಕಚೇರಿ ಇರೋದು ಭಾರತದಲ್ಲಿ ಅಲ್ಲ. ಅಮೇರಿಕಾದ ಕ್ಯಾಲಿಫೋರ್ನಿಯಾದ ಪಾಲೋ ಆಲ್ಟೋ ಎಂಬಲ್ಲಿ. ಇದು ಮೊದಲು ಕಾರ್ಯಾರಂಭ ಮಾಡಿದ್ದು ಯುರೋಪ್​​ನಲ್ಲಿ. 2014ರ ಆರಂಭದಲ್ಲಿ ಇದು ಕಾರ್ಯಾಚರಣೆ ಮಾಡಿತು. ಆಮೇಲೆ 2015ರಲ್ಲಿ ಅದು ಅಮೇರಿಕಾದಲ್ಲೂ ತನ್ನ ಕಾರ್ಯ ವ್ಯಾಪ್ತಿ ವಿಸ್ತರಿಸಿತು.

ಇನ್ಸ್ಪಿರಾಕ್​​ನ ಕೆಲಸ ಏನು..?

ಆದರೆ ಸದ್ಯ ಅಮೆರಿಕಾದಲ್ಲಿ ಮಾತ್ರ ಇದರ ಸೇವೆ ಲಭ್ಯ. ವೆಬ್​​ಸೈಟ್ ಓಪನ್ ಮಾಡಿದ ಕೂಡಲೇ ನೀವು ಮೊದಲು ಮಾಡಬೇಕಾದ್ದಿಷ್ಟು.

  • ನೀವು ಮೊದಲು ಎಲ್ಲಿಗೆ ಪ್ರಯಾಣ ಮಾಡಬೇಕು..?
  • ದಿನಾಂಕ ಯಾವುದು..?
  • ನಿಮ್ಮ ವಯಸ್ಸೆಷ್ಟು..?
  • ನೀವು ಹಿರಿಯ ನಾಗರಿಕರೇ..?
  • ಅಲ್ಲಿ ನೀವು ಏನೇನು ಮಾಡಲು ಬಯಸುತ್ತೀರಿ..?

ಇವೆಲ್ಲವನ್ನೂ ಭರ್ತಿ ಮಾಡಬೇಕು. ಒಮ್ಮೆ ನೀವು ಈ ವಿವರಗಳನ್ನು ವೆಬ್​ಸೈಟ್​​ನಲ್ಲಿ ಭರ್ತಿ ಮಾಡಿದ ತಕ್ಷಣ ನೀವೇನು ಮಾಡಬೇಕು ಅಂತ ಸ್ಕ್ರೀನ್ ಮೇಲೆ ನಿಮ್ಮ ಪ್ಲಾನಿಂಗ್ ಬಂದು ಬಿಡುತ್ತದೆ. ಮೊದಲ ದಿನದಿಂದ ಪ್ರವಾಸದ ಕೊನೆಯ ದಿನದವರೆಗಿನ ಪ್ಲಾನ್ ನಿಮಗೆ ಕ್ಷಣಾರ್ಧದಲ್ಲಿ ಸಿಗುತ್ತದೆ. ಇದರಲ್ಲಿ ನಿಮಗೆ ಯಾವ ಸ್ಥಳಕ್ಕೆ ಹೋಗಬೇಕು ಅನ್ನೋದನ್ನೂ ನೀವು ಆಯ್ಕೆ ಮಾಡಿಕೊಳ್ಳಬಹುದು. ಹೀಗೆ ಟೂರ್ ಪ್ಲಾನಿಂಗ್​​ನ್ನು ನಿಮ್ಮ ಬೆರಳ ತುದಿಗೇ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಅನೂಪ್ ಗೋಯಲ್ ಮತ್ತು ಪ್ರಕಾಶ್ ಸಿಕ್ಚಿ.

ಈ ಐಡಿಯಾ ಹೊಳೆದದ್ದು ಹೇಗೆ ಮತ್ತು ಎಲ್ಲಿ..?

ಇನ್ಸ್ಪಿರಾಕ್ ಸಂಸ್ಥಾಪಕರಾದ ಅನೂಪ್ ಗೋಯಲ್ ಮತ್ತು ಪ್ರಕಾಶ್ ಸಿಕ್ಚಿ ಅವರಿಗೆ ಚಿಕ್ಕಂದಿನಿಂದಲೂ ಟೂರ್ ಅಂದರೆ ಪಂಚಪ್ರಾಣವಂತೆ. ಹೀಗೆ ಅವರು ಒಂದು ದಿನ ವಾಷಿಂಗ್ಟನ್​​ನ ಪ್ರಖ್ಯಾತ ಕ್ಯಾಸ್ಕೇಡ್ ಪರ್ವತ ಶ್ರೇಣಿಗೆ ಹೋಗಿದ್ದರಂತೆ. ಆವಾಗ ಅಲ್ಲಿನ ವಿಶಾಲ ಮತ್ತು ಸುಂದರ ಇನ್ಸ್ಪಿರೇಷನ್ ಹೆಸರಿನ ಸರೋವರ ನೋಡಿ ತುಂಬಾನೇ ಖುಷಿಯಾಯಿತಂತೆ. ಆವಾಗ ಇನ್ಸ್ಪಿರಾಕ್ ಕಟ್ಟುವ ಕನಸು ಹೊಳೆಯಿತು ಅಂತಾರೆ ಅನೂಪ್. ಹೀಗೆ ಹೊಸ ಕನಸಿನ ಯೋಜನೆ ಸಾಧಿಸಲು ಹೊರಟ ಇವರ ಶ್ರಮ ಸ್ವಲ್ಪವಲ್ಲ.

