2016 ಕ್ಕೆ ಕಂಟೆಂಟ್​ ಮಾರ್ಕೆಟಿಂಗ್‍ಗೆ ಬೇಕಾದ ಸಲಹೆಗಳು

ಟೀಮ್​ ವೈ.ಎಸ್​. ಕನ್ನಡ

2016 ಕ್ಕೆ ಕಂಟೆಂಟ್​ ಮಾರ್ಕೆಟಿಂಗ್‍ಗೆ ಬೇಕಾದ ಸಲಹೆಗಳು

Thursday January 07, 2016,

3 min Read


ವರ್ಷವೊಂದು ಕಳೆದೇ ಹೋಯಿತು. ಈಗ ಮತ್ತೊಂದು ವರ್ಷ ಆರಂಭ. ಈ ಹಿಂದೆ ನಾನು ಕೊಟ್ಟ ಮಾಹಿತಿ ನಿಮಗೆಲ್ಲಾ ಸಹಾಯಕವಾಗಿದೆ ಎಂದು ಭಾವಿಸಿದ್ದೇನೆ. ಮಾರ್ಕೆಟಿಂಗ್‍ನಲ್ಲಿ ಸಂಶೋಧನೆ ಮಾಡಿ ನಿಮಗೆಲ್ಲಾ ಪೂರಕವಾಗಿರುವ ಪ್ರತಿಕ್ರಿಯೆಯನ್ನೇ ಕೊಟ್ಟಿದ್ದೇನೆ. ಮಾರ್ಕೆಟಿಂಗ್ ಟ್ರೆಂಡ್ ಅನ್ನು ಅಧ್ಯಯನ ಮಾಡಿ 2016ಕ್ಕೆ ಶೈಕ್ಷಣಿಕ ಫಲಿತಾಂಶವನ್ನು ನಿಮಗೆಲ್ಲಾ ಕೊಡುವ ಪ್ರಯತ್ನ ಮಾಡುತ್ತೇನೆ. ಇವೆಲ್ಲಾ ನನ್ನ ವೈಯಕ್ತಿಕ ಅಭಿಪ್ರಾಯವೂ ಆಗಿರಬಹುದು.

image


ಮಾರ್ಕೆಟಿಂಗ್ ಟ್ರೆಂಡ್ ಅಧ್ಯಾಯನ ಮಾಡಿ ನಾನು ಕೊಟ್ಟ ಫಲಿತಾಂಶದಿಂದ ಜನ ಸಂತೃಪ್ತರಾಗಿದ್ದಾರೆ. ನನ್ನ ಅಧ್ಯಯನದ ಫಲಿತಾಂಶವನ್ನು ಮೆಚ್ಚಿಕೊಂಡಿದ್ದಾರೆ. ಮತ್ತು ಅದರಿಂದ ಉತ್ತಮವಾದ ಪ್ರತಿಕ್ರಿಯೆಯೂ ಬಂದಿದೆ. ಈ ಮುಂಚೆ ಕಂಟೆಂಟ್ ಮಾರ್ಕೆಟಿಂಗ್‍ನ ವ್ಯವಹಾರದಲ್ಲಿ 12 ಸೆಕೆಂಡ್ ಗೆ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿತ್ತು. ಆದ್ರೆ ಈಗ ಅದು 8 ಸೆಕೆಂಡಿಗೆ ಬಂದು ನಿಂತಿದೆ. ಅಂದರೆ ವ್ಯವಹಾರವೊಂದಕ್ಕೆ 8 ಸೆಕೆಂಡಿನಲ್ಲಿಯೇ ಉತ್ತರಗಳು, ಪ್ರತಿಕ್ರಿಯೆಗಳು ಒದಗಿ ಬರುತ್ತಿವೆ. ಆದರೆ ಈ 8 ಸೆಕೆಂಡ್ ನಿಂದ 5 ಸೆಕೆಂಡ್‍ಗೆ ಪ್ರತಿಕ್ರಿಯೆಯನ್ನು ಈ ವರ್ಷ ನಿರೀಕ್ಷೆ ಮಾಡಲಾಗುತ್ತದೆ. ಈಗಿನ ಕಾಲಮಾನ ಪ್ರಕಾರ ಮಾರ್ಕೆಟ್‍ನಲ್ಲಿ 8 ಸೆಕೆಂಡ್ ಒಳಗಾಗಿ ನಿಮ್ಮ ವ್ಯವಹಾರಕ್ಕೆ ಪ್ರತಿಕ್ರಿಯೆ ಸಿಗದೇ ಇದ್ದಲ್ಲಿ ವ್ಯವಹಾರ ನಡೆಸುವುದು ತುಸು ಕಷ್ಟವೇ ಆಗುತ್ತದೆ.

