ಉತ್ತಮ ಸೇವೆಗೆ ಮುಂದಾದ ಭಾರತೀಯ ರೈಲ್ವೇ 

ಎನ್​ಎಸ್​ಆರ್​

0

ಇನ್ಮುಂದೆ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ, ಸ್ವಚ್ಚ ಭಾರತದ ಅನುಭವ ಆಗಲಿದೆ. ಇದುವರೆಗೂ ಟ್ರೈನ್​ನಲ್ಲಿ ಪ್ರಯಾಣ ಮಾಡುತ್ತಿದ್ದವರಿಗೆ ಅಲ್ಲಿನ ಗಲೀಜಿನ ಬಗ್ಗೆ ಮೂಗು ಮುರಿಯುತ್ತಿದ್ದವರ ಸಂಖ್ಯೆ ಜಾಸ್ತಿಯಾಗಿತ್ತು. ಆದರೆ ಈಗ ಅದಕ್ಕೆಲ್ಲ ಕಡಿವಾಣ ಹಾಕಲು ಸ್ವತಃ ರೈಲ್ವೆ ಇಲಾಖೆ ಮುಂದಾಗಿದೆ. ನಿಲ್ದಾಣದ ಶುಚಿತ್ವದ ಜೊತೆ-ಜೊತೆಗೆ ರೈಲ್ವೆ ಒಳಗೂ ಸ್ವಚ್ಚತೆ ಕಾಪಾಡಿಕೊಳ್ಳಲು ರೈಲ್ವೆ ಇಲಾಖೆ ಬದ್ದವಾಗಿದೆ.

ಇದನ್ನು ಓದಿ: ರಾಜಸ್ಥಾನಿ ಪುಲ್ಕಾಸ್​​ ಟೇಸ್ಟ್​​ ನೋಡಿ.. ಅಮ್ಮ ಮಗಳ ಕಥೆ ಕೇಳಿ..!

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಕ್ರಾಂತಿಗೆ ಈಗ ರೈಲ್ವೆ ಇಲಾಖೆ ಕೂಡ ಕೈ ಜೋಡಿಸಿದೆ. ಭಾರತೀಯ ರೈಲ್ವೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲು ಸಕಲ ಕ್ರಮ ತೆಗೆದುಕೊಂಡಿದೆ. ಹಾಗಾಗಿ ಇನ್ನು ಮುಂದೆ ರೈಲ್ವೆ ಪ್ರಯಾಣ ಎಂದು ಮೂಗು ಮುರಿಯುವಂತೆ ಇರುವುದಿಲ್ಲ. ಎಲ್ಲವೂ ಬದಲಾಗಲ್ಲಿದೆ. ಸಕಲವನ್ನು ಆನ್ ಲೈನ್​ಗೆ ತಂದ ಭಾರತೀಯ ರೈಲ್ವೆ, ಇದೀಗ ಸುಖಕರ ಪ್ರಯಾಣಕ್ಕೆ ಸಹ ಅವಕಾಶ ಮಾಡಿಕೊಡಲು ಮುಂದಾಗಿದೆ. ಪ್ರತಿ ದಿನ ಹೊಸ ಬ್ಲ್ಯಾಂಕೆಟ್​​ಗಳನ್ನು ನೀಡಲು ಮುಂದಾಗಿದೆ.

ಹೌದು ರೈಲ್ವೆಯಲ್ಲಿ ಕೊಳೆಯಾದ ಬಟ್ಟೆ ನೀಡಲಾಗುತ್ತಿದೆ ಎಂಬ ಚರ್ಚೆ ರಾಜ್ಯಸಭೆಯಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಅದಕ್ಕೆ ರೈಲ್ವೆ ಇಲಾಖೆ ಎಚ್ಚೆತ್ತು ಕೊಂಡಿದೆ. ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಸರ್ವರೀತಿಯಿಂದಲೂ ಶ್ರಮಿಸಲು ಮುಂದಾಗಿದ್ದಾರೆ. ಈಗಾಗಲೇ ಎಲ್ಲ ರೈಲ್ವೆ ಅಧಿಕಾರಿಗಳಿಗೆ ಈ ಸೂಚನೆ ತಲುಪಿದ್ದು. ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಲು ಮುಂದಾಗಿದ್ದಾರೆ. ಹೆಚ್ಚು ಪ್ರಯಾಣಿಕರನ್ನು ಸೆಳೆಯುವುದರ ಜೊತೆಗೆ ಉತ್ತಮ ಸೇವೆ ನೀಡುವುದು ರೈಲ್ವೆ ಇಲಾಖೆಯ ಗುರಿಯಾಗಿದ್ದು, ಇಲಾಖೆ ಸಂಪೂರ್ಣವಾಗಿ ಬದಲಾಗುತ್ತಿದೆ.

