ಮೇಕಥಾನ್: ರೆಡ್‍ಕ್ರಾಸ್ ಮತ್ತು ಬೆಂಗಳೂರಿನ ಅನ್ವೇಶಕರು ವಿಕಲಚೇತನರ ಸಹಾಯಕ್ಕೆ ತಂಡವಾಗಿದ್ದಾರೆ

ಟೀಮ್​​ ವೈ.ಎಸ್​​. ಕನ್ನಡ

ಮೇಕಥಾನ್: ರೆಡ್‍ಕ್ರಾಸ್ ಮತ್ತು ಬೆಂಗಳೂರಿನ ಅನ್ವೇಶಕರು ವಿಕಲಚೇತನರ ಸಹಾಯಕ್ಕೆ ತಂಡವಾಗಿದ್ದಾರೆ

Wednesday December 02, 2015,

2 min Read

ವಿಶ್ವಜನಸಂಖ್ಯೆಯ ಸುಮಾರು 15% ಅಂದ್ರೆ ಅಂದಾಜು 100 ಕೋಟಿ ಜನರು ಅಂಗವಿಕಲತೆಯಿಂದ ಬಳಲುತ್ತಿದ್ದಾರೆ.ಅದರಲ್ಲಿ ಹೆಚ್ಚಿನವರುಗ್ರಾಮೀಣ ಭಾಗದವರು ಹಾಗೂ ಬೆಳೆಯುತ್ತಿರುವ ಆರ್ಥಿಕತೆಯ ಪ್ರದೇಶದಲ್ಲಿರೋ ಅವಕಾಶ ವಂಚಿತ ಸಮುದಾಯದವರು. ಸಹಾಯಕ ತಂತ್ರಜ್ಞಾನಗಳಿಂದ ಅಂಗವಿಕಲರಿಗೆ ಕೈಗೆಟುಕುವ ಸಮರ್ಥನೀಯ ಪರಿಹಾರ ಸೂಚಿಸಲು ವಿಶ್ವದಾದ್ಯಂತ ಇರೋ ಹೆಚ್ಚಿನ ಸಂಘ ಸಂಸ್ಥೆಗಳು ಹೆಜ್ಜೆಇಡುತ್ತಿವೆ. ಉದಾಹರಣೆಗೆ ಇಂಟರ್‍ನ್ಯಾಷನಲ್‍ ಕಮಿಟಿ ಆಫ್ ದಿ ರೆಡ್‍ಕ್ರಾಸ್ ಸಂಸ್ಥೆಯು ಒಂದುಅಂತರಾಷ್ಟ್ರೀಯ ತಂಡವನ್ನು ಸಜ್ಜುಗೊಳಿಸಿ ಆನ್‍ಲೈನ್ ಸಹಯೋಗದಲ್ಲಿ ಮತ್ತು ಬೆಂಗಳೂರಿನಲ್ಲಿ ಮೂರು ತಿಂಗಳ ಎನೇಬಲ್ ಮೇಕಥಾನ್‍ ಕಾರ್ಯಕ್ರಮಗಳನ್ನು ನಡೆಸಿತ್ತು.

image


ವಿಕಲಚೇತನರು, ವಿನ್ಯಾಸಗಾರರು, ಎಂಜಿನಿಯರ್‍ಗಳು, ಮಾನವತಾವಾದಿಗಳು ಹಾಗೂ ಉದ್ಯಮಿಗಳು ಇದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.ಅಸೋಸಿಯೇಷನ್ ಫಾರ್ ಪೀಪಲ್ ವಿತ್‍ ಡಿಸಬಿಲಿಟಿಯ ಟ್ರಸ್ಟಿ ಮೋಹನ್ ಸುಂದರಂ, ಐಒಟಿ ಸಂಸ್ಥಾಪಕ ನಿಹಾಲ್ ಕಾಶೀನಾಥ್, ಐಸಿಆರ್‍ಸಿಫಿಸಿಕಲ್ ರಿಹ್ಯಾಬಿಲಿಟೇಷನ್ ಪ್ರೋಗ್ರಾಂ ಆಫೀಸರ್ ಅನಿಲ್ ಸಿಂಗ್ ಬೆಂಗಳೂರಿನಲ್ಲಿ ನಡೆದಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ್ದರು.

