ಸಂಗೀತ ಮತ್ತು ನೃತ್ಯದಿಂದಲೇ ತಿರುಗುತ್ತೆ ಶುಭ್ರಾರ ಜೀವನಚಕ್ರ

ಟೀಮ್​​ ವೈ.ಎಸ್​. ಕನ್ನಡ

ಸಂಗೀತ ಮತ್ತು ನೃತ್ಯದಿಂದಲೇ ತಿರುಗುತ್ತೆ ಶುಭ್ರಾರ ಜೀವನಚಕ್ರ

Tuesday December 08, 2015,

4 min Read

ನೀವೆಲ್ಲಿದ್ದೀರೋ ಅಲ್ಲಿಂದಲೇ ಆರಂಭಿಸಿ, ನಿಮ್ಮಲ್ಲಿ ಏನಿದೆಯೋ ಅದನ್ನೇ ಬಳಸಿ, ತಲೆ ಬಾಗಿಸಿ ನೀವು ಏನನ್ನು ಮಾಡಬಲ್ಲಿರೋ ಅದನ್ನು ಮಾಡಿರಿ, ಅಂತಿಮ ಫಲಿತಾಂಶದ ಮೇಲೆ ಗಮನ ಕೇಂದ್ರೀಕರಿಸಿ, ಉಳಿದದ್ದೆಲ್ಲವೂ ನಗಣ್ಯ.

ಇದೇ ಧ್ಯೇಯದೊಂದಿಗೆ ಶುಭ್ರಾ ಭಾರಧ್ವಾಜ್ ಅವರು ತಮ್ಮ 20ನೇ ವಯಸ್ಸಿನಲ್ಲಿಯೇ ಕಂಪನಿ ಸ್ಥಾಪಿಸಿದರು. ಈಗ ಅದಕ್ಕೆ 15 ವರ್ಷ.

ಎಲ್ಲರಿಗಿಂತಲೂ ವಿಭಿನ್ನವಾಗಿರಬೇಕು ಎಂಬ ಕಲ್ಪನೆಯೊಂದಿಗೆ ಅವರು 2009ರಲ್ಲಿ ಫೆರಿಸ್ವೀಲ್ ಎಂಬ ಎಂಟರ್​​ಟೈನ್​​ಮೆಂಟ್​​ ಸಂಸ್ಥೆ ಸ್ಥಾಪಿಸಿದರು. ಮುಂಬೈನಿಂದ ಹೊರಗೆ ಸ್ಥಾಪಿತಗೊಂಡಿದ್ದರೂ, ಫರಿಸ್ವೀಲ್, ಪರಿಕಲ್ಪನೆ, ನಿರ್ಮಾಣ, ನಿರ್ದೇಶನ ಕೆಲಸಗಳಲ್ಲಿ ತೊಡಗಿಕೊಂಡಿದೆ. ಪ್ರದರ್ಶನಗಳು, ಮೇಳಗಳು, ಉತ್ಸವಗಳು, ಸಾಂಸ್ಕೃತಿಕ, ಕ್ರೀಡೆ ಮತ್ತು ಎಂಟರ್​​ಟೈನ್​​ಮೆಂಟ್​​​ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಛಾಪು ಮೂಡಿಸಿದೆ.

image


ಗೇಮ್ ಡೆಲ್ಲಿ 2010, ಚೊಚ್ಚಲ ಏಷ್ಯನ್ ಚಳಿಗಾಲದ ಕ್ರೀಡಾಕೂಟ, ಡೆಹ್ರಾಡೂನ್ 2011, ದೋಹಾ ಏಷ್ಯನ್ ಗೇಮ್ಸ್ 2006 ಮೊದಲಾದ ಕ್ರೀಡಾಕೂಟಗಳು ಇವರ ಕಿರೀಟದಲ್ಲಿವೆ.

