ಡ್ಯಾನ್ಸ್​​ನಿಂದ ಡಿಸೈನರ್​​ ವರೆಗೂ …

ಪಿವಿಬಿ

0

ಹದಿನಾರನೇ ವಯಸ್ಸಿನಲ್ಲಿ ಕಲಿಬೇಕು ಅಂದುಕೊಂಡಿದ್ದು ಡ್ಯಾನ್ಸ್. ಆದ್ರೆ ಒಂದೇ ಒಂದು ಅವಕಾಶ ಇವತ್ತು ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್‍ ಡಿಸೈನರ್‍ ಅನ್ನೋ ಪಟ್ಟವನ್ನ ತಂದುಕೊಟ್ಟಿದೆ. ಅಷ್ಟೇ ಅಲ್ಲದೆ ಸ್ಟಾರ್‍ ಕೊರಿಯೋಗ್ರಾಫ್‍ ಜೋಡಿಯಾಗಿ ಸಿಕ್ಕಿದ್ದಾರೆ. ಖಾಲಿ ಸಾನಿಯಾ ಆಗಿ ಡ್ಯಾನ್ಸ್​​​ ಕಲಿಯೋಕೆ ಬಂದ ಇವ್ರು ಈಗ ಚಂದನವನದ ಮೋಸ್ಟ್ ವಾಟೆಂಡ್‍ ಕಾಸ್ಟ್ಯೂಮ್‍ ಡಿಸೈನರ್. ತೆರೆ ಮೇಲೆ ಪ್ರೇಕ್ಷಕರನ್ನರಂಜಿಸೋ ಸ್ಟಾರ್​​ಗಳು ಸಖತ್ತಾಗಿ ಕಾಣೋದು ಇವ್ರಿಂದನೇ ಅಂದ್ರೆ ತಪ್ಪಿಲ್ಲ. 

ಟರ್ನಿಂಗ್​​ ಪಾಯಿಂಟ್​​​...

2007 ರಲ್ಲಿ ಚಿಕ್ಕದೊಂದುಅವಕಾಶದಿಂದ ಸಾನಿಯಾ ತಮ್ಮಡಿಸೈನರ್ ಕೆಲಸವನ್ನ ಸ್ಟಾರ್ಟ್ ಮಾಡಿದ್ರು. ಅದೊಂದು ಅವಕಾಶ ಇಂದು ಸಾನಿಯ ಅವ್ರನ್ನ ಸ್ಯಾಂಡಲ್​ವುಡ್​​​ ದೊಡ್ಡಮನೆ ಅನ್ನಿಸಿಕೊಂಡಿರೋ ಡಾ. ರಾಜ್​​ಕುಮಾರ್‍ ಅವರ ಮನೆಯಲ್ಲಿ ವಿಶೇಷ ಸ್ಥಾನವನ್ನ ಗಿಟ್ಟಿಸಿಕೊಟ್ಟಿದೆ.

