ಶವ ಸಂಸ್ಕಾರಕ್ಕೂ ಆನ್​ಲೈನ್ ಬುಕ್ಕಿಂಗ್

ಟೀಮ್​ ವೈ.ಎಸ್​. ಕನ್ನಡ

1

ಸಿಲಿಕಾನ್ ಸಿಟಿ ದಿನದಿಂದ ದಿನಕ್ಕೆ ಹೈಟೆಕ್ ಸಿಟಿಯಾಗುತ್ತಿದೆ. ಬಿಬಿಎಂಯಂತೂ ಎಲ್ಲಾ ರೀತಿಯಿಂದಲೂ ಜನರಿಗೆ ಹತ್ತಿರವಾಗುತ್ತಿದೆ. ಸ್ಮಾರ್ಟ್ ಸಿಟಿಯಾಗಲು ಏನ್ ಬೇಕೋ ಅದೆಲ್ಲವನ್ನು ಅಳವಡಿಸಿಕೊಳ್ಳುತ್ತಿದೆ. ಅದ್ರಲೂ ನಗರದ ವ್ಯಾಪ್ತಿಯಲ್ಲಿ ಶವಸಂಸ್ಕಾರಕ್ಕೆ ಆನ್​ಲೈನ್ ಮೂಲಕ ವ್ಯವಸ್ಥೆ ಮಾಡಲು ಬಿಬಿಎಂಪಿ ಮುಂದಾಗಿದೆ.

ದಿನದಿಂದ ದಿನಕ್ಕೆ ಬೆಂಗಳೂರಿನ ಜನಸಂಖ್ಯೆ ಜಾಸ್ತಿಯಾಗುತ್ತಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಶವಸಂಸ್ಕಾರಕ್ಕೂ ಕೆಲವೊಮ್ಮೆ ಕ್ಯೂ ನಿಲ್ಬೇಕಾಗುತ್ತೆ. ಮೊದಲೇ ಕುಟುಂಬ ಸದಸ್ಯರ ಕಳಕೊಂಡು ದುಃಖವಿರುತ್ತದೆ. ಇಂತಹ ಸಮಯದಲ್ಲಿ ಅಂತ್ಯಕ್ರಿಯೆಗೆ ಸರತಿ ಸಾಲು. ನಿಜಕ್ಕೂ ಬೇಸರದ ಸಂಗತಿ. ಇದಕ್ಕೆಲ್ಲ ಫುಲ್​ಸ್ಟಾಪ್ ಹೇಳಲು ಬಿಬಿಎಂಪಿ ಮುಂದಾಗಿದೆ. ಸ್ಮಶಾನ ಕೂಡ ಸ್ಮಾರ್ಟ್ ಆಗ್ತಿದೆ. ಇನ್ನುಮುಂದೆ ಆನ್​ಲೈನ್ ಬುಕ್ಕಿಂಗ್ ಮೂಲಕ ಶವಸಂಸ್ಕಾರ ಮಾಡಬಹುದು.

" ಶವ ಸಂಸ್ಕಾರಕ್ಕೂ ಆ್ಯಪ್ ಬಿಡುಗಡೆ ಮಾಡಲು ಬಿಬಿಎಂಪಿ ಮುಂದಾಗಿದೆ. ಸ್ಮಾರ್ಟ್ ಫೋನ್ ಒಂದಿದ್ದರೆ ಸಾಕೂ ಎಲ್ಲಿಂದಾದರು ಕುಳಿತು ನೀವು ಶವಸಂಸ್ಕಾರಕ್ಕೆ ಆನ್​ಲೈನ್ ಬುಕ್ ಮಾಡಬಹುದು"
 ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತರು

ಹಲವು ಜನರಿಗೆ ಶವಸಂಸ್ಕಾರಕ್ಕೂ ಆ್ಯಪ್ ಬಿಡುಗಡೆ ಮಾಡ್ತಾರೆ. ಆದ್ರೆ ಅದು ಹೇಗೆ ಕೆಲಸ ಮಾಡುತ್ತದೆಯೆಂಬ ಗೊಂದಲವಿರುತ್ತದೆ. ಹಾಗಿದ್ರೆ ಈ ಆ್ಯಪ್ ಹೇಗಿರುತ್ತೆ. ಅದು ಕೆಲಸ ಮಾಡುವ ರೀತಿ ಹೇಗಿರುತ್ತದೆಂಬ, ಇದರಲ್ಲಿ ಜನರಿಗೆ ಸಿಗುವ ಆಯ್ಕೆಗಳೇನು..? ಇದು ಜನರಿಗೆ ಹೇಗೆ ಉಪಯೋಗಕಾರಿಯಾಗಲಿದೆಯೆಂಬ ವಿವರ ಇಲ್ಲಿದೆ ನೋಡಿ.

