ಇನ್ವೆಸ್ಟ್ ಕರ್ನಾಟಕ - 2016ರ ಪ್ರಮುಖ ಹೂಡಿಕೆಗಳು ಮತ್ತು ಅವಕಾಶ

ಟೀಮ್ ವೈ.ಎಸ್​.ಕನ್ನಡ

0

ಕರ್ನಾಟಕಕ್ಕೆ ಈ ವರ್ಷಾರಂಭ ಭರ್ಜರಿಯಾಗೇ ಶುರುವಾಗಿದೆ. ಇನ್ವೆಸ್ಟ್ ಕರ್ನಾಟಕ 2016ರ ಉದ್ಘಾಟನಾ ದಿನವಾದ ಫೆಬ್ರವರಿ 3ರಂದೇ ರಾಜ್ಯ ಸರ್ಕಾರ ಪ್ರಮುಖ ಹೂಡಿಕೆಗಳು ಮತ್ತು ಯೋಜನೆಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಕರ್ನಾಟಕ ಮೂರು ದಿನದ ಜಾಗತಿಕ ಬಂಡವಾಳ ಸಮಾವೇಶದಿಂದ 1ಲಕ್ಷ ಕೋಟಿ ಹೂಡಿಕೆಯನ್ನು ನಿರೀಕ್ಷೆ ಮಾಡಿದೆ.

ಘೋಷಣೆ ಮಾಡಿದ ಪ್ರಮುಖ ಹೂಡಿಕೆಗಳು:

ಆದಿತ್ಯ ಬಿರ್ಲಾ ಗ್ರೂಪ್​ನಿಂದ ಟೆಲಿಕಾಂ, ಜವಳಿ ಮತ್ತು ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ 2 ಸಾವಿರ ಕೋಟಿ ಹೂಡಿಕೆ.

ಅನಿಲ್ ಧೀರೂಬಾಯಿ ಅಂಬಾನಿ ಗ್ರೂಪ್​ನಿಂದ ಬೆಂಗಳೂರಿನಲ್ಲಿ ಧೀರೂಬಾಯಿ ಅಂಬಾನಿ ತಂತ್ರಜ್ಞಾನ ಕೇಂದ್ರ ಮತ್ತು ಏರೋಸ್ಪೇಸ್ ನಾವಿನ್ಯ ಕ್ಷೇತ್ರ ಪ್ರಾರಂಭ.

ವಿದ್ಯುತ್ ಕ್ಷೇತ್ರದಲ್ಲಿ 11,500 ಕೋಟಿರೂ ಹೂಡಿಕೆ ಮಾಡಲು ಅದಾನಿ ಗ್ರೂಪ್ ಯೋಜನೆ.

ಮುಂದಿನ ಮೂರು-ನಾಲ್ಕು ವರ್ಷದಲ್ಲಿ ಕರ್ನಾಟಕದಲ್ಲಿ 35,000 ಕೋಟಿ ಹೂಡಿಕೆ ಮಾಡುವುದಾಗಿ ಜೆಎಸ್ ಡಬ್ಲ್ಯೂ ಭರವಸೆ.

ರಾಬರ್ಟ್ ಬಾಷ್ 2016ರಲ್ಲಿ 1000 ಕೋಟಿ ಹೂಡಿಕೆಗೆ ಯೋಜನೆ.

ಇನ್ಫೋಸಿಸ್ ತನ್ನ 4ನೇ ಅಭಿವೃದ್ಧಿ ಕೇಂದ್ರವನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭಿಸೋದಾಗಿ ಘೋಷಣೆ.

ವಿಪ್ರೋ ಐಟಿಯಿಂದ ಕರ್ನಾಟಕದಲ್ಲಿ 25 ಸಾವಿರ ಜನರಿಗೆ ಉದ್ಯೋಗ.

ಹೆದ್ದಾರಿ ಸಚಿವಾಲಯದಿಂದ ರಾಜ್ಯದಲ್ಲಿ 4 ಸಾವಿರ ಕಿಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ. ಕರ್ನಾಟಕದ ರಸ್ತೆ ಅಭಿವೃದ್ಧಿಗಾಗಿ ಡಿಸೆಂಬರ್ 2016ರ ಒಳಗೆ 60ಸಾವಿರ ಕೋಟಿ ಹೂಡಿಕೆ. 2017ರಲ್ಲಿ 40 ಸಾವಿರ ಕೋಟಿ ರಾಷ್ಟ್ರೀಯ ಹೆದ್ದಾರಿ ಮೇಲೆ ಹಾಗೂ 200 ಕೋಟಿ ಬಂದರು ಅಭಿವದ್ಧಿಗೆ ಹೂಡಿಕೆ.

