ಚಿಕ್ಕ ಪಟ್ಟಣದ ಉದ್ದಿಮೆದಾರನ ಜ್ಯೂಸ್ ಮೇಕಿಂಗ್ ಬಿಸಿನೆಸ್​​ನಿಂದ ಬೆಂಗಳೂರಿಗರ ಡಯಟ್ ನಿರ್ವಹಣೆ

ಟೀಮ್​​ ವೈ.ಎಸ್​​.

ಚಿಕ್ಕ ಪಟ್ಟಣದ ಉದ್ದಿಮೆದಾರನ ಜ್ಯೂಸ್ ಮೇಕಿಂಗ್ ಬಿಸಿನೆಸ್​​ನಿಂದ ಬೆಂಗಳೂರಿಗರ ಡಯಟ್ ನಿರ್ವಹಣೆ

Monday September 21, 2015,

3 min Read

ಜನರು ದಿನೇ ದಿನೇ ಉತ್ತಮ ಆರೋಗ್ಯಕರ ಜೀವನಶೈಲಿಗಾಗಿ ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳತೊಡಗಿದ್ದಾರೆ.. ಈ ನಿಟ್ಟಿನಲ್ಲಿ ಜ್ಯೂಸ್ ಅವರ ಆರೋಗ್ಯ ಪ್ರಜ್ಞೆಯನ್ನು ಹೆಚ್ಚಿಸತೊಡಗಿದೆ.. ಇನ್ನೊಂದರ್ಥದಲ್ಲಿ ಹಣ್ಣಿನ ರಸಗಳ ಪ್ಯಾಕೇಜಿಂಗ್ ಜ್ಯೂಸ್ ಉತ್ತಮ ಆರೋಗ್ಯದ ಪ್ರದಾನ ಮಾನದಂಡವಾಗಿ ಬದಲಾಗ್ತಿದೆ...

ಹೀಗಾಗಿ ಹಣ್ಣಿನ ರಸಗಳ ಜ್ಯೂಸ್ ಮಾರಾಟ 25-30 ಪ್ರತಿಶತ ಹೆಚ್ಚಳವಾಗಿದೆ.. ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಜ್ಯೂಸ್ ಮಾರಾಟ ಅಸಂಘಟಿತ ವಲಯದಲ್ಲಿ ಹೆಚ್ಚಳವಾಗುತ್ತಿದೆ.. ಟೆಕ್ನೋಪಾಕ್ ಅನ್ನುವ ಪರಿಣಿತ ಮಾರುಕಟ್ಟೆ ಅವಲೋಕನ ಸಂಸ್ಥೆಯ ಸರ್ವೇ ಪ್ರಕಾರ ಭಾರತೀಯ ಮಾರುಕಟ್ಟೆಯಲ್ಲಿ ಹಣ್ಣಿನ ಜ್ಯೂಸ್ ಮಾರಾಟ ಸುಮಾರು 1100 ಕೋಟಿಗಳ ಮೌಲ್ಯದ ವಹಿವಾಟು ಹೊಂದಿದೆ..

image


ಈ ಮಾರುಕಟ್ಟೆಯ ವಿದ್ಯಮಾನವನ್ನು ಗಮನಿಸಿದ ಸವದ್ ತಮ್ಮ ಜ್ಯೂಸ್ ಮಾರಾಟದ ವೆಂಚರ್ ಸ್ಥಾಪನೆಗೆ ಮುಂದಾದ್ರು.. ಪಾಪನಚೇರಿ ಅನ್ನುವ ಹಳ್ಳಿಯಿಂದ ತಮ್ಮ ಪಾಕೇಟ್​​ನಲ್ಲಿ ಕೇವಲ 250 ರೂಪಾಯಿ ಇಟ್ಟುಕೊಂಡು ಬೆಂಗಳೂರಿಗೆ ಬಂದಿದ್ದ ಸವದ್​​ಗೆ ಸಂಪರ್ಕಕ್ಕೆ ಬೇಕಿದ್ದ ಸರಳ ಇಂಗ್ಲೀಷ್ ಸಹ ಬರುತ್ತಿರಲಿಲ್ಲ.. ಸ್ವತಃ ಸವದ್ ಹೇಳಿಕೊಂಡಂತೆ ಅವರ ಬಾಲ್ಯದ ಗೆಳೆಯ ಹಾಗೂ ಈಗ ಅವರ ಬಿಸಿನೆಸ್ ಪಾರ್ಟ್​ನರ್ ಆಗಿರುವ ನಿಯಾಸಿಮ್ ಸವದ್ರ ಬಿಸಿನೆಸ್​ಗೆ ಅಗತ್ಯವಾದ ಇಂಗ್ಲೀಷ್ ಸ್ಕ್ರಿಪ್ಟ್​​ನ ಒಕ್ಕಣಿಕೆ ಸಿದ್ಧಮಾಡಿಕೊಟ್ಟಿದ್ದರಂತೆ..