ಕಾರ್ಯಕ್ರಮದ ಅಂತ್ಯದಲ್ಲಿಪ ರಿಹಾರ ಮತ್ತು ವಸ್ತುಗಳ ಮಾದರಿಗಳು ತಯಾರಾಗಲಿದ್ದು ಇದು ಉದ್ಯಮಿಗಳಿಗೆ ವ್ಯಾಪಾರದೃಷ್ಟಿಯಿಂದಲೂ ಉತ್ತಮ.ಪ್ರಾಥಮಿಕ ಹಂತದ ಕಾರ್ಯಕ್ರಮವನ್ನು ಬೆಂಗಳೂರಿನ ಐಕೆಪಿ ಗಾರ್ಡನ್‍ನಲ್ಲಿ ಅಕ್ಟೋಬರ್ 25ರಂದು ಆಯೋಜನೆ ಮಾಡಲಾಗಿತ್ತು.ಜತೆಗೆ ನವೆಂಬರ್ 8ಕ್ಕೆ ನಡೆದ ಅರಿವುಜಾಗೃತಿ ಸಮಾವೇಷ, ನವೆಂಬರ್ 21-22ರಂದು ನಡೆದವೃದ್ಧಿ ಸವಾಲಿನ ಗ್ರಹಿಕೆಗಾಗಿ ಸವಾಲು ಮತ್ತು ನಿಮಜ್ಜನ ದಿನಾಚರಣೆಕಾರ್ಯಕ್ರಮಗಳೂ ಯಶಸ್ವಿಯಾಗಿ ಮುಕ್ತಾಯವಾಗಿದೆ. ಡಿಸೆಂಬರ್ 18-21ರ ವರೆಗೆ ವ್ಯಾಪಾರ ತಂತ್ರದ ಚರ್ಚೆಯ ಬೂಟ್‍ಕ್ಯಾಂಪ್ ಮತ್ತು ಮೇಕರ್ಸ್‍ಡೇ ಮತ್ತು ಜನವರಿ 23, 2016ಕ್ಕೆಆಲೋಚನೆಗಳಿಗೆ ಪರಿಹಾರ ಹಾಗೂಹೂಡಿಕೆದಾರರು, ಎನ್‍ಜಿಒ ಮತ್ತು ಮಾಧ್ಯಮಗಳಿಗಾಗಿ ನಡೆಯಲಿರೋ ಪ್ರದರ್ಶನ ದಿನಕ್ಕೂ ಸಿದ್ಧತೆಗಳು ನಡೆದಿವೆ. ತೀರ್ಪುಗಾರರು ಆಯ್ಕೆ ಮಾಡುವ ಮೊದಲ ಮೂರು ಸಲ್ಲಿಕೆಗೆ ಕ್ರಮವಾಗಿ 25000, 15000 ಮತ್ತು 10000 ಡಾಲರ್ ಬಹುಮಾನ ಕೊಡಲಾಗುವುದು.

image


ಐಸಿಆರ್‍ಸಿ ವಿನ್ಯಾಸ ಸಲಹೆಗಾರ ತರುಣ್ ಸರ್ವಾಲ್ ಹೇಳುವಂತೆ ಓಪನ್ ಸೋರ್ಸ್ ಹಾರ್ಡ್‍ವೇರ್ ಮತ್ತು ವೃದ್ಧಿಯಾಗುತ್ತಿರೋ ಭಾರತೀಯರ ಪ್ರತಿಭೆಯ ಸಂಯೋಜನೆಯುಸಹಾಯಕ ತಂತ್ರಜ್ಞಾನ ಚಳುವಳಿಗೆ ಹೊಸ ಆಲೋಚನೆ ಹಾಗೂ ಶ್ರಮ ಹಾಕಬಲ್ಲದು.ಎಪಿಡಿಯ ಮೋಹನ್ ಹೇಳುವಂತೆ, ಎನೇಬಲ್ ಮೇಕಥಾನ್,ಬೆಂಬಲ ಸೃಷ್ಟಿಸಲು ಮತ್ತು ಗಾಢ ಪರಿಣಾಮಕ್ಕೆ ಅಂತಿಮ ಭರವಸೆಯಾಗಿದೆ. ಅಲ್ಲದೇ ಈ ಮೂರು ತಿಂಗಳನ್ನು ಮೀರಿದ ಪರಿಸರ ವ್ಯವಸ್ಥೆಸೃಷ್ಟಿಸಲು ಸಹಾಯ ಮಾಡುತ್ತದೆ.

