ಟೆಕ್​ಸ್ಪಾರ್ಕ್​2016ಕ್ಕೆ ಕ್ಷಣಗಣನೆ- ನಿಮ್ಮನ್ನು ಸ್ವಾಗತಿಸುತ್ತಿದೆ ಯುವರ್​ಸ್ಟೋರಿ

ಟೀಮ್​ ವೈ.ಎಸ್​. ಕನ್ನಡ

3

ಸ್ಟಾರ್ಟ್ಅಪ್ ಲೋಕದ ಸ್ಪೂರ್ತಿದಾಯಕ ಕಥೆಗಳನ್ನು ನಿಮ್ಮ ಮುಂದೆ ಇಟ್ಟು ಮೆಚ್ಚುಗೆ ಗಳಿಸಿರುವ ಯುವರ್​ಸ್ಟೋರಿ ಈಗ "ಟೆಕ್​ಸ್ಪಾರ್ಕ್ 2016"ಕ್ಕೆ ಸಜ್ಜಾಗಿ ನಿಂತಿದೆ. ಸೆಪ್ಟಂಬರ್ 30 ಮತ್ತು ಅಕ್ಟೋಬರ್ 1ರಂದು ಬೆಂಗಳೂರಿನ ಯಶವಂತಪುರದಲ್ಲಿರುವ ತಾಜ್​ವಿವಾಂತ ಹೊಟೇಲ್​ನಲ್ಲಿ “ಟೆಕ್​ಸ್ಪಾರ್ಕ್-2016” ನಡೆಯಲಿದೆ. ಯುವರ್​ಸ್ಟೋರಿ ಆಯೋಜಿಸಿರುವ 7ನೇ ಟೆಕ್​ಸ್ಪಾರ್ಕ್ ಸಮ್ಮೇಳನ ಇದಾಗಲಿದೆ. ಟೆಕ್ನಾಲಜಿ, ಸ್ಟಾರ್ಟ್ಅಪ್, ಸ್ಪೂರ್ತಿದಾಯಕ, ಹರ್​ಸ್ಟೋರಿ ಹೀಗೆ ವಿವಿಧ ಮತ್ತು ವಿಭಿನ್ನ ಕಥೆಗಳನ್ನು ಮುಂದಿಟ್ಟ ಯುವರ್​ಸ್ಟೋರಿ, ಟೆಕ್​ಸ್ಪಾರ್ಕ್ಸ್​ನಲ್ಲಿ ಟೆಕ್ನಾಲಜಿ ಹಾಗೂ ಸ್ಟಾರ್ಟ್ಅಪ್​ಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲು ಅತ್ಯುತ್ತಮ ವೇದಿಕೆ.

ಕಳೆದ 6 ವರ್ಷಗಳಿಂದ "ಟೆಕ್​ಸ್ಪಾರ್ಕ್" ಸ್ಟಾರ್ಟ್ಅಪ್ಗಳಿಗೆ ಹಲವು ರೀತಿಯಲ್ಲಿ ಸಹಾಯ ಮಾಡಿದೆ. ಟೆಕ್​ಸ್ಪಾರ್ಕ್​ನಲ್ಲಿ ಪಾಲ್ಗೊಂಡ 180 ಸ್ಟಾರ್ಟ್ಅಪ್​ಗಳ ಪೈಕಿ ಸುಮಾರು 97 ಸ್ಟಾರ್ಟ್ಅಪ್​ಗಳು ಟೆಕ್30 ಲಿಸ್ಟ್​ನಲ್ಲಿ ಸೇರ್ಪಡೆಯಾದ ಬಳಿಕ ಆದಾಯದಲ್ಲಿ ಅಭಿವೃದ್ಧಿ ಕಂಡಿವೆ. ಟೆಕ್​ಸ್ಪಾರ್ಕ್​ನ ಟೆಕ್ 30 ಲಿಸ್ಟ್ ಸೇರಿದ ಬಳಿಕ ಸುಮಾರು 630 ಮಿಲಿಯನ್ ಡಾಲರ್ ವಿವಿಧ ಸ್ಟಾರ್ಟ್ಅಪ್​ಗಳ ಮೂಲಕ ಹರಿದು ಬಂದಿದೆ.

