ಟೆಕ್ಕಿಗಳಿಗಳ ಮನೊಲ್ಲಾಸಕ್ಕಾಗಿ ಸಂಗೀತ ಉತ್ಸವ

ಟೀಮ್​ ವೈ.ಎಸ್​. ಕನ್ನಡ

ಟೆಕ್ಕಿಗಳಿಗಳ ಮನೊಲ್ಲಾಸಕ್ಕಾಗಿ  ಸಂಗೀತ ಉತ್ಸವ

Sunday December 25, 2016,

2 min Read

ಸಿಲಿಕಾನ್ ಸಿಟಿಯಂತಹ ನಗರಗಳಲ್ಲಿ ಬೆಳಗಿನಿಂದ ಸಂಜೆಯವರೆಗೂ ದುಡಿದು ದಣಿವಾದ ನಂತರ ಒಂದಿಷ್ಟು ಮನರಂಜನೆ, ಮನಸ್ಸಿಗೆ ನೆಮ್ಮದಿ ಬೇಕಾಗಿರುತ್ತದೆ. ಅಂತಹವರಿಗಾಗಿ ಬೆಂಗಳೂರಿನಲ್ಲಿ ವಿಶೇಷ ಫೈನ್ ಆರ್ಟ್ಸ್ ಸಂಸ್ಥೆ ತಿಂಗಳಿಗೊಮ್ಮೆ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸುತ್ತದೆ.

image


ತಿಂಗಳೆಲ್ಲಾ ದುಡಿಯುವ ಐಟಿ-ಬಿಟಿ ಮಂದಿ ತಮ್ಮ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಮತ್ತು ಸಂಗೀತದ ಜತೆ ಬದುಕನ್ನು ಆರಾಮವಾಗಿಸಲು, ಇನ್ನಷ್ಟು ಆಸಕ್ತಿದಾಯಕವಾಗಿಸಲು ‘ವಿಶೇಷ ಫೈನ್ ಆರ್ಟ್ಸ್’ ಸಾಂಸ್ಕೃತಿಕ ಸಂಸ್ಥೆಯು ಅಪೂರ್ವ ಅವಕಾಶ ಒದಗಿಸುತ್ತಿದೆ.

ತಿಂಗಳಿಗೊಮ್ಮೆ ಪ್ರತಿ ಮೂರನೇ ಶನಿವಾರದ ಸಂಜೆ ಈ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ. ಇದು ದಣಿದು ಬಂದವರಿಗೆ ಚೈತನ್ಯ ತುಂಬುವುದಲ್ಲದೇ, ಹೊಸತನಕ್ಕೆ ತೆರೆದುಕೊಳ್ಳುವಂತೆ ಪ್ರೇರಣೆ ನೀಡುತ್ತದೆ. ಬಂದವರಿಗೆ ತಮ್ಮನ್ನು ತಾವು ವಿಮರ್ಶಿಸಿಕೊಳ್ಳಲು ಸಹ ಅವಕಾಶ ನೀಡುತ್ತದೆ ಈ ವಿಶೇಷ ಫೈನ್ ಆರ್ಟ್ಸ್ ಬದುಕಿನ ಕನ್ನಡಿಯಾಗಿಯೂ ಎದುರಾಗುತ್ತದೆ.

image


ಇಂತಹ ಒಂದು ವಿಭಿನ್ನ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವವರು ಸತೀಶ್​ ಸೀತಾರಾಮಯ್ಯ ಎಂಬ ಸಂಗೀತಗಾರರು. ಅಮೆರಿಕದಲ್ಲಿ ಹುಟ್ಟಿದ ಭಾರತೀಯ ಮಕ್ಕಳಿಗೆ ನಮ್ಮ ದೇಶದ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಸತೀಶ್ ಸೀತಾರಾಮಯ್ಯ ಕೆಲವು ವರ್ಷಗಳಿಂದ ಅಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುತ್ತಲೇ ಇದ್ದರು.ಈಗ ಬೆಂಗಳೂರಿನಲ್ಲಿ ‘ವಿಶೇಷ ಫೈನ್ ಆರ್ಟ್ಸ್’ ಹೆಸರಿನಲ್ಲಿ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಇದನ್ನು ಓದಿ: ಇಲ್ಲಿ ನಮಗೆ ನಾವೇ ಬಾಸ್​..!ಉದ್ಯಮಿ ಆಗುವುದರ ಹಿಂದಿದೆ ನೂರಾರು ಕನಸು..!

