ಎಸ್ಕೇಪ್ ಹಂಟ್- ಡಿಟೆಕ್ಟಿವ್ ರಹಸ್ಯ ಭೇದಿಸುತ್ತಾ...

ವಿಸ್ಮಯ

0

ಪತ್ತೇದಾರಿ ಸಿನಿಮಾಗಳು ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಪತ್ತೇದಾರಿ ಸಿನಿಮಾಗಳನ್ನು ಇಷ್ಟಪಡುವ ಸಾವಿರಾರು ಜನ ನಮ್ಮ ಮಧ್ಯೆ ಇದ್ದಾರೆ.. ಒಬ್ಬ ಡಿಟೆಕ್ಟಿವ್ ರಹಸ್ಯಗಳನ್ನು ಭೇದಿಸುತ್ತಾ ಹೋಗುವುದೇ ಈ ಪತ್ತೇದಾರಿ ಸಿನಿಮಾಗಳ ಕತೆ.. ಹೆಚ್ಚಾಗಿ ಹಾಲಿವುಡ್ ಸಿನಿಮಾಗಳಲ್ಲಿ ಹೆಚ್ಚು.. ಇದನ್ನೇ ಅನುಸರಿಸಿ ಬಾಲಿವುಡ್, ಸ್ಯಾಂಡಲ್‍ವುಡ್‍ನಲ್ಲಿಯೂ ಬಂದಿವೆ.. ಸ್ಯಾಂಡಲ್‍ವುಡ್‍ನಲ್ಲಿ ಡಾ.ರಾಜ್‍ಕುಮಾರ್ ಕೂಡ ಪತ್ತೇದಾರಿ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಹೆಚ್ಚು ಕುತೂಹಲ ಮೂಡಿಸುವ, ಮುಂದೇನಾಯ್ತು ಎಂದು ಆತಂಕ ಸೃಷ್ಟಿಸುವ ಸ್ಟೋರಿಗಳು ಇವು..

ಇದನ್ನು ಓದಿ: ಒಂದೇ ಕ್ಲಿಕ್​ನಲ್ಲಿ ಬರುತ್ತೆ ನಿಮ್ಮ ಮನೆಗೆ ತರಕಾರಿ..!

ಅಂದಹಾಗೇ ಈ ಪತ್ತೇದಾರಿ ಸಿನಿಮಾಗಳ ಬಗ್ಗೆ ಯಾಕೆ ಹೇಳುತ್ತಿದ್ದಾರೆ ಅನ್ನೋ ಅನುಮಾನ ಬರುತ್ತಿದೆ ಅಲ್ವಾ.. ಅದಕ್ಕೂ ಕಾರಣಗಳು ಇವೆ. ಇನ್ನೇನು ಬೇಸಿಗೆ ರಜಾ ಆರಂಭಗೊಂಡಿದೆ.. ಈ ಟೈಮ್‍ನಲ್ಲಿ ಹೊಸ ಜಾಗಕ್ಕೆ ಹೋಗ್ಬೇಕು ಅನ್ನೋದು ತುಂಬಾ ಜನರ ಆಸೆಯಾಗಿರುತ್ತೆ.. ಫನ್ ಇರಬೇಕು ಜೊತೆಗೆ ಎಂಜಾಯ್ ಕೂಡ ಮಾಡಬೇಕು ಅನ್ನೋ ಯೋಚನೆಯಲ್ಲಿ ಇರ್ತಾರೆ.. ಅಂತಹವರಿಗಾಗಿ ಇಲ್ಲೊಂದು ಗೇಮ್ ಇದೆ.. ಪತ್ತೇದಾರಿ ಸಿನಿಮಾಗಳ ಕತೆಯ ರೀತಿಯಲ್ಲಿ ರಹಸ್ಯಗಳನ್ನು ಬಿಡಿಸುತ್ತಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಆಸೆ ನಿಮಗೂ ಇದ್ದರೆ ನಿಮಗೊಂದು ಚೆಂದದ ಅವಕಾಶವಿದೆ.. ಅವಕಾಶದ ಹೆಸರು ಎಸ್ಕೇಪ್ ಹಂಟ್..

