ಇಸ್ರೇಲ್​ನ Start TLV ಸ್ಪರ್ಧೆ : ಮಹಿಳಾ ಉದ್ಯಮಿಗಳು ಪಾಲ್ಗೊಳ್ಳಲು 10 ಪ್ರಮುಖ ಕಾರಣಗಳು…

ಟೀಮ್ ವೈ.ಎಸ್.ಕನ್ನಡ 

1

ನಾವೀನ್ಯತೆ ಹಾಗೂ ತಂತ್ರಜ್ಞಾನ ವಿಶ್ವದ ನೆಚ್ಚಿನ ಸ್ಟಾರ್ಟಪ್ ತಾಣ ಇಸ್ರೇಲ್​ನ ಪ್ರಮುಖ ಅಸ್ತ್ರಗಳು. ಅಮೆರಿಕವನ್ನು ಬಿಟ್ರೆ ಅತಿಹೆಚ್ಚು ಉದ್ಯಮಗಳು ಜನ್ಮತಾಳಿರುವುದು ಇಸ್ರೇಲ್ ನಲ್ಲೇ . ಏಷ್ಯಾ ಮತ್ತು ಯುರೋಪಿಯನ್ ರಾಷ್ಟ್ರಗಳಿಗಿಂತ್ಲೂ ಅಧಿಕ ಸ್ಟಾರ್ಟಪ್ ಗಳಿಗೆ ಜನ್ಮ ಕೊಟ್ಟಿರುವ ಇಸ್ರೇಲ್ ನಲ್ಲಿ ವಿಶಿಷ್ಟ ಅನುಭವ ಪಡೆಯುವ ಅವಕಾಶ ಈಗ ಭಾರತೀಯರಿಗೂ ಲಭ್ಯವಾಗುತ್ತಿದೆ.

ಇಸ್ರೇಲ್ ಸರ್ಕಾರ ಹಾಗೂ ಟೆಲ್ ಅವಿವ್ ಮುನ್ಸಿಪಾಲಿಟಿ ಜಂಟಿಯಾಗಿ ‘ದಿ ಸ್ಟಾರ್ಟ್ ಟೆಲ್ ಅವಿವ್’ (ಸ್ಟಾರ್ಟ್ ಟಿಎಲ್ ವಿ) ಅನ್ನೋ ಕಾರ್ಯಕ್ರವನ್ನು ಆಯೋಜಿಸಿವೆ. ಜಗತ್ತಿನ ಯುವ ಉದ್ಯಮಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶ. 23 ದೇಶಗಳ ಉದ್ಯಮಿಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಟೆಲ್ ಅವಿವ್ ಸ್ಟಾರ್ಟಪ್ ಬೂಸ್ಟ್ ಕ್ಯಾಂಪ್ ನಲ್ಲಿ ಪಾಲ್ಗೊಳ್ಳಲು 5 ದಿನಗಳ ಉಚಿತ ಪ್ರವಾಸದ ಆಫರ್ ನೀಡಲಾಗುತ್ತದೆ. ಅಷ್ಟೇ ಅಲ್ಲ ಟೆಲ್ ಅವಿವ್ ನಲ್ಲಿ ನಡೆಯಲಿರುವ ಡಿಎಲ್ ಡಿ ಫೆಸ್ಟಿವಲ್ ನಲ್ಲಿ ಕೂಡ ಪಾಲ್ಗೊಳ್ಳಬಹುದು.

‘ಮೇಕಿಂಗ್ ದಿ ವರ್ಲ್ಡ್ ಎ ಬೆಟರ್ ಪ್ಲೇಸ್’ ಅನ್ನೋದು ಈ ಬಾರಿಯ ಸ್ಪರ್ಧೆಯ ಪ್ರಮುಖ ವಿಷಯ. ಸಾಮಾಜಿಕ ಪರಿಣಾಮ ಬೀರಬಲ್ಲ ನವೀನ ತಂತ್ರಜ್ಞಾನವನ್ನೊಳಗೊಂಡ ಮಹಿಳೆಯರೇ ಮುನ್ನಡೆಸುತ್ತಿರುವ ಉದ್ಯಮಗಳು ಕೂಡ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಈ ಅವಕಾಶವನ್ನು ಭಾರತದ ಮಹಿಳಾ ಉದ್ಯಮಿಗಳು ಯಾವುದೇ ಕಾರಣಕ್ಕೂ ಕಳೆದುಕೊಳ್ಳುವಂತಿಲ್ಲ, ಅದ್ಯಾಕೆ ಅನ್ನೋದನ್ನು ನೋಡೋಣ.

