2017 ತಾಂತ್ರಿಕ ಮೇಳ: ಭರ್ಜರಿ ಉದ್ಘಾಟನೆ, ರಾಜ್ಯದಲ್ಲಿ 2020 ರಷ್ಟೊತ್ತಿಗೆ 20000 ಸ್ಟಾರ್ಟಪ್‌ಗಳ ಸ್ಥಾಪನೆ

2017 ತಾಂತ್ರಿಕ ಮೇಳ: ಭರ್ಜರಿ ಉದ್ಘಾಟನೆ, ರಾಜ್ಯದಲ್ಲಿ 2020 ರಷ್ಟೊತ್ತಿಗೆ 20000 ಸ್ಟಾರ್ಟಪ್‌ಗಳ ಸ್ಥಾಪನೆ

Thursday November 16, 2017,

3 min Read

ತಾಂತ್ರಿಕ ಮೇಳದ ಉದ್ಘಾಟನೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಶ್ರೀಮಾನ್ ಸಿದ್ಧರಾಮಯ್ಯನವರು, ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆರವರು ಹಾಗು ಇತರೆ ಗಣ್ಯರು

ತಾಂತ್ರಿಕ ಮೇಳದ ಉದ್ಘಾಟನೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಶ್ರೀಮಾನ್ ಸಿದ್ಧರಾಮಯ್ಯನವರು, ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆರವರು ಹಾಗು ಇತರೆ ಗಣ್ಯರು


ರಾಜ್ಯದ ಮುಖ್ಯಮಂತ್ರಿ, ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅನೇಕ ಗಣ್ಯರೊಂದಿಗೆ ತಾಂತ್ರಿಕ ಮೇಳವು ಅದ್ದೂರಿಯಿಂದ ಉದ್ಘಾಟನೆಗೊಂಡಿತು. ಐಟಿ ಬಿಟಿಯ ಮುಖ್ಯ ಸೆಕ್ರೆಟರಿಯಾಗಿರುವ ಗೌರವ್ ಗುಪ್ತಾರವರು ನಮ್ಮ ದೇಶವನ್ನು ಹಣ ಹೂಡಿಕೆಗಾಗಿ ಪ್ರಮುಖ ಕೇಂದ್ರವನ್ನಾಗಿ ಮಾಡಿರುವದಕ್ಕಾಗಿ ಎಲ್ಲ ಐಟಿ, ಬಿಟಿ ಮತ್ತು ಔಷಧೀಯ ಕ್ಷೇತ್ರದ ದಿಗ್ಗಜರಿಗೆ ಅಭಿನಂದಿಸುತ್ತ ಉದ್ಘಾಟಿಸಿದರು.

 ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ಕಿಕ್ಕಿರಿದ ಜನರನ್ನು ಉದ್ದೇಶಿಸುತ್ತ ಸಚಿವರು,"ಯುವ ಉದ್ಯಮಿಗಳಿಗೆ ಬೆಂಬಲಿಸಲು ಸರ್ಕಾರ ಸಾಕಷ್ಟು ಪಾಲಿಸಿಗಳನ್ನು ಹಮ್ಮಿಕೊಂಡಿದೆ, ಇದರಿಂದ ನಮ್ಮ ಭವಿಷ್ಯದಲ್ಲಿ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಕಾಣುವದು ಎಂದು ಹೇಳಿದರು.

ಈ ಮೇಳದಲ್ಲಿ ಸುಮಾರು 100 ಸ್ಟಾರ್ಟಪ್‌ಗಳು ಮತು ಇನ್ನೂರಷ್ಟು ಚಿಕ್ಕ ಪುಟ್ಟ ತಂತ್ರಜ್ಞಾನ ಆಧಾರಿತ ಸಂಸ್ಥೆಗಳು ಭಾಗವಹಿಸಿವೆ.