ಏನಿದು ಎಸ್ಕೇಪ್ ಹಂಟ್...?

ಇದೊಂದು ಗೇಮ್. ವಿದೇಶಗಳಲ್ಲಿ ಜನಪ್ರಿಯವಾಗಿರುವ ಈ ಗೇಮ್ ಇದೀಗ ಬೆಂಗಳೂರಿಗೂ ಬಂದಿದೆ. ಇಲ್ಲೊಂದು ಕೋಣೆ ಇರುತ್ತೆ. ಆಟ ಆಡೋ ಆಸಕ್ತಿ ಇರುವವರನ್ನು ಆ ಕೋಣೆಯೊಳಗೆ ಕಳುಹಿಸಲಾಗುತ್ತೆ. ಒಳಕ್ಕೆ ಹೋದ ತಕ್ಷಣ ಬಾಗಿಲು ಮುಚ್ಚುತ್ತದೆ. ಒಂದು ಗಂಟೆ ಆಟಗಾರರು ಒಳಗಿರಬೇಕು. ಅದಕ್ಕೂ ಮುನ್ನ ಅಲ್ಲಿರುವ ಕ್ಲೂಗಳನ್ನು ಗಮನಿಸಬೇಕು. ಒಬ್ಬ ಡಿಟೆಕ್ವಿವ್ ಆಗಿ ಬದಲಾಗಬೇಕು. ನಿಮಿಷಗಟ್ಟಲೆ ಕೂತು ಯೋಚಿಸಬೇಕು. ಅಲ್ಲಿ ಆಟಗಾರರಿಗೆ ಒಂದಷ್ಟು ಕ್ಲೂ ಇರುತ್ತದೆ. ಅದನ್ನು ಬಳಸಿಕೊಂಡು ಅಲ್ಲಿಂದ ಎಸ್ಕೇಪ್ ಆಗಿ ಬರಬೇಕು. ಸಮಯಕ್ಕೆ ಮುಂಚೆ ಬಂದರೆ ಗೆದ್ದಂತೆ..

ಎಷ್ಟು ರೀತಿಯ ಆಟಗಳು ಉಂಟು..?

ಈ ಥರ ಆಟ ಆಡಲು ಆಸೆ ಇರುವವರಿಗೆಂದೇ ಈ ಎಸ್ಕೇಪ್ ಹಂಟ್ ಶುರುವಾಗಿದ್ದು. ಈ ಎಸ್ಕೇಪ್ ಹಂಟ್‍ನಲ್ಲಿ ಮೂರು ಥರದ ಆಟಗಳಿವೆ. ಮೂರು ಗೇಮ್‍ಗಳೂ ವಿಭಿನ್ನವಾಗಿವೆ. ಮೊದಲು ಒಂದು ಗೇಮ್ ಆಡಿದರೆ ಆಮೇಲೆ ಇನ್ನೊಂದು ಗೇಮ್ ಆಡುವ ಆಸೆಯುಂಟಾಗಬಹುದು.. ಆಗ ಮತ್ತೊಂದು ಗೇಮ್ ಅನ್ನು ಪ್ರಯತ್ನಿಸಬಹುದು..

ಆದ್ರಲ್ಲಿ ಗೇಮ್ ನಂಬರ್ 1- ಬಾಲಿವುಡ್ ಮರ್ಡರ್, ಗೇಮ್ 2- ಆ್ಯಂಕರೇಜ್ ಅಸಾಸಿನೇಷನ್ ಹಾಗೂ ಗೇಮ್ 3- ಟ್ರಾಪ್‍ಡ್ ಇನ್ ಆ್ಯನ್ ಅನ್‍ನೋನ್ ಟೆಂಪಲ್ ಈ ಹೆಸರುಗಳನ್ನು ಕೇಳುತ್ತಿದ್ದರೆ ಇಂಗ್ಲಿಷ್ ಪತ್ತೇದಾರಿ ಸಿನಿಮಾಗಳ ನೆನಪಾಗಬಹುದು. ಸಿನಿಮಾ ನೆನಪಾದರೆ ಗೇಮ್ ಬಗ್ಗೆ ಆಸಕ್ತಿ ಹೆಚ್ಚಾಗಬಹುದು.. ಒಂದ್ಸಲ ಟ್ರೈ ಮಾಡಿ ನೋಡಿ ಹೆಚ್ಚು ಥ್ರೀಲಿಂಗ್ ಅನ್ಸುತ್ತೆ..

