ಭಾರತೀಯ ರೈಲ್ವೇಗೂ ಬಂತೂ ಬದಲಾವಣೆಯ ಕಾಲ..!

ಟೀಮ್​ ವೈ.ಎಸ್. ಕನ್ನಡ

0

ಭಾರತೀಯ ರೈಲ್ವೇ ಬದಲಾಗುವುದೇ ಇಲ್ಲ ಅಂತ ಹಲವರು ಅಂದುಕೊಂಡಿದ್ದರು. ರೈಲ್ವೇ ಆರಂಭವಾದ ದಿನದಿಂದ ಇಂದಿನ ತನಕ ಭಾರತೀಯ ರೈಲ್ವೇಯಲ್ಲಿ ಬದಲಾವಣೆ ಅನ್ನೋದು ಬೆರಳೆಣೆಕೆಯಷ್ಟು ಮಾತ್ರ ಆಗಿದೆ. ಬಜೆಟ್ ಘೋಷಣೆಯಾದ ಮೇಲೆ ದರ ಏರಿಕೆ, ಇಳಿಕೆ, ಹೆಚ್ಚುವರಿ ರೈಲುಗಳು ಮತ್ತು ಹೊಸ ರೈಲಿನ ಬಗ್ಗೆ ಮಾತ್ರ ಮಾಹಿತಿ ಇರುತ್ತಿತ್ತು. ಆದ್ರೆ ಈಗ ರೈಲ್ವೇಯ ನೀತಿಗಳನ್ನೇ ಬದಲು ಮಾಡಲು ಸಿದ್ಧತೆಗಳು ನಡೆದಿವೆ. ಪ್ರಮುಖವಾಗಿ ಟಿಕೆಟ್ ವಿಭಾಗದಲ್ಲಿ ಕೆಲವು ಬದಲಾವಣೆಗಳು ನಡೆಯಲಿವೆ.

ರೈಲಿನಲ್ಲಿ ನೀವು ಪ್ರಯಾಣಿಸಿ ಅನುಭವ ಪಡೆದಿದ್ದರೆ ವೇಯ್ಟಿಂಗ್ ಲಿಸ್ಟ್ ಬಗ್ಗೆ ನಿಮಗೆ ಗೊತ್ತೇ ಇರುತ್ತದೆ. ಕೋಚ್​ಗಳು ಭರ್ತಿಯಾದ ಮೇಲೆ, ಕೊನೇ ಕ್ಷಣದಲ್ಲಿ ಕನ್ಫರ್ಮೇಷನ್ ಸಿಗುವಂತಹ ಸೌಲಭ್ಯ ಇದಾಗಿತ್ತು. ಇದು ಕೆಲವರಿಗೆ ಲಾಭ ತಂದುಕೊಟ್ಟಿದ್ದರೆ, ಹಲವು ಬಾರಿ ಟಿಕೆಟ್ ಕನ್ಫರ್ಮ್ ಆಗದೆ ಕಿರಿಯಾಗುತ್ತಿತ್ತು. ಆದ್ರೆ ಈ ವ್ಯವಸ್ಥೆ ಶೀಘ್ರದಲ್ಲೇ ಸಂಪೂರ್ಣವಾಗಿ ಬದಲಾಗಲಿದೆ. ಜುಲೈ 1 ರಿಂದ ವೇಯ್ಟಿಂಗ್ ಲಿಸ್ಟ್ ಕಾನ್ಸೆಪ್ಟ್ ಕ್ಯಾನ್ಸಲ್ ಆಗಲಿದೆ.

ಇದನ್ನು ಓದಿ: ಮಳೆ ಬಂದ್ರೂ ಮ್ಯಾಚ್​ ನಿಲ್ಲಲ್ಲ...ಟಿಕೆಟ್​ ಕೊಂಡವರಿಗೆ ಟೆನ್ಷನ್​ ಇಲ್ಲ..!

ನಿಮಗಿದು ಗೊತ್ತಿರಲಿ..

• ಜುಲೈ1ರಿಂದ ತತ್ಕಾಲ್ ಟಿಕೆಟ್​​ನ  ಕ್ಯಾನ್ಸಲೇಷನ್​ನಿಂದ ಶೇ. 50 ರಿಫಂಡ್ ಸಿಗಲಿದೆ.

• ತತ್ಕಾಲ್ ಟಿಕೆಟ್ ಬುಕ್ಕಿಂಗ್​ನ ಸಮಯದಲ್ಲೂ ಬದಲಾವಣೆ ಆಗಲಿದೆ. ಜುಲೈ 1ರಿಂದ ಎ.ಸಿ. ಕೋಚ್​ಗಳ ತತ್ಕಾಲ್ ಬುಕ್ಕಿಂಗ್ ಬೆಳಗ್ಗೆ 10 ರಿಂದ 11ರ ವರೆಗೆ ಲಭ್ಯವಾಗಲಿದೆ. ಸ್ಲೀಪರ್ ಕೋಚ್​ಗಳ ತತ್ಕಾಲ್ ಬುಕ್ಕಿಂಗ್ ಬೆಳಗ್ಗೆ 11ರಿಂದ ಮಧ್ಯಾಹ್ನ 12ರ ತನಕ ನಡೆಯುತ್ತದೆ.

