Whysoserious.co.inಇನ್‌ಗೆ ಭೇಟಿ ಕೊಡಿ, ಬೇಸರವನ್ನು ದೂರಮಾಡಿ..!

ಟೀಮ್​​ ವೈ.ಎಸ್​​.

0

ನೀವು ತುಂಬಾ ನಿರಾಶರಾಗಿದ್ದೀರಾ? ನಿಮ್ಮ ಜೀವನದಲ್ಲಿ ಏನೋ ಸರಿಯಿಲ್ಲ ಎಂದು ನಿಮಗನ್ನಿಸುತ್ತಿದೆಯೇ? ನಿಮ್ಮ ಮನೆಯ ಪ್ರೀತಿಯ ಬೆಕ್ಕೂ ಕೂಡ ನಿಮ್ಮಿಂದ ದೂರ ಹೋಗುತ್ತಿದೆಯೇ? ಹೀಗೆಲ್ಲಾ ನಿಮಗೆ ಅನ್ನಿಸ್ತಾ ಇದ್ರೆ ನೀವು ವೈಸೋಸೀರಿಯಸ್.ಕೋ.ಇನ್ ಗೆ ಒಂದುಸಲ ಭೇಟಿ ಕೊಡಿ. ಈ ವೆಬ್‌ಸೈಟ್‌ನಲ್ಲಿ ಇಂತಹ ವಿಚಾರಗಳ ಬಗ್ಗೆ ಗಂಭೀರವಾಗಿ ಏಕೆ ಇರಬಾರದು ಎಂಬುದನ್ನು ತಿಳಿಸಲಾಗುತ್ತೆ. ಇಲ್ಲಿ ಅವರು ಚಮತ್ಕಾರಿಕ ಮತ್ತು ಗಂಭೀರವಲ್ಲದ ವಿಚಾರಗಳನ್ನೇ ತೋರಿಸುತ್ತಾರೆ, ತಿಳಿಸುತ್ತಾರೆ. ಡರ್ತ್ ವೇಡರ್ ವ್ಯಾಲೆಟ್, ಬ್ಯಾಟ್‌ಮನ್ ಮನಿ ಕ್ಲಿಪ್, ಅಳತೆಯ ಗಾಜಿನಲ್ಲಿ ಆಲ್ಕೋಹಾಲ್ ನಂತಹ ಹಾಸ್ಯಮಯ ವಿಚಾರಗಳೇ, ಉತ್ಪನ್ನಗಳು ಇಲ್ಲಿ ಲಭ್ಯವಿದೆ. ವೆಬ್‌ಸೈಟ್‌ನಿಂದ ನಿಮ್ಮ ಜೀವನದಲ್ಲಿ ಎಲ್ಲವೂ ಸರಿಯಾಗುತ್ತದೆ ಅಂತ ನಾವು ಹೇಳ್ತಿಲ್ಲ. ಆದರೆ ಈ ವೆಬ್‌ಸೈಟ್‌ನಲ್ಲಿರುವ ಚಿತ್ರಗಳು ನಿಮ್ಮ ಮೂಡನ್ನು ಒಮ್ಮೆ ಸರಿಮಾಡಿಬಿಡುತ್ತವೆ.