ಎಸ್ಕೇಪ್ ಹಂಟ್ ಇರೋದು ಎಲ್ಲಿ..?

ಈ ಎಸ್ಕೇಪ್ ಹಂಟ್ ಇರೋದು ಯಾವುದೋದು ದೂರದಲ್ಲಿ ಅಲ್ಲ. ಬದಲಾಗಿ ಹೆಚ್ಚು ಜನಸಂದಣಿ, ಹಾಗೂ ಶಾಪಿಂಗ್ ಏರಿಯಾದಲ್ಲಿ ಒಂದಾದ ಇಂದಿರಾನಗರದಲ್ಲಿ. 100 ಅಡಿ ರಸ್ತೆಯ ಇಂದಿರಾನಗರದಲ್ಲಿ ಈ ಹೊಸ ಗೇಮ್ ಅಡ್ಡ ಇದೆ.. ಹೆಚ್ಚಿನ ಮಾಹಿತಿ ಬೇಕು ಅಂದ್ರೆ ನೀವು www.bangalore.escapehunt.com ಭೇಟಿ ನೀಡಬಹುದು..

ಎಸ್ಕೇಪ್ ಹಂಟ್ ಬಗ್ಗೆ ಎಸ್ಕೇಪ್ ಜನ ಏನ್ ಹೇಳ್ತಾರೆ..?

ಎಸ್ಕೇಪ್ ಹಂಟ್ ಹೆಸ್ರೆ ವಿಭಿನ್ನವಾಗಿದೆ.. ಆಟದ ಜೊತೆಗೆ ಮೆದುಳಿಗೆ ಹೆಚ್ಚು ಕೆಲಸ ಕೊಡೋ ಗೇಮ್ ಇದು.. ಮಕ್ಕಳಿಗೆ ಮತ್ತು ದೊಡ್ಡವರಿಗೆ ಸಾಕಷ್ಟು ಥ್ರೀಲಿಂಗ್ ಕೂಡುತ್ತೆ. ಮೊದಲಿಗೆ ನಾವು ಹೋದಾಗ ಸಾಕಷ್ಟು ಕುತುಹಲ ಇತ್ತು.. ಮಜಾವಾಗಿದೆ.. ಅಂತಾರೆ ಸುಷ್ಮಾ.. ನಾನು ನನ್ನ ಕಾಲೇಜು ಗೆಳತಿಯರು ಇಲ್ಲಿಗೆ ಬರುತ್ತಲೇ ಇರುತ್ತವೆ. ಬೋರಿಂಗ್ ಅನ್ನಿಸೊಲ್ಲಾ ಅಂತಾರೆ ಅವರು..

ನಿಮಗೂ ಕೂಡ ಈ ಹೊಸ ಎಕ್ಸ್​ಪೀರಿಯನ್ಸ್ ಬೇಕು.. ಮಜಾ ಮಾಡಬೇಕು ಅಂದ್ರೆ ಒಮ್ಮೆ ಎಸ್ಕೇಪ್ ಹಂಟ್ ಗೆ ಹೋಗಿ ಬನ್ನಿ..!

ಇದನ್ನು ಓದಿ: 

1. ಉತ್ತರ ಕರ್ನಾಟಕದ ಸವಿರುಚಿ ಬಯಸುವವರಿಗೆ ಸ್ವರ್ಗ ಹೊಟೇಲ್ ನಳಪಾಕ..

2. ಅಂಗವೈಕಲ್ಯವನ್ನೇ ಮೀರಿ ನಿಂತ ದಿಟ್ಟೆ : ಸ್ಟೇಜ್ ನಲ್ಲಿ ‘ಮಾಸ್ಟರ್’ ಆಫ್ ಸೆರೆಮನಿ..!

3. ಮಹಿಳಾ ಉದ್ಯಮಿಗಳಿಗಾಗಿ ``ಸ್ಟ್ಯಾಂಡ್‍ಅಪ್ ಇಂಡಿಯಾ''