ಚೌಕಾಸಿ ವ್ಯಾಪಾರಕ್ಕೊಂದು ಶಾಪಿಂಗ್ ಸೈಟ್..!

ಕೃತಿಕಾ

0

ಈಗೇನಿದ್ದರೂ ಎಲ್ಲವೂ ಆನ್ ಲೈನ್...ಆನ್ ಲೈನ್. ಮನೆಗೆ ಏನೇ ಬೇಕಿದ್ರೂ ಇಂಟರ್ ನೆಟ್ ಮೂಲಕ ಬುಕ್ ಮಾಡೋದೇ ಟ್ರೆಂಡ್. ಟೂತ್ ಬ್ರಶ್ ನಿಂದ ಹಿಡಿದು ಕಾರ್ ವಾಶರ್ ವರೆಗೆ, ಉಪ್ಪಿನಿಂದ ಹಿಡಿದು ಸ್ವೀಟ್ಸ್ ವರೆಗೆ, ಮೊಬೈಲ್​​ನಿಂದ ಹಿಡಿದು ಟಿವಿಯವರೆಗೆ, ತುಂಡು ಬಟ್ಟೆಯಿಂದ ಹಿಡಿದು ಬೆಡ್​​ಶೀಟ್​​ ತನಕ ಎಲ್ಲವೂ ಆನ್ ಲೈನ್ ನಲ್ಲೇ ಖರೀದಿ ಮಾಡುವ ಟ್ರೆಂಡ್. ಇದರಿಂದಾಗಿ ಆನ್ ಲೈನ್ ವ್ಯವಹಾರ ಜೋರಾಗಿ ನಡೀತಿದೆ. ಆನ್​ಲೈನ್ ಖರೀದಿ ಸಂದರ್ಭ ಚೌಕಾಸಿ ಮಾಡಲು ಯಾವುದೇ ಅವಕಾಶ ಇರುವುದಿಲ್ಲ. ಆದರೆ ಇದೀಗ ಅದಕ್ಕೂ ಒಂದು ಸಂಸ್ಥೆ ಹುಟ್ಟಿಕೊಂಡಿದೆ. ಆದ್ರೆ ಅಲ್ಲಿ ನಿಗದಿಪಡಿಸಿರುವ ಬೆಲೆ ಪಾವತಿಸಿಯೇ ಖರೀದಿಸಬೇಕು. ಆದ್ರೆ ಇಲ್ಲೊಂದು ನೂತನ ಶಾಪಿಂಗ್ ಸೈಟ್ ಇದೆ. ಅಲ್ಲಿ ನೀವು ನಿಮಗೆ ಬೇಕಾದ ವಸ್ತುಗಳನ್ನು ಖರೀದಿಸುವಾಗ ಚೌಕಾಸಿ ಕೂಡ ಮಾಡಬಹುದು..! ಹೌದಾ... ಅಂತ ಕಣ್ಣರಳಿಸಿ ನೋಡ್ಬೇಡಿ... ಹೌದು ನಮಗೆ ಬೇಕಾದ ವಸ್ತುಗಳ ಬೆಲೆಯನ್ನು ನಾವೇ ಚೌಕಾಸಿ ಮಾಡಿ ಕೊಂಡುಕೊಳ್ಳಬಹುದು. ಅಂತದ್ದೊಂದು ವೆಬ್ ಸೈಟ್ ಅನಾವರಣಗೊಂಡಿದೆ. ಅದರ ಹೆಸರು ಬಾರ್ಗೇನಿಂಗ್ ಡಾಟ್ ಕಾಮ್(bargaining.com). ಹೆಸರಿನಲ್ಲೇ ಬಾರ್ಗೇನಿಂಗ್ ಇರೋದ್ರಿಂದ ಜನರು ಸಿಕ್ಕಾಪಟ್ಟೆ ಬಾರ್ಗೇನ್ ಮಾಡಬಹುದು..!