ಕಂಟೆಂಟ್​​ ಮಾರ್ಕೆಟಿಂಗ್‍ನಲ್ಲಿ ವಿಡಿಯೋಗಳು ತುಂಬಾ ಮುಖ್ಯವಾದ ಪಾತ್ರ ನಿರ್ವಹಿಸುತ್ತವೆ. ಈಗ ಮಿಲಿಯನ್‍ಗಟ್ಟಲೆ ಜನ ವಿಡಿಯೋಗಳನ್ನೇ ಹೆಚ್ಚು ನೋಡುತ್ತಾರೆ. ವಿಡಿಯೋಗಳು ಸಹ ಅಷ್ಟು ಆಕರ್ಷಕವಾಗಿರುತ್ತವೆ. ಮಾರ್ಕೆಟಿಂಗ್ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋಗಳ ಮೂಲಕ ತೋರಿಸಿಕೊಡುವ ಹೊಸ ಟ್ರೆಂಡ್ ಈಗಿನದು. ಕಂಪನಿಗಳು ತಮ್ಮದೇ ಆದ ಆಕರ್ಷಿತವಾದ ಆನ್‍ಲೈನ್ ವಿಡಿಯೋಗಳನ್ನು ಹೊಂದಿದ್ದು, ಆ ಮೂಲಕವೇ ಕಂಪನಿ ಬಗ್ಗೆ ಪ್ರತಿಕ್ರಿಯೆ ಪಡೆಯುವುದು ತುಂಬಾ ಪ್ರಭಾವಿಯಾಗಿರುತ್ತದೆ.

ಆನ್‍ಲೈನ್ ವೀಡಿಯೋಗಳು ಹೀಗಿರಬೇಕು

1: ವೀಡಿಯೋ ತುಂಬಾ ಚಿಕ್ಕದಾಗಿರಬೇಕು. 30 ಸೆಕೆಂಡ್‍ಗಿಂತ ಜಾಸ್ತಿಯಾಗಿರಬಾರದು

2: ವೀಡಿಯೋ ನೋಡುಗರಿಗೆ ಬೇಸರ ತರಿಸಬಾರದು. ಅವರು ನೋಡುತ್ತಿರುವ ವೀಡಿಯೋ 5 ಸೆಕೆಂಡ್ ಒಳಗಾಗಿ ಅವ್ರನ್ನು ಹಿಡಿದಿರಿಸಬೇಕು

3: ಮೊಬೈಲ್ ವೀಡಿಯೋಗಳಲ್ಲಿ ಪ್ರಾದೇಶಿಕತೆ ಇರಬೇಕು. ಆ ಪ್ರದೇಶದ ಜನರಿಗೆ ತಕ್ಕ ಹಾಗೆ ಭಾಷೆ, ಶೈಲಿ ಇರಬೇಕು.

4: ಆ ನಿರ್ದಿಷ್ಟ ವೀಡಿಯೋ ಏನು ಸಂದೇಶವನ್ನು ಕೊಡ್ತಾ ಇದೆ ಎನ್ನೋದನ್ನು ಮಾತ್ರ ಜನ ಕೇಂದ್ರೀಕರಿಸುವಂತಾಗಿರಬೇಕು. ಹೊರತಾಗಿ ಆ ವೀಡಿಯೋ ಎಲ್ಲಿ ಯಾವಾಗ ಮತ್ತು ಯಾವ ಆಯಾಮದಲ್ಲಿ ತೆಗೆದಿದ್ದಾರೆ ಅನ್ನೋದು ನೋಡುಗರು ಯೋಚನೆ ಮಾಡದ ಹಾಗೆ ಹಿಡಿದಿಟ್ಟುಕೊಳ್ಳಬೇಕು.

ಸೋಷಿಯಲ್ ಮೀಡಿಯಾಗಳ ಬಳಕೆ

ಈಗಾಗಲೇ ಮಿಲಿಯನ್‍ಗಟ್ಟಲೆ ಜನ ಸೋಷಿಯಲ್ ಮೀಡಿಯಾಗಳನ್ನು ಬಳಸುತ್ತಿದ್ದಾರೆ. ಇನ್ಸ್ಟ್ರಾಗ್ರಾಮ್, ವಾಟ್ಸ್​​ಅಪ್​, ಫೇಸ್ ಬುಕ್ ಮತ್ತು ಸ್ನ್ಯಾಪ್ ಚಾಟ್‍ಗಳಂತಹ ಸೋಷಿಯಲ್ ಮೀಡಿಯಾಗಳು ಈಗ ತುಂಬಾ ಚಾಲ್ತಿಯಲ್ಲಿವೆ. ಕಂಪನಿ ಪ್ರಮೋಷನ್ ಮಾಡಲು ಇಂತಹ ಪ್ರಭಾವಿ ಸೋಷಿಯಲ್ ಮೀಡಿಯಾಗಳನ್ನು ಬಳಸಿಕೊಳ್ಳಬೇಕು.

ಕಂಪನಿಯನ್ನು ವಿಡಿಯೋ ಅಥವಾ ಫೋಟೋಗಳ ಮೂಲಕ ಪ್ರಮೋಷನ್ ಮಾಡಬೇಕಾದರೆ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರಬೇಕು.

