ಗಾಳಿಪಟದಿಂದ ವಿದ್ಯುತ್ ಉತ್ಪಾದನೆ: ಮಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಯಿಂದ ಸಂಶೋಧನೆ 

ಉಷಾ ಹರೀಶ್​

0

ಆಷಾಢ ಗಾಳಿ ಬಂತೆಂದರೆ ಸಾಕು ಎಲ್ಲಿ ನೋಡಿದರೂ ಬಾನೆತ್ತರದಲ್ಲಿ ಗಾಳಿಪಟಗಳು ಹಾರಾಡುತ್ತಿರುತ್ತವೆ. ಕೆಲವೆಡೆ ಮೋಜಿಗಾಗಿ ಗಾಳಿಪಟವನ್ನು ಹಾರಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಹಾರುವ ಗಾಳಿಪಟದಿಂದ ವಿದ್ಯತ್ ತಯಾರಿಸಬಹುದು ಎಂಬುದನ್ನು ತೋರಿಸಿದ್ದಾನೆ.

ಹೌದು ಮಂಗಳೂರಿನ ವಳಚ್ಚಿಕಲ್ ಶ್ರೀನಿವಾಸ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್​ನ ಅಂತಿಮ ವರ್ಷದಲ್ಲಿ ಓದುತ್ತಿರುವ ರೋಯ್ಸ್​ಟನ್ ಕ್ಯಾಸ್ಟಲಿನೋ ಎಂಬ ವಿದ್ಯಾರ್ಥಿ ಈ ಸಾಧನೆ ಮಾಡಿದ್ದಾನೆ.

ವಿದ್ಯುತ್ ಉತ್ಪಾದನೆ ಹೇಗೆ..?

ರಾಜ್ಯದಲ್ಲಿ ವಿದ್ಯುತ್ ಕ್ಷಾಮ ತಲೆದೂರಿರುವ ಹಿನ್ನೆಲೆಯಲ್ಲಿ ವಿದ್ಯುತ್ ಬಗ್ಗೆ ಏನಾದರೂ ಸಂಶೋಧನೆ ಮಾಡಬೇಕು ಎಂದು ಯೋಚಿಸಿಕೊಂಡು ಪಣಂಬೂರಿನ ಬೀಚ್​ನಲ್ಲಿ ದೊಡ್ಡ ದೊಡ್ಡ ಗಾಳಿಪಟಗಳು ಹಾರಾಡುತ್ತಿದ್ದವು. ಇದರಿಂದ ಸ್ಪೂರ್ತಿಗೊಂಡು ಈ ಗಾಳಿಪಟದಿಂದ ವಿದ್ಯುತ್ ತಯಾರಿಸಿದರೆ ಹೇಗೆ ಎಂಬ ಐಡಿಯಾಹೊಳೆಯಿತು.

ಇದನ್ನು ಓದಿ: ಹೋಟೆಲ್ ಒಂದರ ಲೆಕ್ಕಾಚಾರ, ಇಲ್ಲಿ ಎಲ್ಲವೂ ಕೆಜಿ ಲೆಕ್ಕದಲ್ಲೇ..!

ತಕ್ಷಣ ಜಾಗೃತರಾದ ಕ್ಯಾಸ್ಟಲಿನೋ ಎತ್ತರದಲ್ಲಿ ಹಾರುವ ಗಾಳಿಪಟ್ಟಕ್ಕೆ ಪೋಣಿಸಿದ ದಾರವನ್ನು ವಿದ್ಯುತ್ ಸಂಶೋಧನೆಗಾಗಿ ವಿಶೇಷವಾಗಿ ತಯಾರಿಸಿದ ಜನರೇಟರ್ ಚಕ್ರಕ್ಕೆ ಸುತ್ತಿ ಡೈನಮೋ ತಿರುಗುವಂತೆ ಮಾಡುತ್ತಾರೆ. ಪ್ರತಿ ಸಲವೂ ಗಾಳಿ ಪಟ ಹಾರಿದಂತೆಲ್ಲಾ ಡೈನಮೋ ತಿರುಗುತ್ತದೆ. ಡೈನೊಮೋ ತಿರುಗಿದಾಗ ಸುಮಾರು ಮೂರು ನೂರು ವ್ಯಾಟ್ ವಿದ್ಯುತ್ ಅದರಿಂದ ಉತ್ಪತ್ತಿಯಾಗುತ್ತದೆ.

ಯಾವು ವಸ್ತುಗಳಿಗೆ ಬಳಸಬಹುದು..?

ಗಾಳಿಪಟದಿಂದ ಉತ್ಪಾದನೆಯಾಗುವ ವಿದ್ಯುತ್​ನಿಂದ ೪೦ ಎಲ್ಇಡಿ ಬಲ್ಬ್, ಒಂದು ರೆಫ್ರಿಜರೇಟರ್ ಅಥವಾ ಫ್ರಿಡ್ಜ್ ಅಥವಾ ಐದು ಲ್ಯಾಪ್ಟಾಪ್​ಗಳನ್ನು ಬಳಸಬಹುದು.

ಒಂದು ವರ್ಷದ ಸಂಶೋಧನೆ..?