ಸಾನಿಯಾ ಸದ್ಯ ಫೇಮಸ್‍ ಡಿಸೈನರ್…ಅಷ್ಟೇ ಅಲ್ಲ ಚಿತ್ರರಂಗದಲ್ಲಿ ಫೇಮಸ್‍ ಕೊರಿಯೋಗ್ರಾಫರ್‍ ಇಮ್ರಾನ್ ಸರ್ದಾರಿಯಾ ಪತ್ನಿ. ಗೋಲ್ಡನ್​ ಸ್ಟಾರ್​​​ ಗಣೇಶ್‍ನಿಂದ ಹಿಡಿದು ಕಿಚ್ಚ ಸುದೀಪ್ ವರೆಗೂ ಸಾಕಷ್ಟು ನಾಯಕರಿಗೆ ಸಾನಿಯಾನೇ ಡಿಸೈನರ್. ಗಣೇಶ್‍ಅಭಿನಯದ ಹುಡುಗಾಟ ಸಿನಿಮಾದಿಂದ ಸಾನಿಯಾ ಕೆರಿಯರ್ ಸ್ಯಾಂಡಲ್​ವುಡ್​​ನಲ್ಲಿ ಸ್ಟಾರ್ಟ್‍ ಆಯ್ತು. ಅಲ್ಲಿಂದ ಇಲ್ಲಿ ತನಕ ಕೆಲಸದಲ್ಲಿ ಎಂದೂ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಸ್ಟಾರ್​​ಗಳನ್ನ ಕಲರ್​​ಫುಲ್‍ ಕಾಣುವಂತೆ ಮಾಡೋದು ,ಅವ್ರಿಗೆ ನ್ಯೂ ಲುಕ್‍ ಕೊಡೋದ್ರಲ್ಲಿ ಸಾನಿಯಾ ಫೇಮಸ್. ಮೊದಲ ಸಿನಿಮಾದಲ್ಲೇ ಸಾನಿಯಾ ತಮ್ಮ ಕೆಲಸವನ್ನ ಎಷ್ಟು ಫರ್ಫೆಕ್ಟ್ ಆಗಿ ಮಾಡಿದ್ರು ಅಂದ್ರೆ, ಸಾನಿಯಾ ಮಾಡಿದ ಜ್ಯೂವೆಲರಿ ಡಿಸೈನ್ ಮಾರ್ಕೆಟ್​​ನಲ್ಲಿ ಟ್ರೆಂಡ್​​​ ಆಗಿ ಇನ್ನೂ ಉಳಿದಿದೆ.

ಮೊದಲ ಸಿನಿಮಾದಲ್ಲೇ ಸಕ್ಸಸ್‍ ಕಂಡಿದ್ದ ಸಾನಿಯಾ ಇಲ್ಲಿ ತನಕ 80ಕ್ಕೂ ಹೆಚ್ಚು ಸಿನಿಮಾಗಳಿಗೆ ಕಾಸ್ಟ್ಯೂಮ್ಸ್​​ ಡಿಸೈನ್ ಮಾಡಿದ್ದಾರೆ. ಸದ್ಯ ಸಾನಿಯಾ ಸ್ಯಾಂಡಲ್​ವುಡ್​​ನ ಸ್ಟಾರ್‍ ಆ್ಯಕ್ಟರ್​​ಗಳಿಗೆ ಹಾಟ್ ಫೇವರಿಟ್ . ಕೇವಲ ಸಿನಿಮಾಗಳಿಗೆ ಮಾತ್ರವಲ್ಲದೆ ಸ್ಟಾರ್​​ಗಳ ಮನೆಯ ಪರ್ಸನಲ್ ಪ್ರೋಗ್ರಾಂ ಗಳಿಗೆ ಹಾಗೂ ಅವಾರ್ಡ್ ಪ್ರೋಗ್ರಾಂಗಳಿಗೂ ಸ್ಟಾರ್​​ಗಳನ್ನ ಮಿಂಚುವಂತೆ ಮಾಡೋ ಡಿಸೈನರ್ ಈಕೆ..

ಸ್ಟಾರ್​​ಗಳ ಲುಕ್​​ ಹಿಂದೆ ಸಾನಿಯಾ ಕೈ ಚಳಕ..!

