ಜನರನ್ನು ಆಕರ್ಷಿಸುತ್ತಿರುವ ಬಾರ್ಬೆಕ್ಯು ರೆಸ್ಟೋರೆಂಟ್...

ಎನ್​​ಎಸ್​ಆರ್​​

0

ನಗರ ಬೆಳೆದೆಂತೆಲ್ಲ ವ್ಯಾಪಾರ ಮಾಡುವ ಹೊಸ-ಹೊಸ ವಿಧಾನಗಳು ಪರಿಚಯವಾಗುತ್ತಿವೆ. ವಿದೇಶದಲ್ಲಿ ಸೈ ಎನಿಸಿಕೊಂಡು, ಹೆಚ್ಚು ಪ್ರಚಾರದಲ್ಲಿರುವ ಬಾರ್ಬೆಕ್ಯು ರೆಸ್ಟೋರೆಂಟ್‌ ಈಗ ಬೆಂಗಳೂರಿನಲ್ಲಿ ಆರಂಭವಾಗಿದೆ. ಅಯ್ಯೋ ಇದೇನಪ್ಪಾ ಬಾರ್ಬೆಕ್ಯು ರೆಸ್ಟೋರೆಂಟ್‌ ಅಂತೀರಾ. ಸುಟ್ಟು ತಿನ್ನುವ ತಿನಿಸುಗಳು ಲಭ್ಯವಿರುವ ರೆಸ್ಟೋರೆಂಟ್‌ ಇದು. ಆದಿ ಮಾನವರು ಹೇಗೆ ಹಿಂದಿ ಎಲ್ಲ ವಸ್ತುಗಳನ್ನು ಸುಟ್ಟು ತಿನ್ನುತಿದ್ರೋ. ಈಗ ಅದೇ ಟ್ರೆಂಡ್ ನಗರ ಪ್ರದೇಶದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಜನರು ಸುಟ್ಟ ತಿನಿಸುಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಪದ್ದತಿ ಈಗ ಬಹಳ ಫೇಮಸ್ ಕೂಡ ಆಗಿದೆ. ಬಹಳಷ್ಟು ರೆಸ್ಟೋರೆಂಟ್‌ಗಳಲ್ಲಿ ಸುಟ್ಟ ಆಹಾರ ಸಿಗುತ್ತವೆ. ಅದಕ್ಕೆ ಬಾರ್ಬೆಕ್ಯು ರೆಸ್ಟೋರೆಂಟ್‌ ಅಂತ ಕರೆಯುತ್ತಾರೆ.

ಇದನ್ನು: ಪರಿಸರ ಉಳಿಸಿ ಬೆಳೆಸಲು ವಿನೂತನ ಪ್ರಯತ್ನ...ವೇಸ್ಟ್ ಪೇಪರ್ ಸಂಗ್ರಹಕ್ಕೆ ಮನೆಗೇ ಬರುತ್ತೆ ವಾಹನ...!

ಹಳ್ಳಿ ಜನರಿಗೆ ಹಳ್ಳಿಯಿಂದ ನಗರಕ್ಕೆ ಬಂದವರಿಗೆ ಸುಟ್ಟು ತಿನ್ನುವ ಪದ್ದತಿ ಹೊಸತೇನಲ್ಲ. ಹಳ್ಳಿಯಲ್ಲಿ ಹಲವು ವಸ್ತುಗಳನ್ನು ಸುಟ್ಟಿಕೊಂಡು ತಿಂದು ಅದರ ರುಚಿಯನ್ನು ಈಗಲು ಮೆಲುಕು ಹಾಕುತ್ತಿರುತ್ತಾರೆ. ಆದರೆ ಈಗ ಉದ್ಯಾನನಗರಿಯ ಜನರು ಕೂಡ ಸುಟ್ಟ ಆಹಾರ ಪದ್ದತಿಯ ಸವಿಯನ್ನು ಸವಿಯಬಹುದು. ಬೆಂಗಳೂರಲ್ಲಿ ಒಂದು ಇಂಟರೆಸ್ಟಿಂಗ್‌ ಬಾರ್ಬೆಕ್ಯು ರೆಸ್ಟೋರೆಂಟ್‌ ಇದೆ. ಸ್ಪಿಟ್‌ಫೈರ್‌ ಬಾರ್ಬೆಕ್ಯು ಅಂತ ಅದರ ಹೆಸರು. ಈ ರೆಸ್ಟೊರೆಂಟ್ ಈಗ ಸಖತ್ ಫೇಮಸ್ ಆಗಿದೆ.