ಕಳೆದ ವರ್ಷ ಕಾಲೇಜಿನಲ್ಲಿ ಎಲ್ಲರಿಗೂ ಒಂದು ಪ್ರಾಜೆಕ್ಟ್ ಮಾಡಿಕೊಂಡು ಬರಬೇಕು ಎಂದು ಹೇಳಿದಾಗ ರೋಯ್ಸ್ಟನ್ ಕ್ಯಾಸ್ಟಲಿನೊ ಆಯ್ದುಕೊಂಡದ್ದು ಈ ಗಾಳಿಪಟದಿಂದ ವಿದ್ಯತ್ ತಯಾರಿಸುವ ಪ್ರಾಜೆಕ್ಟ್. ಅದಕ್ಕಾಗಿ ಚೀನಾದಿಂದ ವಿಶಿಷ್ಟವಾದ ಪ್ಯಾರಪೋಯ್ಸ್ ಎಂಬ ಗಾಳಿಪಟವನ್ನು ಸುಮಾರು ನಾಲ್ಕು ಸಾವಿರ ಕೊಟ್ಟು ತರಿಸಲಾಯಿತು. ೨೦೧೫ರಿಂದ ಇಲ್ಲಿಯವರೆಗೂ ಅದರ ಬಗ್ಗೆ ಸಂಶೋಧನೆ ಪ್ರಯೋಗಗಳನ್ನು ನಡೆಸಿ ಕೊನೆಗೆ ಈಗ ಯಶಸ್ವಿಯಾಗಿದ್ದಾರೆ ಕ್ಯಾಸ್ಟಲಿನೊ

ಕಚ್ಚಾ ವಸ್ತುಗಳು ಯಾವುವು..?

ಈ ಗಾಳಿಪಟದ ವಿದ್ಯುತ್ಗೆ ನೈಲಾನ್ ಹಗ್ಗ, ಸೀಲಿಂಗ್ ಫ್ಯಾನ್ ರೆಕ್ಕೆ, ಹಾಗೂ ಸೈಕಲ್ನ ಚಕ್ರಗಳನ್ನು ಬಳಸಿಕೊಳ್ಳಲಾಗಿದೆ. ನೈಲಾನ್ ಹಗ್ಗದಿಂದ ನೂರು ಮೀಟರ್ ಎತ್ತರಕ್ಕೆ ಹಾರಿಸಿದರೆ ವಿದ್ಯುತ್ ಉತ್ಪಾದನೆಯಾಗುತ್ತದೆ.ದೊಡ್ಡ ಗಾಳಿಪಟವಾದರೆ ಐದು ನೂರರಿಂದ ಸಾವಿರ ಮೀಟರ್ ವರೆಗೂ ಹಾರಿಸಬಹುದು.

ಅಭಿನಂದನೆ ಪ್ರಶಸ್ತಿಗಳು

ಉತ್ತಮ ಸಾಧನೆ ಮಾಡಿದರೆ ಎಲ್ಲರೂ ಗುರುತಿಸುತ್ತಾರೆ ಎಂಬುವುದಕ್ಕೆ ಸಾಕ್ಷಿಯೆಂಬಂತೆ ರೋಯ್ಸ್ಟನ್ ಕ್ಯಾಸ್ಟಲಿನೊ ಅವರ ಈ ವಿಶಿಷ್ಟ ಸಾಧನೆಗೆ ಗಾಂಧಿಯನ್ ಯಂಗ್ ಟೆಕ್ನಾಲಜಿಕಲ್ ಇನ್ನೊವೇಶನ್ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ಇತ್ತೀಚಿಗೆ ನವದೆಹಲಿಯ ರಾಷ್ಟ್ರಪತಿಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇನ್ನೊವೇಶನ್ ಸಂಸ್ಥೆಯ ಮುಖ್ಯಸ್ಥ ಡಾ ಆರ್ ಎ ಮಾಶೆಲ್ಕರ್ ಅವರಿಂದ ಐವತ್ತು ಸಾವಿರ ನಗದು ಬಹುಮಾನ ಮತ್ತು ಪ್ರಶಂಸಾ ಪತ್ರವನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ ಸ್ಥಳೀಯವಾಗಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ರೋಯ್ಸ್ಟನ್ ಕ್ಯಾಸ್ಟಲಿನೊ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾಲೇಜಿನ ವತಿಯಿಂದ ಈ ಸಂಶೋಧನೆಗೆ ಪೇಟೆಂಟ್ ಪಡೆಯಲು ನೆರವಾಗುತ್ತಿದ್ದಾರೆ. ಒಟ್ಟಿನಲ್ಲಿ ಮೋಜಿಗಾಗಿ ಆಡುತ್ತಿದ್ದ ಗಾಳಿಪಟದಲ್ಲಿ ಇನ್ನುಮುಂದೆ ವಿದ್ಯುತ್ನ್ನು ತಯಾರಿಸಬಹುದು ಎಂದು ರೋಯ್ಸ್ಟನ್ ಕ್ಯಾಸ್ಟಲಿನೋ ತೋರಿಸಿಕೊಟ್ಟು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಇದನ್ನು ಓದಿ:

1. ಹಚ್ಚಿದ್ದು ಬಣ್ಣ ..ಮಾಡುತ್ತಿರೋದು ಸೇವೆ-ಬಣ್ಣಕ್ಕೂ ಬಂತು ಸೇವೆಯ ನಂಟು ..

2. 'ಮೆಡಿಡೈಲಿ'ಗೆ ಜನ್ಮ ನೀಡಿದ ಮರಾಠಿ ಹಬ್ಬ..!

3. ಸ್ಟಾರ್ಟ್​ಅಪ್ ಉದ್ಯಮಿಗಳಿಗೆ ಸ್ಫೂರ್ತಿ ನೀಡಬಲ್ಲ ಸ್ಪೋರ್ಟ್ಸ್​​​ಮನ್ ಸ್ಪಿರಿಟ್.. !

Related Stories