ಟೀಮ್ ವೈ.ಎಸ್. ಕನ್ನಡ
ಶುಚಿತ್ವ, ಸ್ವಚ್ಛತೆ, ಇದು ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಕೇಳಿ ಬರುತ್ತಿರುವ ಮಾತು. ನಮ್ಮ ಪರಿಸರ ಶುಚಿಯಾಗಿಡೋಣ. ಇದಕ್ಕೆ ಕೇಂದ್ರ ಸರ್ಕಾರ ಕೈ ಜೋಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ, ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಜನರನ್ನು ಈ ಸ್ವಚ್ಛತಾ ಅಭಿಯಾನದಲ್ಲಿ ಬೆಸೆದಿದೆ. ಜನ ಸಾಮಾನ್ಯರ ಪಾಲ್ಗೊಳ್ಳುವಿಕೆಯನ್ನು ಸರ್ಕಾರ ಹುರಿದುಂಬಿಸುತ್ತಿದೆ. ವಿದೇಶಗಳ ಉದ್ಯಮಿಗಳು ಸರ್ಕಾರದ ಈ ಮಹಾ ಅಭಿಯಾನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇದರ ಭಾಗವಾಗಿದ್ದಾರೆ. ಇವರಲ್ಲಿ ಖ್ಯಾತ ಉದ್ಯಮಿ ಮಾರ್ಕ್ ಝುಕರ್ ಬರ್ಗ್ ಕೂಡ ಒಬ್ಬರು.
ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೆ ಕರೆ ನೀಡಿದ ಬಳಿಕ ಸಮಾಜ ಅದಕ್ಕೆ ಸೂಕ್ತವಾಗಿ ಸ್ಪಂದಿಸಿತು. ಜನ ಸಾಮಾನ್ಯರು ಇದರಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಹಲವು ಸಂಘ ಸಂಸ್ಥೆಗಳು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. ಇದರಲ್ಲಿ ತಂತ್ರಜ್ಞಾನ ಕೂಡ ಹಿಂದುಳಿದಿರಲಿಲ್ಲ. ದೆಹಲಿ ಮೂಲದ ವಿನೂತನ ಯೋಜನೆ ಸೋಶಿಯಲ್ ಕಾಪ್ಸ್, ಆಂಡ್ರಾಯಿಡ್ ತಂತ್ರಜ್ಞಾನ ಆಧಾರಿತ ಐ ಕ್ಲೀನ್ ಇಂಡಿಯಾ ಸ್ವಚ್ಛ ಭಾರತ್ ಮಿಶನ್ ಕಲ್ಪನೆ ಬಿಡುಗಡೆ ಮಾಡಿತ್ತು. ಇದು ನೈರ್ಮಲ್ಯದ ಕೊರತೆ ಇರುವ ಪ್ರದೇಶಗಳನ್ನು ಕ್ಲೌಡ್ ಸೋರ್ಸಿಂಗ್ ವ್ಯವಸ್ಥೆಯಡಿ ಇತರರ ಜೊತೆ ಶೇರ್ ಮಾಡಲು ಅವಕಾಶ ಕಲ್ಪಿಸುತ್ತದೆ. ಈ ಮೂಲಕ ಸ್ನೇಹಿತರ ಜೊತೆಗೂಡಿ ಆ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಇದು ಪ್ರೇರೇಪಣೆ ನೀಡುತ್ತದೆ.
ದೂರು ದುಮ್ಮಾನ ಬಿಟ್ಟು ಬಿಡಿ. ಸ್ವಚ್ಛತಾ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳಿ.
ಹೀಗಂತ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆ ದೇಶಾದ್ಯಂತ ಸಂಚಲನ ಮೂಡಿಸಿದೆ. ಹೀಗಿರುವಾಗ ಸಮಾಜ ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕಾಗಿದೆ. ಇದು ಅಗತ್ಯ ಕೂಡ ಆಗಿದೆ. ಜನಾಭಿಪ್ರಾಯ ಕೂಡ ಇದಕ್ಕೆ ಪೂರಕವಾಗಿದೆ. ಈ ಬಗ್ಗೆ ಮಾತನಾಡಿದ ವಸುಂಧರಾ ಗಾರ್ಗ್ ನಿಜವಾಗಿಯೂ ಇದೊಂದು ಅದ್ಭುತ ಪರಿಕಲ್ಪನೆ ಎಂದು ಬಣ್ಣಿಸಿದ್ದಾರೆ.