“ತನ್ನ ಮ್ಯಾನೇಜ್‍ಮೆಂಟ್‍ತಜ್ಞರನ್ನು ಕಳಿಸಲು ಹಾಗೂ ಕಾರ್ಯಕ್ರಮಕ್ಕೆ ಪ್ರಾಯೋಜಕರಾಗಲು ಐಐಎಂಬಿ ಮುಂದೆ ಬಂದಿದೆ. ಪ್ರತಿ ತಂಡಕ್ಕೆ ತರಬೇತುದಾರರನ್ನುಗ್ಲೋಬಲ್ ಶೇಪರ್ಸ್‍ ಕರೆತರುತ್ತಿದ್ದಾರೆ. ಇನ್ನು ಸ್ವಿಸ್ ನೆಕ್ಸ್ಟ್​​​​ ವಿನ್ಯಾಸ, ವ್ಯಾಪಾರ ಹಾಗೂ ಮಾದರಿ ಸಹಾಯಕ್ಕೆ ಮಾರ್ಗದರ್ಶಕರನ್ನು ಸ್ವಿಟ್ಜರ್ಲೆಂಡ್‍ನಿಂದ ಕರೆತರುತ್ತಿದ್ದಾರೆ. ವಸ್ತುಗಳ ಮೌಲ್ಯಮಾಪಕ್ಕೆ ಮತ್ತು ಮುಂದಿನ ಉತ್ತಮ ಉತ್ಪನ್ನದ ಹುಟ್ಟಿಗೆ ಸಹಾಯ ಮಾಡಲು ಇನ್‍ಟೆಲ್ಲೆಕಾಪ್‍ ಸಿದ್ಧವಿದೆ” ಎಂದು ಪವನ್ ಹೇಳ್ತಾರೆ.ನವೆಂಬರ್ 8ರಂದು ನಡೆದ ಭೇಟಿಯಲ್ಲಿಸಮಾನ ಮನಸ್ಕರು ಪರಸ್ಪರಪರಿಚಯಿಸಿಕೊಂಡು ಆಲೋಚನೆಗಳ ಬಗ್ಗೆ ಚರ್ಚಿಸಿದರು.

ಎಪಿಡಿಯ ಮೋಹನ್ ಸುಂದರಂ“ಬಳಕೆದಾರರು ಸಾಧನಕ್ಕೆ ಬೆಲೆ ತೆರಬೇಕಿರೋದ್ರಿಂದಇಲ್ಲಿ ನೇರವ್ಯಾಪಾರ ಕಷ್ಟ. ಹಾಗಾಗಿಇಲ್ಲಿಹೊಸ ಕಲ್ಪನೆಗೆ ಹೆಚ್ಚುಅವಕಾಶವಿಲ್ಲ.ಎನ್‍ಎಸ್‍ಆರ್‍ಸಿಇಎಲ್ ನಲ್ಲಿ ಸ್ಟಾರ್ಟ್‍ಅಪ್ ಮಾರ್ಗದರ್ಶರಾಗಿ ನಾನು ಹೂಡಿಕೆದಾರರನ್ನು ಸೆಳೆಯಲು ಪ್ರಧಾನವಾಗಿ ಸರಳ ವ್ಯಾಪಾರ ಮಾದರಿಯನ್ನುಅನುಸರಿಸುತ್ತಿದ್ದೆ. ಆದ್ರೆ ಸಾಮಾಜಿಕಉದ್ಯಮ ಸ್ಥಳದಲ್ಲಿ ಇದಕ್ಕೆ ನೆಲೆ ಇಲ್ಲ. ಹೂಡಿಕೆದಾರರ ಆಸಕ್ತಿ ಕಡಿಮೆಯಾಗ್ತಿದ್ದಂತೆ ಹೊಸ ಕಲ್ಪನೆಯ ಸಾಕಾರ ಪ್ರಮಾಣವೂಕಡಿಮೆಯೇ.ವ್ಯಾಪಾರ ಮಾದರಿಯ ಸಂಕೀರ್ಣತೆಯಿಂದ ಹೆಚ್ಚೆಚ್ಚು ಹೂಡಿಕೆದಾರರು ಮುಂದೆಬರುತ್ತಿಲ್ಲ”ಎನ್ನುತ್ತಾರೆ.