ಈ ಸಂಸ್ಥೆಯ ಜೊತೆ ದೇಶಾದ್ಯಂತ ಹಾಗೂ 62 ದೇಶಗಳಲ್ಲಿ ಸುಮಾರು 30,000 ಕಲಾವಿದರು ಕೆಲಸ ಮಾಡುತ್ತಿದ್ದಾರೆ. “ನಾವು ಗ್ರಾಸ್ರೂಟ್ ಲೆವೆಲ್​​ನಿಂದಲೇ ಆರಂಭಿಸಿದೆವು. 20 ವರ್ಷಗಳಿಂದ ನನಗೆ ಸಂಪರ್ಕವಿದ್ದ ಕಲಾವಿದರ ಜೊತೆ ಕೆಲಸ ಮಾಡುತ್ತಿದ್ದೇನೆ. ನಿಧಾನವಾಗಿ ದೊಡ್ಡದಾದ ಸಕ್ರಿಯ ಜಾಲವೊಂದನ್ನು ಸ್ಥಾಪಿಸಿದ್ದೇನೆ. ಈ ಮಾರುಕಟ್ಟೆ ಮತ್ತು ಉದ್ಯಮ ಹೆಚ್ಚು ಸಂಕೀರ್ಣ ಹಾಗೂ ವೃತ್ತಿಪರವಾಗುತ್ತಿದ್ದು, ನಾವು ವಿವಿಧ ಯೋಜನೆಗಳಿಗೆ ಪ್ರತ್ಯೇಕವಾಗಿ ಕಲಾವಿದರನ್ನು ನೇಮಿಸಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಶುಭ್ರಾ.

ಸಂಗೀತ ಮತ್ತು ನೃತ್ಯವೇ ನನ್ನ ಬದುಕಿಗೆ ಆತ್ಮ

ಹುಟ್ಟಿದ್ದು ಬರೋಡಾದಲ್ಲಿ. ಅಪ್ಪನ ಉದ್ಯೋಗ ನಿಮಿತ್ತ ಇವರೂ ದೇಶದ ಬೇರೆ ಬೇರೆ ನಗರಗಳಲ್ಲಿ ಶಿಕ್ಷಣ ಪಡೆಯುವಂತಾಗಿತ್ತು. ಬಾಲ್ಯದಿಂದಲೇ ಕಲೆ ಮತ್ತು ಸಂಸ್ಕೃತಿ ಎಂದರೆ ಶುಭ್ರಾ ಅವರಿಗೆ ಪಂಚಪ್ರಾಣವಾಗಿತ್ತು.

ಅವರು ತಮ್ಮ ಬಾಲ್ಯದ ಜೀವನವನ್ನೂ ಹಂಚಿಕೊಳ್ಳುತ್ತಾರೆ. ವಿನಿಮಯ ಕಾರ್ಯಕ್ರಮಗಳು, ಕ್ಯಾಂಪ್​​ಗ ಳಿಗೆ ಕಳುಹಿಸುವ ಮೂಲಕ ನನ್ನ ಪೋಷಕರು ನನಗೆ ಜೀವನದ ಎಲ್ಲಾ ಮಗ್ಗುಲುಗಳ ಪರಿಚಯ ಮಾಡಿದ್ದರು. ವಿಶಾಲವಾದ ಸಾಮಾಜಿಕ ತಳಹದಿಯ ಪರಿಚಯ ಮಾಡಿದ್ದರು. ಚಿಕ್ಕ ಜಿಲ್ಲೆಗಳಲ್ಲಿನ ಜೀವನ ನನಗೆ ಎಲ್ಲಾ ರೀತಿಯ ಪ್ರದರ್ಶನ ಕಲೆಗಳು ಮತ್ತು ಸಾಮಾನ್ಯ ಜೀವನದ ಪರಿಚಯ ಮಾಡಿಕೊಟ್ಟಿತ್ತು.