ನಾನು ವಾಸಿಸುವ ಪ್ರದೇಶದಲ್ಲಿ ಶುಚಿತ್ವ ಅಭಿಯಾನಕ್ಕೆ ಮುಂದಾಗಿದ್ದೆ. ಆದರೆ ನನ್ನ ಸ್ನೇಹಿತರು ಇತರ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಎಲ್ಲರನ್ನೂ ಒಂದೇ ವೇದಿಕೆಯಡಿ ಕರೆ ತರಲು ಇದರಿಂದ ಸಾಧ್ಯವಾಯಿತು ಎನ್ನುತ್ತಾರೆ ಗಾರ್ಗ್.
- ನಿಮ್ಮ ಸುತ್ತಮುತ್ತ ಕಸ ಕಡ್ಡಿ ತುಂಬಿದ ಸ್ಥಳಗಳ ಫೋಟೋ ಪೋಸ್ಟ್ ಮಾಡಬಹುದು.
- ಮ್ಯಾಪ್ನಲ್ಲಿ ಶುಚಿತ್ವ ಕೊರತೆ ಇರುವ ಜಾಗಗಳನ್ನು ಗುರುತಿಸಬಹುದು
- ಶುಚಿತ್ವ ಅಭಿಯಾನಕ್ಕೆ ಚಾಲನೆ ನೀಡಬಹುದು.
ಇದಲ್ಲದೆ ಇದು ಫೇಸ್ ಬುಕ್ ಮತ್ತು ಟಿಟ್ವರ್ ಸಂಪರ್ಕದ ಜೊತೆ ತಕ್ಷಣ ಲಿಂಕ್ ಮೂಡಿಸುವ ಮೂಲಕ ಸಾಹಸ ಕಥೆ , ಶುಚಿತ್ವ ಅಭಿಯಾನದ ಕಥೆಯನ್ನು ವಿಸ್ತಾರಗೊಳಿಸಬಹುದು.
ಶುಚಿತ್ವ ಅಭಿಯಾನದಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಖಾತರಿಪಡಿಸಬೇಕಾಗಿದೆ. ಅದಕ್ಕೆ ತಂತ್ರಜ್ಞಾನವನ್ನು ಬೆರೆಸಬೇಕಾಗಿದೆ. ಈ ನಿಟ್ಟಿನಲ್ಲಿ ಐ ಕ್ಲೀನ್ ಇಂಡಿಯಾ ಕಾರ್ಯೋನ್ಮುಖವಾಗಿದೆ. ಜನರ ಮನೋಸ್ಥಿತಿಯಲ್ಲಿ ಬದಲಾವಣೆಗೆ ಯತ್ನಿಸಲಾಗುತ್ತಿದೆ.
ಒಂದು ವರ್ಷದಲ್ಲಿ ನೂರು ಗಂಟೆ ಸ್ವಚ್ಛತೆಗೆ ಮೀಸಲು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಅನುಗುಣವಾಗಿ ಈ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗಿದೆ. ಸ್ವಚ್ಛತಾ ಅಭಿಯಾನದಲ್ಲಿ ಎಷ್ಟು ಗಂಟೆ ತೊಡಗಿಸಿಕೊಂಡಿದ್ದೀರಿ ಎಂಬ ಲೆಕ್ಕಾಚಾರ ಕೂಡ ಪಡೆಯಲು ಸಾಧ್ಯವಿದೆ. ಸ್ವಚ್ಛತೆಯೊಂದಿಗೆ ತಂತ್ರಜ್ಞಾನ ಬೆಸೆಯುವುದರ ಮೂಲಕ ಬೃಹತ್ ಜನ ಜಾಗೃತಿಗೆ ಮುನ್ನುಡಿ ಬರೆಯಲಾಗಿದೆ.
Related Stories
March 14, 2017
March 14, 2017
Stories by YourStory Kannada