ಟೆಕ್ನಾಲಜಿ ಹೇಗೆ ಕೆಲಸ ಮಾಡತ್ತೆ..?

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿಕೊಂಡು ಆನ್​​ಲೈನ್ ಟೂಲ್ ಥರಾ ಕೆಲಸ ಮಾಡತ್ತೆ ಇನ್ಸ್ಪಿರಾಕ್. ಇದು ಗ್ರಾಹಕರಿಗೆ ರಜಾದಿನದ ಮಜಾ ಹೇಗೆ ಸವಿಯಬೇಕು ಅನ್ನೋದನ್ನು ತಿಳಿಸಿಕೊಡಲು ನೆರವಾಗುತ್ತದೆ ಅಂತ ಅನೂಪ್ ಹೇಳುತ್ತಾರೆ. ವೆಬ್​​ಸೈಟ್​​ನಲ್ಲಿರುವ 50ಕ್ಕೂ ಹೆಚ್ಚಿನ ದೇಶಗಳ ಸುಮಾರು 11 ಸಾವಿರ ಪ್ರೇಕ್ಷಣೀಯ ಸ್ಥಳಗಳಲ್ಲಿರುವ ಪ್ರತಿಯೊಂದು

ಸುಂದರ ಪ್ರದೇಶಗಳ ಡಾಟಾವನ್ನು ಇನ್ಸ್ಪಿರಾಕ್ ಪಡೆದುಕೊಳ್ಳುತ್ತದೆ. ಆಗ ಇನ್ಸ್ಪಿರಾಕ್​​ನಲ್ಲಿರುವ ಪ್ರೋಗ್ರಾಂ ಈ ಎಲ್ಲಾ ಡಾಟಾವನ್ನು ಗ್ರಾಹಕನ ಆಯ್ಕೆಗೆ ತಕ್ಕ ಹಾಗೆ ಕ್ಷಣಾರ್ಧದಲ್ಲಿ ವಿಂಗಡಿಸಿ ಡಿಸ್ಪ್ಲೇ ಮಾಡುತ್ತದೆ. ಹೀಗೆ ಗ್ರಾಹಕನ ಅನುಕೂಲಕ್ಕೆ ತಕ್ಕ ಹಾಗೆ ಪ್ರೇಕ್ಷಣೀಯ ಸ್ಥಳಗಳನ್ನು ಒಂದರ ನಂತರ ಒಂದರಂತೆ ಅವರಿಗೆ ತಲುಪಿಸುತ್ತದೆ. ಇದು ತುಂಬಾ ಯೂಸರ್ ಫ್ರೆಂಡ್ಲಿ ಕೂಡಾ ಹೌದು ಅಂತ ಖುಷಿಯಿಂದ ಹೇಳ್ತಾರೆ ಅನೂಪ್.

ಸಾಧನೆಯ ಹೆಜ್ಜೆ ಗುರುತು..

