ಅವಿವಾಹಿತರಿಗೆ ಇನ್ನು ಮುಂದೆ ಯಾರ ಕಾಟವೂ ಇಲ್ಲ..!

ಉಷಾ ಹರೀಶ್​

ಅವಿವಾಹಿತರಿಗೆ ಇನ್ನು ಮುಂದೆ ಯಾರ ಕಾಟವೂ ಇಲ್ಲ..!

Thursday May 12, 2016,

2 min Read

ಭಾರತದಂತಹ ಸಂಪ್ರದಾಯ ರಾಷ್ಟ್ರಗಳಲ್ಲಿ ಗಂಡು ಹೆಣ್ಣು ಮದುವೆಗೆ ಮುಂಚೆ ಜೊತೆಯಲ್ಲಿ ಕಾಲ ಕಳೆಯುವುದು ಅಕ್ಷಮ್ಯ ಅಪರಾಧ ಎನ್ನುತ್ತಾರೆ. ಆದರೆ ಇಪ್ಪತ್ತನೇ ಶತಮಾನದಲ್ಲಿ ಪ್ರೇಮಿಗಳ ಸಂಖ್ಯೆ ಹೆಚ್ಚಾಗಿದೆ. ಅವರೆಲ್ಲರೂ ಕಡೇ ಪಕ್ಷ ತಿಂಗಳಿಗೊಮ್ಮೆಯಾದರೂ ಜೊತೆಯಲ್ಲಿ ಕಾಲ ಕಳೆಯಬೇಕು ಎಂದು ಆಸೆ ಪಡುತ್ತಾರೆ. ಇದಕ್ಕೆ ನಮ್ಮ ಸಮಾಜ ಒಪ್ಪುವುದಿಲ್ಲ, ಅದರ ಜೊತೆಗೆ ಕಿಡಿಗೇಡಿಗಳ ಕಾಟವು ಇರುತ್ತದೆ. ಇಂತವರಿಗಾಗಿ ಮುಂಬೈನ ಟೆಕ್ಕಿಯೊಬ್ಬರು ಅವಿವಾಹಿತರ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಸ್ಟೇ ಅಂಕಲ್ ಎನ್ನೋ ವೆಬ್​ಸೈಟ್ ಪ್ರಾರಂಭಿಸಿದ್ದಾರೆ.

image


ಮನೆಗಳಲ್ಲಿ, ಪಾರ್ಕ್​, ಸಾರ್ವಜನಿಕ ಪ್ರದೇಶಗಳಲ್ಲಿ ಎಲ್ಲಾದ್ರೂ ಏಕಾಂತವಾಗಿ ಕಾಲ ಕಳೆಯಬೇಕು ಎಂದರೆ ಮುಜುಗರವಾಗುತ್ತದೆ. ಯಾವುದಾದ್ರೂ ಹೊಟೇಲ್ ಲಾಡ್ಜ್​​ಗಳಲ್ಲಿ ರೂಮ್ ಮಾಡೋಣ ಎಂದರೆ ಪೊಲೀಸರು ರೈಡ್ ಮಾಡ್ತಾರೆ ಎಂಬ ಭಯ. ಈ ಎಲ್ಲಾ ಕಾರಣಗಳಿಂದಾಗಿಯೇ ಈ ವೆಬ್​ಸೈಟ್ ತಾಣ ರೂಪಗೊಂಡಿದೆ.

