ನಿಮ್ಮ ಮುದ್ದು ಮುದ್ದಾದ ಸಾಕು ಪ್ರಾಣಿಗೆ ಇಲ್ಲಿ ಸಿಗುತ್ತೆ ನ್ಯೂ ಗೆಟಪ್ 

ಆರಾಧ್ಯ

3

ಮನೆಯಲ್ಲಿ ನಾಯಿ, ಬೆಕ್ಕು, ಹಕ್ಕಿ, ಸಾಕೋದು ಲೈಫ್ ಸ್ಟೈಲ್ನ ಒಂದು ಭಾಗ. ಹವ್ಯಾಸ ಅಂತ ಶುರುವಾಗೋ ಪೆಟ್ಗಳ ಜತೆಗಿನ ಒಡನಾಟ ನಿಧಾನಕ್ಕೆ ಬದುಕಿನ ಭಾಗವೇ ಆಗಿಬಿಡತ್ತೆ. ಅವುಗಳಿಗೆ ಇರುವ ಬೆಲೆ ಕೆಲವೊಮ್ಮೆ ಮನುಷ್ಯರುಗೂ ಕೂಡ ಸಿಗಲ್ಲ.. ಇನ್ನು ಇವುಗಳನ್ನ ಸಾಕೋ ಮಾಲೀಕರು ಹೈಫೈ ಟ್ರೀಟ್ ಮೆಂಟ್ ಕೊಟ್ಟು ಸಾಕುತ್ತಾರೆ.. ಲೆಕ್ಕವಿಲ್ಲದಷ್ಟು ಅವುಗಳಿಗೆ ಹಣ ಖರ್ಚು ಮಾಡುತ್ತಾರೆ.. ಮೊದಲು ಸಾಕು ಪ್ರಾಣಿಗಳಿಗೆ ಬಟ್ಟೆ ಹಾಕೋದು ಫ್ಯಾಷನ್ ಇತ್ತು.. ಅಂದ್ರೆ ಇದೀಗ ಅವುಗಳಿಗೆ ವಿಭಿನ್ನ ಗೆಟಪ್ ಕೊಟ್ಟು ಚೆಂದ ಕಾಣುವಂತೆ ಮಾಡೋ ಕಾಲ… ಅದಕ್ಕೆ ಅಂತಲ್ಲೇ ಇದೀಗ ಮುದ್ದು ಮುದ್ದಾದ ಪೆಟ್ ಗಳಿಗಾಗಿ ಸಿಲಿಕಾನ್ ಸಿಟಿಯಲ್ಲಿ ಒಂದು ಬ್ಯೂಟಿ ಪಾರ್ಲರ್ ಶುರುವಾಗಿದೆ.. ಅದ್ರ ಹೆಸರು ಪಝೀವುಝೀ ..

ಸಾಕು ಪ್ರಾಣಿಗಳಲ್ಲಿ ಬಹಳ ನೆಚ್ಚಿನ ಪ್ರಾಣಿ ಅಂದ್ರೆ ನಾಯಿ.. ಬಹುತೇಕ ಎಲ್ಲರ ಮನೆಯಲ್ಲಿ ತಮಗೆ ಇಷ್ಟವಾದ ಬ್ರೀಡ್ ನ ನಾಯಿಯನ್ನ ಸಾಕುತ್ತಾರೆ.. ತಮ್ಮ ಮನೆಯ ಒಬ್ಬ ಸದಸ್ಯನಂತೆ ಜೋಪಾನವಾಗಿ ನೋಡಿಕೊಳ್ಳುತ್ತಾರೆ.. ಅವುಗಳಿಗೆ ಸ್ವಲ್ಪ ಆರೋಗ್ಯ ಕೆಟ್ರು, ಮನೆಯವರು ಊಟ ಕೂಡ ಮಾಡೋಲ್ಲ, ಅಷ್ಟು ಯೋಚನೆ ಮಾಡಿ, ಅವುಗಳನ್ನ ಆರೈಕೆ ಮಾಡುತ್ತಾರೆ.. ಇನ್ನು ಬೇಸಿಗೆ ಬಂತು ಅಂದ್ರೆ ಸಾಕು ಪ್ರಾಣಿಗಳಿಗೆ ಅನೇಕ ಸಮಸ್ಯೆಗಳು ಕಾಡುತ್ತದೆ.. ಆದ್ರೆ ಇನ್ನು ಮುಂದೆ ಆ ಭಯ ಬೇಡ ಈ ಪಝೀವುಝೀ ಪಾರ್ಲರ್ ಗೆ ನಿಮ್ಮ ಸಾಕು ಪ್ರಾಣಿ ಕರೆ ತಂದ್ರೆ ಸಾಕು ಅವುಗಳಿಗೆ ಬೇಕಾದ ಎಲ್ಲ ಆರೈಕೆ ಮಾಡುತ್ತಾರೆ.