ಈ ಸಾಧನೆಯ ಹಿಂದೆ ಒಂದು ದೊಡ್ಡ ಕಥೆಯೇ ಇದೆ. ಅನೂಪ್ ಮತ್ತು ಪ್ರಕಾಶ್ ಭೇಟಿಯಾಗಿದ್ದು 1991ರಲ್ಲಿ ಕಂಪ್ಯೂಟರ್ ಸೈನ್ಸ್​​​ನಲ್ಲಿ ಮಾಸ್ಟರ್ಸ್ ಡಿಗ್ರಿ ಓದುತ್ತಿದ್ದಾಗ. ಆವಾಗಲೇ ಇವರಿಗೆ ಈ ಪ್ಲಾನ್ ಹೊಳೆದಿದ್ರೂ ಕನಸು ಸಾಕಾರ ಆಗಿದ್ದು 2012ರಲ್ಲಿ. ಸಾವಿರಾರು ಪ್ರವಾಸಿಗರು, ಟ್ರಾವೆಲ್ ಎಂಜೆಂಟ್​​ಗಳು, ಪ್ರವಾಸೋದ್ಯಮ ಕ್ಷೇತ್ರದ ನುರಿತರನ್ನು ಹಲವು ವರ್ಷಗಳ ಕಾಲ ಭೇಟಿ ಮಾಡಿ ಇವರೆಲ್ಲರ ಅನುಭವ ಸಂಗ್ರಹಿಸಿದರು. ಆಮೇಲೆ ಜನರು ತಮ್ಮ ತಮ್ಮ ಪ್ರವಾಸವನ್ನು ಹೇಗೆ ಪ್ಲಾನ್ ಮಾಡುತ್ತಾರೆ ಅಂತ ತಿಳಿದುಕೊಂಡು ಈ ಬಗ್ಗೆ ಅಧ್ಯಯನ ಮಾಡಿದರು. ಮೊದಲಿಗೆ ಇಬ್ಬರು ಸದಸ್ಯರಿಂದ ಆರಂಭವಾದ ಈ ಟೀಮ್ ಆಮೇಲೆ ಬೆಳೆಯುತ್ತಾ ಹೋಯಿತು. ಹೀಗೆ ಸ್ನೇಹಿತರೆಲ್ಲಾ ಸೇರಿಕೊಂಡು ಟೂರ್ ಪ್ಲಾನಿಂಗ್​ಗೆ ಸುಲಭ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. ತುಂಬಾ ಶ್ರಮಪಟ್ಟು 3 ವರ್ಷ ಹಗಲಿರುಳು ದುಡಿದು ಈ ಪ್ರಾಡಕ್ಟ್ ರೆಡಿ ಮಾಡಿದ್ವಿ. 150ಕ್ಕೂ ಅಧಿಕ ದೇಶಗಳ ಗ್ರಾಹಕರು(ಯೂಸರ್ಸ್) ಇನ್ಸ್ಪಿರಾಕ್ ವೆಬ್​​ಸೈಟ್ ಬಳಸಿದ್ದಾರೆ ಅನ್ನೋದು ಅನೂಪ್ ಮಾತು. ಈ ಹಿಂದೆ ಇಂಥದ್ದೇ ಪ್ರಾಡಕ್ಟ್ ಸಿದ್ಧ ಮಾಡೋದಿಕ್ಕೆ ತುಂಬಾ ಜನರು ಟ್ರೈ ಮಾಡಿದ್ದಾರೆ. ಆದರೆ ಇನ್ಸ್ಪಿರಾಕ್ ನೀಡುವಷ್ಟು ಎಕ್ಯೂರೆಸಿ ಅವರಿಗೆ ಎಲ್ಲೂ ಸಿಕ್ಕಿಲ್ಲ. ಪ್ರತಿಯೊಬ್ಬರ ಪ್ರಾಮಾಣಿಕ ಪ್ರಯತ್ನ ಇದ್ದಿದ್ದರಿಂದಲೇ ಇಷ್ಟೊಂದು ನಿಖರವಾಗಿ ಟೂರ್ ಪ್ಲಾನ್ ನಿಮ್ಮ ಮನೆಗೇ ತಲುಪಿಸೋದಿಕ್ಕೆ ಸಾಧ್ಯವಾಯಿತು ಸಂತ ಹೇಳ್ತಾರೆ ಅನೂಪ್.

ಕೈಹಿಡಿದದ್ದು ಯಾರು..? ಮುಂದಿನ ಗುರಿಯೇನು..?

ಇನ್ಸ್ಪಿರಾಕ್ ಸಾಧನೆ, ಧ್ಯೇಯೋದ್ದೇಶವನ್ನು ಗುರುತಿಸಿ ಬೆನ್ನುತಟ್ಟಿದ್ದು Make Mytrip.com. Inspirockನಲ್ಲಿ 3 ಮಿಲಿಯನ್ ಅಮೆರಿಕನ್ ಡಾಲರ್​​ಗಳಷ್ಟು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದೆ Make Mytrip. ಇನ್ಸ್ಪಿರಾಕ್ ವಿಭಿನ್ನ ಮತ್ತು ನವೀನ ಮಾರ್ಗದ ಮೂಲಕ ರಜಾದ ಮಜಾವನ್ನು ಹೇಗೆ ಸವಿಯಬಹುದು ಅನ್ನೋದನ್ನು ತೋರಿಸಿಕೊಟ್ಟಿದೆ ಅಂತ ಹಾಡಿಹೊಗಳಿದ್ದಾರೆMake Mytrip ಚೇರ್ಮನ್ ದೀಪ್ ಕಾಲ್ರಾ.

ಈಗ ಇನ್ಸ್ಪಿರಾಕ್​​ನ ಕಾರ್ಯವ್ಯಾಪ್ತಿ ಇರೋದು ಅಮೆರಿಕಾ ಮತ್ತು ಯುರೋಪ್​​ನಲ್ಲಿ ಮಾತ್ರ. ಹೀಗಾಗಿ ವಿಶ್ವದ ಬೇರೆ ದೇಶಗಳಿಗೂ ತಮ್ಮ ಸೇವೆ ವಿಸ್ತರಿಸುವ ಯೋಜನೆ ಇನ್ಸ್ಪಿರಾಕ್​​ನದ್ದು. ನಿಮ್ಮ ಭವಿಷ್ಯದ ಎಲ್ಲಾ ಯೋಜನೆಗಳೂ ಯಶಸ್ವಿಯಾಗಲಿ ಎಂದು ಹಾರೈಸೋಣ. ಹಾಟ್ಸಾಫ್ ಟು ಅನೂಪ್ & ಪ್ರಕಾಶ್.

ಲೇಖಕರು:

Related Stories