ನಮ್ಮ ಮುಖ್ಯಮಂತ್ರಿಗಳು 500 ಕ್ಕೂ ಹೆಚ್ಚು ರಾಜ್ಯದ ಗ್ರಾಮ್ ಪಂಚಾಯತಿಗಳಿಗೆ ’ವೈಫೈ’ ಸೌಲಭ್ಯಕ್ಕೆ ಚಾಲನೆ ಕೊಟ್ಟರು, ಇದು ಇನ್ನೂ 2650 ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಿಗೆ ವಿಸ್ತಾರಗೊಳ್ಳುವದು ಎಂದರು.

ಸ್ವಾತಂತ್ರ್ಯಾನಂತರ ರಾಜ್ಯವು ವೃತ್ತಿಪರ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ. ರಾಜ್ಯವು ದಿಜಿಟಲ್ ತಂತ್ರಜ್ಞಾನದಲ್ಲಿ ಬಹಳ ಮುಂದುವರೆಯುತ್ತಿದೆ. ಇನ್ನೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ರೊಬೊಟಿಕ್ಸ್‌ನಲ್ಲಿ ಸಾಕಷ್ಟು ಸಾಧನೆ ಮಾಡಲು ಸರ್ಕಾರ ಬೆಂಬಲಿಸುವದಾಗಿ ಹೇಳಿದರು. ಅಷ್ಟೆ ಅಲ್ಲ ಎಲ್ಲ ಸ್ತರದ ಜನರಿಗೂ ಇದರಿಂದ ಲಾಭವಾಗುವಂತೆ ಪ್ರಯತ್ನಿಸಲು ಕರೆಕೊಟ್ಟರು.

ಎಲ್ಲ ನಾಯಕರು ಹಾರ್ಡ್‌ವೇರ್‌ನ ಸೌಲಭ್ಯದ ಮಹತ್ವದ ಬಗ್ಗೆಯೂ ಚರ್ಚಿಸಿದರು. ಅಷ್ಟೇ ಅಲ್ಲ, ಸಚಿವ ಆರ್ ವಿ ದೇಶಪಾಂಡೆಯವರು 2020 ರಷ್ಟೊತ್ತಿಗೆ ಸುಮಾರು 20,000 ದಷ್ಟು ಸ್ಟಾರ್ಟಪ್‌ಗಳ ಸ್ಥಾಪನೆಗೆ ಬೆಂಬಲಿಸಲು ಸುಮಾರು 2000 ಕೋಟಿ ರುಪಾಯಿಗಳಷ್ಟು ನಿಧಿ ಸಜ್ಜುಗೊಳಿಸುವದಾಗಿ ಹೇಳಿದರು.

ರಾಜ್ಯ ಸರ್ಕಾರವು ಮೈಸೂರು, ಕಲ್ಬರ್ಗಿ, ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಲ್ಲೂ ಉದ್ಯಮಶೀಲತೆಯನ್ನು ಹೆಚ್ಚಿಸಲು ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡುತ್ತಲಿದೆ.

"ಈ ಮೇಳ ತಂತ್ರಜ್ಞಾನದಲ್ಲಿ ರಾಜ್ಯದ ಸಾಧನೆ ಹೆಚ್ಚಿಸಲು ಹಮ್ಮಿಕೊಳ್ಳಲಾಗಿದೆ, ಅದೇ ನಮ್ಮೆಲ್ಲರ ಉದ್ದೇಶ" ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಹೇಳಿದರು.

ಸಲಹಾ ಸಂಸ್ಥೆ ಜಿನ್ನಾವ್‌ದ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿನ ಕೌಶಲ್ಯದಿಂದ ಎಲ್ಲ ಆರ್ & ಡಿ ಕೇಂದ್ರಗಳು ಇಲ್ಲೇ ಸ್ಥಾಪನೆಗೊಳ್ಳುತ್ತಿವೆ . ಸುಮಾರು 456 ಆರ್ & ಡಿ ಕೇಂದ್ರಗಳು ಮತ್ತು 1165 ಎಂಎನ್‌ಸಿ ಕೇಂದ್ರಗಳು ಸ್ಥಾಪನೆಗೊಂಡಿವೆ. 323000 ಕಾರ್ಯಕರ್ತರಲ್ಲಿ 155000 ರಷ್ಟು ಜನರು ಕನ್ನಡಿಗರೇ ಎಂದರೆ ಹೆಮ್ಮೆಯ ವಿಷಯವಲ್ಲವೆ.