ಶಾಲೆಯಲ್ಲೂ ಪಠ್ಯೇತರ ಚಟುವಟಿಕೆಗಳಲ್ಲಿ ಅವರು ಸಿಕ್ಕಾಪಟ್ಟೆ ಕ್ರಿಯಾಶೀಲರಾಗಿದ್ದರು. ಅಂದ ಹಾಗೆ, ಕಾಲೇಜಿಗೆ ಅರ್ಧದಲ್ಲೇ ಗುಡ್​ ಬೈ ಹೇಳಿದ ಅವರು, ಟೆಕ್ಸ್​​ಟೈಲ್ ಪ್ರಿಂಟಿಂಗ್ ಮತ್ತು ಡೈಯಿಂಗ್​​ನಲ್ಲಿ ಅರೆಕಾಲಿಕ ಕೋರ್ಸ್ ಪಡೆದರು.

ಕಲಾವಿದರ ಜಾಲ

ಜಗತ್ತಿನ ವಿವಿಧ ಭಾಗಗಳಲ್ಲಿ20 ವರ್ಷಗಳ ಕಾಲ ಅವರು ಕೆಲಸ ಮಾಡಿದ್ದರು. ಹೀಗಾಗಿ, ಕಲಾವಿದರ ದೊಡ್ಡ ಜಾಲವೊಂದನ್ನು ರಚಿಸುವುದು ಅವರಿಗೆ ಸುಲಭದ ಕೆಲಸವಾಗಿತ್ತು.

“ನಮ್ಮ ಬಳಿ ಕಲಾವಿದರ ದೊಡ್ಡ ಪಡೆಯೇ ಇದೆ. ಹೀಗಾಗಿ, ಒರಿಜಿನಲ್ ವಿಚಾರಗಳನ್ನು ಹಾಗೂ ರಚನಾತ್ಮಕ ಐಡಿಯಾಗಳನ್ನು ಅತ್ಯಂತ ಸುಲಭವಾಗಿ ಮಾಡುತ್ತೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಂಸ್ಥೆಯ ಪರಿಚಯವೂ ಚೆನ್ನಾಗಿದೆ. ಹೀಗಾಗಿ ಅತ್ಯಾಧುನಿಕ ತಂತ್ರಜ್ಱಆನಗಳನ್ನು ಅಳವಡಿಸಿ, ಕೆಲಸ ಪೂರ್ಣಗೊಳಿಸುತ್ತೇವೆ,” ಎನ್ನುತ್ತಾರೆ ಶುಭ್ರಾ.

40 ಜನರ ಅವರ ತಂಡವು, ಕಠಿಣ ಪರಿಶ್ರಮ, ನಂಬಿಕೆ, ಮತ್ತು ಸಮಗ್ರತೆಯಲ್ಲಿ ವಿಶ್ವಾಸವಿಟ್ಟಿದೆ. “ನಾವು ಗುಣಮಟ್ಟದಲ್ಲಿ, ಗ್ರಾಹಕ ಸಂತೃಪ್ತಿಯಲ್ಲಿ, ವ್ಯಕ್ತಿಗತ ಗೌರವ, ಅವರ ಬೆಳವಣಿಗೆ ಮತ್ತು ಸ್ವಾತಂತ್ರ್ಯದಲ್ಲಿ ನಂಬಿಕೆ ಇಟ್ಟಿದ್ದೇವೆ. ಭಾರತದಲ್ಲಿ ಅಂತಿಮ ಲಾಭವನ್ನು ಗ್ರಾಹಕರಿಗೆ ಅಥವಾ ಕಲಾವಿದರಿಗೆ ತಲುಪಿಸಲಾಗದಂತಹ ವ್ಯವಸ್ಥೆ ಇದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ವೃತ್ತಿಪರತೆಯು ಬೇರೆಯದ್ದೇ ಹಂತದಲ್ಲಿ. ನಾವು ಆ ಸಂಸ್ಕೃತಿಯನ್ನು ಭಾರತದಲ್ಲಿ ಅಳವಡಿಸಲು ಯತ್ನಿಸುತ್ತಿದ್ದೇವೆ.” ಒಂದೇ ಬುಟ್ಟಿಯಲ್ಲಿ ಎಲ್ಲಾ ಮೊಟ್ಟೆಗಳನ್ನು ಹಾಕಲು ಬಯಸುವುದಿಲ್ಲ ಎನ್ನುತ್ತಾರೆ ಶುಭ್ರಾ.

