ಅಂದದ ಕನಸಿನ ಮನೆಗೊಂದು ಚೆಂದದ ಡಿಸೈನ್ : ಇದು ರಿನೋಮೇನಿಯಾ ಮೇನಿಯಾ..

ಟೀಮ್​ ವೈ.ಎಸ್​. ಕನ್ನಡ

0

ಕನಸಿನ ಮನೆ ಕಟ್ಬೇಕು.. ಅದು ನೋಡಲು ಅಂದವಾಗಿರಬೇಕು ಅನ್ನೋದು ಬಹುತೇಕ ಎಲ್ಲರ ಕನಸಿನ ಮಾತು. ಆದ್ರೆ ಆ ಅಂದದ ಮನೆ ಹೇಗೆ ನಿರ್ಮಿಸಬೇಕು, ಪ್ಲಾನಿಂಗ್ ಹ್ಯಾಗಿರಬೇಕು ಅನ್ನೋದು ಬಹುತೇಕರಿಗೆ ಅರಿವೇ ಇರೋದಿಲ್ಲ. ಈ ರೀತಿಯ ಗೊಂದಲದಲ್ಲಿರುವವರಿಗೆ ಕೆಲವು ಕಂಪನಿಗಳು ಮಾರ್ಗದರ್ಶನ ನೀಡುವ ಮೂಲಕ ನೆರವು ನೀಡುತ್ತಿವೆ. ಅಂತಹ ಖ್ಯಾತ ಕಂಪನಿಗಳಲ್ಲಿ ರಿನೋಮೇನಿಯಾ ಕೂಡ ಒಂದು.. ದಂಪತಿಯಿಂದ ಶುರುವಾಗಿರುವ ಈ ಕಂಪನಿ ಹಿಂದೆ ಒಂದು ಸ್ವರಸ್ಯಕರ ಘಟನೆಯೂ ಇದೆ. ಸುಮಾರು 26 ವರ್ಷಗಳ ಹಿಂದೆ ವನನೀತ್ ಮಲ್ಹೋತ್ರಾ ಹಾಗೂ ರೀತೂ ಮಲ್ಹೋತ್ರಾ ದಂಪತಿಗಳಿಗೆ ಹಲವಾರು ಮಂದಿ ಕ್ಲೈಂಟ್ಸ್ ಗಳು ಬೆನ್ನು ಹತ್ತಿದ್ರು. ಡಜನ್ ಗಟ್ಟಲೇ ಗೃಹಲಂಕಾರಿಕಾ ಚಿತ್ರಗಳನ್ನ ತೋರಿಸುತ್ತಿದ್ದ ಅವರು ಹೋಂ ಡೆಕೋರೆಟ್ ಐಡಿಯಾಗಳನ್ನ ಕೇಳುತ್ತಿದ್ರು. ಆಗ ಪರಿಸ್ಥಿಯನ್ನ ಅರ್ಥೈಸಿಕೊಂಡ ಮಲ್ಹೋತ್ರಾ ದಂಪತಿ ಇಂಟೀರಿಯರ್ ಹೋಂ ಡಿಸೈನಿಂಗ್ ಸಲಹೆಗಳನ್ನ ನೀಡುವ ರಿನೋಮೇನಿಯಾ ಎಂಬ ಕಂಪನಿಗಳನ್ನ ಹುಟ್ಟು ಹಾಕಿದ್ರು.

ಇದನ್ನು ಓದಿ

ಶಾಪವನ್ನೇ ವರವಾಗಿ ಬದಲಿಸಿಕೊಂಡ ಗಟ್ಟಿಗಿತ್ತಿ..!