ಕಾರ್ಪೊರೇಟ್‌ಗಳಿಗೆ ಕರ್ನಾಟಕವೇ ಅಚ್ಚುಮೆಚ್ಚು, ಕಾರಣಗಳೇನೆಂದು ಓದಿ:

ರಾಜ್ಯದಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಯಂತ್ರ ಕಲಿಕೆಯ ಕೌಶಲ್ಯ ಹೇರಳವಾಗಿ ಲಭ್ಯವಾಗಿದೆ, ನಾವು ಇಂಡಸ್ಟ್ರಿ 3.0 ಯಿಂದ ಇಂಡಸ್ಟ್ರಿ 4.0 ಗೆ ಅಭಿವೃದ್ಧಿಗೊಂಡಿದ್ದೇವೆ ಎಂದು ಗೋಪಾಲಕೃಷ್ಣನ್‌ರವರು ಹೆಮ್ಮೆಯಿಂದ ಹೇಳಿದರು.

ಬೆಂಗಳೂರನ್ನು ಬಿಟ್ಟು ರಾಜ್ಯದ ವಿವಿಧೆಡೆಗೆ ಕೂಡ ಉದ್ಯಮಶೀಲತೆ ಬೆಂಬಲ ನೀಡಬೇಕೆಂದು ಒತ್ತುಕೊಟ್ಟರು. ಕೋವರ್ಕ್ಸ್ ಮತ್ತು ವಿವರ್ಕ್ ಕಂಪನಿಗಳು ಫ್ರೀಲ್ಯಾನ್ಸಿಂಗ್‌ಗೆ ಸಾಕಷ್ಟು ಬೆಂಬಲ ನೀಡುತ್ತಿವೆ , ಇದಕ್ಕೆ ನಾವು ನಿಧಾನವಾಗಿ ಒಗ್ಗಿಕೊಳ್ಳಬೇಕು ಎಂದು ಸಲಹೆಕೊಟ್ಟರು.

ಗೋಪಾಲಕೃಷ್ಣನ್‌ರವರನ್ನು ಬೆಂಬಲಿಸುತ್ತ ಕಿರಣ್ ಮಜುಂದಾರ್ ಷಾರವರು ಜೀನ್ ಎಡಿಟಿಂಗ್ ಟೆಕ್ನಾಲಜಿಯಲ್ಲಿ ಸಾಧನೆ ಮಾಡಲು ಈಗಾಗಲೆ ರಾಜ್ಯ ಸಜ್ಜಾಗುತ್ತಿರುವದಾಗಿ ಹೇಳಿದರು. ಅಷ್ಟೇ ಅಲ್ಲ ಲೈಫ್‌ಟೆಕ್ ಟೆಕ್ನಾಲಜಿಯ 1200 ಸ್ಟಾರ್ಟಪ್‌ಗಳಲ್ಲಿ ಶೇ 60 ರಷ್ಟು ಕರ್ನಾಟಕದಲ್ಲೇ ಇರುವದಾಗಿ ಹೇಳಿಕೆಕೊಟ್ಟರು. ಈ ಕ್ಷೇತ್ರದಲ್ಲಿ ಶೇ.30ರಷ್ಟು ಮಹಿಳೆಯರೇ ತೊಡಗಿದ್ದಾರೆಂದು ಹೆಮ್ಮೆ ಪಟ್ಟರು.