ಹೊಟೆಲ್ ಚೈನ್​​ನಲ್ಲಿ ಕೆಲಸ ಮಾಡುತ್ತಿರುವಾಗಲೇ ಸವದ್ ಅತಿಥಿ ಸತ್ಕಾರಕ್ಕೆ ಸಂಬಂಧಪಟ್ಟ ಉದ್ಯಮವೊಂದರಲ್ಲಿ ಬಿಸಿನೆಸ್ ನಡೆಯುವ ಸೂತ್ರಗಳನ್ನು ಕಲಿಯುತೊಡಗಿದರು.. ಕ್ರಮೇಣ ಸವದ್ ಬೆಂಗಳೂರಿನ ಹೊಟೇಲ್ ಚೈನ್​​ನಲ್ಲಿ ಅತಿ ಕಿರಿಯ ಜನರಲ್ ಮ್ಯಾನೇಜರ್ ಅನ್ನಿಸಿಕೊಂಡರು.. ಆದರೆ ಸವದ್​​ರ ಯಶಸ್ಸಿನ ಪಯಣ ಇಲ್ಲಿಗೇ ನಿಲ್ಲಲಿಲ್ಲ..

ನಂತರ ತಮ್ಮ ಅಷ್ಟು ದೊಡ್ಡ ಹುದ್ದೆಯ ಕೆಲಸವನ್ನು ತೊರೆದ ಸವದ್ ಜನರನ್ನು ಆರೋಗ್ಯಪೂರ್ಣರನ್ನಾಗಿಸುವ ತಾಜಾ ಹಣ್ಣಿನ ಪ್ಯಾಕೇಜಿಂಗ್ ಮಾರಾಟದ ಆಶಯದೊಂದಿಗೆ ಬೆಂಗಳೂರಿನ ಕೋರಮಂಗಲದಲ್ಲಿ ಸಣ್ಣದೊಂದು ಅಂಗಡಿಯ ಮೂಲಕ ಹೊಸದೊಂದು ಬಿಸಿನೆಸ್ ಆರಂಭಿಸಿದರು.. ಜನತೆಯ ಆಹಾರದ ಹವ್ಯಾಸವನ್ನು ಚೆನ್ನಾಗಿಯೇ ಮನಗಂಡಿದ್ದ ಸವದ್ ತಮ್ಮ ಈ ಬಿಸಿನೆಸ್​​ನಲ್ಲಿ ಅತ್ಯುತ್ತಮ ಹಾಗೂ ಆರೋಗ್ಯಪೂರ್ಣ ಹಣ್ಣಿನ ಜ್ಯೂಸ್​​ಗಳನ್ನು ಒದಗಿಸುವ ಸೇವೆ ಆರಂಭಿಸಿದ್ರು..

ಸವದ್​​, ಜ್ಯೂಸ್​​ಮೇಕರ್​ ಸಂಸ್ಥಾಪಕ

ಸವದ್​​, ಜ್ಯೂಸ್​​ಮೇಕರ್​ ಸಂಸ್ಥಾಪಕ


ಹಣ್ಣಿನ ರಸ ತೆಗೆದು ಮಾರುವ ಉದ್ಯಮದ ಪಯಣ:

ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಪ್ರತ್ಯೇಕವಾಗಿ ತಾಜಾ ಹಣ್ಣಿನ ಜ್ಯೂಸ್ ಒದಗಿಸುವ ಬಿಸಿನೆಸ್ ಟು ಕಸ್ಟಮರ್ ಜ್ಯೂಸ್ ಮೇಕರ್ ಉದ್ಯಮವನ್ನು ಸವದ್ ಆರಂಭಿಸಿದ್ರು.. ಸವದ್​​ ಬಾಲ್ಯದ ಗೆಳೆಯರಾದ ನಿಯಾಸಿಮ್ ಹಾಗೂ ಮೌಸಿನ್ ಸವದ್​​ ಬಿಸಿನೆಸ್ ಯೋಜನೆಯನ್ನು ಅರಿತು ಬಿಸಿನೆಸ್​​ಗೆ ಬೇಕಿದ್ದ ಮೂಲ ಹಣ ಹೂಡಿಕೆ ಮಾಡಿದರು.. ಕೇವಲ ಬಾಯಿ ಮಾತಿನ ಪ್ರಚಾರದಿಂದಲೇ ಪ್ರಾರಂಭಿಕ ಹಂತದಲ್ಲೇ ಸವದ್​​ರ ಈ ಉದ್ಯಮ ಸುಮಾರು 250 ಗ್ರಾಹಕರನ್ನು ಆಕರ್ಷಿಸಿತು..