ದೆಹಲಿ ಮೂಲದ ರಿನೋಮೆನಿಯಾದ ಕೆಟಲಾಗ್ ನಲ್ಲಿ ಸುಂದರವಾದ ಗೃಹಲಂಕಾರಿಕ ವಿನ್ಯಾಸಗಳಿವೆ. ಅಲ್ಲದೆ ಇತ್ತೀಚಿನ ಡಿಸೈನ್ ಗಳ ಟ್ರೆಂಡ್ ಗಳ ಬಗ್ಗೆ ಲೇಖನಗಳನ್ನೂ ಅಲ್ಲಿ ಪ್ರಕಟಿಸಲಾಗಿದೆ. ವಿಶೇಷ ಅಂದರೆ ಇಲ್ಲಿ ಬಜೆಟ್ ಗೆ ತಕ್ಕಂತೆ ಗ್ರಾಹಕರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಇವರ ಈ ವೆಬ್ ಸೈಟ್ ನಲ್ಲಿ ಫೋಟೋಗಳು, ಸ್ಕ್ರಾಪ್ ಬುಕ್, ಪ್ರೋ ಫೈಂಡರ್ ಹಾಗೂ ಬ್ಲಾಗ್ ಗಳ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ. ಇನ್ನು ಪ್ರೋ ಫೈಂಡರ್ ಸೆಕ್ಷನ್ ನಲ್ಲಿ ಆರ್ಕಿಟೆಕ್ಟ್, ಇಂಟರಿಯರ್ ಡಿಸೈನ್, ಕಂಟ್ರಾಕ್ಟರ್ಸ್, ಡೆವೆಲಪರ್ಸ್, ಹೋಂ ಪ್ರೊಡಕ್ಟ್ ಬ್ರಾಂಡ್ಸ್ ಮತ್ತು ಬ್ಯುಲ್ಡರ್ಸ್ ಗಳ ಬಗ್ಗೆ ಮಾಹಿತಿಯನ್ನ ಪ್ರಕಟಿಸಲಾಗಿದೆ. ಇನ್ನು ಇಲ್ಲಿರುವ ಚಿತ್ರಗಳನ್ನ ತಂಡದ ತಜ್ಞ ಛಾಯಾಗ್ರಾಹಕರು ಭಾರತದ ವಿವಿಧ ಭಾಗಗಳಿಗೆ ಭೇಟಿ ನೀಡಿ ಅಲ್ಲಿ ತಾವು ಕಂಡ ಡಿಸೈನ್ ಗಳ ಫೋಟೋಗಳನ್ನ ಕ್ಲಿಕ್ಕಿಸಿ ಇಲ್ಲಿ ಪ್ರಕಟಿಸುತ್ತಾರೆ. ಅಚ್ಚರಿ ಅಂದ್ರೆ ಇಲ್ಲಿರುವ ಕ್ಯಾಟಲಾಗ್ ಅನ್ನೋ ಸೃಷ್ಠಿಸಲು 70 ಸಾವಿರಕ್ಕೂ ಹೆಚ್ಚು ಹೆಚ್ ಡಿ ಫೋಟೋಗಳನ್ನ ಬಳಸಿಕೊಳ್ಳಲಾಗಿದೆ. ಇಲ್ಲಿ 600 ಬಗೆಯ ಇಂಟೀರಿಯರ್ ಡಿಸೈನ್ ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.


“ ರಿನೋಮೇನಿಯಾ ವೃತ್ತಿಪರ ಹಾಗೂ ಕ್ರಿಯಾಶೀಲ ಕೆಲಸಗಾರರಿಗೆ ಯಾವತ್ತಿಗೂ ಅವಕಾಶ ನೀಡುತ್ತಿದೆ. ಆದ್ರೆ ಆನ್ ಲೈನ್ ನಲ್ಲೇ ಅತ್ಯುತ್ತಮ ಕ್ಲೈಂಟ್ಸ್, ಗ್ರೂಪ್ ಕ್ರಿಯೇಷನ್ ಗಳನ್ನ ಮಾಡಲು ಸಾಧ್ಯವಿಲ್ಲ. ಮನೆಗಳ ಮಾಲಿಕರು ತಮಗೆ ಬೇಕಾದ ಗ್ರಾನೇಟ್ ಡಿಸೈನ್ ಗಳ ಬಗ್ಗೆ ಚರ್ಚಿಸುತ್ತಾರೆ. ತಮ್ಮ ಅಡುಗೆ ಮನೆಗೆ, ಬೆಡ್ ರೂಂ ವಾಲ್ ಗಳ ಬಗ್ಗೆ ಸೂಕ್ತವಾದ ಆಸಕ್ತಿಗಳ ಬಗ್ಗೆ ಸಲಹೆಗಳನ್ನ ಕೇಳುತ್ತಾರೆ ” ಅಂತ ನವನೀತ್ ವಿವರಿಸುತ್ತಾರೆ. ಇನ್ನು ಇವರ ವೆಬ್ ಸೈಟ್ ನಲ್ಲಿ ವೃತ್ತಿಪರರು ನಿರಂತರವಾಗಿ ತಮ್ಮ ಪ್ರಾಜೆಕ್ಟ್ ಗಳ ಬಗ್ಗೆ ಅಪ್ ಲೋಡ್ ಮಾಡಲೂ ಬಹುದು. ಅಲ್ಲದೆ. ಸೂಕ್ತವಾದವರಿಗೆ ಅದನ್ನ ಟ್ಯಾಗ್ ಮಾಡಿ ಫಾಲೋವರ್ಸ್ ಗಳ ಬಗ್ಗೆ ವೀವ್ ಕೂಡ ಮಾಡಬಹುದು. ಅಲ್ಲದೆ ಇದ್ರ ಜೊತೆಗೆನೆ ಪ್ರಾಜೆಕ್ಟ್ ವರ್ಕ್ ಡಿಟೇಲ್ ಗಳನ್ನ ಫೇಸ್ ಬುಕ್, ಇಂಟಗ್ರಾಮ್ ಹಾಗೂ ಟ್ವಿಟ್ಟರ್ ನಲ್ಲೂ ಟ್ಯಾಗ್ ಮಾಡಲಾಗುತ್ತದೆ.