ನೀವು ಅತ್ಯುತ್ತಮ ಕೊಡುಗೆಗಳಿಗಾಗಿ ಗಂಟೆಗಟ್ಟಲೆ ಇಂಟರ್ನೆಟ್​​ನಲ್ಲಿ ಹುಡುಕಾಡುತ್ತಾ ಸಮಯ ವ್ಯರ್ಥ ಮಾಡಬೇಕಾಗಿಲ್ಲ. ಯಾಕಂದ್ರೆ ಈ ಸೈಟ್ ನಲ್ಲಿ ನಿಮಗೆ ಎಲ್ಲವೂ ಲಭ್ಯ. ಅದೂ ಚೌಕಾಸಿ ದರದಲ್ಲಿ. ನೀವು ಕೊಡುವ ದರವನ್ನು ತಿಳಿಸಿದರೆ ವೆಬ್ ಸೈಟ್ ಆ ದರದ ತುಲನೆ ಮಾಡಿ ಮಾರುವ ಬಗ್ಗೆ ಖಚಿತಪಡಿಸುತ್ತದೆ. ಪೋರ್ಟಲ್​​ನಲ್ಲಿ ಖರೀದಿಸುವಾಗ ನಿಮ್ಮ ಹಣ ಉಳಿತಾಯ ಮಾಡುವುದಲ್ಲದೆ ಆನ್​​ಲೈನ್​​ನಲ್ಲಿ ಇತ್ತೀಚಿನ ಡಿಸ್ಕೌಂಟ್ ಕೂಪನ್​​ಗಳನ್ನು ಪಡೆಯಬಹುದು. ಅಲ್ಲದೆ ಫ್ಲ್ಯಾಷ್ ಸೇಲ್ಸ್​​ನಲ್ಲಿ ಪಟ್ಟಿ ಮಾಡಲಾದ ಭಾರತದ ಹಲವಾರು ಮಳಿಗೆಗಳು ಮತ್ತು ವೆಬ್​​ಸೈಟ್​​​ಗಳಿಂದ ಲಾಭ ಪಡೆಯಬಹುದು. ಕೆಲವು ಸೈಟ್​ಗಳಲ್ಲಿ ನಿಗದಿತ ವಸ್ತುಗಳ ಮೇಲೆ ಮಾತ್ರ ಕ್ಯಾಶ್ ಬ್ಯಾಕ್ ಸೌಲಭ್ಯ ಇರುತ್ತದೆ. ಆದ್ರೆ ಬಾರ್ಗೇನಿಂಗ್ ಡಾಟ್ ಕಾಂ (bargaining.com) ನಲ್ಲಿ ಪ್ರತಿ ಉತ್ಪನ್ನದ ಮೇಲೆ ಶೇ.5ರಷ್ಟು ಕ್ಯಾಷ್ ಬ್ಯಾಕ್ ಸೌಲಭ್ಯವಿದೆ.

ಬಾರ್ಗೇನಿಂಗ್ ಡಾಟ್ ಕಾಮ್(bargaining.com) ನಲ್ಲಿ ಗ್ರಾಹಕರು ಅತ್ಯುತ್ತಮವಾದ ಶಾಪಿಂಗ್ ಅನುಭವವನ್ನು ಪಡೆಯಬಹುದು. ಇಲ್ಲಿ ಖರ್ಚು ಮಾಡುವ ಹಣದ ಸ್ವಲ್ಪ ಭಾಗವನ್ನು ಮತ್ತೆ ವಾಪಸ್ ಪಡೆಯಬಹುದಾಗಿದೆ. ಇದರ ಜೊತೆಗೆ ವಸ್ತುಗಳ ಬೆಲೆ ವಿಚಾರವಾಗಿ ಗ್ರಾಹಕರು ನಮ್ಮೊಂದಿಗೆ ಚೌಕಾಸಿ ಕೂಡ ಮಾಡಬಹುದು. ನಾವು ಹಲವು ರೀಟೇಲ್ ವ್ಯಾಪಾರಸ್ಥರೊಂದಿಗೆ ಇಪ್ಪಂದ ಮಾಡಿಕೊಂಡಿದ್ದು, ಆದಷ್ಟು ಕಡಿಮೆ ಬೆಲೆಗೆ ವಸ್ತುಗಳನ್ನು ಗ್ರಾಹಕರಿಗೆ ಮಾರಾಟ ಮಾಡಬೇಕು ಎಂಬ ಉದ್ದೇಶವಿಟ್ಟುಕೊಂಡು ಈ ವೆಬ್ ಸೈಟ್​ ಅಭಿವೃದ್ದಿಪಡಿಸಲಾಗಿದೆ ಎಂದು ಬಾರ್ಗೇನಿಂಗ್ ಡಾಟ್ ಕಾಮ್​​(bargaining.com)ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಷುಲ್ ಗೋಯಲ್ ಹೇಳಿದ್ದಾರೆ.