ರಾಜ್ಯ ಸರ್ಕಾರದಿಂದ ಕರ್ನಾಟಕದಲ್ಲಿ ನ್ಯಾಷನಲ್ ಇನ್ಸ್​ಟಿ ಟ್ಯೂಟ್ ಆಫ್ ಫಾರ್ಮಾಸುಟಿಕಲ್ ಎಜುಕೇಶನ್ & ರಿಸರ್ಚ್ ಸೆಂಟರ್ ಪ್ರಾರಂಬಿಸುವ ಪ್ರಸ್ತಾವನೆ.

ಉತ್ತರ ಕರ್ನಾಟಕದಲ್ಲಿ 1.3 ದಶಲಕ್ಷ ಸಾಮರ್ಥ್ಯದ ಯೂರಿಯಾ ಉತ್ಪಾದನಾ ಘಟಕ ನಿರ್ಮಾಣಕ್ಕೆ ಯೋಜನೆ.

ಸೆಂಟ್ರಲ್ ಇನ್ಸ್​ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಬೆಂಗಳೂರಿನಲ್ಲಿ ಪ್ರಾರಂಭ

ಸಂಶೋಧನೆ, ನಾವಿನ್ಯತೆ ಮತ್ತು ಹೂಡಿಕೆ

“ಕೈಗಾರಿಕೀಕರಣ ಇಲ್ಲವೇ ನಾಶ” ಎಂಬ ಮಾತನ್ನು ಸರ್.ಎಂ. ವಿಶ್ವೇಶ್ವರಯ್ಯನವರಿಂದ ಎರವಲು ಪಡೆದ ರಾಜ್ಯದ ಬಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ಆ ಘೋಷಣೆ ಮೇಲೆ ರಾಜ್ಯ ಸರ್ಕಾರ ಕೆಲಸ ಮಾಡಿ ಭವಿಷ್ಯ “ಇಲ್ಲಿಯೇ ಮತ್ತು ಈ ಕೂಡಲೇ” ಎನ್ನುವಂತೆ “ಕರ್ನಾಟಕದಲ್ಲಿ ಸಂಶೋಧಿಸಿ, ನಾವಿನ್ಯತೆ ಹಾಗೂ ಹೂಡಿಕೆ ಮಾಡಿ” ಎಂದು ಒತ್ತಾಯಿಸಿದರು.

ಇನ್ವೆಸ್ಟ್ ಕರ್ನಾಟಕ ಸಭೆಗೆ ಪೂರ್ವಭಾವಿಯಾಗಿ, 2014-19 ರ ಕೈಗಾರಿಕಾ ನೀತಿಯು ವಾರ್ಷಿಕ 12% ಬೆಳವಣಿಗೆಯ ಗುರಿ ಹೊಂದಬೇಕು ಮತ್ತು 5 ಲಕ್ಷ ಕೋಟಿ ಹೂಡಿಕೆಯನ್ನು ಸೆಳೆಯಬೇಕು, ಜತೆಗೆ ಮುಂದಿನ 5 ವರ್ಷದಲ್ಲಿ 15 ಲಕ್ಷ ಉದ್ಯೋಗವನ್ನು ಸೃಷ್ಟಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದ್ದರು. ಅವರೇ ಹೇಳುವಂತೆ “ಕಳೆದೆರಡು ವರ್ಷದಲ್ಲಿ ರಾಜ್ಯ ಸರ್ಕಾರ ರೂ1.21ಲಕ್ಷ ಕೋಟಿ ಮೌಲ್ಯದ ಸುಮಾರು 450 ಯೋಜನೆಗಳಿಗೆ ಅನುಮತಿ ನೀಡಿದ್ದು, ಅದರಿಂದ 2.44 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಆದ್ರೆ ಇನ್ನೂ ಮಾಡಬೇಕಾದ್ದು ಸಾಕಷ್ಟಿದೆ”.

ಕಾರ್ಪೊರೇಟ್ ಮುಖ್ಯಸ್ಥರು, ಕೈಗಾರಿಕೋದ್ಯಮಿಗಳು, ಅಂತರಾಷ್ಟ್ರೀಯ ಗಣ್ಯರು ಹಾಗೂ ರಾಜಕಾರಣಿಗಳು ಪಾಲ್ಗೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಣಕಾಸು , ಮಾಹಿತಿ ಮತ್ತು ಪ್ರಸಾರ, ಕಾರ್ಪೊರೇಟ್ ವ್ಯವಹಾರ ಖಾತೆ ಸಚಿವ ಅರುಣ್ ಜೇಟ್ಲಿ, ಪ್ರಸ್ತುತ ದೇಶದಲ್ಲಿರೋ ವ್ಯಾಪಾರ ಅವಕಾಶ ಮತ್ತು ದೇಶದ ಆರ್ಥಿಕ ಪ್ರಗತಿ ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರ ಯಾವುದೇ ಕಲ್ಲನ್ನು ಹಿಂದಿರುಗಿಸದೇ ಪ್ರಯೋಜನಗಳನ್ನು ಬಾಚಿಕೊಳ್ತಿದೆ ಎಂದರು.