ಮನೆಯಿಂದಲೇ ಶವಸಂಸ್ಕಾರದ ಬುಕ್ಕಿಂಗ್ ವ್ಯವಸ್ಥೆ ಮಾಡೋ ವ್ಯವಸ್ಥೆಯನ್ನ ಬಿಬಿಎಂಪಿ ನೀಡಲಿದೆ. ಬುಕ್ಕಿಂಗ್ ವೇಳೆ ಸತ್ತ ವ್ಯಕ್ತಿಯ ಹೆಸರು, ವಿಳಾಸ, ನಿಧನಹೊಂದಿದ ಸಮಯ ಮತ್ತು ಸಾವಿನ ಕಾರಣ ನೀಡಬೇಕಾಗುತ್ತೆ. ಇನ್ನೂ ಈ ಆ್ಯಪ್​ನಲ್ಲಿ ಬೆಂಗಳೂರಿನಲ್ಲಿರೋ 400 ಸ್ಮಶಾನ ಹಾಗೂ 11 ವಿದ್ಯುತ್ ಚಿತ್ತಾಗಾರದ ಮಾಹಿತಿ ಸಿಗಲಿದೆ. ಈ ಆ್ಯಪ್ ಬಳಸಿ ಬುಕಿಂಗ್ ಮಾಡಿದ್ರೆ ಶವ ಸ್ಮಶಾನ ಸೇರಿಸೊ ಮುನ್ನ ಗುಂಡಿ ಅಗೆತದ ಸ್ಥಳ, ಅಳತೆ ಪ್ರತಿಯೊಂದು ಸಿದ್ಧವಾಗಿರುತ್ತದೆ. ಇತ್ತ ವಿದ್ಯುತ್ ಚಿತ್ತಾಗಾರದಲ್ಲೂ ವಿದ್ಯುತ್ ಸಂಪರ್ಕದ ಲಭ್ಯತೆಯನ್ನ ಮೊದಲೇ ಖಚಿತ ಪಡಿಸುತ್ತಾರೆ. ಈ ವಿನೂತನ ಆ್ಯಪ್​ ಸದ್ಯದಲ್ಲೇ ಬಿಡುಗಡೆ ಆಗಲಿದೆ.

ಇದನ್ನು ಓದಿ: ಸರಕು ಸಾಗಣಿಕೆಯ ಚಿಂತೆ ನಿಮಗೇಕೆ- ಪೋರ್ಟರ್​ ಆ್ಯಪ್​ನಲ್ಲಿ ಸಿಗುತ್ತೆ ಉತ್ತರ

ಹಲವು ರೀತಿ ಸ್ಮಾರ್ಟ್ ಆಗುತ್ತಿರುವ ಬಿಬಿಎಂ, ಸ್ಮಾರ್ಟ್ ಜನರೊಂದಿಗೆ ಸ್ಮಾರ್ಟ್ ಆಗಿರುವ ಆಯ್ಕೆಗಳನ್ನು ನೀಡುತ್ತಿದೆ. ಒಟ್ಟಿನಲ್ಲಿ ಶವಸಂಸ್ಕಾರ ಕ್ಯೂ ಸಿಸ್ಟಂನಿಂದ ಆನ್​ಲೈನ್ ಸಿಸ್ಟಂಗೆ ರೆಡಿಯಾಗ್ತಿದೆ. ಆದ್ರೆ , ಸತ್ತವರ ಮನೆಯವರು ಈ ಆ್ಯಪ್​ನ್ನು ಎಷ್ಟರಮಟ್ಟಿಗೆ ಬಳಕೆ ಮಾಡಿಕೊಳ್ತಾರೆ..? ದುಃಖದಲ್ಲಿರುವರಿಗೆ ಒಂದಿಷ್ಟಾದ್ರು ಕಷ್ಟವನ್ನು ಕಮ್ಮಿ ಮಾಡುವಲ್ಲಿ ಈ ಆ್ಯಪ್ ಯಶಸ್ವಿಯಾಗಲಿದೆ ಎಂಬುವುದು ಬಿಬಿಎಂಪಿ ಲೆಕ್ಕಚಾರವಾಗಿದೆ.

ಇದನ್ನು ಓದಿ:

1. ಆನ್​ಲೈನ್​ ಉದ್ಯಮದಲ್ಲಿ ಲಾಭಕ್ಕಾಗಿ ಪೈಪೋಟಿ- ಗ್ರಾಹಕರಿಗೆ "ಹಬ್ಬದೂಟ"ದ ಸಂಭ್ರಮ..

2. 

2. ಬೈಕ್ ಏರಿ ಮಹಿಳಾಮಣಿಗಳ ಹಿಮಾಲಯ ಸವಾರಿ!

3. ಎಲ್ಲರಿಗೂ ಮಾದರಿ, ಭಾರತದಲ್ಲಿರುವ ಮೆಕ್ಸಿಕೋ ರಾಯಭಾರಿ!