ಏಳನೇ ವರ್ಷದ ಸಂಭ್ರಮದಲ್ಲಿರುವ “ಟೆಕ್​ಸ್ಪಾರ್ಕ್” ಭಾರತದ ಉದ್ದಗಲಕ್ಕೂ ಸದ್ದು ಮಾಡಿದೆ. ಉದ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಕೂಡ ನೆಟ್ಟಿದೆ. ಈಗಾಗಲೇ ಟೆಕ್​ಸ್ಪಾರ್ಕ್ ಹೈದ್ರಬಾದ್, ಇಂಧೋರ್, ಕೊಲ್ಕತ್ತಾ, ಮುಂಬೈ, ಪುಣೆ, ಜೈಪುರ, ಚಂಡೀಗಢ, ದೆಹಲಿ, ಚೆನ್ನೈ ಮತ್ತು ಅಹ್ಮದಾಬಾದ್​ಗಳಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. “ಟೆಕ್​ಸ್ಪಾರ್ಕ್- 2016”ರ ಗ್ರಾಂಡ್ ಫಿನಾಲೆ ಬೆಂಗಳೂರಿನಲ್ಲಿ ನಡೆಯಲಿದೆ. “ಟೆಕ್​ಸ್ಪಾರ್ಕ್- 2016” ರಲ್ಲಿ ನೀವ್ಯಾಕೆ ಭಾಗವಹಿಸಬೇಕು ಅನ್ನೋದಕ್ಕೆ ಕೆಲವು ಕಾರಣಗಳು ಕೂಡ ಇವೆ.

ನೆಟ್​ವರ್ಕಿಂಗ್

2ದಿನಗಳ ಕಾಲ ನಡೆಯುವ “ಟೆಕ್​ಸ್ಪಾರ್ಕ್- 2016”ನಲ್ಲಿ 3000ಕ್ಕೂ ಅಧಿಕ ಉದ್ಯಮಿಗಳು, ಸ್ಟಾರ್ಟ್ಅಪ್​ಗಳ ಮಾಲೀಕರು ಭಾಗವಹಿಸಲಿದ್ದಾರೆ. ಅವರ ಯಶಸ್ಸಿನ ಕಥೆ ಹಾಗೂ ಅಭಿವೃದ್ಧಿಯ ನಡೆಯನ್ನು ಕೂಡ ಹೇಳಿಕೊಳ್ಳಲಿದ್ದಾರೆ. ಅವರ ಜೊತೆ ಮಾತನಾಡುವುದಕ್ಕೆ ಮುಕ್ತ ಅವಕಾಶವೂ ಸಿಗಲಿದೆ. ನಿಮ್ಮ ಕನಸಿನ ಸ್ಟಾರ್ಟ್ಅಪ್, ಉದ್ದಿಮೆಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಇದು ಅವಕಾಶ ನೀಡಬಹುದು.