ಸರ್ಕಾರದ ನೀತಿಇಲ್ಲಿ ಪ್ರಮುಖಆಧಾರವಾಗಿರುತ್ತೆ ಮತ್ತುಅನುದಾನ ಬಿಡುಗಡೆ ಮಾಡುವ ಮೂಲಕ ವಿಕಲತೆಯ ವರ್ಗದಲ್ಲಿ ಹೊಸ ಕಲ್ಪನೆ ಹುಟ್ಟುಹಾಕಲು ಶಕ್ತಿ ನೀಡುವಲ್ಲಿಗಮನಹರಿಸಬೇಕು.ಶ್ರೇಷ್ಠ ಕಲಿಕಾ ಕೇಂದ್ರ,ಸರ್ಕಾರಿಅನುದಾನದ ಯೋಜನೆಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಶುರುಮಾಡಬೇಕು.ಬೆಳವಣಿಗೆಯ ಸಮತೋಲನಕ್ಕೆ ಅಭಿವೃದ್ಧಿ ಹೊಂದದ ವಲಯಗಳನ್ನು ಗುರುತಿಸಿ ಅಲ್ಲಿ ಸರ್ಕಾರ ಸಂಪನ್ಮೂಲ ಬಿಡುಗಡೆ ಮಾಡಬೇಕುಎಂದು ಹೇಳ್ತಾರೆ ಮೋಹನ್.

ಮತದಾರರಲ್ಲಿಅಂಗವಿಕಲರು ಕೇವಲ ಶೇ 3-4 ರಷ್ಟು ಮಾತ್ರಇರೋದ್ರಿಂದನಮ್ಮನ್ನಾಳುವ ಸರ್ಕಾರಗಳೂ ಸಹ ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುವಲ್ಲಿ ವಿಫಲವಾಗಿವೆ. ಮೋಹನ್ ಗಮನಿಸಿರುವಂತೆ ಕೇವಲ ಮೂರು ರಾಜ್ಯಗಳು ಮಾತ್ರವಿಕಲಚೇತನ ಸಬಲೀಕರಣಕ್ಕೆಬೇರೆಯದ್ದೇಇಲಾಖೆ ಹೊಂದಿದೆ.ಆದ್ರೆಕರ್ನಾಟಕದಲ್ಲಿಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆಯಡಿ ಬರುತ್ತದೆ.

ವಿಕಲಚೇತನರಉಪಕರಣ ಮತ್ತು ನೆರವನ್ನುಅಭಿವೃದ್ಧಿಪಡಿಸೋ ಮುನ್ನಇದನ್ನುಉಪಯೋಗಿಸಲು ಅನುಕೂಲವಾಗುವಂತಹ ಮೂಲ ಸೌಕರ್ಯವನ್ನೂಅಭಿವೃದ್ಧಿಪಡಿಸಬೇಕು.ನಮ್ಮ ಮೂಲಸೌಕರ್ಯ ಮತ್ತು ಕಾನೂನು ಶೋಚನೀಯ ಸ್ಥಿತಿಯಲ್ಲಿದೆ ಎನ್ನುತ್ತಾರೆ ಮೋಹನ್. ಕಟ್ಟಡಗಳಿಗೆ ವಿಕಲಾಂಗರ ಪ್ರವೇಶಕ್ಕೆ ಮತ್ತು ಶೌಚಾಲಯಕ್ಕೆವಿಶೇಷ ಪ್ರಾಧಾನ್ಯತೆಕೊಡುವಕಡ್ಡಾಯಕಾನೂನನ್ನುಜಾರಿಗೆತರೋಅಂಗವೈಕಲ್ಯಕಾಯ್ದೆಜಾರಿಗೆಕೇಂದ್ರ ಸರ್ಕಾರಚಿಂತನೆ ನಡೆಸಿದೆ.

ಕೇಂದ್ರ ಸರ್ಕಾರ 100 ಸ್ಮಾರ್ಟ್ ಸಿಟಿಗೆ ಯೋಜನೆ ರೂಪಿಸಿದೆ. ಆದ್ರೆ ಇದರಲ್ಲಿ ಅಂಗವಿಕಲರೂ ಇರುತ್ತಾರೆ ಎಂದು ಖಾತ್ರಿಪಡಿಸಬೇಕು. “ಇದನ್ನು ನಾವು ವಿನ್ಯಾಸದಲ್ಲೇ ಸೇರ್ಪಡೆ ಮಾಡಬೇಕೇ ವಿನಾ ಕೇವಲ ಚಿಂತನೆಯಲ್ಲಲ್ಲ”ಅನ್ನೋದು ಮೋಹನ್‍ ಆಗ್ರಹ.

ಲೇಖಕರು: ಮದನ್​ ಮೋಹನ್​​ ರಾವ್​​

ಅನುವಾದಕರು: ಆರ್‍.ಪಿ.