ಪ್ರತಿಷ್ಠಿತ ಶಾಪಿಂಗ್ ಸೈಟ್ ಗಳಾದ ಅಮೇಜಾನ್, ಫ್ಲಿಫ್​​ಕಾರ್ಟ್, ಪೇಟಿಯಂ, ಸ್ನ್ಯಾಪ್​​ಡೀಲ್ ಮತ್ತಿತರ ಹೆಚ್ಚಿನ ಜನಪ್ರಿಯ ಆನ್​ಲೈನ್ ಮಳಿಗೆಗಳೊಂದಿಗೆ ನಾವು ಈಗಾಗಲೇ ಸಹಯೋಗ ಹೊಂದಿದ್ದೇವೆ. ಮೂವತ್ತಕ್ಕೂ ಅಧಿಕ ಇ ಕಾಮರ್ಸ್ ಕಂಪಬಿಗಳೊಂದಿಗೆ ಮಾರಾಟ ಒಪ್ಪಂದ ಮಾಡಿಕೊಂಡಿದ್ದೇವೆ. ಯಾವುದೇ ಆನ್​ಲೈನ್ ಮಳಿಗೆಗಳಿಂದ ನೀವು ಖರೀದಿ ಮಾಡಿ ಬಾರ್ಗೇನಿಂಗ್ ಡಾಟ್ (bargaining.com)ಕಾಮ್ ಮೂಲಕ ಅಚ್ಚರಿಯ ಡೀಲ್​ಗಳನ್ನು ಪಡೆಯಬಹುದು. ಯಾರು ಬೇಕಾದರೂ ಉಚಿತವಾಗಿ ನೋಂದಣಿ ಮಾಡಿಕೊಂಡು ಖರೀದಿ ಮಾಡಿ ಹಣ ಗಳಿಸಬಹುದು ಎಂದು ಬಾರ್ಗೇನಿಂಗ್ ಡಾಟ್ ಕಾಮ್​​ನ ನಿರ್ದೇಶಕ ಮನು ಪಾಲ್ಟಾ ತಿಳಿಸಿದ್ದಾರೆ.

ಎಲ್ಲಾ ಪ್ರಮುಖ ಇ-ಕಾಮರ್ಸ್ ಮಳಿಗೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ವೆಬ್​ಸೈಟ್ ಎಲ್ಲಾ ವಿಭಾಗಗಳ ಉತ್ಪನ್ನಗಳ ಮೇಲೆ ರಿಯಾಯಿತಿ ನೀಡುತ್ತಿದೆ. ಈ ಉತ್ಪನ್ನಗಳಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ವಿದ್ಯುನ್ಮಾನ, ಕಂಪ್ಯೂಟರ್​​ಗಳು, ಆಹಾರ ವಸ್ತುಗಳು, ಆರೋಗ್ಯ ಮತ್ತು ಸೌಂದರ್ಯ ಉತ್ಪನ್ನಗಳು, ಗೃಹ ಮತ್ತು ತೋಟದ ಉತ್ಪನ್ನಗಳು, ಉಡುಪುಗಳು, ಇತರೆ ಧರಿಸುವ ವಸ್ತುಗಳು, ಪಾದರಕ್ಷೆಗಳು, ಮೊಬೈಲ್ ರಿಚಾರ್ಜ್, ಶೂಗಳು, ಹ್ಯಾಂಡ್​​ಬ್ಯಾಗ್​​ಗಳು ಮತ್ತು ಕ್ರೀಡಾ ವಸ್ತುಗಳು ಮುಂತಾದವುಗಳು ಸೇರಿವೆ. ಸದ್ಯಕ್ಕೆ ವೆಬ್ ಸೈಟ್ ಮಾತ್ರ ಅನಾವರಣ ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಬಾರ್ಗೇನಿಂಗ್ ಡಾಟ್ ಕಾಂ ನ ಮೊಬೈಲ್ ಅಪ್ಲಿಕೇಷನ್ ಕೂಡ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಆನ್ ಲೈನ್ ಮಾರಾಟಕ್ಕೊಂದು ಹೊಸ ಮಜಲು ನೀಡುವ ಈ ವೆಬ್ ಸೈಟ್​ ಜನಪ್ರಿಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ...

ಚೌಕಾಸಿ ಮಾಡಿ ವ್ಯಾಪಾರ ಮಾಡೋದಕ್ಕೆ ಭಾರತೀಯರು ಫೇಮಸ್. ಆದ್ರಲ್ಲಿ ಆನ್ ಲೈನ್ ನಲ್ಲೂ ಚೌಕಾಸಿ ಅವಕಾಶ ಸಿಕ್ಕರೆ ನಮ್ಮ ಜನ ಬಿಡ್ತಾರಾ.. ಚೌಕಾಸಿ ಮಾಡೇ ಮಾಡ್ತಾರೆ..

Related Stories