ಆನ್‍ಲೈನ್ ಕೂಪನ್ ಕಮಾಲ್..! ಕಡಿಮೆ ಖರ್ಚಿನಲ್ಲಿ ಮಜಾ ಮಾಡಿ..!

ಟೀಮ್​​ ವೈ.ಎಸ್​​.

0

ಚೌಕಾಸಿ ಮಾಡೋದ್ರಲ್ಲಿ ಭಾರತೀಯರೇ ನಂಬರ್ 1. ನಮ್ಮನ್ನು ಮೀರಿಸುವವರೇ ಇಲ್ಲ. ಆದ್ರೆ ಗ್ರಾಬ್‍ಆನ್‍ನಲ್ಲಿ ಮಾತ್ರ ಚೌಕಾಸಿ ಮಾಡುವ ಅಗತ್ಯವೇ ಇಲ್ಲ. ಅಂತಹ ಬಂಪರ್ ಆಫರ್‍ಗಳನ್ನು, ಆನ್‍ಲೈನ್ ಕೂಪನ್‍ಗಳನ್ನು ಗ್ರಾಬ್‍ಆನ್ ಗ್ರಾಹಕರಿಗೆ ಕೊಡುತ್ತಿದೆ. ಗ್ರಾಬ್‍ಆನ್ ಹೆಸರೇ ಹೇಳುವಂತೆ ಭರ್ಜರಿಯಾಗಿ ಬಾಚಿಕೊಳ್ಳುವ ಅವಕಾಶ ಇಲ್ಲಿದೆ. ಇತ್ತೀಚೆಗಷ್ಟೇ ಬಝ್ ಮಿ ಹೆಸರಿನ ಡೆಸ್ಕ್​​ಟಾಪ್ ಮತ್ತು ಮೊಬೈಲ್ ನೋಟಿಫಿಕೇಷನ್ ಸಿಸ್ಟಮ್‍ನ್ನು ಗ್ರಾಬ್‍ಆನ್ ಬಿಡುಗಡೆ ಮಾಡಿದೆ. ಹೊಸದಾಗಿ ಆಫರ್ ಅಥವಾ ಕೂಪನ್‍ಗಳು ಬಂದರೆ ಬಝ್ ಮಿ ಗ್ರಾಹಕರನ್ನು ಅಲರ್ಟ್ ಮಾಡುತ್ತದೆ.

ಅಶೋಕ್ ರೆಡ್ಡಿ ಗ್ರಾಬ್‍ಆನ್‍ನ ಸಂಸ್ಥಾಪಕರು ಹಾಗೂ ಸಿಇಓ. ಒಂದು ತಿಂಗಳ ಅವಧಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಗ್ರಾಬ್‍ಆನ್ ಆಫರ್‍ಗಳನ್ನು ಪಡೆದಿದ್ದಾರೆ. ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ಸುಲಭವಾಗಿ ಮತ್ತು ವೇಗವಾಗಿ ವಸ್ತುಗಳನ್ನು ಖರೀದಿಸಲು ಹೊಸ ತಂತ್ರಜ್ಞಾನವನ್ನು ಗ್ರಾಬ್‍ಆನ್ ಆವಿಷ್ಕರಿಸಿದೆ. ಒಳ್ಳೆಯ ಆಫರ್‍ಗಳನ್ನು ಜನರಿಗೆ ತಲುಪಿಸುವ ಮೂಲಕ ಗ್ರಾಬ್‍ಆನ್ ಆನ್‍ಲೈನ್ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಮಾಡಿದೆ. ಪಾಲುದಾರ ವ್ಯಾಪಾರಿಗಳು ಕೂಡ ನಿರಾತಂಕವಾಗಿ ಡೀಲ್‍ಗಳನ್ನು ಬದಲಾಯಿಸುವುದರಿಂದ ಪ್ರತಿದಿನ ಒಂದೇ ಆಫರ್ ಸಿಗುವುದಿಲ್ಲ. ಭಾರತದ ಅತಿದೊಡ್ಡ ಆನ್‍ಲೈನ್ ಕಂಪನಿಗಳಲ್ಲಿ ಗ್ರಾಬ್‍ಆನ್ ಕೂಡ ಒಂದು. ಪ್ರತಿಷ್ಠಿತ ಕಂಪನಿಗಳು ಸೇರಿದಂತೆ ಸುಮಾರು 2000ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಊಬರ್, ಪೇಟಿಎಂ, ಸ್ನಾಪ್‍ಡೀಲ್, ಫ್ಲಿಪ್‍ಕಾರ್ಟ್, ಜಬಾಂಗ್, ಸ್ವಿಗ್ಗಿ, ಮೊಬಿಕ್ವಿಕ್ ಕೂಡ ಗ್ರಾಬ್ ಜೊತೆ ಕೈಜೋಡಿಸಿವೆ.

ಗ್ರಾಬ್‍ಆನ್ ಸಾಗಿ ಬಂದ ಹಾದಿ..