ನಾವೀನ್ಯತೆಯ ಕೇಂದ್ರ : ಇಸ್ರೇಲ್ ಪುಟ್ಟ ರಾಷ್ಟ್ರವಾಗಿರಬಹುದು. ಆದ್ರೆ ನಾವೀನ್ಯತೆಯಲ್ಲಿ ಹಿಂದೆ ಬಿದ್ದಿಲ್ಲ. ಶಿಕ್ಷಣ ಮತ್ತು ಬೌದ್ಧಿಕ ಬಂಡವಾಳಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಇಸ್ರೇಲ್ ನಾವೀನ್ಯತೆಯ ಕೇಂದ್ರ ಎನಿಸಿಕೊಂಡಿದೆ. ಸ್ಟಾರ್ಟಪ್ ದೇಶ ಎಂದಾಕ್ಷಣ ಎಲ್ಲರೂ ಇಸ್ರೇಲ್ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಭಾವನೆ ಮೂಡುತ್ತದೆ.

ಗತಕಾಲದ ಸ್ಟಾರ್ಟಪ್ ತಾಣ ಟೆಲ್ ಅವಿವ್ : ಇಸ್ರೇಲ್ ನ ಸ್ಟಾರ್ಟಪ್ ಕ್ಷೇತ್ರ ಅಭಿವೃದ್ಧಿ ಹೊಂದಿದ್ದು ಟೆಲ್ ಅವಿವ್ ನಿಂದ. ಪ್ರತಿಭಾವಂತರಿಂದ ಕೂಡಿದ ತಂತ್ರಜ್ಞಾನ ಕೇಂದ್ರ ಇದು. ಪ್ರಮುಖ ಸ್ಟಾರ್ಟಪ್ ಪರಿಸರ ಹೊಂದಿರುವ ಸ್ಥಳಗಳ ಪೈಕಿ ವಿಶ್ವದಲ್ಲಿ ಟೆಲ್ ಅವಿವ್ ಗೆ 5ನೇ ಸ್ಥಾನವಿದೆ. ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಆಸ್ಟಿನ್ ಹೊರತುಪಡಿಸಿದ್ರೆ ನಂತರದ ಸ್ಥಾನ ಟೆಲ್ ಅವಿವ್ ಗಿದೆ.

ಡಿಎಲ್ ಡಿ ಕಾನ್ಫರೆನ್ಸ್ : ಡಿಎಲ್ ಡಿ ಟೆಲ್ ಅವಿವ್ ಕಾನ್ಫರೆನ್ಸ್ ಇಸ್ರೇಲ್ ನಲ್ಲಿ ಉದ್ಯಮಕ್ಕೆ ಸಂಬಂಧಪಟ್ಟ ಅತಿ ದೊಡ್ಡ ಈವೆಂಟ್. ಇಲ್ಲಿ ನೂರಾರು ತಜ್ಞರು, ಟೆಕ್ಕಿಗಳು, ಸ್ಟಾರ್ಟಪ್ ಗಳು, ಉದ್ಯಮಿಗಳು, ಹೂಡಿಕೆದಾರರು ಆಗಮಿಸ್ತಾರೆ.

ಮಹಿಳಾ ಉದ್ಯಮಿಗಳಿಗೆ ಇಸ್ರೇಲ್ ಪ್ರೋತ್ಸಾಹ : ಇಸ್ರೇಲ್ ನ ಸ್ಟಾರ್ಟಪ್ ಕ್ಷೇತ್ರ ಲಿಂಗ ತಟಸ್ಥವಾಗಿದೆ. ಅಮೆರಿಕದಿಂದ ಹೊರತಾದ ಮಹಿಳೆಯರಿಗೆ ವಿಪುಲ ಅವಕಾಶವನ್ನು ಕಲ್ಪಿಸಿದೆ. ಸಮೀಕ್ಷೆಯೊಂದರ ಪ್ರಕಾರ ಟೆಲ್ ಅವಿವ್ ನಲ್ಲಿ ಶೇ.20ರಷ್ಟು ಮಹಿಳಾ ಸಂಸ್ಥಾಪಕಿಯರಿದ್ದಾರೆ.

ಜಗತ್ತಿನ ಸಮಾನ ಮನಸ್ಕರೊಂದಿಗೆ ಸಂಪರ್ಕ : ಈ ಸ್ಪರ್ಧೆಯಲ್ಲಿ 23 ರಾಷ್ಟ್ರಗಳ ಉದ್ಯಮಿಗಳು ಭಾಗವಹಿಸುತ್ತಾರೆ. ಸಮಾನ ಮನಸ್ಕ ಉದ್ಯಮಿಗಳ ಭೇಟಿಗೆ ಇದು ಒಳ್ಳೆಯ ಅವಕಾಶ. ಶಾಶ್ವತವಾದ ಬಾಂಧವ್ಯಕ್ಕೂ ಇದು ನಾಂದಿಯಾಗಬಹುದು.