ಚಂದಾದಾರಿಕೆಯ ಮೂಲಕ ಮಲ್ಟಿ ನ್ಯಾಷನಲ್ ಕಂಪೆನಿಗಳ ಬೃಹತ್ ಅಪಾರ್ಟ್​ಗಳಿಗೆ ಹಾಗೂ ಮಲ್ಟಿ ಜಿಮ್​​ಗಳಿಗೆ ಜ್ಯೂಸ್​​ಗಳ​​ನ್ನು ತಲುಪಿಸುವ ಮೂಲಕ ತಮ್ಮ ಉದ್ಯಮವನ್ನು ಸವದ್ ಆರಂಭಿಸಿದ್ರು.. 7 ಜನರಿಂದ ಆರಂಭವಾದ ಸವದ್​​ ಉದ್ಯಮ ಈಗ ಜ್ಯೂಸ್ ಮೇಕರ್ ಹಾಗೂ ಡೆಲಿವರಿ ನೀಡುವ ಹುಡುಗರೂ ಸೇರಿ 19ರ ಸಂಖ್ಯೆ ತಲುಪಿದೆ.. ಸವದ್ ಹೇಳುವಂತೆ ಅವರ ಆದಾಯದ ಪ್ರಮಾಣ ತಿಂಗಳಿನಿಂದ ತಿಂಗಳಿಗೆ ಸುಮಾರು 125 ಪ್ರತಿಶತ ಏರಿಕೆ ಕಾಣಲಾರಂಭಿಸಿದೆ..

ನಿಯಾಸಿನ್​​, ಸಹಸಂಸ್ಥಾಪಕ

ನಿಯಾಸಿನ್​​, ಸಹಸಂಸ್ಥಾಪಕ


ಕಾರ್ಪರೇಟ್ ಕಂಪೆನಿಗಳ ಆರ್ಡರ್ ಪಡೆದುಕೊಳ್ಳಲು ಪ್ರಾರಂಭಿಸಿದ ಮೇಲೆ ಸವದ್​​ರ ಬಿಸಿನೆಸ್ ವ್ಯಾಪ್ತಿ ವಿಸ್ತಾರಗೊಳ್ಳತೊಡಗಿದೆ.. ಈಗಾಗಲೆ ಇದು 103 ಸ್ಟುಡಿಯೋಸ್, ಟೂಕಿಟಾಕಿ, ಪೋಲ್ಸೇ, ಮುಂತಾದ ಸಂಸ್ಥೆಗಳಿಗೆ ಜ್ಯೂಸ್​​ಗಳನ್ನು ವಿತರಿಸತೊಡಗಿದ್ದು, ಜೊತೆಗೆ ಸ್ವಿಗ್ಗಿ, ಟಿನ್ನಿಓವಲ್, ಟೇಸ್ಟಿಖಾನಾ, ಫುಡ್​​ಫಂಡಾಗ​​ಳ ಪಾರ್ಟನರ್ ಕೂಡಾ ಆಗಿದೆ..

ಈ ಮಧ್ಯೆ ತಾಜಾ ಹಣ್ಣಿನ ಜ್ಯೂಸ್​​ಗಳ ಜೊತೆ ಸಾವಯವ ಕೃಷಿಯಲ್ಲಿ ಬೆಳೆದ ಗ್ರಾಮೀಣ ಭಾಗದ ತಾಜಾ ತರಕಾರಿ ಹಾಗೂ ನಾಟಿ ಕೃಷಿಯ ಹಣ್ಣುಗಳ ಜ್ಯೂಸ್ ಮೇಕಿಂಗ್ ಮಾಡುವ ಮೂಲಕ ಸವದ್ ತಮ್ಮ ಬಿಸಿನೆಸ್ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳತೊಡಗಿದ್ದಾರೆ..

