ಗ್ರಾಮೀಣ ಭಾರತದ ಬೆಳಕು "ಬೂಂದ್"

ಟೀಮ್​​ ವೈ.ಎಸ್​​.

 ಗ್ರಾಮೀಣ ಭಾರತದ ಬೆಳಕು "ಬೂಂದ್"

Thursday October 22, 2015,

3 min Read

ಬೂಂದ್ ಬೂಂದ್ ಸೇ ಬನತಾಹೇ ಸಾಗರ್​ ( ಹನಿ ಹನಿ ಸೇರಿ ಹಳ್ಳ). ಈ ತತ್ವಶಾಸ್ತ್ರದ ಮೇಲೆ ಬೂಂದ್ ಎಂಜಿನಿಯರಿಂಗ್ ಮತ್ತು ಡೆವಲಪ್​​ಮೆಂಟ್ ಪ್ರೈವೇಟ್ ಲಿಮಿಟೆಡ್ ಜನ್ಮತಾಳಿದೆ. ರುಸ್ತುಂ ಸೇನ್ ಗುಪ್ತಾ ಈ ಸಂಸ್ಥೆಯ ಸಂಸ್ಥಾಪಕರು. ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಪರ್ಯಾಯ ಶಕ್ತಿ ಉತ್ತೇಜಿಸುವ ಒಂದು ಸಮಾಜ ಸೇವಾ ಸಂಸ್ಥೆ ಇದಾಗಿದೆ.

image


2010ರಿಂದ ಭಾರತದ ಬಡತನವಿರುವ ಪ್ರದೇಶಗಳಿಗೆ ಬೆಳಕು, ಶುದ್ಧ ನೀರು, ಕೀಟ ನಿಯಂತ್ರಣ ಮತ್ತು ನೈರ್ಮಲ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಸೌರ ದೀಪ, ಸೋಲಾರ್ ಹೋಂ ಸಿಸ್ಟಂ, ಜಲ ಶೋಧಕ, ಸಮರ್ಥ ಅಡುಗೆ ಸ್ಟೌವ್ ಉತ್ಪನ್ನಗಳನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಬಹುದೂರದ ಹಾಗೂ ಕಠಿಣ ಭೌಗೋಳಿಕ ಪ್ರದೇಶಗಳಿಗೆ ಪರ್ಯಾಯ ಶಕ್ತಿ ಒದಗಿಸುವ ಜೊತೆಗೆ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡುವುದು ಸಂಸ್ಥೆಯ ಮುಖ್ಯ ಗುರಿ. ವಿವಿಧ ಪ್ರದೇಶಗಳ, ವಿವಿಧ ಸಮುದಾಯದ ಜನರಿಗೆ ಸೌರ ಶಕ್ತಿ ಒದಗಿಸುವುದು ಬೂಂದ್​​ನ ಉದ್ದೇಶವಾಗಿದೆ.

ಇದರ ಸಂಸ್ಥಾಪಕ ರುಸ್ತುಂ, ಸಮಾಜ ಸೇವಕ ಮತ್ತು ಪಿರಮಿಡ್ ಬೇಸ್ ((BoP) ತಜ್ಞ. ಸುಸ್ಥಿರ ಸಾಮಾಜಿಕ ಉದ್ಯಮ ವಿನ್ಯಾಸದ ಸಂಶೋಧಕರಾಗಿರುವ ಇವರು, ಬಿಒಪಿಯ ಉತ್ಪನ್ನಗಳು ಮತ್ತು ಸೇವೆಗಳ ವಿನ್ಯಾಸ ಮತ್ತು ಮಾಹಿತಿ ವಿಶ್ಲೇಷಣೆ ಮಾಡುವುದರಲ್ಲಿ ಪರಿಣತಿ ಹೊಂದಿದ್ದಾರೆ. INSEADನಲ್ಲಿ ಎಂಬಿಎ ಪದವಿ ಪಡೆದಿರುವ ರುಸ್ತುಂ, ಕ್ಯಾಲಿಫೋರ್ನಿಯಾ, ಇರ್ವಿನ್ ಯುನಿವರ್ಸಿಟಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ MS ಮಾಡಿದ್ದಾರೆ. ಮೂರು ಖಂಡಗಳಲ್ಲಿ ಅವರು ಕೆಲಸ ನಿರ್ವಹಿಸಿದ್ದಾರೆ. ಸ್ಟಾಂಡರ್ಡ್ ಚಾರ್ಟರ್ಡ್ (ಸಿಂಗಾಪುರ), ಸಿಂಜೆಂತ (ಸ್ವಿಜರ್ಲ್ಯಾಂಡ್), ಡಿಯೋಲಾಯ್ಟ್ ಕನ್ಸಲ್ಟಿಂಗ್ (ಯುಎಸ್) ಕಂಪನಿಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರ ಯೋಗಕ್ಷೇಮ ಹಾಗೂ ಆರ್ಥಿಕ ಅಭಿವೃದ್ಧಿಗೆ ಒತ್ತು ಕೊಡುವುದು ಬೂಂದ್ ಧ್ಯೇಯವಾಗಿದೆ. ಉತ್ತಮ ವಿತರಣಾ ಜಾಲದ ಸಹಾಯದಿಂದ ಸರಕು,ಸೇವೆಗಳನ್ನು ಸಮುದಾಯಕ್ಕೆ ತಲುಪಿಸುವ ಮೂಲಕ ಅಲ್ಲಿನ ಸ್ಥಿತಿ ಸುಧಾರಿಸಬಹುದು ಎಂದು ಬೂಂದ್ ನಂಬಿದೆ.

ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಪ್ಯಾರಾ ಹಳ್ಳಿಯಲ್ಲಿ ತಿಂಗಳ ಆದಾಯ 5000ಕ್ಕಿಂತ ಕಡಿಮೆ ಇರುವ 25 ಕುಟುಂಬಗಳ ಬೆಳಕಿಗಾಗಿ ಪ್ರಿಪೇಯ್ಡ್​​ ಕಾರ್ಡ್ ನೀಡಲಾಗಿದೆ. ಸ್ವತಂತ್ರವಾಗಿ ಸೌರ ವಿದ್ಯುತ್ ಹೊಂದುವ ಸಾಮರ್ಥ್ಯವಿಲ್ಲದವರ ಮನೆಗಳಿಗೆ ವಿದ್ಯುತ್ ಒದಗಿಸಲು ಈ ಕಾರ್ಡ್​ನ್ನು ವಿನ್ಯಾಸಗೊಳಿಸಲಾಗಿದೆ . ಇನ್ನು ಶಕ್ತಿಯನ್ನು ಸೆಳೆಯುವ ಒಂದು ವ್ಯವಸ್ಥೆ ಅಪಿಕೋ ಗ್ರಿಡ್. ಪ್ಯಾರಾ ಗ್ರಾಮದಲ್ಲಿ ಒಂದು KW ಸೌರ ಚಾಲಿತ ಪಿಕೊ-ಗ್ರಿಡ್ ಸ್ಥಾಪಿಸಲಾಗಿದೆ.

800 ವ್ಯಾಟ್ ವ್ಯವಸ್ಥೆಯ Apico ಗ್ರಿಡ್ ಸುಮಾರು 25 ಕುಟುಂಬಗಳಿಗೆ ಸಹಕಾರಿಯಾಗಿದೆ. ಪ್ರತಿ ಮನೆಗೆ ಮೀಟರ್ ವ್ಯವಸ್ಥೆ ಇದೆ. ಗ್ರಾಹಕ ಪೂರ್ವ ಪಾವತಿ ಅಥವಾ ಪೋಸ್ಟ್​​ಪೇಯ್ಡ್​​ ವ್ಯವಸ್ಥೆಗಳಲ್ಲಿ ಯಾವುದಾದರೊಂದನ್ನು ಆಯ್ದುಕೊಳ್ಳಬಹುದು. ವೇಯ್ಟೇಜ್ ಆಧಾರದ ಮೇಲೆ ಪ್ರಿಪೇಡ್ ಗ್ರಾಹಕರಿಗೆ ರಿಚಾರ್ಜ್ ಕಾರ್ಡ್ ನೀಡಲಾಗುತ್ತದೆ. ಮೈಕ್ರೋ ಗ್ರಿಡ್ ಸಿಸ್ಟಂ ಯೋಜನೆಯಲ್ಲಿ ಎರಡು ದೀಪ, ಮೊಬೈಲ್ ಚಾರ್ಜರ್ ಅಥವಾ DC ಫ್ಯಾನ್ ಬಳಸಬಹುದಾಗಿದೆ. ಈ ವ್ಯವಸ್ಥೆಯಲ್ಲಿ ಪ್ರತಿ ಮನೆಗೆ ಮೀಟರ್ (ನಿಯಂತ್ರಣ ಸರ್ಕ್ಯೂಟ್) ಅಳವಡಿಸಲಾಗುತ್ತದೆ. ಗ್ರಾಹಕರು ಪೂರ್ವ ಪಾವತಿ ಕಾರ್ಡ್ ರಿಚಾರ್ಜ್ ಮಾಡಿಸಲು ಹತ್ತಿರವಿರುವ ಬೂಂದ್​​ನ ಚಾರ್ಜಿಂಗ್ ಸ್ಟೇಷನ್ ಗೆ ಹೋಗಬೇಕಾಗುತ್ತದೆ. ಕಾರ್ಡ್​ಗಳು ರಹಸ್ಯ ಕೋಡ್ ಹೊಂದಿರುತ್ತದೆ.