ಮಾರ್ಗದರ್ಶನ : ಇನ್ ಕ್ಯುಬೇಟರ್ ಮತ್ತು ಎಕ್ಸಲರೇಟರ್ ಗಳ ಮೂಲಕ ಸರ್ಕಾರ ನೀಡುತ್ತಿರುವ ನೆರವು ಮಾತ್ರವಲ್ಲ, ಇಸ್ರೇಲ್ ಮುಕ್ತತೆ ಮತ್ತು ಸಹಭಾಗಿತ್ವದ ವ್ಯಾಪಕ ಸಂಸ್ಕೃತಿಯನ್ನು ಹೊಂದಿದೆ. ಯುವ ಉದ್ಯಮಿಗಳಿಗೆ ಪ್ರೋತ್ಸಾಹ ಮತ್ತು ನೆರವು ಇಲ್ಲಿ ದೊರೆಯುತ್ತದೆ.

ಸಾಹಸೋದ್ಯಮ ಬಂಡವಾಳದಲ್ಲಿ ಗರಿಷ್ಠ ತಲಾ ಆದಾಯ ಲಭ್ಯ : ಇಸ್ರೇಲ್ ನ ತಲಾ ಬಂಡವಾಳ ಹೂಡಿಕೆ ಅಮೆರಿಕದ ದುಪ್ಪಟ್ಟಿದೆ. ಯುರೋಪಿಯನ್ ಯೂನಿಯನ್ ನ ಎಲ್ಲಾ ಸದಸ್ಯರ 30 ಪಟ್ಟು ಅಧಿಕವಾಗಿದೆ. 70 ಸಕ್ರಿಯ ಫಂಡ್ ಗಳು, ಅದರಲ್ಲಿ 14 ಅಂತರಾಷ್ಟ್ರೀಯ ನಿಧಿಗಳಿವೆ. ಇಸ್ರೇಲ್ 200 ಅಂತರಾಷ್ಟ್ರೀಯ ಫಂಡ್ ಗಳ ನಿರೀಕ್ಷೆ ಹೊಂದಿದೆ.

ಜಾಗತಿಕ ಮಾನ್ಯತೆ: ಜಾಗತಿಕ ಮಾರುಕಟ್ಟೆ ಅಷ್ಟೊಂದು ದೊಡ್ಡದಲ್ಲದ ಕಾರಣ ಇಸ್ರೇಲ್ ನ ಸ್ಟಾರ್ಟಪ್ ಗಳು ವಿದೇಶೀ ಗ್ರಾಹಕರನ್ನು ಹೊಂದಿವೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರ ಜೊತೆಗೆ ಹೇಗೆ ವಹಿವಾಟು ನಡೆಸಬೇಕು ಎಂಬುದನ್ನು ನೀವು ಕಲಿಯಬಹುದು.

ನಿಮ್ಮ ಸಮಸ್ಯೆಗೆ ಪರಿಹಾರ ನೀಡಬಲ್ಲ ಪರಿಕರ ಮತ್ತು ಕಾರ್ಯಾಗಾರ : ಸ್ಪರ್ಧೆಯಲ್ಲಿ ಗೆದ್ದ ಪ್ರತಿಯೊಬ್ಬರಿಗೂ ಬೂಸ್ಟ್ ಕ್ಯಾಂಪ್ ನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಅಲ್ಲಿ ಉತ್ಪನ್ನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬೇಕಾದ ಪರಿಕರ ಮತ್ತು ಪರಿಹಾರಗಳು ಸಿಗುತ್ತವೆ.

ನಿಮ್ಮ ಗುರಿ ಸಾಧಿಸುವ ಕಡೆಗೆ ಶುಭಾರಂಭ : ಬದಲಾಗುತ್ತಿರುವ ಜಗತ್ತಿನಲ್ಲಿ ನಿಮ್ಮ ಕನಸುಗಳು ಕೂಡ ಬದಲಾಗುತ್ತಿರುತ್ತವೆ. ಅದನ್ನು ನನಸು ಮಾಡಿಕೊಳ್ಳಲು ಈ ಕಾರ್ಯಕ್ರಮದಲ್ಲಿ ಹೊಸ ಹಾದಿ ಸಿಗಲಿದೆ.