ಪುನೀತ್‍ ರಾಜ್​​ಕುಮಾರ್ ,ಶಿವರಾಜ್​ ಕುಮಾರ್ ಹಾಗೂ ರಾಘವೇಂದ್ರ ರಾಜ್​​ಕುಮಾರ್​ ಅವ್ರಿಗೆ ಖಾಯಂ ಡಿಸೈನರ್ ಸಾನಿಯಾ ಸರ್ದಾರಿಯಾ. ಪುನೀತ್‍ ಅಭಿನಯದ ಜಾಕಿ ಸಿನಿಮಾದಲ್ಲಿ ಪುನೀತ್‍ ಕಾಸ್ಟ್ಯೂಮ್‍ ಡಿಸೈನ್ ಮಾಡಿ ಇಡೀ ಚಿತ್ರರಂಗವನ್ನೇ ಸಾನಿಯಾ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು. ಅಷ್ಟೇ ಅಲ್ಲದೆ ಹುಡುಗರು ಸಿನಿಮಾದಲ್ಲಿ ನಮ್ಮ ದೇಸಿತನವನ್ನ ಕನ್ನಡ ಪ್ರೇಕ್ಷಕರಿಗೆ ಪರಿಚಯ ಮಾಡಿಸೋ ಕೆಲಸ ಮಾಡಿದ್ದು ಇದೇ ಸಾನಿಯಾ ಸರ್ದಾರಿಯಾ. ಪುನೀತ್ ,ಶಿವರಾಜ್​​ ಕುಮಾರ್, ಸುದೀಪ್, ಉಪೇಂದ್ರ, ಗಣೇಶ್ ಸೇರಿದಂತೆ ರಮ್ಯ,ರಕ್ಷಿತಾ ,ರಾಧಿಕಾ ಪಂಡಿತ್, ರಾಧಿಕಾ ಕುಮಾರ ಸ್ವಾಮಿ ಇನ್ನೂ ಅನೇಕರಿಗೆ ಸಾನಿಯಾನೇ ಡಿಸೈನರ್.

ಇನ್ನೂ ಇಡೀ ಚಿತ್ರರಂಗವೆಲ್ಲ ಸಾಕ್ಷಿಯಾದ ಶಿವರಾಜ್​ ಕುಮಾರ್ ಅವ್ರ ಮಗಳ ಮದುವೆಯಲ್ಲಿ ಮಧು ಮಕ್ಕಳು ಸೇರಿದಂತೆ ಡೊಡ್ಡಮನೆಯವರೆಲ್ಲ ಸುಂದರವಾಗಿ ಕಾಣುವಂತೆ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ್ದರು ಸಾನಿಯಾ. ಅಷ್ಟೇ ಅಲ್ಲದೆ ಮದುವೆಗೂ ಮುನ್ನ ಸಂಗೀತ್ ಪ್ರೋಗ್ರಂನಲ್ಲಿ ಸ್ಟಾರ್​​ಗಳು ಮಿರ ಮಿರ ಅಂತ ಮಿಂಚಿದ್ರ ಹಿಂದೆ ಇದೇ ಸಾನಿಯಾ ಕೈಚಳಕವಿತ್ತು. ಸಾನಿಯಾ ಇಷ್ಟೆಲ್ಲ ಪ್ರಖ್ಯಾತಿ ಹಾಗೂ ಹೆಸರು ಮಾಡೋದಕ್ಕೆಇಲ್ಲಿ ತನಕ ಜೊತೆ ನಿಂತು ಸಾಥ್ ನೀಡ್ತಿರೋದು ಸಾನಿಯಾ ಪತಿ ಇಮ್ರಾನ್ ಹಾಗೂ ಸಾನಿಯಾ ಸರ್ದಾರಿಯಾ ಟೀಂ..