ಈ ವಿಶೇಷ ಫೈನ್ ಆರ್ಟ್ಸ್ ಸಂಸ್ಥೆ ಲಲಿತ ಕಲೆಗಳ ಸಂರಕ್ಷಣೆ ಹಾಗೂ ಪ್ರಸಾರಕ್ಕೆ ಆರಂಭವಾಗಿದ್ದು, ಇದಕ್ಕೆ ಶತಮಾನಗಳ ಇತಿಹಾಸವಿದೆ. ಈ ಸಂಸ್ಥೆಯಲ್ಲಿ ಹೊಸ ಕಲಾವಿದರಿಗೆ ಅವಕಾಶ ಹಾಗೂ ಹಿರಿಯ ಕಲಾವಿದರಿಗೂ ಅವಕಾಶವನ್ನು ಕಲ್ಪಿಸುತ್ತಾರೆ. ಇಲ್ಲಿಯವರೆಗೂ ಸುಮಾರು 140ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ನೀಡಿದ್ದು, 190ಕ್ಕೂ ಹೆಚ್ಚು ಕಲಾವಿದರಿಗೆ ವೇದಿಕೆಯನ್ನು ಈ ಸಂಸ್ಥೆ ಒದಗಿಸಿದೆ. ಈ ಸಂಸ್ಥೆ ನಡೆಸುವ ಸಂಗೀತ ಕಛೇರಿಗೆ ಬರುವವರು ಹೆಚ್ಚಿನ ಸಂಖ್ಯೆಯಲ್ಲಿ ಐಟಿ ಮತ್ತು ಬಿಟಿ ಮಂದಿ. ಇಲ್ಲಿ ಮಕ್ಕಳಿಂದ ವೃದ್ಧರವರೆಗೆ ಎಲ್ಲ ವರ್ಗದವರಿಗೂ ಅವಕಾಶ ನೀಡಲಾಗುತ್ತದೆ.

ಬದುಕಿನ ರೀತಿಗೆ ಸಂಗೀತ ಮಾಧ್ಯಮ

" ಕೆಲಸ ಗಿಟ್ಟಿಸಿಕೊಳ್ಳಲು ಶಾಲೆಗೆ ಹೋಗುತ್ತೇವೆ, ಹಣಕ್ಕಾಗಿ ಉದ್ಯೋಗ ಮಾಡುತ್ತೇವೆ. ಆದರೆ ಬದುಕನ್ನು ನೆಮ್ಮದಿಯಾಗಿ ನೋಡಬೇಕು ಅಂದರೆ ಧನಾತ್ಮಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಅದಕ್ಕಾಗಿ ಸಂಗೀತದಂಥ ಕಲಾಮಾರ್ಗ ಪ್ರೇರಕ" 
- ಸತೀಶ್ ಸೀತಾರಾಮಯ್ಯ, ವಿಶೇಷ ಫೈನ್ ಆರ್ಟ್ಸ್ ಮುಖ್ಯಸ್ಥ

ಕೇವಲ ದುಡಿಮೆ, ಸ್ಪರ್ಧೆಯಲ್ಲಿ ಬದುಕು ಮುಗಿಯುವುದಿಲ್ಲ. ನಾವು ಪಡೆದದ್ದನ್ನು ಸಮಾಜಕ್ಕೆ ವಾಪಸ್ ಏನಾದರೂ ಕೊಡಬೇಕು. ಅದೇ ನಿಜವಾದ ಸಾರ್ಥಕತೆ. ಸೇವೆ ಸಲ್ಲಿಸುವ ತುಡಿತ ಹಲವರಿಗೆ ಇರುತ್ತದೆ. ಕೆಲವರಿಗೆ ಸಮಯವಿರುವುದಿಲ್ಲ. ಇನ್ನೂ ಕೆಲವರಿಗೆ ಯಾವ ಮಾರ್ಗದಲ್ಲಿ ಹೋಗಬೇಕು ಎನ್ನುವುದು ಗೊತ್ತಾಗುವುದಿಲ್ಲ. ಮಾರ್ಗ ಯಾವುದಾದರೇನಂತೆ, ಅದು ಇನ್ನೊಬ್ಬರ ಬದುಕಿಗೆ ಪ್ರೇರಣೆ ನೀಡಬೇಕು ಎನ್ನುವ ಸತೀಶ್, ವಿಶೇಷ ಸಂಸ್ಥೆಯ ಕಲಾ ಸೇವೆಯಲ್ಲಿ ಬದುಕನ್ನು ವಿಭಿನ್ನವಾಗಿ ನೋಡುವ ದೃಷ್ಟಿಕೋನ ಇದೆ ಎನ್ನುತ್ತಾರೆ. ಒಟ್ಟಿನಲ್ಲಿ ತಿಂಗಳಿಡಿ ದುಡಿದು ದಣಿವಾಗುವ ಟೆಕ್ಕಿಗಳು ವಿಶೇಷ ಫೈನ್ಆರ್ಟ್ಸ್​ ಬಂದು ತಮ್ಮ ಮನಸ್ಸನ್ನು ಹಗುರ ಮಾಡಿಕೊಂಡು ಹೋಗಬಹುದು.

ಇದನ್ನು ಓದಿ:

1. ಬಾಡಿಗೆಗೆ ಬಟ್ಟೆ ಬೇಕೆ..? ಫ್ಲೈರೋಬ್​ಗೆ ಲಾಗಿನ್​ ಆಗಿ  

2. ಕಾಡು ರಕ್ಷಿಸಲು ಮರಗಳ ಮೇಲೆ ಕಲಾಕೃತಿ : ನಾರಿಯರ ಕೈಚಳಕದಲ್ಲಿ ಸ್ವರ್ಗವಾಗಿದೆ ಮಧುಬನಿ

3. ಹೊಸ ವರ್ಷದಲ್ಲಿ ಕಾಲ ಕಳೆಯೋದು ಹೇಗೆ..?- ಹಾಲಿಡೇ ಪ್ಲಾನ್ ಬಗ್ಗೆ ಯೋಚನೆ ಮಾಡಿ..!​