ಷಾರವರು ಯು‌ಎಸ್‌ಎಫ್ಡಿ‌ಎ ಅನುಮೋದಿಸಿದ ದಿಜಿಟಲ್ ಮೆಡಿಕಲ್ ಟ್ಯಾಬ್ಲೆಟ್ ಉದರದ ಮೆಲೆ ಇಡುವದರಿಂದಲೆ ತನ್ನ ರೇಡಿಯೊ ಕಿರಣಗಳಿಂದ ತೊಂದರೆಗಳನ್ನು ಪತ್ತೆ ಹಚ್ಚುವದಾಗಿ ಹೇಳಿದರು. ಇದು ಜೈವಿಕ ತಂತ್ರಜ್ಞಾನದಲ್ಲಿಯ ಮಹತ್ಸಾಧನೆಗಳಲ್ಲೊಂದಾಗಿದೆ ಎಂದರು.

ನಾಸ್‌ಕಾಮಿನ ಅಧ್ಯಕ್ಷರಾದ ಆರ್.ಚಂದ್ರಶೇಖರ್‌ರವರು "ಬೆಂಗಳೂರು ಜಾಗತಿಕ ಮಟ್ಟದಲ್ಲಿ ಉದ್ಯಮಶೀಲತೆ ಮತ್ತು ತಂತ್ರಜ್ಞಾನದಲ್ಲಿ ಅತ್ಯಂತ ಮುಂಚೂಣಿಯಲ್ಲಿದೆ, ಆದರೆ ಇನ್ನೂ ಅನೇಕ ಮೂಲಭೂತ ಸೌಕರ್ಯಗಳ ಸುಧಾರಣೆಯಿಂದ ರಾಜ್ಯ ಬೇಕಾದಷ್ಟು ಮುನ್ನಡೆ ಸಾಧಿಸಬಹುದು" ಎಂದು ಅಭಿಪ್ರಾಯ ಪಟ್ಟರು.

ಎಲ್ಲ ನಾಯಕರು ರಾಜ್ಯದ ರಸ್ತೆ ಮತ್ತು ಟ್ರಾಫಿಕ್ ಗೊಂದಲದ ಬಗ್ಗೆಯೂ ವಿಚಾರ ವಿನಿಮಯ ಮಾಡಿಕೊಂಡರು. ರಾಜ್ಯ ಸರ್ಕಾರವು ಈ ವಿಷಯದಲ್ಲಿ ಸ್ವಲ್ಪ ವಿಶೇಷ ಆಸಕ್ತಿ ತೋರಿಸಿದರೆ ಇನ್ನೂ ಒಳ್ಳೆಯ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸಚಿವ ಆರ್ ವಿ ದೇಶಪಾಂಡೆರವರು 2022 ರಷ್ಟರಲ್ಲಿ 250 ಕಿ ಮೀ ಗಳಷ್ಟು ದೂರವನ್ನು ಕ್ರಮಿಸುವ ಮೆಟ್ರೊಗಳ ವ್ಯವಸ್ಥೆಗೆ ಯೋಜನೆಮಾಡಲಾಗಿದೆ ಎಂದರು.ಐಟಿ, ಬಿಟಿ, ರೊಬೊಟಿಕ್ಸ್‌ನಲ್ಲಿ ರಾಜ್ಯದ ಸಾಧನೆಗೆ ಹೆಮ್ಮೆ ಪಟ್ಟರು.

ಭಾರತದ ಸ್ಯಾಮ್ಸಂಗ್ ಆರ್ & ಡಿ ಇನ್ಸ್ಟಿಟ್ಯೂಟ್‌ನ ದಿಪೇಶ್ ಶಾಹ್‌ರವರು "೨೦ ವರುಷಗಳ ಕೆಳಗೆ ಕರ್ನಾಟಕಕ್ಕೆ ಕೌಶಲ್ಯಗಳನ್ನು ಹುಡುಕಿಕೊಂಡು ಬಂದೆವು, ಈಗ ಇನ್ನೂ ಬೆಳೆಸಲು ಯತ್ನಿಸುತ್ತಿದ್ದೇವೆ" ಎಂದರು.