ತಮ್ಮ ಸಂಸ್ಥೆಯಲ್ಲಿ ವಿವಿಧ ಕವಲುಗಳನ್ನು ರಚಿಸಿದ್ದು, ಪ್ರತಿಯೊಂದರಿಂದಲೂ ಆದಾಯ ಬರವಂತೆ ಶುಭ್ರಾ ತಂತ್ರ ರೂಪಿಸಿದ್ದಾರೆ. ಒಂದೇ ಜಾಗದಲ್ಲಿ ಎಲ್ಲಾ ಕೆಲಸಗಳು ಒಂದೇ ರೀತಿಯಲ್ಲಿ ಆಗದಿರಲಿ ಎನ್ನುವ ಸದುದ್ದೇಶ ಇದರ ಹಿಂದಿದೆ. ಕಾರ್ಯಕ್ರಮಗಳು ಹಾಗೂ ಸಂಭ್ರಮಾಚರಣೆಗಳು, ಶಿಕ್ಷಣ ಮತ್ತು ಸಾಂಸ್ಕೃತಿಕ ವಿನಿಮಯ, ಪ್ರೊಡಕ್ಷನ್ಸ್, ಜಾತ್ರೆಗಳು ಹೀಗೆ ತಮ್ಮ ಸಂಸ್ಥೆಯಲ್ಲಿ ಒಟ್ಟು 5 ಉಪವಿಭಾಗಗಳನ್ನು ಆರಂಭಿಸಿದ್ದಾರೆ ಶುಭ್ರಾ.

ಎಂದಿಗೂ ಹಿಂಜರಿಯಬೇಡಿ

ಎಂದಿಗೂ ಹಿಂಜರಿಯಬೇಡಿ. ಇಟ್ಟ ಹೆಜ್ಜೆ ಹಿಂದೆ ಇಡಬೇಡಿ ಎನ್ನುವುದು ಇವರ ಬ್ಯುಸಿನೆಸ್ ಮಂತ್ರ. ನಿಮ್ಮ ಮೇಲೆ ವಿಶ್ವಾಸವಿಡಿ. ನಿಮ್ಮ ನಂಬಿಕೆಯೇ ನಿಮ್ಮ ಗೆಲುವಿನ ಹಾದಿ ಎನ್ನುತ್ತಾರೆ ಶುಭ್ರಾ.

ಕೆಲಸದಿಂದಾಗಿ ಹೆಚ್ಚಿನದನ್ನು ಕಲಿತಿಲ್ಲ. ಆದರೆ, ಬದುಕಿನ ಅನುಭವಗಳೇ ಹೆಚ್ಚು ಪಾಠ ಕಲಿಸಿವೆ ಎನ್ನುತ್ತಾರೆ ಶುಭ್ರಾ. ಬದುಕನ್ನು ಚೆನ್ನಾಗಿ ಅರ್ಥಮಾಡಿಕೊಂಡ ಕಾರಣ, ನನಗೆ ಜೀವನ ದೊಡ್ಡ ಮ್ಯಾರಥಾನ್ ಎನ್ನಿಸಿತು. ಇದು ಖಂಡಿತಾ 100 ಮೀಟರ್ ಓಟವಲ್ಲ” ಎನ್ನುತ್ತಾರೆ ಶುಭ್ರಾ.