ವೃತ್ತಿ ಬದುಕಿನ ಪಯಣ

1989ರಲ್ಲಿ ರಿತು ಹಾಗೂ ನವನೀತ್ ಎಂಬುವವರು ಎಎ ಡಿಸೈನ್ ಕನ್ಸಲ್ಟೆಂಟ್ಸ್ ಪ್ರೈವೆಟ್ ಲಿಮಿಟೆಡ್ ಅನ್ನೋ ಆರ್ಕಿಟೆಕ್ಚಕ್ ಕಂಪನಿಯನ್ನು ಶುರುಮಾಡಿದ್ರು. ಇನ್ನು ರೀತು ಆರ್ಕಿಟೆಕ್ಚರ್ ಹಾಗೂ ಪ್ಲಾನಿಂಗ್ ನಲ್ಲಿ ಉನ್ನತ ಶಿಕ್ಷಣ ಪಡೆದಿರುವಾಕೆ. ಅಲ್ಲದೆ ಡೆಲ್ಲಿಯಲ್ಲಿ ಎಂ.ಟೆಕ್ ಮುಗಿಸಿದ್ದಾರೆ. ಇನ್ನು ಎಎ ಡಿಸೈನ್ ಗೆ ಕ್ಲೈಂಟ್ ಆಗಿದ್ದ ರಾಹುಲ್ ಲೋಧಾ ಎಂಬುವವರು ಕ್ರಮೇಣ ಮೂರನೇ ಮಾಲಿಕರಾಗಿ ಕಂಪನಿ ಸೇರಿಕೊಂಡ್ರು. ರಾಹುಲ್ ಐಐಟಿ ಕರಾಗ್ಪುರ್ ನಲ್ಲಿ 2004ರಲ್ಲಿ ಬಿ.ಟೆಕ್ ಮುಗಿಸಿದ್ರು. ಜೊತೆಗೆ 11 ವರ್ಷಗಳ ವೃತ್ತಿಪರ ಅನುಭವ ಅವರ ಬೆನ್ನಿಗಿತ್ತು. ಅಲ್ಲದೆ ಸ್ಯಾಮಸ್ಸಂಗ್ ಹಾಗೂ ಯಾಹೂ ನಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿದ್ರು.

ಬೆಳವಣಿಗೆಯ ಹಾದಿಯಲ್ಲಿ ಸಿಕ್ಕ ಬೆಂಬಲ

ರೀತಾ ಹಾಗೂ ನವನೀತ್ ತಮ್ಮ ಯೋಜನೆ ಬಗ್ಗೆ ಹೋಮ್ಸ್ ಶಾಪ್ 18 ಸಿಒಎ ಸಂದೀಪ್ ಮಲ್ಹೋತ್ರಾ ಬಳಿ ವಿವರಿಸಿದಾಗ ಅವರಿಂದ ಉತ್ತಮ ಬೆಂಬಲ ಸಿಕ್ಕಿತು. ಹೀಗಾಗಿ ಸಂದೀಪ್ ತಕ್ಷಣವೇ ರಿನೋಮೇನಿಯಾ ಕಂಪನಿಗೆ ಸಲಹೆಗಾರನಾಗಿ ಹಾಗೂ ಹೂಡಿಕೆದಾರನಾಗಿ ಸೇರಿಕೊಂಡ್ರು. ಇದು ಆರಂಭಿಕ ದಿನಗಳಲ್ಲಿ ಸಂಭವಿಸಹುದಾಗಿದ್ದ ನಷ್ಟದಿಂದ ಕಂಪನಿಯನ್ನ ಪಾರುಮಾಡಿತು.