ಕಳೆದ ವರ್ಷ ಭಾರತದಿಂದ ಗೆಲುವು ಸಾಧಿಸಿದ್ದ ಅಡ್ವೆನಿಯೋದ ಮೌಸಮಿ ಆಚಾರ್ಯ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ‘ಸ್ಟಾರ್ಟ್ ಟೆಲ್ ಅವಿವ್ ನಲ್ಲಿ ಪಾಲ್ಗೊಂಡಿದ್ದು ಒಂದು ಅದ್ಭುತ ಅನುಭವ. ಜಗತ್ತಿನ ಎಲ್ಲಾ ಉದ್ಯಮಿಗಳನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಅವರ ಸ್ಟಾರ್ಟಪ್ ಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯ್ತು. ಇಸ್ರೇಲ್ ನ ಯಶಸ್ವಿ ಉದ್ಯಮಿಗಳು, ಕಂಪನಿಗಳು ಮತ್ತು ಹೂಡಿಕೆದಾರರೊಂದಿಗೆ ಮಾತನಾಡುವ ಅವಕಾಶವೂ ದೊರೆತಿತ್ತು. ನಿಜಕ್ಕೂ ನಾವು ಪಾಲ್ಗೊಳ್ಳಲೇಬೇಕಾದ ಉತ್ತಮ ಕಾರ್ಯಕ್ರಮ ಅದು’.

ಅರ್ಜಿ ಸಲ್ಲಿಸುವುದು ಹೇಗೆ..?

ಈ ಸ್ಪರ್ಧೆಯಲ್ಲಿ ಮಹಿಳೆಯರ ನೇತೃತ್ವದ ಸ್ಟಾರ್ಟಪ್ ಗಳು ಪಾಲ್ಗೊಳ್ಳಬಹುದಾಗಿದೆ. ಅದಕ್ಕಾಗಿ,

*ಸ್ಟಾರ್ಟಪ್ ನ ಸಂಸ್ಥಾಪಕರು, ಸಹ ಸಂಸ್ಥಾಪಕರು ಅಥವಾ ಸಿಇಓ 37 ವರ್ಷದೊಳಗಿನ ಮಹಿಳೆಯಾಗಿರಬೇಕು.

*ಸ್ಟಾರ್ಟಪ್ ಖಾಸಗಿ ಉದ್ಯಮವಾಗಿರಬೇಕು.

*ಸ್ಟಾರ್ಟಪ್ ಬಿಡಿ ಹೂಡಿಕೆ ಪಡೆಯುವ ಹಂತದಲ್ಲಿರಬೇಕು. ಪ್ರೋಟೋಟೈಪ್, ಪ್ರಾಡಕ್ಟ್ ಅಥವಾ ಸೊಲ್ಯೂಶನ್ ಹೊಂದಿರಬೇಕು.

*ಸ್ಟಾರ್ಟಪ್ ಸಾಮಾಜಿಕ ಉದ್ಯಮಶೀಲತೆ ಅಥವಾ ನಗರದ ನಾವೀನ್ಯತೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರಬೇಕು.

*ಸ್ಟಾರ್ಟಪ್ ಜಾಗತಿಕ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿರುವ ಐಸಿಟಿ ಉತ್ಪನ್ನಗಳಿಗೆ ಸಂಬಂಧಿಸಿರಬೇಕು.

ಇದಲ್ಲದೆ ಒಂದು ಚಿಕ್ಕ ವಿಡಿಯೋ ಹಾಗೂ 300 ಪದಗಳನ್ನು ಮೀರದಂತೆ ಶಾರ್ಟ್ ನೋಟ್ ಒಂದನ್ನು ಕೂಡ ಸಲ್ಲಿಸಬೇಕು. ನಿಮ್ಮ ನಾವೀನ್ಯತೆ ಜಗತ್ತನ್ನು ಹೇಗೆ ಬದಲಾಯಿಸಬಲ್ಲದು ಎಂಬ ಬಗ್ಗೆ ಅದರಲ್ಲಿ ವಿವರ ಇರಲಿ. 

ಇದನ್ನೂ ಓದಿ...

ಅಂತರಾಷ್ಟ್ರೀಯ ಯೋಗ ದಿನ : ಆಸನಗಳನ್ನು ಮಾಡುವ ಮುನ್ನ ಸಾಧಕರಿಗಿದು ತಿಳಿದಿರಲಿ…

ರಾಷ್ಟ್ರಪತಿಗಳ ವಾಹನ ತಡೆದು ಆಂಬ್ಯುಲೆನ್ಸ್​ಗೆ ಕೊಟ್ರು ದಾರಿ : ಬೆಂಗಳೂರು ಟ್ರಾಫಿಕ್ ಪೊಲೀಸ್​ಗೆ ನೀವೂ ಒಂದು ಸಲಾಂ ಹೇಳಿ