ಮೌಸಿನ್​​, ಸಹಸಂಸ್ಥಾಪಕ

ಮೌಸಿನ್​​, ಸಹಸಂಸ್ಥಾಪಕ


ಈಗೀಗ ಸವದ್​​ರ ಈ ಫ್ರೆಶ್ ಜ್ಯೂಸ್ ಮೇಕರ್ ಬಿಸಿನೆಸ್ ವೆಬ್​ಸೈಟ್​​​ , ಆನ್​ಲೈನ್​​ ಹಾಗೂ ಆಂಡ್ರಾಯ್ಡ್ ಹಾಗೂ ಐಓಎಸ್ ಮೊಬೈಲ್ ಅಪ್ಲಿಕೇಶನ್​​ಗಳ ಮೂಲಕವೂ ಭರ್ಜರಿ ವ್ಯಾಪಾರ ಕಾಣತೊಡಗಿದೆ.. ಸವದ್ ತಮ್ಮ ಸಂಸ್ಥೆಯ ಬ್ರಾಂಚ್ ಅನ್ನು ಮುಂದಿನ ವರ್ಷ ಚೆನ್ನೈನಲ್ಲೂ ಆರಂಭಿಸುವ ಯೋಜನೆ ಹೊಂದಿದ್ದಾರೆ..

ಉದ್ದಿಮೆದಾರನ ಸವಾಲುಗಳನ್ನು ವಿವರಿಸುತ್ತಾ ಸವದ್, ತಮ್ಮ ಈ ಪಯಣದಲ್ಲಿ ಹಲವು ಏರಿಳಿತ ಕಂಡಿದ್ದನ್ನು ಹೇಳಿಕೊಂಡೊದ್ದಾರೆ.. ಆದರೆ ಹಿನ್ನಡೆಯ ಸಂದರ್ಭದಲ್ಲೂ ತಮ್ಮ ಗಮನವನ್ನು ಬಿಸಿನೆಸ್​​ನ ಸರ್ವೈವಲ್ ಕಡೆಗೆ ಕೇಂದ್ರೀಕರಿಸಿದ್ದರಿಂದ ಜೊತೆಗೆ ಟೀಮ್ ಎಫರ್ಟ್​ನಿಂದ ಯಶ ಲಭಿಸಿದೆ ಅನ್ನೋದು ಸವದ್ ಹಾಗೂ ಇನ್ನೋರ್ವ ಕೋ ಓನರ್ ಮೌಸಿನ್​​​ ಅಂಬೋಣ..

ಬಿಸಿನೆಸ್​​​ ವೃದ್ಧಿಯ ಸಂಭವನೀಯತೆ:

50 ಬಿಲಿಯನ್ ಆಹಾರದ ಮಾರುಕಟ್ಟೆಯನ್ನು ಕೇಂದ್ರವಾಗಿರಿಸಿಕೊಂಡರೆ ಅದಕ್ಕೆ ಪೂರಕವಾಗಿ ಅದರ ಅರ್ಧ ಪ್ರಮಾಣದಲ್ಲಿ ಜ್ಯೂಸ್ ಮಾರಾಟ ಸಾಧ್ಯವಿದೆ..

ಸಿಲಿಕಾನ್ ವ್ಯಾಲಿಯ ಬಿಸಿನೆಸ್ ಇನ್​ಸೈಡರ್​​ ಸಂಸ್ಥೆಯ ಪ್ರಕಾರ ಜ್ಯೂಸ್ ಮೇಕರ್ ಉದ್ಯಮ ಕ್ರಮೇಣ ಉತ್ತಮ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ.. 2013ರ ಅಕ್ಟೋಬರ್​​ನಲ್ಲಿ 4 ಮಿಲಿಯನ್ ಯುಎಸ್ ಡಾಲರ್ ಆದಾಯ ಗಳಿಸಿದ್ದ ಈ ಬಿಸಿನೆಸ್ ಏಪ್ರಿಲ್ 2014ರಲ್ಲಿ 15.8 ಮಿಲಿಯನ್ ಅಮೇರಿಕನ್ ಡಾಲರ್ ತಲುಪಿತ್ತು.. ವರದಿಗಳ ಪ್ರಕಾರ ಜ್ಯೂಸ್ ಮೇಕರ್ ವೆಂಚರ್​​ಗಳು ಜನವರಿ 2015ರಲ್ಲಿ ಸುಮಾರು 100 ಮಿಲಿಯನ್ ವಹಿವಾಟು ಸಾಧಿಸಿದೆ..

ಜ್ಯೂಸ್ ಮೇಕರ್ ಬಿಸಿನೆಸ್ ಹೂಡಿಕೆದಾರರ ಆಸಕ್ತಿ ಸೆಳೆಯುತ್ತಿದೆ.. ಅದರಲ್ಲೂ ಇತ್ತೀಚೆಗೆ ಆರಂಭವಾಗುತ್ತಿರುವ ಜ್ಯೂಸ್ ಮೇಕಿಂಗ್ ಉದ್ಯಮಗಳೂ ವ್ಯಾಪಕ ಆದಾಯಗಳಿಸುವ ಸಾಧ್ಯತೆಯಂತೂ ಕಾಣಿಸುತ್ತಿದೆ..