ಆಹಾರೋದ್ಯಮಕ್ಕೆ ಹೊಸ ಆಯಾಮ: ಸಮರ್ ಜುನೇಜಾ ಸಕ್ಸಸ್ ಕಹಾನಿ

ಟೀಮ್ ವೈ.ಎಸ್.

ಆಹಾರೋದ್ಯಮಕ್ಕೆ ಹೊಸ ಆಯಾಮ: ಸಮರ್ ಜುನೇಜಾ ಸಕ್ಸಸ್ ಕಹಾನಿ

Thursday October 08, 2015,

2 min Read

ಭಾರತದಲ್ಲಿ ಬಂಡವಾಳ ಹೂಡಿಕೆ ಉತ್ತುಂಗದಲ್ಲಿರುವ ಕಾಲ ಇದು. ಇದು ಕೇವಲ ಉದ್ಯಮಿಗಳಿಗೆ ಮಾತ್ರವಲ್ಲ ಉತ್ಸಾಹಿ ಸಿರಿವಂತರನ್ನೂ ಹೂಡಿಕೆಯ ಕ್ಷೇತ್ರ ಪ್ರೋತ್ಸಾಹಿಸುತ್ತಿದೆ. ಕಂಪನಿಯ ಆಡಳಿತ ಮಂಡಳಿ ಸೇರುವ ಹೂಡಿಕೆದಾರನಿಗೆ ಹಣ ಮಾತ್ರ ಮುಖ್ಯವಾಗಿರುವುದಿಲ್ಲ. ವ್ಯಾಪಾರದಲ್ಲಿ ಕುಶಾಗ್ರಮತಿ, ತೀವ್ರತೆ ಮತ್ತು ಸಂಬಂಧಗಳು ಉದ್ಯಮಿಯನ್ನು ಆಕರ್ಷಿಸುತ್ತವೆ. ಅಂತಹ ಸಾಹಸಿ ಬಂಡವಾಳಗಾರರಲ್ಲೊಬ್ಬರು ಸಮರ್ ಜುನೇಜಾ. ವೈಸ್ ಕ್ಯಾಪಿಟಲಿಸ್ಟ್ ಆಗಿದ್ದವರು ಉದ್ಯಮಿಗೆ ಸರಿಸಮನಾಗಿ ಅದೇ ವೇಗದಲ್ಲಿ ಸಾಗಬೇಕು. ಮಾರುಕಟ್ಟೆಯ ಹೃದಯ ಬಡಿತವನ್ನು ಆಲಿಸುತ್ತಲೇ ಇರಬೇಕು. ಆರಾಮಾಗಿ ಕುಳಿತರೆ ಯಶಸ್ಸು ಅಸಾಧ್ಯ ಎನ್ನುತ್ತಾರೆ ಸಮರ್ ಜುನೇಜಾ. ಭಾರತೀಯ ಕಂಪನಿಗಳ ಈಕ್ವಿಟಿ ಇನ್‍ವೆಸ್ಟ್ ಮೆಂಟ್‍ಗಳ ಸಲಹೆಗಾರರಾಗಿ ಸಮರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೂಡಿಕೆ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ವಿಮರ್ಷಕರಾಗಿದ್ದ ಸಮರ್ ಜುನೇಜಾ ಬ್ಯುಸಿನೆಸ್ ಬಗ್ಗೆ ಅಪಾರ ಅನುಭವ ಗಳಿಸಿದ್ದಾರೆ. ಕಳೆದ 10 ವರ್ಷಗಳಿಂದ ಇದೇ ಕ್ಷೇತ್ರದಲ್ಲಿ ಸಮರ್ ಸೇವೆ ಸಲ್ಲಿಸುತ್ತಿದ್ದಾರೆ.