ಇದನ್ನು ಓದಿ: ಬಡವರ ಹಸಿವು ನೀಗಿಸೋ ‘ಅನ್ನಕೂಟ’

ಹೌದು ಬೇಸಿಗೆ ಯಲ್ಲಿ ಸಾಕುನಾಯಿಗಳಿಗಾಗಿ ಇಲ್ಲಿ ಅನೇಕ ಸೌಕರ್ಯಗಳನ್ನ ಒದಗಿಸಿಕೊಡುತ್ತಾರೆ.. ಸ್ನಾನ ಮಾಡಿಸೋದು, ಉಗುರು ಕಟ್ ಮಾಡೋದು, ಕಿವಿ ಕ್ಲೀನ್ ಮಾಡೋದು, ಬ್ಲೋಡ್ರೈ, ಪರ್ಫ್ಯೂಮಿಂಗ್, ಚರ್ಮದ ಆರೈಕೆ, ಮಸಾಜ್, ಹೇರ್ ಕಟ್, ಹಲ್ಲುಜ್ಜುವುದು, ಆಯಿಲ್ ಮಾಸಾಜ್, ಕೂದಲ ಬಣ್ಣ, ಕೂದಲ ಆರೈಕೆ, ಶೃಂಗಾರ ಮಾಡೋದು ಹೀಗೆ ಆರೋಗ್ಯವೃದ್ಧಿಸೋ ಟ್ರೀಟ್ ಮೆಂಟ್ ಗಳನ್ನು ಪೆಟ್ ಗಳಿಗೆ ನೀಡುತ್ತಾರೆ.. ಇನ್ನು ಇವುಗಳಿಗೆ ವಿಭಿನ್ನ ವಿಭಿನ್ನ ಹೇರ್ ಸ್ಟೈಲ್ ಕೂಡ ಮಾಡುತ್ತಾರೆ.. ಲಯನ್ಕಟ್, ಪಪ್ಪಿ ಕಟ್, ಲಂಬ್ ಕಟ್, ಪಂಕ್ ಹೇರ್ಕಟ್ ಗಳಲ್ಲಿ ನಾಯಿ ಬೆಕ್ಕುಗಳು ಓಡಾಡ್ತಿದ್ರೆ ಅಂದ್ರ ಆಕರ್ಷಣೆಯೇ ಬೇರೆ. ಹೀಗೆ ಹೇರ್ ಕಟ್ ಮಾಡಿಸ್ಕೊಂಡವು ನ್ಯೂ ಲುಕ್ ನಲ್ಲಿ ಎಲ್ಲರ ಮನಸೆಳೆಯುತ್ತೆ ಈ ಮುದ್ದಾದ ಸಾಕುಪ್ರಾಣಿಗಳು..

