ಎಲ್ಲಾ ಬಸ್‍ನಿಲ್ದಾಣಗಳಲ್ಲೂ ಎ2ಬಿಯದ್ದೇ ಸವಿ

ಟೀಮ್​ ವೈ.ಎಸ್​. ಕನ್ನಡ

0

ಎ2ಬಿ. ಸಾಮಾನ್ಯವಾಗಿ ತಮಿಳುನಾಡಿನ ಎಲ್ಲಾ ಬಸ್ ನಿಲ್ದಾಣಗಳಲ್ಲೂ ನೀವು ಈ ಹೆಸರಿನ ಹೋಟೆಲ್‍ನ್ನು ನೋಡೇ ಇರ್ತೀರಾ. ಅಷ್ಟೇ ಅಲ್ಲ, ಕರ್ನಾಟಕದಲ್ಲೂ ಎ2ಬಿ ಹೋಟೆಲ್‍ಗೆ ಅಷ್ಟೇ ಬೇಡಿಕೆ ಇದೆ. ದೆಹಲಿ ಆಂಧ್ರ ಪ್ರದೇಶದಲ್ಲೂ ಎ2ಬಿ ತನ್ನ ಅಸ್ಥಿತ್ವ ಕಂಡುಕೊಂಡಿದೆ. ಸ್ವೀಟ್‍ಗಳಿಗಾಗಿ ಎ2ಬಿ ಹೆಸರು ಹೆಚ್ಚು ಪಾಪ್ಯುಲರ್.

ಪ್ರತಿನಿತ್ಯ ತಮಿಳುನಾಡಿನ ತನ್ನ ಮುಖ್ಯಕೇಂದ್ರದಿಂದ 30 ವ್ಯಾನ್‍ಗಳಲ್ಲಿ ಟನ್‍ಗಟ್ಟಲೇ ಸಿಹಿತಿನಿಸನ್ನು ಹೊತ್ತು, ದೇಶದ ವಿವಿಧ ಶಾಖೆಗಳಿಗೆ ಸ್ವೀಟ್ಸ್​ಗಳು ಹೊರಡುತ್ತವೆ ಅಂದ್ರೆ, ಆಡ್ಯಾರ್‍ ಆನಂದ್‍ಭವನ ತಯಾರಿಸುವ ಸ್ವೀಟ್ಸ್​ಗೆ ಅದೆಷ್ಟು ಬೇಡಿಕೆ ಇರಬಹುದು ಅನ್ನೋದನ್ನು ಊಹಿಸಿಕೊಳ್ಳಿ. ಅಡ್ಯಾರ್‍ ಆನಂದ್ ಭವನ್ ಸಿಹಿಯ ರುಚಿಗೆ ಮನಸೋಲದವರೇ ಇಲ್ಲ,  ಅನ್ನುವ ಹಾಗೆ ಎ2ಬಿ ಇಂದ ಸಿಹಿತಿನಿಸು ಬಿಕರಿಯಾಗಿ ಬಿಡುತ್ತವೆ.

ಇದನ್ನು ಓದಿ: ಫ್ಲೈ ಓವರ್ ಕೆಳಗೆ ಊಟ ಹಾಕುವ ಅನ್ನದಾತ - ಫ್ಲೈ ಓವರ್​ ಕೆಳಗೆ ಅನ್ನ ಹಾಕುವ ಮಹಾಪುರುಷ