image


ಸಮರ್ ಕೇವಲ ಒಬ್ಬ ವಿಸಿಯಾಗಿ ಗುರುತಿಸಿಕೊಂಡಿಲ್ಲ. ಅವರು ಒಬ್ಬ ಉದ್ಯಮಿಗೆ ಸರಿಸಾಟಿಯಾಗಿ ಬೆಳೆದಿದ್ದಾರೆ. ಸ್ವಿಗ್ಗಿ ಒಪ್ಪಂದಕ್ಕಾಗಿ ಸಮರ್ ಮಾಡಿದ ಕಸರತ್ತು ಇದಕ್ಕೆ ಸಾಕ್ಷಿ. ಇದಕ್ಕಾಗಿಯೇ ಒಂದು ವಾರ ಸಮರ್ ಬೆಂಗಳೂರಲ್ಲಿ ಉಳಿದುಕೊಂಡಿದ್ದರು. ಡಿಸೆಂಬರ್‍ನಲ್ಲಿ ಸಮರ್ ಸ್ವಿಗ್ಗಿ ಕಂಪನಿಯವರನ್ನ ಭೇಟಿ ಮಾಡಿದ್ದರು. ಅದಾದಮೇಲೆ ಜನವರಿ ಮತ್ತು ಫೆಬ್ರವರಿಯಲ್ಲಿ 2 ಬಾರಿ ಪರಸ್ಪರ ಸಮಾಲೋಚನೆ ನಡೆದಿತ್ತು. ಆಹಾರ ತಂತ್ರಜ್ಞಾನದ ಬಗ್ಗೆ ಸಮರ್ ಜುನೇಜಾ ಪ್ರಮುಖ ಕಂಪನಿಗಳ ಗಮನ ಸೆಳೆದಿದ್ದಾರೆ. ಪರಿಣಾಮ ಹೂಡಿಕೆದಾರರು ಬಂಡವಾಳ ಹಾಕಲು ತುದಿಗಾಲಲ್ಲಿ ನಿಂತಿದ್ದಾರೆ. ಕಳೆದ 10 ತಿಂಗಳುಗಳಲ್ಲಿ ಹಲವು ಒಪ್ಪಂದಗಳು ಯಶಸ್ವಿಯಾಗಿವೆ. ನಾರ್ವೆಸ್ಟ್ ವೆಂಚರ್‍ನ ವೈಸ್ ಕ್ಯಾಪಿಟಲಿಸ್ಟ್ ಆಗಿರುವ ಸಮರ್ ಜುನೇಜಾ, ಆಫ್‍ಲೈನ್ ಫುಡ್ ಟೆಕ್ನಾಲಜಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅಂತರ್ಜಾಲವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಆಹಾರ ಉದ್ಯಮಕ್ಕೆ ಇನ್ನಷ್ಟು ಜನಪ್ರಿಯತೆ ತಂದುಕೊಟ್ಟಿದ್ದಾರೆ.

ಆಹಾರ ಜನರ ಅನಿವಾರ್ಯತೆ. ಕೆಲವರಿಗೆ ತಿನ್ನೋ ಖಯಾಲಿ ಕೂಡ ಹೆಚ್ಚು. ಬ್ಯಾಂಕಾಕ್, ಸಿಂಗಾಪುರ, ಚೀನಾ, ಅಮೆರಿಕ ಸೇರಿದಂತೆ ಬಹುತೇಕ ಎಲ್ಲ ಕಡೆಗಳಲ್ಲೂ ಆಹಾರ ಉದ್ಯಮ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಭಾರತೀಯರು ಕೂಡ ತಿಂಡಿ ಪೋತರೇ. ಇದೇ ಟ್ರೆಂಡ್ ಮುಂದುವರಿಯುತ್ತದೆ ಅನ್ನೋದು ಜುನೇಜಾರ ವಿಶ್ವಾಸದ ನುಡಿ. ಮನೆಯಲ್ಲೇ ಬಗೆ ಬಗೆಯ ತಿನಿಸುಗಳನ್ನು ತಯಾರಿಸಿ ಆನ್‍ಲೈನ್‍ನಲ್ಲಿ ಮಾರಾಟ ಮಾಡುವವರಿಗೂ ಇದು ಸಕಾಲ. ಅವರು ಡಬಲ್ ಆದಾಯ ಗಳಿಸಬಹುದು. ಭೋಜನ ಪ್ರಿಯರಿಗಂತೂ ದಿನ್ನಕ್ಕೊಂದು ವೆರೈಟಿ ತಿಂಡಿಯನ್ನ ಟೇಸ್ಟ್ ಮಾಡಬಹುದು.