2015ರ ಮಾರ್ಚ್‌ನಲ್ಲಿ ಖುಶ್ಬೂ ಬಿಶ್ಟ್ ಅವರು ಸ್ಥಾಪಿಸಿದ್ದೇ ವೈಸೋಸೀರಿಯಸ್ ಸಂಸ್ಥೆ. ಇಲ್ಲಿ ಅವರು ಹೇಳುತ್ತಿರುವ ವಿಚಾರಗಳ ಸಂಭಾವ್ಯತೆಗಳು ದೊಡ್ಡ ಮಟ್ಟದ್ದು. ಈ ವೆಬ್‌ಸೈಟ್ ಆರಂಭಿಸುವಾಗ ಅವರು ಕೇವಲ ಸಂತೋಷ ಪಡುವ ಮನಸ್ಥಿತಿಯಿರುವವರ ಕುರಿತಷ್ಟೇ ಆಲೋಚಿಸಿದ್ದರು. ಆದರೆ ಈಗ ಅವರ ವೆಬ್‌ಸೈಟ್‌ಗೆ ಚಿಕ್ಕ ಸಂತೋಷವನ್ನು ಬಯಸುವವರೂ ಸಹ ಭೇಟಿ ನೀಡಬಹುದು. ಇಲ್ಲಿನ ಎಲ್ಲಾ ಉತ್ಪನ್ನಗಳೂ ಸಹ ಸ್ವತಂತ್ರ ಉತ್ಪನ್ನ ವಿನ್ಯಾಸಕರಿಂದ ಮಾಡಲ್ಪಟ್ಟಿದ್ದಾಗಿದೆ. ಬ್ರಾಂಡೆಡ್‌ಗಿಂತ ಹೆಚ್ಚು ವಿನ್ಯಾಸದ ಮಾದರಿಯ ಉತ್ಪನ್ನಗಳೇ ಇಲ್ಲಿನ ಜೀವಾಳ. ಪ್ರಖ್ಯಾತ ಫ್ರೆಡ್ ಮತ್ತು ಸೆಬಾಸ್ಟಿಯನ್ ಉತ್ಪನ್ನಗಳೂ ಸಹ ಇಲ್ಲಿ ಲಭ್ಯವಿದೆ.

ಇಂತಹ ವಿಭಿನ್ನ, ಚಮತ್ಕಾರಿ ವಸ್ತುಗಳನ್ನು ಹೊಂದಿರುವುದು, ಉದ್ಯಮ ನಡೆಸುವುದು ಸ್ವಲ್ಪ ಕಷ್ಟವೇ ಆದರೂ ಈ ಉದ್ಯಮದಿಂದ ಖುಷ್ಬೂ ಅವರಿಗೆ ಸಾಕಷ್ಟು ಸಂತೋಷ ಸಿಗುತ್ತದೆ. “ನಾವು ಕೆಲವಷ್ಟು ಸಪ್ಲೈಯರ್‌ಗಳನ್ನು ಹೊಂದಿದ್ದರೂ ಅವರಿಂದ ಕೊಳ್ಳುವುದು ಬಹಳಷ್ಟು ಕಡಿಮೆ. ನಮಗೆ ಯಾವಾಗಲೂ ವಿಭಿನ್ನ ಮಾದರಿಯ ಉತ್ಪನ್ನಗಳ ಅವಶ್ಯಕತೆ ಇರುತ್ತದೆ. ನಮಗೆ ಅತ್ಯುತ್ತಮ ವ್ಯಕ್ತಿಗಳಿಂದ ಅತ್ಯುತ್ತಮ ಉತ್ಪನ್ನಗಳು ದೊರೆಯುತ್ತವೆ. ಉತ್ಪನ್ನದ ಕ್ವಾಲಿಟಿ ಅತೀ ಮುಖ್ಯ” ಎನ್ನುತ್ತಾರೆ ಖುಷ್ಬೂ.

ತಮ್ಮ ವೆಬ್‌ಸೈಟ್‌ನಲ್ಲಿಲ್ಲದ ಉತ್ಪನ್ನಗಳಿಗೂ ಸಹ ಖುಷ್ಬೂ ಬೇಡಿಕೆ ಪಡೆಯುತ್ತಾರೆ. ಆದರೆ ಜನ ಆ ನಿಗದಿತ ಉತ್ಪನ್ನವನ್ನು ಎಲ್ಲಿಯೋ ನೋಡಿರುತ್ತಾರೆ. ಅದನ್ನು ವೈ ಸೋ ಸೀರಿಯಸ್‌ ಮೂಲಕವೇ ಪಡೆಯಬೇಕೆಂಬುದು ಅವರ ಇಚ್ಛೆಯಾಗಿರುತ್ತದೆ.