30 ವ್ಯಾನ್‍ಗಳಲ್ಲಿ ದಿನಕ್ಕೆ ಟನ್‍ಗಟ್ಟಲೇ ಸ್ವೀಟ್ಸ್​ಗಳನ್ನು ವಿವಿಧ ಬ್ರಾಂಚ್‍ಗಳಿಗೆ ತಲುಪಿಸಬೇಕು ಅಂದ್ರೆ ಅಲ್ಲಿ ಮನುಷ್ಯರಷ್ಟೇ ಕೆಲಸ ಮಾಡಿದ್ರೆ ಸಾಲದು, ಅದಕ್ಕಾಗಿ ಭಾರೀಗಾತ್ರದ ಮಷಿನ್‍ಗಳು ಸಿಹಿ ತಯಾರಿಸೋಕೆ ಸಹಕಾರಿಯಾಗುತ್ತಿವೆ. ಬೆಳಗಿನ ಜಾವ ಮೂರು ಗಂಟೆಗೆ ಸಾವಿರ ಲೀಟರ್ ಹಾಲನ್ನು ಕಾಯಿಸುವುದರ ಮೂಲಕ ಕೆಲಸ ಶುರುಮಾಡಿದ್ರೆ, ಎಲ್ಲಾ ತರಹದ ಸಿಹಿಗಳು ತಯಾರಾಗೋಕೆ ಸಮಯ ಹೆಚ್ಚು ಬೇಕಾಗೋದಿಲ್ಲ. ಗರಂ-ಗರಂ ಕಾರಾ ಮಿಕ್ಚರ್‍ನಿಂದ ಹಿಡಿದು, ಬಾಯಲ್ಲಿ ಇಟ್ರೆ ಕರಗುವ ಬೆಣ್ಣೆ ಮುರುಕು, ಶುದ್ಧ ಕೆನೆ ಹಾಲಿನಿಂದ ಮಾಡಿದ ರಸಗುಲ್ಲ, ರುಚಿಯಾದ ಚಂಚಂ, ವಿವಿಧ ಆಕೃತಿಗಳಲ್ಲಿ ಕಟ್ ಮಾಡಿರೋ ಬರ್ಫಿಗಳು, ಹಲ್ವಾಗಳು, ಸಣ್ಣ ಬೂಂದಿ ಕಾಳಿನಿಂದ ತಯಾರಾದ ಟೇಸ್ಟಿ ಲಾಡುಗಳು, ಜಾಮೂನ್‍ಗಳು ಎಲ್ಲಾ ತೆರನಾದ ವೆರೈಟಿ ಸ್ವೀಟ್​ಗಳು ಸವಿಯಲು ಸಿದ್ಧವಾಗಿ ಬಿಡ್ತಾವೆ. ಒಂದೊಂದು ಸಿಹಿ ತಯಾರಿಸೋ ಮಿಷನ್ ಬಳಿಯೂ ಸ್ವೀಟ್ಸ್ ಮಾಡೋದ್ರಲ್ಲಿ ನಿಸ್ಸೀಮರಾದ ಕುಕ್‍ಗಳು ಹಾಜರಿರ್ತಾರೆ, ಸ್ವೀಟ್‍ನ ಗುಣಮಟ್ಟ ಹಾಳಾಗದ ಹಾಗೇ ಕಾಯ್ದುಕೊಂಡು, ಗ್ರಾಹಕರ ಇಚ್ಛೆಯನ್ನು ಕಾಯ್ದುಕೊಳ್ತಾರೆ.

ಅಂದಹಾಗೆ ಈ ಸಿಹಿ ತಿನಿಸುಗಳ ಬುಸಿನೆಸ್‍ನ್ನು ಶುರುಮಾಡಿದ್ದು ತಮಿಳುನಾಡು ಮೂಲದ ಒಬ್ಬ ಸಾಮಾನ್ಯ ವ್ಯಕ್ತಿ. ಇಂದು ಅಸಾಮಾನ್ಯ ಅನ್ನಿಸುವಂತ ವ್ಯಕ್ತಿಗಳ ಸಾಲಿಗೆ ಸೇರಿದ್ದಾರೆ. ತಮಿಳುನಾಡಿನ ರಾಜಪಾಳಯಂನ ರೈತ ಕುಟುಂಬದ ತಿರುಪತಿ ರಾಜಾ ಅನ್ನೋ 10 ವರ್ಷದ ಹುಡುಗ ತನ್ನೂರನ್ನ ಬಿಟ್ಟು ಮದ್ರಾಸ್‍ಗೆ ಓಡಿಹೋಗ್ತಾನೆ. ಮದ್ರಾಸಿನಲ್ಲಿ ಬದುಕು ಕಟ್ಟಿಕೊಳ್ಳಬೇಕೆಂಬ ಆಸೆಯಿಂದ ಮಿಲ್ ಹಾಗೂ ಪ್ರಾವಿಷನ್ ಸ್ಟೋರ್‍ನಲ್ಲಿ ಕೆಲಸ ಮಾಡ್ತಾನೆ, ಅಷ್ಟೇ ಅಲ್ಲ ಹೋಟೆಲ್‍ ಒಂದರಲ್ಲಿ ಟೇಬಲ್ ಕ್ಲೀನ್ ಮಾಡೋ ಕೆಲಸಕ್ಕೆ ಸೇರಿಕೊಳ್ತಾನೆ. ಅದೇ ಹೋಟೆಲ್‍ನಲ್ಲಿ ಅಡುಗೆ ಕಲಿಯೋಕೆ ಶುರುಮಾಡಿದವ ಸೀದಾ ತನ್ನೂರಾದ ರಾಜಪಾಳಯಂಗೆ ವಾಪಸ್ ಆಗ್ತಾನೆ. ತನಗಿದ್ದ ಒಂದಷ್ಟು ಜಾಗದಲ್ಲಿ ಕಬ್ಬು ಬೆಳೆಯೋಕೆ ಶುರು ಮಾಡಿದಾತ ಜೊತೆಗೆ ಸ್ವೀಟ್ ಶಾಪ್‍ವೊಂದನ್ನು ಶುರುಮಾಡ್ತಾನೆ. ಸೈಕ್ಲೋನ್‍ನಿಂದಾಗಿ ಕಬ್ಬು ಬೆಳೆ ಕೈಕೊಟ್ಟದ್ದರಿಂದ ಸ್ವೀಟ್ ಬುಸಿನೆಸ್‍ನ್ನು ಮುಂದುವರೆಸಲು ಚೆನ್ನೈನ ವಾಷರ್‍ಮನ್‍ಪೇಟ್‍ಗೆ 1979ರಲ್ಲಿ ಸ್ವೀಟ್ಸ್ ಮಾರೋದಕ್ಕಾಗಿ ಬರ್ತಾನೆ. ಅಷ್ಟರಲ್ಲಾಗ್ಲೇ ಆ ಬಾಲಕನಿಗೆ ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿದ್ರು. ತಾನು ಮಾಡ್ತಿದ್ದ ಸ್ವೀಟ್ಸ್ ವ್ಯಾಪಾರಕ್ಕೆ ಮಕ್ಕಳನ್ನೂ ಸೇರಿಸಿಕೊಂಡ್ರು. 1988ರಲ್ಲಿ ಒಂದು ‘ಕಾರ್ನರ್’ ಹೆಸರಿನ ಶಾಪ್‍ ಓಪನ್ ಮಾಡಿದ್ರು, ಇದು ಅವ್ರ ಅತಿದೊಡ್ಡ ಸಾಧನೆ ಅಂದ್ರೆ ತಪ್ಪಗಲಾರದು. ಯಾಕಂದ್ರೆ ಅವ್ರ ಸ್ವೀಟ್ಸ್​ಗಳಿಗೆ ಬಂದ ಬೇಡಿಕೆ ಅಡ್ಯಾರ್‍ ಆನಂದ ಭವನ್ ಆಗಿ ಬೆಳೆಯಿತು. ತಿರುಪತಿ ರಾಜ ತಮ್ಮ 60ನೇ ವಯಸ್ಸಿನಲ್ಲಿ ಈ ಸಕ್ಸಸ್‍ ಕಂಡ್ರು.