ರಾಜಸ್ತಾನ ಹಾಗೂ ಉತ್ತರ ಪ್ರದೇಶದಲ್ಲಿ 275 ಕುಟುಂಬಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೂಂದ್ ಮೇ, 2014ರವರೆಗೆ 11 apico-ಗ್ರಿಡ್ ಸ್ಥಾಪಿಸಿದೆ. ಸೀಮೆಎಣ್ಣೆ ಅವಲಂಬನೆಯನ್ನು ಕಡಿಮೆ ಮಾಡಿ, ಹಳ್ಳಿಗಳನ್ನು ಸ್ವಚ್ಛವಾಗಿಟ್ಟು, ಸುಲಭವಾಗಿ ಕೈಗೆಟುಕುವ ಶಕ್ತಿಯನ್ನು ನೀಡುವ ಉದ್ದೇಶದಿಂದ ಬೂಂದ್ ಈ ವರ್ಷಾಂತ್ಯದಲ್ಲಿ 50 ಇಂತಹ ಗ್ರಿಡ್ ಅಳವಡಿಸುವ ಗುರಿ ಹೊಂದಿದೆ. ಇದಲ್ಲದೆ, ಬೂಂದ್ apico ಗ್ರಿಡ್ ಪೂರ್ವ ನಿರ್ಧಾರಿತ ಲೋಡ್ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಹಳೆಯ ವ್ಯವಸ್ಥೆ ಹಾಗೂ ಹೊಸ ವ್ಯವಸ್ಥೆಗೆ ಇರುವ ಒಂದು ಮುಖ್ಯ ವ್ಯತ್ಯಾಸವೇನೆಂದರೆ ಇದರಲ್ಲಿ ಬಳಕೆದಾರ ನಿಗದಿತ ಮೊತ್ತವನ್ನು ಒಂದು ತಿಂಗಳಿಗೆ ಪಾವತಿಸಬೇಕು. ಈ ವ್ಯವಸ್ಥೆಯಲ್ಲಿ ಗ್ರಾಹಕ 50-100 ರೂಪಾಯಿಯನ್ನು ಒಂದು ತಿಂಗಳಿಗೆ ಪಾವತಿಸಬೇಕಾಗುತ್ತದೆ.

ಭಾರತದಲ್ಲಿ 200 ದಶಲಕ್ಷ ಜನರು ಕರೆಂಟ್ ಇದ್ದೂ ಇಲ್ಲದಂತೆ ಇದ್ದಾರೆ. ಪ್ರತಿದಿನ 200-400 ರೂಪಾಯಿ ದುಡಿಯುತ್ತಿದ್ದರೂ ಅವರು ಹಳ್ಳಿಯಲ್ಲಿ ವಾಸಿಸುವುದರಿಂದ ಕತ್ತಲಲ್ಲಿ ಕಳೆಯುವಂತಾಗಿದೆ. ಹಾಗಾಗಿ ಈ ಉದ್ಯಮಕ್ಕೆ ಬಹಳ ದೊಡ್ಡ ಮಾರುಕಟ್ಟೆ ಇದೆ ಎಂದು ರುಸ್ತುಂ ಅಭಿಪ್ರಾಯಪಡುತ್ತಾರೆ.