ಉನ್ನತ ದಿನಗಳು

ದೊಡ್ಡ ಪ್ರಮಾಣದ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅವರ ಇಷ್ಟ ಪಡುತ್ತಾರೆ. ಅವರು ನಮ್ಮ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಾರೆ. ಹೆಚ್ಚು ಕೆಲಸ ತೆಗೆದುಕೊಳ್ಳುತ್ತಾರೆ. ಸಾಮಾನ್ಯ ಸ್ಟೇಡಿಯಂ ಒಂದನ್ನು ತುಂಬಾ ಅದ್ಭುತವಾಗಿ ಸಿಂಗರಿಸುವುದು ಎಂದರೆ ನನಗೆ ತುಂಬಾ ಖುಷಿ ಕೊಡುತ್ತದೆ ಎನ್ನುತ್ತಾರೆ ಶುಭ್ರಾ.

2010ರ ಕಾಮನ್ವೆಲ್ತ್ ಗೇಮ್ಸ್, ದೋಹಾ ಏಷ್ಯನ್ ಗೇಮ್ಸ್ ಈ ಸಾಲಿಗೆ ಸೇರುತ್ತವೆ. ಕಾಮನ್ವೆಲ್ತ್ ಗೇಮ್ಸ್ ವೇಳೆ ಹಲವು ವೈವಿಧ್ಯಮಯ ಹಿನ್ನೆಲೆಯ ಸಂಸ್ಥೆಗಳೊಂದಿಗೆ ಸಂಯೋಗ ಸಾಧಿಸಬೇಕಿತ್ತು. ಅದು ದೊಡ್ಡ ಸವಾಲಾಗಿತ್ತು.

ದೋಹಾ ಏಷ್ಯನ್ ಗೇಮ್ಸ್ ಮೂಲಕ ಇವರು ಅಂತಾರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಛಾಪು ಮೂಡಿಸಿದರು. ಇದು ನಮ್ಮ ಕಣ್ಣು ತೆರೆಸಿದ ಕಾರ್ಯಕ್ರಮವಾಗಿತ್ತು. ಅಲ್ಲದೆ, ಜಗತ್ತಿನ ಅತ್ಯಂತ ಪ್ರತಿಭಾನ್ವಿಯ ತಂಡಗಳ ಜೊತೆ ಕೆಲಸ ಮಾಡುವ ಅವಕಾಶವೂ ಸಿಕ್ಕಿತ್ತು ಎನ್ನುತ್ತಾರೆ ಶುಭ್ರಾ. ನಮ್ಮ ಕ್ಷೇತ್ರದ ಘಟಾನುಘಟಿಗಳೆಲ್ಲಾ ಒಂದೆಡೆ ಸೇರಿ ಈ ಕಾರ್ಯಕ್ರಮವನ್ನು ಅದ್ಭುತ ಎನ್ನುವಂತೆ ಮಾಡಿ ಮುಗಿಸಿದೆವು.

ಸವಾಲುಗಳೇನು?

ಪ್ರತಿಯೊಂದಕ್ಕೂ ಅಂತ್ಯ ಇದ್ದೇ ಇದೆ ಎನ್ನುವುದು ನನ್ನ ನಂಬಿಕೆ. ಹಣವನ್ನು ಮಾಡುವುದು ಮತ್ತು ಹಣದ ಹರಿವು ಚೆನ್ನಾಗಿರುವಂತೆ ನೋಡಿಕೊಳ್ಳುವುದು ಎಲ್ಲವೂ ಸ್ಪರ್ಧೆಯ ಭಾಗ. ಅದೆಂತಹ ಕಷ್ಟವೇ ಎದುರಾಗಲಿ ಹಿಡಿದ ಕೆಲಸ ಸಾಧಿಸುವುದು ನನ್ನ ಹಠ. ಸವಾಲುಗಳಿಗೆ ಪರಿಹಾರವನ್ನೂ ನಾನೇ ಕಂಡುಕೊಳ್ಳುತ್ತೇನೆ. ಮುಂದೇನು ಎನ್ನುವುದನ್ನೂ ನಾನೇ ಯೋಚಿಸುತ್ತೇನೆ ಎನ್ನುತ್ತಾರವರು.