ಅನುಭವಿ ಉದ್ಯಮಿಗಳ ಸಮ್ಮಿಲನ

“ಟೆಕ್​ಸ್ಪಾರ್ಕ್- 2016” ರಲ್ಲಿ ಕೆಲವು ಅತ್ಯುತ್ತಮ ಉದ್ಯಮಿಗಳು ಭಾಗವಹಿಸಲಿದ್ದಾರೆ. ಫ್ಯೂಚರ್ ಗ್ರೂಪ್​ನ ಸಿಇಒ ಮತ್ತು ಸ್ಥಾಪಕ ಕಿಶೋರ್ ಬಿಯಾನಿ, ಟಾಟಾ ಸನ್ಸ್ ಲಿಮಿಟೆಡ್​ನ ಡಾ. ಮುಕುಂದ್ ರಾಜನ್, ಸಿಕ್ವೆಯಾ ಕ್ಯಾಪಿಟಲ್​ನ ಮ್ಯಾನೇಜಿಂಗ್ ಡೈರೆಕ್ಟರ್ ಶೈಲೇಂದ್ರ ಸಿಂಗ್, ಪೇಟಿಎಂನ ಸ್ಥಾಪಕ ವಿಜಯ್​ಶೇಖರ್ ಶರ್ಮಾ ಸೇರಿದಂತೆ ಹಲವು ಯಶಸ್ವಿ ಉದ್ಯಮಿಗಳು “ಟೆಕ್​ಸ್ಪಾರ್ಕ್- 2016”ನ ಭಾಗವಾಗಲಿದ್ದಾರೆ. ಇವರ ಮಾತುಗಳಿಂದ ನೀವು ನಿಮ್ಮ ಉದ್ಯಮದ ಅಭಿವೃದ್ಧಿಗೆ ಬೇಕಾದ ಟಿಪ್ಸ್​​ಗಳನ್ನು ಪಡೆದುಕೊಳ್ಳಬಹುದು.

ಹೂಡಿಕೆದಾರರ ಜೊತೆ ಸಂಪರ್ಕ

 ಹೂಡಿಕೆದಾರರ ಜೊತೆ ನೇರ ಸಂಪರ್ಕಕ್ಕೆ “ಟೆಕ್​ಸ್ಪಾರ್ಕ್- 2016” ಉತ್ತಮ ವೇದಿಕೆ ಆಗಲಿದೆ. 20ಕ್ಕೂ ಅಧಿಕ ಹೂಡಿಕೆದಾರರು “ಟೆಕ್​ಸ್ಪಾರ್ಕ್- 2016”ರಲ್ಲಿ ಭಾಗವಹಿಸಲಿದ್ದಾರೆ. ಹೂಡಿಕೆದಾರರ ಜೊತೆ ಮಾತುಕತೆಗೆ ಇದು ವೇದಿಕೆಯೂ ಹೌದು.

ನಿಮ್ಮ ಸ್ಟಾರ್ಟ್ಅಪ್ಗಳಿಗೆ ಸರಕಾರದ ಪ್ರೋತ್ಸಾಹದ ಬಗ್ಗೆ ಕೂಡ ತಿಳಿದುಕೊಳ್ಳಲು ಅವಕಾಶವಿದೆ. ಹಲವು ರಾಜ್ಯಗಳ ಐಟಿ, ಬಿಟಿ ಸಚಿವರು ಸೇರಿದಂತೆ ಹಲವು ಮಂತ್ರಿಗಳು “ಟೆಕ್​ಸ್ಪಾರ್ಕ್- 2016”ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 “ಟೆಕ್​ಸ್ಪಾರ್ಕ್- 2016”ರಲ್ಲಿ 9 ವರ್ಕ್​ಶಾಪ್​ಗಳಿರಲಿವೆ. ಇವುಗಳೆಲ್ಲವೂ ವಿವಿಧ ಉದ್ಯಮ ಹಾಗೂ ಅದರ ವಿಸ್ತೃತತೆಯ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಲಿದೆ.