ವೆಬ್ ಸೈಟ್ ನಲ್ಲಿ ನೂಕುನುಗ್ಗಲು..!

ಅತ್ಯುತ್ತಮ ಪ್ಲಾನಿಂಗ್ ಜೊತೆಗೆ ಮಾರ್ಕೆಟ್ ಗೆ ಎಂಟ್ರಿಕೊಟ್ಟ ರಿನೋಮೇನಿಯಾ ಅದ್ಭುತವಾದ ಆರಂಭವನ್ನ ಪಡೆಯಿತು. ಮೊದಲ ಐದು ತಿಂಗಳಲ್ಲೇ 3,00,000 ವಿಸಿಟರ್ಸ್ ಗಳು ವೆಬ್ ಸೈಟ್ ಪ್ರವೇಶಿಸುವ ಮೂಲಕ ಗಮನ ಸೆಳೆದ್ರು. ವಿಶೇಷ ಅಂದ್ರೆ ಪ್ರತೀ ತಿಂಗಳೂ ಶೇಕಡಾ 50ರಷ್ಟು ವಿಸಿಟರ್ ಗಳ ಸಂಖ್ಯೆ ಹೆಚ್ಚುತಲೇ ಹೋಯ್ತು. ಈ ಬಗ್ಗೆ ಹೆಚ್ಚು ಗಂಭೀರವಾಗಿರುವ ರಿನೋಮೇನಿಯಾ 2016ರಲ್ಲಿ ಅರ್ಧ ಮಿಲಿಯನ್ ನಷ್ಟು ವಿಸಿಟರ್ಸ್ ಗಳನ್ನ ಹೊಂದುವ ಟಾರ್ಗೆಟ್ ಹೊಂದಿದೆ. ಅಲ್ಲದೆ ಜಾಹೀರಾತು, ವಿಧಿಸುವ ಶುಲ್ಕ, ಟೈಲ್ಸ್ ಹಾಗೂ ಪೇಯಿಂಟ್ ಚಾರ್ಜ್ ಹಾಗೂ ಡಿಸೈನ್ ಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಸದ್ಯ ರಿನೋಮೇನಿಯಾ ಫೋಟೋಗ್ರಾಫರ್ಸ್ ಗಳನ್ನ ಒಳಗೊಂಡಂತೆ 36 ನೌಕರರನ್ನ ಹೊಂದಿದೆ. ಈ ವಿನೂತನ ಸ್ಟಾರ್ಟ್ ಅಪ್ 2016ರ ಹೊತ್ತಿಗೆ 1 ಲಕ್ಷದಷ್ಟು ಅಪೂರ್ವ ಫೋಟೋಗಳನ್ನ ತನ್ನ ಕ್ಯಾಟಲಾಗ್ ಗೆ ಸೇರಿಸುವ ಲೆಕ್ಕಾಚಾರದಲ್ಲಿದೆ. ಇನ್ನು ಹೊಸ ಆಪ್ ಬಿಡುಗಡೆಯ ಲೆಕ್ಕಾಚಾರದಲ್ಲೂ ರಿನೋಮೇನಿಯಾ ಇದೆ.

ಲೇಖಕರು – ಅಪರಾಜಿತಾ ಚೌಧರಿ
ಅನುವಾದ – ಬಿ ಆರ್ ಪಿ, ಉಜಿರೆ

ಇದನ್ನು ಓದಿ:

1. ರುಚಿ-ಶುಚಿಗೆ ಮತ್ತೊಂದು ಹೆಸರು `ಕೆಫೆ ಜೇಡ್'- ಭೋಜನ ಪ್ರಿಯರ ಹಾಟ್ ಫೇವರಿಟ್

2. ಯಶಸ್ಸಿಗೆ ಸರಳ ಸೂತ್ರ-ಉದ್ಯಮಿಗಳಿಗೆ ಲಿಂಕ್ನರ್ ಮಂತ್ರ

3. ಆರ್ಡರ್​ ಮಾಡಿದ ಊಟಕ್ಕಾಗಿ ಕಾಯುವ ಪರಿಸ್ಥಿತಿ ತಪ್ಪಿಸಿದ ಸ್ಮಾರ್ಟ್​ ಕ್ಯೂ

Related Stories

Stories by YourStory Kannada