1: ಲೋಗೊಗಳಲ್ಲಿ ಕೆಂಪು ಬಣ್ಣ ಬಳಸಿದ್ರೆ ಅದು ತುಂಬಾ ಆಕರ್ಷಕವಾಗಿರುತ್ತದೆ. ಕೆಂಪು ಬಣ್ಣ ತುಂಬಾ ಆಕರ್ಷಿತವಾಗಿದ್ದು ಇದು ನೋಡುಗರ ಗಮನ ಸೆಳೆಯುತ್ತದೆ.

2: ಮುಖ್ಯವಾಗಿ ಯುವ ಜನಾಂಗಕ್ಕೆ ಆಕರ್ಷಿತವಾಗುವಂತಹ ಇಮೇಜ್‍ಗಳು ಇರಬೇಕು. ಒಂದು ಫೋಟೋ ಅಥವಾ ಒಂದು ವೀಡಿಯೋ ಕಂಪನಿಯ ಎಲ್ಲ ಮಾಹಿತಿಯನ್ನು ಹೇಳುವಂತದ್ದಾಗಿರಬೇಕು.

3: ಫೋಟೋ ಮತ್ತು ವೀಡಿಯೋಗಳು ಧನಾತ್ಮಕ ಭಾವನೆಯನ್ನು ಹುಟ್ಟಿಸುವಂತದ್ದಾಗಿರಬೇಕು

4: ವೀಡಿಯೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಅಪ್‍ಲೋಡ್ ಮಾಡುವುದನ್ನು ಮಾತ್ರ ಮರೆಯಬಾರದು. ಅದು ರವಿವಾರದಂದು ಅಪ್‍ಲೋಡ್ ಮಾಡಿದರೆ ತುಂಬಾ ಜನಕ್ಕೆ ಅದು ತಲುಪುತ್ತದೆ. ಇದು ನಾನು ಈ ಹಿಂದೆ ಮಾಡಿದ ಸಂಶೋಧನೆಯ ಉತ್ತರವಾಗಿದೆ.

ವಾಸ್ತವಿಕ ಅಂಶಗಳು:

ಈ ಮೇಲಿನ ವಾಸ್ತವಿಕ ಅಂಶಗಳು ಮಾರ್ಕೆಟಿಂಗ್‍ನಲ್ಲಿ ವರ್ಷದ ಮುಖ್ಯ ಅಂಶಗಳಾಗಿರುತ್ತವೆ. 360 ಡಿಗ್ರಿ ಆಯಾಮದಲ್ಲಿ ಸಂಶೋಧನೆ ಮಾಡಿ ಈ ಎಲ್ಲ ಮಾಹಿತಿಗಳನ್ನು ನಿಮಗಾನಿ ನೀಡಲಾಗಿದೆ. ಇದೇ ತರಹ ಮಾರ್ಕೆಂಟಿಂಗ್‍ನಲ್ಲಿ ಸಂಶೋಧನೆ ಮಾಡಿ ನಿರಂತರವಾದ ಪ್ರತಿಕ್ರಿಯೆಗಳನ್ನು ನೀಡುತ್ತಾ ಇರುತ್ತೇವೆ.

ತಂತ್ರಜ್ಞಾನ ಬೆಳೆದ ಹಾಗೆ ವೀಡಿಯೋ ಹಾಗೂ ಇ- ಕಾಮರ್ಸ್ ಗೆ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಬರುತ್ತದೆ. ಈ ಮೂಲಕ ಕಂಪನಿ ಮತ್ತು ಮಾರ್ಕೆಟಿಂಗ್ ಅನ್ನು ಇನ್ನೂ ಆಕರ್ಷಿತವಾಗಿ ಪ್ರಮೋಷನ್ ಮಾಡಬಹುದು.

ಉಪಸಂಹಾರ: ಜನ ಅಥವಾ ನೋಡುಗ ಸೋಷಿಯಲ್ ಮೀಡಿಯಾದಲ್ಲಿ ನೀವು ಪೋಸ್ಟ್ ಮಾಡಿದ ವೀಡಿಯೋಗಳನ್ನು ಲೈಕ್, ಕಮೆಂಟ್ ಮತ್ತು ಶೇರ್ ಮಾಡುವ ಮೂಲಕ ನಿಮಗೆ ಒಳ್ಳೆಯ ಪ್ರಮೋಷನ್ ಸಿಗುತ್ತದೆ. ಹಾಗಾಗಿ ಸೋಷಿಯಲ್ ಮೀಡಿಯಾದ ಬಳಕೆ ಬಗ್ಗೆ ಅಸಡ್ಡೆ ತೋರಬೇಡಿ ಈಗಿನ ಕಾಲದಲ್ಲಿ ಸೋಷಿಯಲ್ ಮೀಡಿಯಾ, ತುಂಬಾ ಕಂಪನಿಗಳ ಮಾರ್ಕೆಟಿಂಗ್‍ಗೆ ತುಂಬಾ ಪ್ರಭಾವಶಾಲಿಯಾಗಿ ಉಪಯೋಗವಾಗುತ್ತದೆ.


ಅನುವಾದಕರು: ಚೈತ್ರಾ