ಲ್ಯಾಂಡ್‍ಮಾರ್ಕ್ ಐಟಿ ಸೊಲ್ಯೂಶನ್ಸ್ ನೆರವಿನಿಂದ ಗ್ರಾಬ್‍ಆನ್ ಕಳೆದ ವರ್ಷ ಎರಡೂವರೆ ಲಕ್ಷ ಅಮೆರಿಕನ್ ಡಾಲರ್ ಹಣವನ್ನು ಹೂಡಿಕೆ ಮಾಡಿದೆ. ತಂಡ ಕಟ್ಟುವುದು, ಮೂಲಸೌಕರ್ಯ ಅಭಿವೃದ್ಧಿ, ವಿನೂತನ ತಂತ್ರಜ್ಞಾನ ಅಳವಡಿಕೆ ಮತ್ತು ಜಾಹೀರಾತುಗಳಿಗಾಗಿ ಈ ಹಣವನ್ನು ಬಳಸಿಕೊಳ್ಳಲಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ಗ್ರಾಬ್‍ಆನ್ ಆದಾಯದಲ್ಲಿ ಭಾರೀ ಹೆಚ್ಚಳವಾಗಿದೆ. ಪ್ರತಿ ತಿಂಗಳಿ 4 ಮಿಲಿಯನ್ ಗ್ರಾಹಕರು ಗ್ರಾಬ್ ಆನ್ ವೆಬ್‍ಸೈಟ್‍ಗೆ ಭೇಟಿ ಕೊಡ್ತಿದ್ದಾರೆ. ಸುಮಾರು 5.5 ಮಿಲಿಯನ್ ಕೂಪನ್‍ಗಳು ಮಾರಾಟವಾಗುತ್ತಿವೆ. 1.4 ಕೋಟಿ ಮಂದಿ ಗ್ರಾಬ್‍ಆನ್ ಆನ್‍ಲೈನ್ ಪೇಜನ್ನು ವೀಕ್ಷಿಸಿದ್ದಾರೆ. 2016ರ ಜೂನ್ ವೇಳೆಗೆ 12 ಕೋಟಿ ಆದಾಯ ಗಳಿಸುವ ನಿರೀಕ್ಷೆಯನ್ನು ಅಶೋಕ್ ರೆಡ್ಡಿ ಇಟ್ಟುಕೊಂಡಿದ್ದಾರೆ.

ಗ್ರಾಬ್‍ಆನ್‍ಗೆ ಭಾರೀ ಪೈಪೋಟಿ!

ಗೂಗಲ್ ಹಾಗೂ ಫಾರೆಸ್ಟರ್ ರಿಸರ್ಚ್‍ನ ಆನ್‍ಲೈನ್ ಶಾಪಿಂಗ್ ವರದಿ ಪ್ರಕಾರ ಭಾರತದಲ್ಲಿರೋ ಇ ಕಾಮರ್ಸ್ ಗ್ರಾಹಕರಲ್ಲಿ ಶೇಕಡಾ 13.5ರಷ್ಟು ಮಂದಿ ಕೂಪನ್ ಬ್ಯುಸಿನೆಸ್ ಅನ್ನೇ ಅವಲಂಬಿಸಿದ್ದಾರೆ. ಶೇಕಡಾ 62.9ರಷ್ಟು ಬೆಳವಣಿಗೆ ದರವಿದೆ. ಪ್ರತಿ ತಿಂಗಳು 7.6 ಮಿಲಿಯನ್ ಬಳಕೆದಾರರು ಕೂಪನ್ ಮೂಲಕ ಆನ್‍ಲೈನ್ ಶಾಪಿಂಗ್ ಮೊರೆ ಹೋಗುತ್ತಿದ್ದಾರೆ. ಕಂಪನಿಗಳು ಮಾತ್ರವಲ್ಲ ಸ್ವತಂತ್ರ ಉದ್ಯೋಗಿಗಳು ಕೂಡ ಕೂಪನ್ ಮಾರಾಟ ಮಾಡುತ್ತಿದ್ದಾರೆ. ಗ್ರಾಬ್‍ಆನ್, ಕೂಪನ್ ದುನಿಯಾ, 27 ಕೂಪನ್ಸ್, ಪೆನ್ನಿಫುಲ್ ಮತ್ತು ಕ್ಯಾಶ್‍ಕರೋ ಕಂಪನಿಗಳು ಸದ್ಯ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿವೆ. ಕೂಪನ್ ದುನಿಯಾ ಭಾರೀ ಹೆಸರು ಮಾಡಿದ್ದು, ಗ್ರಾಬ್‍ಆನ್‍ಗೆ ಪ್ರಬಲ ಪ್ರತಿಸ್ಪರ್ಧಿಯಾಗಿದೆ. ಕೂಪನ್ ದುನಿಯಾ 2 ಸಾವಿರ ಆನ್‍ಲೈನ್ ಸ್ಟೋರ್‍ಗಳು ಹಾಗೂ 5000 ರೆಸ್ಟೋರೆಂಟ್‍ಗಳನ್ನು ಹೊಂದಿದೆ. ಇನ್ನು ಕೂಪೋ ನೇಶನ್ ಹಾಗೂ ಕ್ಯಾಶ್‍ಕರೋ ಮಧ್ಯೆ ಭಾರೀ ಪೈಪೋಟಿ ಇದೆ. ಈ ಕಂಪನಿಗಳನ್ನೆಲ್ಲ ಹಿಂದಿಕ್ಕುವ ಬಹುದೊಡ್ಡ ಸವಾಲು ಗ್ರಾಬ್‍ಆನ್‍ನ ಅಶೋಕ್ ರೆಡ್ಡಿ ಅವರ ಮುಂದಿದೆ. ಮುಂದಿನ ದಿನಗಳಲ್ಲಿ ಈ ಸೆಕ್ಟರ್​​ನಲ್ಲಿ ನಂಬರ್​​ ವನ್​ ಆಗುವ ಕನಸು ಕಾಣ್ತಿದ್ದಾರೆ.

Related Stories

Stories by YourStory Kannada