ಇದೊಂದುತರ ಪೆಟ್ ಗಳ ಸ್ಟೈಲಿಂಗ ಸ್ಟುಡೀಯೋ ಅಂತ ಹೇಳಬಹುದು..ಒಂದೊಂದು ಬ್ರೀಡ್ ನ ನಾಯಿಮರಿಗೂ ಇಲ್ಲಿ ವಿಶೇಷ ಸೌಲಭ್ಯಗಳನ್ನ ಹಾಗೂ ಅವುಗಳಿಗೆ ತಕ್ಕ ಲುಕ್ ಜೊತೆಗೆ ಅವುಗಳಿಗೆ ಸೂಟ್ ಆಗುವ ಹೇರ್ ಕಟ್ ಮಾಡಿ ನೈಲ್ ಆರ್ಟ್ ಮಾಡುತ್ತಾರೆ.. ಕೆಳದ 15 ವರ್ಷಗಳಿಂದ ಈ ಪಾರ್ಲರ್ ನಡೆಸುತ್ತೀರು ಯಶೋಧರ ಮತ್ತು ಅವರ ಮಗಳು ಸಾಕು ಪ್ರಾಣಿಗಳು ಅಷ್ಟೇ ಅಲ್ಲದೇ ಫ್ಯಾಷನ್ ಶೋ ಹಾಗೂ ನ್ಯಾಷನಲ್ ಸ್ಪರ್ಧೆಗಳಲ್ಲಿ ಭಾಗವಹಿಸುವ ನಾಯಿಗಳಿಗೂ ಕೂಡ ಇವರು ನ್ಯೂ ಲುಕ್ ಕೊಟ್ಟು ಆರೈಕೆ ಮಾಡುತ್ತಾರೆ..

ಬರೀ ನಾಯಿಗಳಿಗೆ ಮಾತ್ರವಲ್ಲದೇ ಪಕ್ಷಿ, ಬೆಕ್ಕು, ಗಳಿಗೂ ಕೂಡ ಇವರು ಆರೈಕೆ ಮಾಡಿ ಅವುಗಳಿಗೆ ಹೊಸ ಗೆಟ್ಟಪ್ ನೀಡುತ್ತಾರೆ.. ಸಿಲಿಕಾನ್ ಸಿಟಿಯ ಬಹುಬೇಡಿಕೆಯ ಪಾರ್ಲರ್ ಇದಾಗಿದ್ದು ಸೋಮವಾರದಿಂದ ಶುಕ್ರವಾರದ ವರೆಗೂ ಮಧ್ಯಾಹ್ನ ಎರಡು ಗಂಟೆ ಯಿಂದ ರಾತ್ರಿ 7ಗಂಟೆಯ ವರೆಗೂ ಕೇವಲ 5 ಸಾಕುಪ್ರಾಣಿಗಳಿಗೆ ಆರೈಕೆ ಮಾಡುತ್ತಾರೆ. ನಿಮ್ಮ ಪೆಟ್ ಗಳಿಗೂ ಕೂಡ ಹೊಸ ಲುಕ್ ಹಾಗೂ ಹೆಲ್ದಿ ಆರೈಕೆ ಬೇಕು ಅಂದ್ರೆ ಒಮ್ಮೆ ನಿಮ್ಮ ಸಾಕುಪ್ರಾಣಿಯನ್ನ ಇಲ್ಲಿಗೆ ಕರೆದುಕೊಂಡು ಹೋಗಿ..

ಒಟ್ನಲ್ಲಿ ಮನುಷ್ಯರಿಗಿಂತ ನಾವು ಕೂಡ ಯಾರಿಗೂ ಕಮ್ಮಿ ಇಲ್ಲ, ಅಂತ ಸಾಕು ಪ್ರಾಣಿಗಳು, ಪಝೀವುಝೀ ಪಾರ್ಲರ್ ಗೆ ತಮ್ಮ ಮಾಲೀಕರ ಜೊತೆ ಹೋಗಿ ಹೊಸ ಲುಕ್ ನಲ್ಲಿ ಮಿಂಚ್ತಾ ಇರೋದೊಂತು ನಿಜ.

ಇದನ್ನು ಓದಿ

1. ಜ್ಯೂಟ್ ಬ್ಯಾಗ್ ಕಾಲದ ನಂತ್ರ, ಈಗ ಬಾಳೆನಾರಿನ ಬ್ಯಾಗ್ ..

2. ಸೆಲೆಬ್ರೆಟಿಗಳ ನೆಚ್ಚಿನ ತಾಣ ಶಿವಣ್ಣ ಗುಲ್ಕನ್ ಸೆಂಟರ್

3. ನ್ಯೂ ಲುಕ್‍ನಲ್ಲಿ, ನ್ಯೂ ಆರ್ಯ ಭವನ್ ಸ್ವೀಟ್ಸ್