ಇದನ್ನು ಓದಿ: ಹಸಿವಿನ ಬಗ್ಗೆ ಚಿಂತೆ ಬಿಡಿ- 7thಸಿನ್ ​ಫುಡ್​ಟ್ರಕ್​ಗೆ ವಿಸಿಟ್​ ಕೊಡಿ

 “ಟೆಕ್​ಸ್ಪಾರ್ಕ್- 2016”ರಲ್ಲಿ ಕೇವಲ ಉದ್ಯಮಿಗಳನ್ನು, ಹೂಡಿಕೆದಾರರನ್ನು ಮಾತ್ರ ಒಟ್ಟು ಮಾಡುವುದಿಲ್ಲ. ಬದಲಾಗಿ ಉದ್ಯಮಕ್ಕೆ ಸಹಾಯ ಮಾಡಬಲ್ಲ ಮತ್ತು ಸಮಸ್ಯೆಗಳನ್ನು ನಿವಾರಿಸಲು ದಾರಿ ತೋರಿಸಬಲ್ಲ ಸೆಕ್ಟರ್​ಗಳಾದ ಆ್ಯಕ್ಸಿಸ್ ಬ್ಯಾಂಕ್, ಅಕಮೈ, AWS, ಮೈಕ್ರೋಸಾಫ್ಟ್ ಮತ್ತು ಡಿಜಿಟಲ್ ಓಷನ್​ಗಳು ಕೂಡ ಈ ಗ್ರಾಂಡ್​ಫಿನಾಲೆಯಲ್ಲಿ ಭಾಗವಹಿಸಲಿವೆ.

ಟೆಕ್30 ಪಟ್ಟಿಯಲ್ಲಿ ಸ್ಥಾನ ಪಡೆಯಲು ಭಾರೀ ಪೈಪೋಟಿಯೇ ನಡೆಯುತ್ತಿದೆ. ಸುಮಾರು 2600 ಅಪ್ಲಿಕೇಶನ್​ಗಳು ಈ ಸ್ಪರ್ಧೆಯಲ್ಲಿವೆ. ಆದ್ರೆ ಭಾರತದ ಅತ್ಯುತ್ತಮ ಸ್ಟಾರ್ಟ್ಅಪ್​ಗಳು ಮಾತ್ರ ಟೆಕ್ 30ರಲ್ಲಿ ಸ್ಥಾನ ಪಡೆಯಲಿವೆ. ಟೆಕ್30ಯಲ್ಲಿ ಸ್ಥಾನ ಪಡೆಯುವ ಸ್ಟಾರ್ಟ್ಅಪ್​ಗಳು ದೇಶದಲ್ಲೇ ಅತ್ಯುತ್ತಮ ಭವಿಷ್ಯವನ್ನು ಹೊಂದಲಿವೆ. ಅಷ್ಟೇ ಅಲ್ಲ ಟೆಕ್30ಯ ವಿನ್ನರ್ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ಕೂಡ ಪಡೆಯಲಿದೆ.

“ಟೆಕ್​ಸ್ಪಾರ್ಕ್- 2016”ರಲ್ಲಿ ಯುವರ್​ಸ್ಟೋರಿ ಟೆಕ್30ಯಲ್ಲಿ ಸ್ಥಾನ ಪಡೆದ ಕಂಪನಿಗಳ ಇಂಡಸ್ಟ್ರಿ ರಿಪೋರ್ಟ್​ನ್ನು ಕೂಡ ರಿಲೀಸ್ ಮಾಡಲಿದೆ. ಹೆಲ್ತ್​ಕೇರ್, ಫಿನ್​ಟೆಕ್, ಲಾಜಿಸ್ಟಿಕ್ಸ್, ಡೀಪ್ ಟೆಕ್ ಹೀಗೆ ಹಲವು ವಿಷಯಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಯಲಿದೆ.

ಉದ್ಯಮದಲ್ಲಿ ಈಗಾಗಲೇ ಪಳಗಿರುವ ಕಂಪನಿಗಳಿಗೆ ಹೊಸದಾಗಿ ಆರಂಭವಾಗುವ ಕಂಪನಿಗಳ ಜೊತೆ ಮಾತುಕತೆ ನಡೆಸಿ, ತಮ್ಮ ಉದ್ಯಮವನ್ನು ಇನ್ನಷ್ಟು ಉತ್ತಮಗೊಳಿಸಲು ಇದು ವೇದಿಕೆ ಆಗಲಿದೆ. ಅಷ್ಟೇ ಅಲ್ಲ ಹೊಸ ಕಂಪನಿಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಇದು ಅವಕಾಶವನ್ನು ಕೂಡ ಒದಗಿಸಲಿದೆ.