ಸೆಲೆಬ್ರೆಟಿ ಡಿಸೈನರ್‍ ಆಗಿರೋ ಸಾನಿಯಾ ಚಿತ್ರರಂಗದವರಿಗೆ ಮಾತ್ರವಲ್ಲದೆ ಪೊಲಿಟಿಕಲ್ ಲೀಡರ್ಸ್ ಮತ್ತು ಅವ್ರ ಮಕ್ಕಳಿಗೂ ಕಾಸ್ಟೈಮ್‍ ಡಿಸೈನ್ ಮಾಡಿಕೊಡ್ತಾರೆ. ಸದ್ಯ ಸ್ಯಾಂಡಲ್​ವುಡ್​​ನಲ್ಲಿ ಮೋಸ್ಟ್ ವಾಟೆಂಡ್ ಹಾಗೂ ಸೀನಿಯರ್ ಕಾಸ್ಟ್ಯೂಮ್‍ ಡಿಸೈನರ್‍ ಅಂದ್ರೆ ಅದು ಸಾನಿಯಾ ಮಾತ್ರ. ಕಳೆದ ವರ್ಷದಲ್ಲಿ ರಿಲೀಸ್‍ ಆದ ಎಂದೆಂದಿಗೂ ಕನ್ನಡ ಸಿನಿಮಾದ ಕಾಸ್ಟ್ಯೂಮ್‍ ಡಿಸೈನ್ ಸಾನಿಯಾ ಕೆರಿಯರ್​​ನಲ್ಲೇ ಬೆಸ್ಟ್​​​ ಡಿಸೈನ್. ಹಿಂದೆ ಕನ್ನಡ ಚಿತ್ರರಂಗದಲ್ಲಿ ಹಾಗೂ ಯಾವ ಸ್ಟಾರ್​​ಗಳು ಧರಿಸಿರದಂತಹ ಕಾಸ್ಟ್ಯೂಮ್ಸ್ ಈ ಸಿನಿಮಾದಲ್ಲಿ ಬಳಸಲಾಗಿತ್ತು. ಅಷ್ಟೇ ಅಲ್ಲದೆ ಎಲ್ಲಾ ರೀತಿಯ ಕಲರ್​​ಗಳನ್ನ ಇದೊಂದು ಸಿನಿಮಾದಲ್ಲಿ ಬಳಸಿದ ಹೆಗ್ಗಳಿಕೆ ಸಾನಿಯಾಗೆ ಸಲ್ಲುತ್ತೆ.

ಸಾನಿಯಾ ಮಾತು

ಒಂದು ಅವಕಾಶದಿಂದ ಇಷ್ಟರ ಮಟ್ಟಿಗೆ ಹೆಸರುಗಳಿಸುತ್ತೇನೆ ಅಂತ ಗೊತ್ತೇ ಇರಲಿಲ್ಲ. ಈ ಎಲ್ಲಾ ಕ್ರೆಡಿಟ್​​ ಇಮ್ರಾನ್ ಹಾಗೂ ನನ್ನ ಟೀಂಗೆ ಹೋಗುತ್ತೆ. ಇನ್ನೂ ನಮ್ಮ ಸ್ಟಾರ್ಸ್ ಅಷ್ಟೇ ತುಂಬಾ ಕೋ-ಆಪರೇಟಿವ್. ಪುನೀತ್‍ ಹಾಗೂ ಸುದೀಪ್‍ ಜೊತೆ ಕೆಲಸ ಮಾಡಿದ್ದು ತುಂಬಾನೇ ಖುಷಿಕೊಟ್ಟಿದೆ. ಒಬ್ಬ ಹೆಣ್ಣುಮಗಳಾಗಿ ಇಷ್ಟರ ಮಟ್ಟಿಗೆ ಸಕ್ಸಸ್‍ ಆಗೋದಕ್ಕೆ ಸಾಕಷ್ಟು ಜನರು ಸಾಥ್ ನೀಡಿದ್ದಾರೆ. ಅದ್ರಿಂದ ಖುಷಿ ಇದೆ. ಸ್ಟಾರ್​​ಗಳು ಟ್ರಯಲ್ ನೋಡೋ ಟೈಂನಲ್ಲಿ ಸ್ವಲ್ಪ ಬೇಜಾರಾಗ್ತಾರೆ ಅಷ್ಟೇ. ಆದ್ರೂ ಕೂಡ ಮಧ್ಯ ರಾತ್ರಿಯಲ್ಲಿ ಟ್ರಯಲ್‍ ಕೊಟ್ರು ಹಾಕಿಕೊಳ್ತಾರೆ. ಅದೇ ಖುಷಿ . ಇಷ್ಟು ಸಕ್ಸಸ್‍ತುಂಬಾ ಖುಷಿ ತಂದಿರೋದಂತು ನಿಜ ಅಂತ ಹೇಳಿಕೊಂಡು ಸಾನಿಯಾ ಸರ್ದಾರಿಯ ಮಾತು ಮುಗಿಸಿದ್ರು.

Related Stories