ಆಹಾರ ತಂತ್ರಜ್ಞಾನ ವಲಯವನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು. ರೆಡಿ ಟು ಈಟ್ ತಿನಿಸುಗಳನ್ನು ಸಂಗ್ರಹಿಸುವುದು, ಗ್ರಾಹಕರಿಗೆ ತಲುಪಿಸುವುದು ಅತ್ಯಂತ ಮಹತ್ವದ ಘಟ್ಟ. ಸಮರ್ ಜುನೇಜಾ ಅವರ ಪ್ರಕಾರ ಗ್ರಾಹಕರನ್ನು ಆಕರ್ಷಿಸಬೇಕೆಂದರೆ ತಿನಿಸುಗಳ ಆಯ್ಕೆ ಬಹುಮುಖ್ಯ. ಜೊತೆಗೆ ಆರ್ಡರ್ ಮಾಡಿದ್ದನ್ನು ಆದಷ್ಟು ಬೇಗ ಗ್ರಾಹಕರಿಗೆ ತಲುಪಿಸಬೇಕು. ಆಹಾರ ಗುಣಮಟ್ಟವನ್ನು ಕಾಪಾಡಿಕೊಂಡು ಹೋದರೆ ಯಶಸ್ಸು ಸುಲಭ ಎನ್ನುತ್ತಾರೆ ಜುನೇಜಾ. ಈ ಫುಡ್ ಟೆಕ್ನಾಲಜಿ ಇನ್ನೆರಡು ವರ್ಷಗಳಲ್ಲಿ ಮತ್ತಷ್ಟು ಜನಪ್ರಿಯವಾಗಲಿದೆ. ಸುಮಾರು 30 ಪ್ರತಿಷ್ಠಿತ ಕಂಪನಿಗಳನ್ನು ಭೇಟಿ ಮಾಡಿರುವ ಸಮರ ಸ್ವಿಗ್ಗಿ ಸಂಸ್ಥೆ ಮೇಲೆ ವಿಶ್ವಾಸವಿಟ್ಟು ಹೂಡಿಕೆ ಮಾಡ್ತಿದ್ದಾರೆ. ಅತಿ ಕಡಿಮೆ ಅವಧಿಯಲ್ಲೇ ಸ್ವಿಗ್ಗಿ ಸಂಸ್ಥೆ ಗ್ರಾಹಕರ ಮನಗೆದ್ದಿದೆ.

image


ಸಮರ್ ಜುನೇಜಾ ಮೂಲತಃ ಉದ್ಯಮಿಯಾಗಿರಲಿಲ್ಲ. ಆದರೆ ಈಗ ಉದ್ಯಮದ ಆಳ ಅಗಲಗಳನ್ನು ಚೆನ್ನಾಗಿಯೇ ಅರಿತಿದ್ದಾರೆ. ಮೂಲ ತತ್ವವನ್ನು ಮರೆಯದೇ ಸಂಸ್ಥೆಯನ್ನು ಪ್ರಗತಿಯತ್ತ ಮುನ್ನಡೆಸಬೇಕು ಎನ್ನುವುದು ಜುನೇಜಾರ ಅತ್ಯಮೂಲ್ಯ ಸಲಹೆ. ಕೇವಲ ಸ್ಮಾರ್ಟ್ ಆಗಿದ್ದರೆ ಸಾಲದು, ಒಳ್ಳೆಯ ವ್ಯಕ್ತಿತ್ವವೂ ಇರಬೇಕು. ಆಗ ಮಾತ್ರ ನಮ್ಮೊಂದಿಗೆ ಜನರು ಕೆಲಸ ಮಾಡಲು ಇಷ್ಟಪಡುತ್ತಾರೆ. ಕಂಪನಿಯ ಪ್ರಗತಿ ಬಗ್ಗೆ ತೃಪ್ತಿ ಇರಬೇಕು, ಜೊತೆಗೆ ಸಂಸ್ಥೆ ಅಭಿವೃದ್ಧಿ ಹೊಂದಿದಂತೆಲ್ಲ ಸಿಇಓ ಆಗಿದ್ದವರ ಜವಾಬ್ಧಾರಿ ಕೂಡ ಹೆಚ್ಚುತ್ತದೆ ಅನ್ನೋದು ಅವರ ಅನುಭವದ ಮಾತು. 6 ವರ್ಷಗಳ ಕಾಲ ನಾರ್ವೆಸ್ಟ್ ವೆಂಚರ್‍ನಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ.

ಒಟ್ಟಿನಲ್ಲಿ ಮೊಬೈಲ್ ಇಂಟರ್ನೆಟ್ ಬಳಕೆದಾರರು, ತಲಾ ಆದಾಯ, ಸ್ವದೇಶೀ ವಸ್ತುಗಳ ಬಳಕೆ ಇವೆಲ್ಲವೂ ಭಾರತದಲ್ಲಿ ಹೂಡಿಕೆದಾರರನ್ನು ಪ್ರೋತ್ಸಾಹಿಸುತ್ತಿವೆ. ಆರಂಭಿಕ ಹಂತದಲ್ಲಿಯೇ ದೊಡ್ಡ ಸವಾಲುಗಳು ಎದುರಾಗುತ್ತವೆ. ಅವನ್ನೆಲ್ಲ ನಿರಾಯಾಸವಾಗಿ ಮೆಟ್ಟಿನಿಂತರೆ ಯಶಸ್ಸು ತಾನಾಗಿಯೇ ಅರಸಿ ಬರುತ್ತದೆ.

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