ಐಬಿ‌ಎಮ್‌ನ ಎಂಡಿ ವನಿತ ನಾರಾಯಣನ್‌ರವರು ಎಡ್‌ಟೆಕ್, ಮೆಡ್‌ಟೆಕ್, ಮತ್ತು ಅಗ್ರಿಟೆಕ್ ಉದ್ಯಮಗಳಿಗೂ ಪ್ರೋತ್ಸಾಹಕ ಪಾಲಿಸಿ ಮಾಡಿ ನಾಗರಿಕರ ಖಾಸಗೀಕರಣ ಮತ್ತು ಸುರಕ್ಷತೆಗೆ ಪ್ರಾಮುಖ್ಯತೆ ಒದಗಿಸಿದರೆ ಬಹಳ ಅನುಕೂಲಕರವಾಗಿರುವದು ಎಂದು ಅಭಿಪ್ರಾಯಪಟ್ಟರು.

ಈ ವಾರದಲ್ಲಿ ಟಸಿಯೆಸ್ ಸಂಸ್ಥೆಯು ರೋಲ್ಸ್ ರಾಯ್ಸ್ ಅಟೊಮೊಬೈಲ್ ಸಂಸ್ಥೆಯೊಂದಿಗೆ ತನ್ನ ಪಾರ್ಟನರ್ಷಿಪ್‌ನ್ನು ಘೋಷಿಸಿತು. ಇದು ಸರ್ವಿಸ್ ಇಂಡಸ್ಟ್ರಿಯಿಂದ ಪ್ರೊಡಕ್ಟ್ ಇಂದಸ್ಟ್ರಿಯ ಕಡೆಗಿನ ಬೆಳವಣಿಗೆಯನ್ನು ಸೂಚಿಸುತ್ತದೆ.

ಅತಿಥಿಗಳಾದ ಫಿನ್‌ಲ್ಯಾಂಡ್‌ನ, ಆನ್ನೆ ಬರ್ನರ್‌ರವರು "ಯಾವದೇ ತರಹದ ರಕ್ಷಣಾನೀತಿ ಇರಬಾರದು ಮತ್ತು ಮಾಹಿತಿ ಕೇವಲ ದೊಡ್ಡ ಸಂಸ್ಥೆಗಳಿಗೆ ಮೀಸಲಾಗಿರಬಾರದು" ಎಂದು ಅಭಿಪ್ರಾಯಪಟ್ಟರು.

"ಈ ದಿಜಿಟಲ್ ಯುಗದಲ್ಲಿ ಸಾರ್ವಜನಿಕರಿಗೂ ಹಕ್ಕಿರಬೇಕು ಮತ್ತು ಪರಸ್ಪರ ಸಹಕಾರ ಹಾಗು ಸಹಯೋಗದಿಂದ ಸ್ಟಾರ್ಟಪ್‌ಗಳು ಕಾರ್ಯ ನಿರ್ವಹಿಸಬೇಕು" ಎಂದು ಅಭಿಪ್ರಾಯಪಟ್ಟರು.

ರಾಜ್ಯವು ಮೊದಲ ಸ್ಟಾರ್ಟಪ್ ಪಾಲಿಸಿಯನ್ನು 1997 ರಲ್ಲಿ ಜಾರಿಗೆ ತಂದಿತು , ಈಗ ದಿನೇದಿನೇ ಬೆಳೆಯುತ್ತಲೇ ಹೊರಟಿದೆ. ಪ್ರೊಫೆಸರ್ ಎಸ್ ಸದಗೋಪಾನ್‌ರವರು ಹೇಳುವಂತೆ "ನಾವು ಕೇವಲ ಆಸ್ತಿ ಅಂತಸ್ತಿನಿಂದ ದೊಡ್ಡವರೆನಿಸಿಕೊಳ್ಳುವದಿಲ್ಲ, ಬದಲಿಗೆ ನಮ್ಮಲ್ಲಿರುವ ಜ್ಞಾನ ನಮ್ಮನ್ನು ದೊಡ್ಡವರನ್ನಾಗಿ ಮಾಡುವದು" ಎಂಬ ಮಾತು ಸುಳ್ಳಲ್ಲ.