image


ಉನ್ನಾವೋ ಜಿಲ್ಲೆಯ ಹಾಸನಾಗಂಜ್ ಬ್ಲಾಕ್ ನಲ್ಲಿ ನೆಲೆಸಿರುವ 27 ವರ್ಷದ ಅಮಿತ್ ಕುಮಾರ್, ಹಾಲು ಉತ್ಪಾದಕ ಮತ್ತು ಹಾಲು ಸಂಗ್ರಹ ಮಾಡುತ್ತಿದ್ದಾರೆ. ಕರೆಂಟ್ ಅಲಭ್ಯತೆಯಿಂದ ಹಾಲಿಗೆ ಸರಿಯಾದ ಬೆಲೆ ನೀಡಲು ಹಾಗೂ ಅದರ ಗುಣಮಟ್ಟ ಕಾಯ್ದುಕೊಳ್ಳಲು ಕಷ್ಟವಾಗುತ್ತಿತ್ತು. ವಿದ್ಯುನ್ಮಾನ ಹಾಲು ಪರೀಕ್ಷೆ ಕೇಂದ್ರದಲ್ಲಿ ಬೂಂದ್ 225 ವ್ಯಾಟ್ ನ ಸೋಲಾರ್ ಸಿಸ್ಟಮ್ ಅಳವಡಿಸಿತು. ಇದರಿಂದ ಪರೀಕ್ಷಕ, ಕೊಬ್ಬು ಅಳೆಯುವ ಸಾಧನ ಮತ್ತು ಕಂಪ್ಯೂಟರ್ ನಡೆಯುತ್ತಿದ್ದು, ಅಮಿತ್ ಆದಾಯ ಶೇಕಡಾ 30-40ರಷ್ಟು ಹೆಚ್ಚಾಗಿದೆ. ಇದರಿಂದನ ಅಮಿತ್​​​ ಖುಷಿಯಾಗಿದ್ದಾರೆ.

ಬೂಂದ್ 40 ವ್ಯಾಟ್​​ನ ಸೋಲಾರ್ ಪವರ್ ಹೌಸ್ ಲೈಟಿಂಗ್ ಸಿಸ್ಟಂ ಕೂಡ ಒದಗಿಸುತ್ತಿದೆ. ಇದರಿಂದ ಮೂರು ದೀಪಗಳು ಮತ್ತು ಮೊಬೈಲ್ ಚಾರ್ಜಿಂಗ್ ಮಾಡಬಹುದಾಗಿದೆ. ಬೂಂದ್ ಇಲ್ಲಿಯವರೆಗೆ 7500 ಸೋಲಾರ್ ಪವರ್ ಸಿಸ್ಟಂ ಮಾರಾಟ ಮಾಡಿದೆ. ಈಗಾಗಲೇ ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ 50,000 ಕ್ಕೂ ಹೆಚ್ಚು ಜನರ ಮೇಲೆ ಇದು ಪ್ರಭಾವ ಬೀರಿದೆ. ಹಳ್ಳಿಯಲ್ಲಿ ವಾಸಿಸುವ ಮಕ್ಕಳು ಇಂಧನ ಉಳಿಸುವುದಕ್ಕಾಗಿ ಬಹಳ ಬೇಗ ಮಲಗುತ್ತಿದ್ದರು. ಆದರೆ ಸೌರ ವ್ಯವಸ್ಥೆಯ ಅಳವಡಿಕೆಯಿಂದ ಅವರು ಸಂಜೆ ಕೂಡ ಓದಬಹುದಾಗಿದೆ. ಜನರು ಸಂಜೆ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಅಂಗಡಿ ಮಾಲೀಕರು ರಾತ್ರಿ ತನಕ ವ್ಯಾಪಾರ ಮಾಡುತ್ತಿದ್ದಾರೆ ಮತ್ತು ಶೇಕಡಾ 30ರಷ್ಟು ಹೆಚ್ಚಿಗೆ ಮಾರಾಟ ಮಾಡುವ ಅವಕಾಶ ಅವರಿಗೆ ಸಿಕ್ಕಿದೆ.

ತಮ್ಮ ಕಾರ್ಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಬೂಂದ್ ನಿರ್ಧರಿಸಿದೆ. ಈ ವರ್ಷದ ಕೊನೆಯಲ್ಲಿ ಇನ್ನೂ 10 ಜಿಲ್ಲೆಗಳಲ್ಲಿ ಇದನ್ನು ಅಳವಡಿಸುವ ಗುರಿ ಹೊಂದಿದೆ. ವಿವಿಧ ಕ್ಷೇತ್ರಗಳಲ್ಲಿ 1500 ವ್ಯಾಟ್ ಸಾಮರ್ಥ್ಯದ ಸಿಸ್ಟಂ ಅಳವಡಿಕೆ ಮತ್ತು 1,00,000 ವ್ಯಕ್ತಿಗಳು ಮತ್ತು ಅನೇಕ ಸಣ್ಣ ಪ್ರಮಾಣದ ಉದ್ದಿಮೆಗಳ ಮೇಲೆ ಪ್ರಭಾವ ಬೀರುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.