• ಸುವಿಧ ರೈಲುಗಳ ವೇಯ್ಟಿಂಗ್ ಲಿಸ್ಟ್ ಜುಲೈ 1ರಿಂದ ರದ್ದುಗೊಳ್ಳಲಿದೆ. ಈ ರೈಲುಗಳಿಗೆ ಕನ್ಫರ್ಮ್ಡ್​ ಟಿಕೆಟ್ ಮತ್ತು ಆರ್​ಎಸಿ ಟಿಕೆಟ್​​ಗಳು ಮಾತ್ರ ನೀಡಲಾಗುತ್ತದೆ. ಸುವಿಧ ರೈಲುಗಳಲ್ಲಿ ವೇಯ್ಟಿಂಗ್ ಲಿಸ್ಟ್ ಅನ್ನೋದು ಜುಲೈ 1 ರಿಂದ ಲಭ್ಯವಿರುವುದಿಲ್ಲ.

• ಜುಲೈ1 ರಿಂದ ರಾಜಧಾನಿ ಮತ್ತು ಶತಾಬ್ಧಿ ರೈಲುಗಳ ಕೋಚ್​​ಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಗುತ್ತದೆ.

• ರಾಜಧಾನಿ ಶತಾಬ್ಧಿ ರೈಲುಗಳಲ್ಲಿ ಪೇಪರ್​ಲೆಸ್ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಜುಲೈ 1ರಿಂದ ಈ ರೈಲುಗಳಲ್ಲಿ ಮೊಬೈಲ್ ಟಿಕೆಟ್​​ಗಳಿಗೆ ಮಾನ್ಯತೆ ನೀಡಲಾಗುವುದು.

• ರೈಲ್ವೇಸ್ ವಿವಿಧ ಭಾಷೆಗಳಲ್ಲಿ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಆರಂಭಿಸಲಿದೆ.

• ಜುಲೈ 1ರಿಂದ ಪ್ರೀಮಿಯಂ ರೈಲು ಸೇವೆಗಳು ಕೊನೆಗೊಳ್ಳಲಿವೆ.

• ಸುವಿಧ ರೈಲುಗಳ ಟಿಕೆಟ್ ರದ್ಧುಗೊಳಿಸಿದರೆ ಪ್ರಯಾಣಿಕರಿಗೆ ಟಿಕೆಟ್ ಬೆಲೆಯ ಶೇ50ರಷ್ಟು ಪ್ರಯಾಣಿಕರಿಗೆ ವಾಪಾಸ್ ಸಿಗಲಿದೆ.

ಭಾರತೀಯ ರೈಲ್ವೇ ಇಷ್ಟು ಮಾತ್ರವಲ್ಲ ಇನಷ್ಟು ಕ್ರಾಂತಿಕಾರಿ ಹೆಜ್ಜೆಗಳನ್ನು ಶೀಘ್ರದಲ್ಲೇ ಇಡಲಿದೆ. ಏರ್​ಕಂಡೀಷನ್ ಸೇರಿದಂತೆ ಇತರೆ ಕೋಚ್​​ಗಳ ಟಿಕೆಟ್ ರದ್ಧು ಮಾಡಿದ್ರೆ ಪ್ರಯಾಣಿಕರಿಗೆ ಮೂಲ ಟಿಕೆಟ್ ದರದ ಶೇ 50ರಷ್ಟು ವಾಪಾಸ್ ಸಿಗಲಿದೆ.

ಒಟ್ಟಿನಲ್ಲಿ ರೈಲ್ವೇ ಇಲಾಖೆ ಅಪ್ಪ ಹಾಕಿದ ಆಲದ ಮರ ಅಂತ ಅಂದುಕೊಂಡಿದ್ದವರಿಗೆ ಈ ಬೆಳವಣಿಗೆಯಿಂದ ಖುಷಿ ಆಗಿದೆ. ಸರ್ಕಾರದ ಈ ನಿಯಮಗಳು ಟಿಕೆಟ್ ಲಾಬಿಯನ್ನು ತಡೆಗಟ್ಟುವಲ್ಲಿ ಸಾಕಷ್ಟು ಉತ್ತಮ ಕಾರ್ಯ ನಿರ್ವಹಿಸಲಿದೆ.

ಇದನ್ನು ಓದಿ:

1. ಬ್ರಿಟಿಷ್ ಕಾಲದ ತಂತ್ರಜ್ಞಾನಕ್ಕೆ ಗುಡ್‍ಬೈ - ಬರ್ತಿದೆ ಹಮಾಮಾನ ಮುನ್ಸೂಚನೆ ನೀಡುವ ಸೂಪರ್ ಕಂಪ್ಯೂಟರ್

2. ಕಲಾವಿದನೊಳಗೊಬ್ಬ ಕೃಷಿಕ - ತವರಿನ ರೈರಿಗಾಗಿ ನೀರಾವರಿ ವಿಧಾನ ಆಮದು ಮಾಡಿಕೊಂಡ ನವಾಜುದ್ದೀನ್ ಸಿದ್ದಿಕಿ

3. ರಾಜಧಾನಿಯಲ್ಲೇ ಕತ್ತಲು - ಬೆಂಗಳೂರಿನ 33,000 ಮನೆಗಳಿಗಿಲ್ಲ ವಿದ್ಯುತ್ ಸಂಪರ್ಕ