ಟೆಟ್ರಿಸ್ ಲ್ಯಾಂಪ್, ನೇತುಹಾಕಬಹುದಾದ ಕಲಾ ವಸ್ತುಗಳು, ಬಿಗ್ ಬ್ಯಾಂಗ್ ಥಿಯರಿ ಮರ್ಚಂಡೈಸ್ ಮತ್ತು ಬ್ಯಾಟ್‌ಮ್ಯಾನ್​ನ ಸಣ್ಣ ಸಿಗ್ನಲ್ ಸೀಲ್ಸ್ ಸೇರಿದಂತೆ ಬ್ಯಾಟ್‌ಮ್ಯಾನ್‌ಗೆ ಸಂಬಂಧಿಸಿದ ವಸ್ತುಗಳಿಗೆ ವೈ ಸೋ ಸೀರಿಯಸ್ ವೆಬ್‌ಸೈಟ್‌ನಲ್ಲಿ ಭಾರೀ ಬೇಡಿಕೆ. ಈ ವೆಬ್‌ಸೈಟ್‌ಗೆ ಮಹಿಳಾ ಗ್ರಾಹಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರು ಅವರ ಪುರುಷನಿಗಾಗಿ ಇಲ್ಲಿ ಖರೀದಿಸುತ್ತಾರೆ. ಕೆಲವೇ ಉತ್ಪನ್ನ ವಿನ್ಯಾಸಗಾರರನ್ನಿಟ್ಟುಕೊಂಡು ಈ ಉದ್ಯಮ ಆರಂಭವಾಗಿದ್ದು, ಅವರುಗಳು ವೆಬ್‌ಸೈಟ್‌ಗಾಗಿಯೇ ವಿನೂತನ ಮಾದರಿಯ ವಿನ್ಯಾಸಗಳನ್ನು ರಚಿಸುತ್ತಿದ್ದರು. ಇದಿನ್ನೂ ಆರಂಭ ಅಷ್ಟೇ. ತಮ್ಮ ಗ್ರಾಹಕರ ಅಭಿಲಾಶೆಯಂತೆ ಉತ್ಪನ್ನಗಳನ್ನು ವಿನ್ಯಾಸ ಮಾಡುವುದು ವೆಬ್‌ಸೈಟ್‌ನ ಗುರಿ.

ವೈ ಸೋ ಸೀರಿಯಸ್ ವೆಬ್‌ಸೈಟ್ ಸೃಜನಶೀಲ, ಸಾಫ್ಟ್‌ ವೇರ್‌ಗಳನ್ನು ಸರಿಯಾಗಿ ಬಳಸಿಕೊಳ್ಳುವ ಜನರ ತಂಡವೇ ಇದೆ. ಆನ್‌ಲೈನ್ ಜಾಹೀರಾತು, ಬಾಯಿಂದ ಬಾಯಿಗೆ ಪ್ರಚಾರ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ಮೂಲಕ ತನ್ನ ವೆಬ್‌ಸೈಟ್‌ಗೆ ಪ್ರಚಾರ ದೊರಕಿಸಿಕೊಡುತ್ತಿದ್ದಾರೆ ಖುಷ್ಬೂ. “ಬೇರೆಯವರಿಗೆ ಹೋಲಿಸಿದರೆ ನಾವೇನೂ ಹೆಚ್ಚಿನ ಜಾಹೀರಾತು ಮಾಡುವುದಿಲ್ಲ. ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿದ್ದರೆ ಗ್ರಾಹಕರು ತಾವಾಗಿಯೇ ಬರುತ್ತಾರೆ ಎಂಬುದು ನಮ್ಮ ನಂಬಿಕೆ” ಎನ್ನುತ್ತಾರೆ ಖುಷ್ಬೂ.