ಇಲ್ಲಿಯವರೆಗಿನ ಅವರ ಯಶಸ್ಸು, ಸಾಧನೆ ಗಮನಿಸಿದರೆ ಶುಭ್ರಾರ ಶ್ರಮ ಅರ್ಥವಾಗುತ್ತದೆ. ಎಲ್ಲವೂ ತಮ್ಮ ವಿರುದ್ಧವಾಗಿದೆ ಎಂದುಕೊಂಡಾಗಲೆಲ್ಲಾ ಅವರು ತಮ್ಮ ಗುರಿಸಾಧನೆಯತ್ತಲೇ ಗಮನ ಕೇಂದ್ರೀಕರಿಸಿ ಯಶಸ್ಸು ಪಡೆಯುತ್ತಾರೆ.

image


ಉತ್ಸಾಹವೇ ಸ್ಫೂರ್ತಿ

ಅವರ ವ್ಯವಹಾರದ ಮುಖ್ಯ ಆಧಾರವೇ ಸಂಗೀತ ಮತ್ತು ಪ್ರದರ್ಶನ ಕಲೆ. ಈ ಕ್ಷೇತ್ರಗಳತ್ತ ಅವರ ಉತ್ಸಾಹವೇ ಅವರನ್ನು ಮುಂದುವರಿಯುವಂತೆ ಪ್ರೇರೇಪಿಸುತ್ತಿದೆ. ಯಾವುದೇ ಹೂಡಿಕೆದಾರರ ಬೆಂಬಲ ಪಡೆಯದೆ, ಬಂಡವಾಳ ಪಡೆಯದೆ, ಪಾಲುದಾರಿಕೆ ಪಡೆಯದೆ ಅವರು ತಮ್ಮ ಉದ್ಯಮದಲ್ಲಿ ಇಷ್ಟು ದೂರ ಮುಂದುವರಿದಿದ್ದಾರೆ. ಬೆಳೆದಿದ್ದಾರೆ. ಕೆಲವೊಮ್ಮೆ ಹಣಕಾಸಿನ ಒತ್ತಡ ಉಂಟಾಗುತ್ತದೆ. ಆದರೆ, ಅವರ ಸಂಸ್ಥೆ 300 % ಬೆಳವಣಿಗೆ ಸಾಧಿಸಿರುವುದೇ ಅವರ ಉತ್ಸಾಹ ಇಮ್ಮಡಿಗೊಳಿಸಿದೆ. ಮಾರುಕಟ್ಟೆಯಲ್ಲೂ ದೊಡ್ಡ ಪಾಲು ಪಡೆದಿದೆ. ಇಂತಹ ಸಾಧನೆಗಳ ಮುಂದೆ ಸವಾಲುಗಳೆಲ್ಲಾ ಚಿಕ್ಕದಾಗಿ ಕಾಣುತ್ತವೆ ಎನ್ನುತ್ತಾರೆ ಶುಭ್ರಾ.

ಭಾರತದಲ್ಲಿ ಪ್ರದರ್ಶನ ಕಲೆಯ ಮಾರುಕಟ್ಟೆಯನ್ನೇ ಬದಲಾಯಿಸಿಬಿಡಬೇಕು ಎನ್ನುವುದು ಅವರು ಆಶಯ. ಜನಸಾಮಾನ್ಯರಿಗೆ ಇವೆಲ್ಲವೂ ನೇರವಾಗಿ ಕೈಗೆಟಕುವಂತಾಗಬೇಕು ಎನ್ನುವುದು ಅವರ ಹಂಬಲ. ಅವರ ಆಸೆ ಈಡೇರಲಿ ಅಲ್ಲವೇ.

ಲೇಖಕರು: ತಾನ್ವಿ ದುಬೇ

ಅನುವಾದಕರು: ಪ್ರೀತಮ್​​​