ಇದ್ರ ನಂತ್ರ ಅಪ್ಪನ ಬುಸಿನೆಸ್‍ನ್ನು ಮುಂದುವರೆಸಿದ ಇಬ್ಬರು ಗಂಡುಮಕ್ಕಳಾದ ವೆಂಕಟೇಶನ್ ಮತ್ತು ಶ್ರೀನಿವಾಸ ರಾಜು ಅಪ್ಪನ ಬ್ಯುಸಿನೆಸ್‍ನ್ನು ಮುಂದುವರೆಸ್ತಾರೆ. ತಮ್ಮ ಸ್ವೀಟ್ ಬುಸಿನೆಸ್‍ನ್ನು ಸಾಕಷ್ಟು ಕಡೆ ಬ್ರಾಂಚ್‍ಗಳಾಗಿ ಮಾಡ್ತಾರೆ. ನಂತ್ರ ಈ ಬ್ಯುಸಿನೆಸ್‍ನ್ನು ರೆಸ್ಟೊರೆಂಟ್ ಆಗಿ ಮಾಡೋ ಯೋಚನೆ ಮಾಡಿ, ಅದ್ರಲ್ಲೂ ಸಕ್ಸಸ್‍ ಆದ್ರು. ಈಗ ಅಡ್ಯಾರ್‍ ಆನಂದ ಭವನ್‍ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ದೆಹಲಿಯಲ್ಲಿ ಸೇರಿದಂತೆ ಒಟ್ಟು 96 ಬ್ರಾಂಚ್‍ಗಳನ್ನು ಓಪನ್ ಮಾಡಿದೆ. ಸ್ವಾದ ಭರಿತ ಅಡುಗೆ, ಸಿಹಿತಿ ನಿಸುಗಳು, ಹಾಗೂ ಕೈಗೆಟುಕುವ ಬೆಲೆಗೆ ಈಗ ಅಡ್ಯಾರ್‍ ಆನಂದ ಭವನ ಫೇಮಸ್. ಹೋಟೆಲ್‍ನಲ್ಲಿ ಟೇಬಲ್ ಕ್ಲೀನ್ ಮಾಡ್ತಿದ್ದ ಹುಡುಗ ಈ ಮಟ್ಟಕ್ಕೆ ಬೆಳೆದದ್ದು ನಿಜಕ್ಕೂಆಶ್ಚರ್ಯ. 

ಇದನ್ನು ಓದಿ:

1. ಹೊಸ ವರ್ಷದಲ್ಲಿ ಕಾಲ ಕಳೆಯೋದು ಹೇಗೆ..?- ಹಾಲಿಡೇ ಪ್ಲಾನ್ ಬಗ್ಗೆ ಯೋಚನೆ ಮಾಡಿ..!​

2. ಅಂದು ವೇಶ್ಯೆ, ಇಂದು ಬಾಲಿವುಡ್ ಕಥೆಗಾರ್ತಿ..!

3. ಟಿ ಶರ್ಟ್ ಮೇಲೆ ಕನ್ನಡ ಅಭಿಮಾನ- ಸ್ಟಾರ್ಟ್​ಅಪ್​ನ ಸಾಧನೆಗೆ ಗ್ರಾಹಕರು ಕೊಟ್ರು ಬಹುಮಾನ..!

Related Stories