ಆದರೆ ಒಂದ್ ಪ್ರಾಬ್ಲಂ ಎಂದರೆ ಈ ರೆಸ್ಟೋರೆಂಟ್ ಎಲ್ಲಿದೆ ಅಂತ ಕೇಳಿದರೆ ಹೇಳುವುದು ಅಸಾಧ್ಯ. ಯಾಕೆಂದರೆ ಇದೊಂದು ವ್ಯಾನ್. ವ್ಯಾನ್​​ನಲ್ಲೇ ಬಾರ್ಬೆಕ್ಯು ಆಹಾರ ಸಿದ್ಧಪಡಿಸಲಾಗುತ್ತದೆ. ಈ ಫುಡ್ ಟ್ರಕ್ ಎಲ್ಲಿ ಅಭಿಮಾನಿಗಳಿದ್ದಾರೋ ಅಲೆಲ್ಲಾ ಹೋಗಿ ನಿಂತುಕೊಳ್ಳುತ್ತದೆ. ತಿಂಡಿ ಪೋತರಿಗಂತು ಇದೊಂದು ಅದ್ಭುತ ರಸದೌತಣ. ವ್ಯಾನ್ ಬರುವುದನ್ನೆ ಕಾದು ಕುಳಿತಿರುತ್ತಾರೆ. ಸುಟ್ಟ ಆಹಾರ ಖಾದ್ಯಗಳನ್ನೆಲ್ಲಾ ಬಾಯಿ ಚಪ್ಪರಿಸಿ ಸವಿಯುತ್ತಾರೆ. ದಿನಕಳೆದಂತೆ ಬಾರ್ಬೆಕ್ಯು ರೆಸ್ಟೋರೆಂಟ್‌ ಅಭಿಮಾನಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ.

ಈ ಪುಡ್ ಟ್ರಕ್‌ನಲ್ಲಿ ಸಿಗೋ ಬಾರ್ಬೆಕ್ಯು ಖಾದ್ಯ ಸವಿಯಬೇಕು ಅಂತಂದ್ರೆ ನೀವು ಮಾಡಬೇಕಾದದ್ದು ಇಷ್ಟೆ. ಇದರ ಫೇಸ್‌ಬುಕ್‌ ಪೇಜ್‌ ಅನ್ನು ಫಾಲೋ ಮಾಡಬೇಕು. ಈ ಟ್ರಕ್‌ ಎಲ್ಲಿ ಹೋಗುತ್ತದೆ, ಯಾವಾಗ ಹೋಗುತ್ತದೆ ಎಂಬೆಲ್ಲಾ ಮಾಹಿತಿ ಸಿಗುತ್ತದೆ. ಆಗ ನೀವು ಅಲ್ಲಿ ಹೋಗಿ ನಿಂತರೆ ಸಾಕೂ ಸುಟ್ಟ ಖಾದ್ಯಗಳನ್ನು ಚಪ್ಪರಿಸಬಹುದು. ಆಗಾಗ ಈ ವ್ಯಾನ್ ಕೆಟ್ಟು ನಿಂತರೆ ಆ ಮಾಹಿತಿಯೂ ಇಲ್ಲಿ ಲಭ್ಯವಾಗುತ್ತದೆ.

ಈ ಫ‌ುಡ್‌ ಟ್ರಕ್‌ನಲ್ಲಿ ವೆಜ್-ನಾನ್ ವೆಜ್ ಎರಡು ರೀತಿಯ ಆಹಾರ ಖಾದ್ಯಗಳು ಸವಿಯಲು ಸಿಗುತ್ತವೆ. ಹಾಟ್ ಡಾಗ್ ಇಲ್ಲಿ ಸಿಗುವ ಅತ್ಯಂತ ಜನಪ್ರಿಯ ಖಾದ್ಯ. ಈ ಟ್ರಕ್‌ನಲ್ಲಿ ವೆಜ್‌ ಹಾಟ್‌ಡಾಗ್‌, ನಾನ್‌ವೆಜ್‌ ಹಾಟ್‌ಡಾಗ್‌ ಎರಡೂ ಲಭ್ಯವಿದೆ. ಚಿಕನ್, ಬರ್ಗರ್‌, ಸ್ಯಾಂಡ್​​ವಿಚ್ ಇಲ್ಲಿ ಲಭ್ಯವಿದೆ. ವಿಶೇಷವಾಗಿ ತಯಾರಿಸಿದ ಚಿಕನ್ ಖಾದ್ಯಗಳನ್ನು ಸಾಕಷ್ಟು ಜನ ಇಷ್ಟ ಪಡುತ್ತಾರೆ. ಹಾಗಾಗಿಯೇ ಸ್ಪಿಟ್​ಫೈರ್ ಬಾರ್ಬೆಕ್ಯು ರೆಸ್ಟೋರೆಂಟ್‌ ನಗರದಲ್ಲಿ ಸದ್ದು ಮಾಡುತ್ತಿದೆ.

ಇದನ್ನು ಓದಿ

1. ಹೋಮ್ ಮೇಡ್ ಹವಾ.. ಮಹಿಳಾ ಗೃಹೋದ್ಯೋಗಿಗಳಿಗೆ ಹೊಸ ಜೀವ...!

2. ಬಡ ಉದ್ಯಮಿಗಳಿಗೆ "ಸೂಕ್ಷ್ಮ ಸಾಲ"-ಬಡತನವನ್ನೇ ಹೊಡೆದೋಡಿಸಲು "ಸಮೃದ್ಧಿ"ಯ ಕಾಲ

3. ಯಾರನ್ನೂ ಕೇಳಿಲ್ಲ..ಯಾರಿಂದಲೂ ಏನೂ ಬಯಸಲ್ಲ..! ಇದು ಸಾಲು ಮರದ ತಿಮ್ಮಕ್ಕನ ಕಥೆ..!


Related Stories