ಉದ್ಯೋಗದಾತರನ್ನು ಉದ್ಯೋಗಕಾಂಕ್ಷಿಗಳನ್ನು ಒಂದೇ ಕಡೆ ಸೇರಿಸುವ ಯೋಜನೆಯೂ “ಟೆಕ್​ಸ್ಪಾರ್ಕ್- 2016”ನಲ್ಲಿದೆ.

“ಟೆಕ್​ಸ್ಪಾರ್ಕ್- 2016”ರಲ್ಲಿ ಸುಮಾರು 70ಕ್ಕೂ ಹೆಚ್ಚು ಕಂಪನಿಗಳನ್ನು ತಮ್ಮ ಉತ್ಪನ್ನಗಳ ಪ್ರದರ್ಶನವನ್ನು ಮಾಡಲಿವೆ. ಇದು ಹೊಸತನವನ್ನು ಕಲಿತುಕೊಳ್ಳಲು ಅತ್ಯುತ್ತಮ ವೇದಿಕೆಯನ್ನು ಕೂಡ ಒದಗಿಸಲಿದೆ.

ಹೀಗೆ “ಟೆಕ್​ಸ್ಪಾರ್ಕ್- 2016” ವಿವಿಧ ರೀತಿಯಲ್ಲಿ ಉದ್ಯಮಿಗಳಿಗೆ ಸಹಕಾರಿ ಆಗಲಿದೆ. ಕನಸುಗಳನ್ನು ಕಟ್ಟಿಕೊಂಡವರು, ಸುಮ್ಮನೆ ಕುಳಿತರೆ ಅದು ಕನಸಾಗೇ ಉಳಿಯುತ್ತದೆ ಹೊರತು ಅದು ನನಸಾಗುವುದಿಲ್ಲ. ಕೇವಲ ಕನಸಿನಿಂದ ಮಾತ್ರ ಉದ್ಯಮಿ ಆಗಲು ಸಾಧ್ಯವಿಲ್ಲ. ಬದಲಾಗಿ ಕನಸನ್ನು ನನಸು ಮಾಡಿಕೊಳ್ಳುವ ದಾರಿ ಹುಡುಕಿಕೊಳ್ಳಬೇಕು. ನಿಮ್ಮ ಕನಸನ್ನು ನನಸಾಗಿಸಲು “ಟೆಕ್​ಸ್ಪಾರ್ಕ್- 2016” ಸಹಾಯ ಮಾಡುತ್ತದೆ ಅನ್ನೋದು ನಮ್ಮ ನಂಬಿಕೆ. ಇನ್ನೇಕೆ ತಡ “ಟೆಕ್​ಸ್ಪಾರ್ಕ್- 2016”ರಲ್ಲಿ ಭಾಗವಹಿಸಲು ಸಜ್ಜಾಗಿಬಿಡಿ.

ಇದನ್ನು ಓದಿ:

1. "ಗ್ರೀನ್ ಬಯೋಟೆಕ್" ಚಿಕ್ಕಮಗಳೂರಿನ ಪಿಎಚ್​ಡಿ ಪದವೀಧರನ ಸಾಹಸ

2. ಸರಕು ಸಾಗಣಿಕೆಯ ಚಿಂತೆ ನಿಮಗೇಕೆ- ಪೋರ್ಟರ್​ ಆ್ಯಪ್​ನಲ್ಲಿ ಸಿಗುತ್ತೆ ಉತ್ತರ

3. ತೊಟ್ಟಿ ಸೇರುವ ಆಹಾರವನ್ನು ಹೊಟ್ಟೆ ಸೇರುವಂತೆ ಮಾಡಿದ ಫ್ರಾನ್ಸ್‌ ಸರ್ಕಾರ..!

Related Stories