ಇದನ್ನು ಓದಿ: ನಾರಿಯರ ದಿಲ್ ಕದ್ದ ‘ಬಸವ’ನ ಬುಟಿಕ್

ಎಷ್ಟು ಗಂಟೆ ರೂಮ್ ಬೇಕೋ ಅಷ್ಟೇ ಗಂಟೆಗೆ ಪಾವತಿಸಿ

ಮೊದಲಿಗೆ ಈ ವೆಬ್​ಸೈಟ್ ಪ್ರಾರಂಭವಾಗಿದ್ದು 2015ರಲ್ಲಿ. ಸಾಮಾನ್ಯವಾಗಿ ಹೊಟೇಲ್​​ಗಳಲ್ಲಿ 12 ಗಂಟೆಗೆ ಅಥವಾ 24 ಗಂಟೆಗೆ ಚಾರ್ಜ್ ಮಾಡುತ್ತಾರೆ. ಇದರಿಂದ ಸಾಕಷ್ಟು ಮಂದಿಗೆ ನಷ್ಟವಾಗುತ್ತಿತ್ತು. ಇದನ್ನರಿತ ಸಂಚಿತ್ ಸೇಥಿ ಎಂಬುವವರು ಎಷ್ಟು ಗಂಟೆ ಬಳಸುತ್ತೀರೋ ಅಷ್ಟೇ ಗಂಟೆ ಪಾವತಿಸಿ ಎಂಬ ಟ್ಯಾಗ್​ಲೈನ್​ನೊಂದಿಗೆ ಸ್ಟೇ ಅಂಕಲ್ ಎಂಬ ವೆಬ್ ತಾಣವನ್ನು 2015ರಲ್ಲಿ ಪ್ರಾರಂಭಿಸಿದರು. ದೆಹಲಿ ಎನ್​ಸಿಆರ್ ಮತ್ತು ಮುಂಬೈನ 30ಕ್ಕೂ ಹೆಚ್ಚು ಹೊಟೇಲ್​ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಾರ್ಯನಿವಹಿಸುತ್ತಿದ್ದಾರೆ.

ಕಪಲ್ ಬುಕ್ಕಿಂಗ್ ಹೇಗೆ..?

ನೀವು ಪ್ರೇಮಿಗಳಾಗಿದ್ದರೆ ಸ್ಟೇ ಅಂಕಲ್ ವೆಬ್​ಸೈಟ್​ಗೆ ಹೋಗಿ ಅಲ್ಲಿ ಕಪಲ್​ಸ್ಟೇಸ್ ಎಂಬ ವಿಭಾಗಕ್ಕೆ ಹೋಗಿ ವಿವರಗಳನ್ನು ನೋಡಬಹುದು. ದೆಹಲಿಯಲ್ಲಿ ನೇರವಾಗಿ ವೆಬ್ ಸೈಟ್​​ ಮೂಲಕ ಬುಕ್ ಮಾಡಬಹುದು ಆದರೆ ಮುಂಬೈನಲ್ಲಿ ಇವರ ಫೋನ್​ನಂಬರ್ ಮತ್ತು ವಾಟ್ಸ್ಅಪ್ ಮೂಲಕ ಬುಕ್ ಮಾಡಬಹುದು. ರೂಮ್​​ಗಳನ್ನು ಬುಕ್ ಮಾಡಲು ನೀವು ಯಾವ ಊರಿನಲ್ಲಿ ಬುಕ್ ಮಾಡುತ್ತೀರೋ ಆ ಊರಿನ ಲೋಕಲ್ ಐಡಿ ಪ್ರೂಫ್ ಬೇಕಾಗುತ್ತದೆ. ಸ್ಥಳೀಯವಾಗಿ ಸರಕಾರಿ ಗುರುತಿನ ಚೀಟಿ ಇಬ್ಬರ ಬಳಿಯೂ ಇರಬೇಕು. ಒಬ್ಬರ ಬಳಿಯಿದ್ದು ಮತ್ತೊಬ್ಬರಲ್ಲಿ ಇರದಿದ್ದರೆ ರೂಮ್ ಬುಕ್ ಆಗುವುದಿಲ್ಲ. ಸದ್ಯಕ್ಕೆ ಮುಂಬೈ ಮತ್ತು ದೆಹಲಿಯಲ್ಲಿ ಮಾತ್ರ ಕಪಲ್ ಬುಕ್ಕಿಂಗ್ ಸಿಗುತ್ತಿದೆ. ಆದರೆ ಮಾಮೂಲಿ ಹೊಟೇಲ್ ಬುಕ್ಕಿಂಗ್ ದೇಶದ 20 ನಗರಗಳಲ್ಲಿ ಚಾಲ್ತಿಯಲ್ಲಿದೆ. ಕಪಲ್ ಬುಕ್ಕಿಂಗ್​ನ್ನು ಮುಂದಿನ ದಿನಗಳಲ್ಲಿ ವಿಸ್ತರಿಸುವ ಆಲೋಚನೆ ಹೊಂದಿದ್ದಾರೆ. ಈ ಕಪಲ್ ಬುಕ್ಕಿಂಗ್​ಗೆ ಪ್ರೇಮಿಗಳಿಗಿಬ್ಬರಿಗೂ 18 ವರ್ಷ ತುಂಬಿರಬೇಕು.