ಈಗಿರುವ ಹೊದಿಕೆಗಳನ್ನು ಬದಲಿಸಿ ನೂತನ ವಿನ್ಯಾಸದ ಹಗುರ ಮತ್ತು ಮೃದುವಾದ ಹೊದಿಕೆಗಳನ್ನು ನೀಡಲು ಉದ್ದೇಶಿಸಲಾಗಿದೆ. ಮೊದಲೆಲ್ಲ ವಾರಗಟ್ಟಲ್ಲೆ ಕೊಟ್ಟ ಹೊದಿಕೆಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತಿತ್ತು. ಆದರೆ ಈಗ ಪ್ರತಿ ಬಾರಿ ಬಳಕೆ ಬಳಿಕ ಅದನ್ನು ತೊಳೆಯಲಾಗುತ್ತದೆ. ಪ್ರತಿ ಪ್ರಯಾಣಿಕನಿಗೂ ಸ್ವಚ್ಛ ಬೆಟ್ಶೀಟ್ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇನ್ಮುಂದೆ ರೈಲ್ವೆ ನಿಲ್ದಾಣ ಹಾಗೂ ರೈಲು ಎಲ್ಲವೂ ಸ್ವಚ್ಚತೆಯಿಂದ ಕೂಡಿರಲಿದೆ..

ಭಾರತೀಯ ರೈಲ್ವೆ ಸಲುವಾಗಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ನೂತನ ಬ್ಲ್ಯಾಂಕೆಟ್​​ಗಳನ್ನು ವಿನ್ಯಾಸಗೊಳಿಸಿದೆ. ಇದನ್ನು ಉಣ್ಣೆ ಮತ್ತು ಹತ್ತಿಯ ಮಿಶ್ರಣದಿಂದ ತಯಾರಿಸಲಾಗಿದೆ. ಇವುಗಳನ್ನು ಪ್ರತಿನಿತ್ಯ ತೊಳೆಯಲು ಅನೇಕ ರೈಲು ನಿಲ್ದಾಣಗಳಲ್ಲಿ ಯಾಂತ್ರೀಕೃತ ಲಾಂಡ್ರಿಗಳನ್ನು ಪ್ರಾರಂಭಿಸಲಾಗುವುದು ಎಂದು ಇಲಾಖೆ ಮಾಹಿತಿ ನೀಡಿದೆ. ಹಾಗಾಗಿ ಇನ್ಮುಂದೆ ರೈಲ್ವೆ ಪ್ರಯಾಣವೆಂದರೆ ಹೆಚ್ಚು ನೆಮ್ಮದಿ, ಮತ್ತಷ್ಟೂ ಆರಾಮದಾಯಕವಾಗಿರಲಿದೆ.

ಇದನ್ನು ಓದಿ

1. ಬಂದಿದೆ ಪ್ಲಾಸ್ಟಿಕ್ ಕರಗಿಸುವ ಬ್ಯಾಕ್ಟೀರಿಯಾ..!

2. ಡಾಮಿನೋಸ್ ಸ್ಟೈಲ್ ನಲ್ಲಿ ದೇಸೀ ಫುಡ್ : ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ ಬ್ಯುಸಿನೆಸ್ ನಲ್ಲಿ ನಲ್ಲಿ ಡಮ್ಮಾ ಡಮ್ ಹೊಸ ಹೆಜ್ಜೆ..

3. ಬಡವರ ಹಸಿವು ನೀಗಿಸೋ ‘ಅನ್ನಕೂಟ’

Related Stories

Stories by YourStory Kannada