ಹವಾಮಾನದ ಬಗ್ಗೆ ಮಾತನಾಡುತ್ತಾ, ‘ಕರ್ನಾಟಕದಲ್ಲಿ ಹೂಡಿಕೆಗೆ 10 ಕಾರಣಗಳು’ ಇದರಲ್ಲಿ ರಾಜಧಾನಿ ಬೆಂಗಳೂರು ಅನಿವಾಸಿಗಳಿಗೆ ವಾಸಿಸಲು ಮತ್ತು ಕೆಲಸಕ್ಕೆ ಇಡೀ ದೇಶದಲ್ಲೇ ಹೇಗೆ ಅತ್ಯುತ್ತಮ ಅಪೇಕ್ಷಣೀಯ ಹವಾಮಾನದ ಸ್ಥಳವಾಯಿತು ಎಂದು ರಾಜ್ಯ ಸರ್ಕಾರ ಉಲ್ಲೇಖಿಸಿದೆ. ಇದೇ ವಿಷಯ ಉದ್ಘಾಟನಾ ಸಮಾರಂಭದಲ್ಲಿ ಪ್ರತಿಧ್ವನಿಸಿದೆ.

ಆಗಿನ ಭಾರೀ ಎಂಜಿನಿಯರಿಂಗ್ ಕೈಗಾರಿಕೆಯಾದ ಬಿಇಎಂಎಲ್ ಅಥವಾ ಉನ್ನತ ಶಿಕ್ಷಣ ಸಂಸ್ಥೆಯಾದ ಐಐಎಸ್ಸಿ ಪ್ರಾರಂಭದಿಂದ ಇತ್ತೀಚೆಗಿನ ಮಾಹಿತಿ ತಂತ್ರಜ್ಞಾನ ಮತ್ತು ಸ್ಟಾರ್ಟ್ಅಪ್ ಘರ್ಜನೆಗಳಿರಬಹುದು, ಇದಕ್ಕೆಲ್ಲ ಪ್ರಮುಖ ಕಾರಣವಾಗಿದ್ದು ರಾಜಧಾನಿಯ ಹಿತಕರ ವಾತಾವರಣ ಅಂದ್ರೆ ನಂಬಲೇಬೇಕು.

ಪ್ರಸ್ತುತ ಬೆಂಗಳೂರಿನ ಮೂಲಸೌಕರ್ಯದ ಅವಸ್ಥೆಯನ್ನು ನೋಡುತ್ತಿದ್ದರೆ, ಇದು ಹವಾಮಾನ ಬದಲಾವಣೆಗಿಂತಲೂ ಮುಂಚೆ ಆಗಿದ್ದಲ್ಲ. ನಗರವನ್ನು ವಾಸಯೋಗ್ಯವನ್ನಾಗಿ ಮಾಡಲು ಮೂಲಸೌಕರ್ಯದ ಕೂಲಂಕುಷ ಬದಲಾವಣೆಯ ಅಗತ್ಯವಿದೆ ಎಂದು ಐಟಿ ದಿಗ್ಗಜರಾದ ನಾರಾಯಣ ಮೂರ್ತಿ ಮತ್ತು ಅಜೀಂ ಪ್ರೇಂಜಿ ಎಚ್ಚರಿಕೆ ನೀಡಿದರು.

ನೀವು ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬೇಟಿ ಕೊಡುವವರಿದ್ದರೆ ಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಲು ಮರೆಯಬೇಡಿ. 300 ಕ್ಕೂ ಹೆಚ್ಚು ಪ್ರದರ್ಶಕರಿರುವ ಕೃಷಿ, ವಿದ್ಯುತ್, ಜೀವಶಾಸ್ತ್ರ, ಪ್ರವಾಸೋದ್ಯಮ, ಏರೋಸ್ಪೇಸ್, ಐಟಿ ಇನ್ನೂ ಮುಂತಾದ ಬೇರೆ ಬೇರೆ ಕ್ಷೇತ್ರಗಳ ಪ್ರದರ್ಶನದಲ್ಲಿ ರಾಜ್ಯ ಸರ್ಕಾರದ ಪ್ರಗತಿ ಮತ್ತು ಅಭಿವೃದ್ಧಿಯ ಬಗ್ಗೆ ಅತಿ ವೇಗವಾಗಿ ಒಂದು ಪ್ರವಾಸದ ಅನುಭವ ಪಡೆಯುವಿರಿ.

Related Stories