image


ಈ ಕಪಲ್ ರೂಮ್ ಬುಕ್ ಮಾಡಲು ಎರಡರಿಂದ ಏಳು ಸಾವಿರದವರೆಗೆ ಶುಲ್ಕ ಭರಿಸಬೇಕಾಗುತ್ತದೆ. ಹಗಲು ರಾತ್ರಿಗಳು ಕೊಠಡಿಗಳು ಬಾಡಿಗೆಗೆ ಲಭ್ಯವಾಗುತ್ತವೆ. ಒಟ್ಟಿನಲ್ಲಿ ಪ್ರೇಮಿಗಳು ಏಕಾಂತವಾಗಿ ಯಾರದೇ ಕಾಟವಿರದೇ ಕಾಲ ಕಳೆಯಲು ಸಂಚೀತ್ ಸೇಥಿ ಅವರು ಈ ವೆಬ್​ಸೈಟ್ ರೂಪಿಸಿದ್ದಾರೆ. ಆರಂಭದಲ್ಲಿ ಈ ವೆಬ್ ಪ್ರಾರಂಭಿಸಿದಾಗ ಸ್ವಲ್ಪ ಸಮಸ್ಯೆಯಾಯಿತು. ಕಾಲಕ್ರಮೇಣ ಸಾಕಷ್ಟು ಜನರನ್ನು ಇದು ಸೆಳೆಯುತ್ತಿದೆ. ವಾಸ್ತವದಲ್ಲಿ ಅವಿವಾಹಿತರು ಒಟ್ಟೋಟ್ಟಿಗೆ ಕಾಲ ಕಳೆಯಬಾರದು ಎಂಬ ರೂಲ್ ಎಲ್ಲೂ ಇಲ್ಲ. ಸಂವಿಧಾನದಲ್ಲೂ ಇದರ ಬಗ್ಗೆ ಪ್ರಸ್ತಾಪವಿಲ್ಲ. ಇದರ ಆಧಾರದ ಮೇಲೆ ಈ ವೆಬ್ ರೂಪಗೊಂಡು ಇಂದು ಯಶಸ್ವಿಯಾಗಿದೆ. ಈ ವೆಬ್​ಸೈಟ್​ನಲ್ಲಿ ಬುಕ್ ಮಾಡಿ ಅವಿವಾಹಿತರು ಆರಾಮಾಗಿ ಕಾಲ ಕಳೆಯಬಹುದು.

ಇದನ್ನು ಓದಿ:

1. ಹಳ್ಳಿ ಜನರಿಗೆ ದನಿಯಾದ ಕಮ್ಯುನಿಟಿ ರೇಡಿಯೋ.. !

2. ವಿದ್ಯುತ್ ಕಂಪನಿಗೇ ವಿದ್ಯುತ್ ಮಾರಾಟ..! ಅನ್ನದಾತನ ಅಪೂರ್ವ ಸಾಧನೆ..!

3. ಉತ್ತರ ಕರ್ನಾಟಕದ ಸವಿರುಚಿ ಬಯಸುವವರಿಗೆ ಸ್ವರ್ಗ ಹೊಟೇಲ್ ನಳಪಾಕ..