ತಮ್ಮ ಮುಂದಿನ ಗುರಿಯ ಬಗ್ಗೆ ಮಾತಾನಾಡುತ್ತಾ ಖುಷ್ಬೂ, ತಮ್ಮ ವೆಬ್‌ಸೈಟ್‌ಗೆ ಮತ್ತಷ್ಟು ಕ್ರೇಜಿಯೆಸ್ಟ್ ವಸ್ತುಗಳನ್ನು ಸೇರಿಸಬೇಕೆನ್ನುತ್ತಾರೆ. ಪ್ರತಿವಾರವೂ ಹೊಸ ಹೊಸ ವಿನ್ಯಾಸಗಳನ್ನು ರಚಿಸಲು ಪ್ರಯತ್ನಿಸಲಾಗುತ್ತಿದೆ. ವೆಬ್‌ಸೈಟ್ ಅನ್ನು ಇನ್ನಷ್ಟು ಕ್ರಿಯಾಶೀಲವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಕೇವಲ ಪ್ರದರ್ಶನಗಳಿಗೆ ಮೀಸಲಾಗದೇ ತಮ್ಮ ಉತ್ಪನ್ನ ವಿನ್ಯಾಸಕರ ಜೊತೆ ಸೇರಿ ಕೆಲಸ ಮಾಡುತ್ತಿರುವ ವೈ ಸೋ ಸೀರಿಯಸ್ ಸಂಸ್ಥೆಗೆ ತಮ್ಮ ಉತ್ಪನ್ನಗಳಿಗೆ ಮಿತಿ ಹಾಕಿಕೊಳ್ಳಲು ಇಚ್ಛಿಸುವುದಿಲ್ಲ. ಇದಲ್ಲದೇ ಗುಣಮಟ್ಟದ ಹೆಚ್ಚಳ ಮತ್ತು ತಮ್ಮ ಆಲೋಚನೆಗಳನ್ನು ವಿಭಿನ್ನವಾಗಿ ನಿರೂಪಿಸುವಲ್ಲಿ ಹೆಚ್ಚಿನ ಗಮನ ಹರಿಸುತ್ತಿದ್ದಾರೆ ಖುಷ್ಬೂ.

ಈ ಉದ್ಯಮ ಎದುರಿಸುತ್ತಿರುವ ಅತೀ ದೊಡ್ಡ ಸಮಸ್ಯೆಯೆಂದರೆ ಕೊರಿಯರ್ ಸರ್ವಿಸ್. ಇದು ತುಂಬಾ ಸರಳವಾದ ಸಮಸ್ಯೆ ಎಂದು ಅಂದುಕೊಳ್ಳಬಹುದಾದರೂ ಕೊರಿಯರ್‌ ಸಂಸ್ಥೆಗಳು ಕೆಲಸ ಮಾಡುವ ರೀತಿಯನ್ನು ಖುಷ್ಬೂ ಒಪ್ಪಿಕೊಳ್ಳುವುದಿಲ್ಲ. ಇದೇ ಉದ್ಯಮ ಇನ್ನೂ ನಿಧಾನಗತಿಯಲ್ಲಿ ಸಾಗುತ್ತಿರಲು ಪ್ರಮುಖ ಕಾರಣ ಎನ್ನುತ್ತಾರೆ ಖುಷ್ಬೂ. ಈ ಉದ್ಯಮಕ್ಕೆ ಖುಷ್ಬೂ ತಮ್ಮ ಉಳಿತಾಯದ ಹಣವನ್ನೆಲ್ಲಾ ಸುರಿದಿದ್ದಾರೆ. ಉದ್ಯಮವನ್ನು ಉತ್ತಮವಾಗಿ ಹಾಗೂ ದೊಡ್ಡದಾಗಿ ಬೆಳೆಸಲು ಹೂಡಿಕೆಯ ಅಗತ್ಯ ಬಹಳ ಇದೆ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ.

Related Stories