ನಂಬರ್ ರಿಜಿಸ್ಟರ್ ಮಾಡಿ ಫ್ರೆಶ್ ತರಕಾರಿ ಪಡೆಯಿರಿ - ಕಡಿಮೆ ಬೆಲೆಗೆ ಮನೆ ಬಾಗಿಲಿಗೆ ಬರುತ್ತೆ ತರಕಾರಿ...

ಪೂರ್ವಿಕಾ

0

ಈಗ ಎಲ್ಲವೂ ಕುಂತಲ್ಲೇ ಸಿಗುತ್ತೆ. ಅಗತ್ಯ ವಸ್ತುಗಳು ಕ್ಷಣ ಮಾತ್ರದಲ್ಲೇ ನಾವಿರೋ ಜಾಗಕ್ಕೆ ಬಂದು ಬೀಳುತ್ತೆ. ಅಗತ್ಯ ವಸ್ತು ಮಾತ್ರವಲ್ಲದೆ ಊಟ -ತಿಂಡಿ ಹಣ್ಣು-ತರಕಾರಿ ಹೀಗೆ ಎಲ್ಲವೂ ಆನ್ ಲೈನ್ ನಲ್ಲಿ ಲಭ್ಯವಿರುತ್ತದೆ. ಆದ್ರೆ ಊಟ ತಿಂಡಿ ವಿಚಾರಕ್ಕೆ ಬಂದ್ರೆ ಆರೋಗ್ಯದ ಬಗ್ಗೆಯೂ ಒಂದಿಷ್ಟು ಕಾಳಜಿ ಮಾಡಬೇಕುತ್ತದೆ. ಅದಕ್ಕಾಗಿಯೇ ನೀವು ತಿನ್ನೋ ಹಣ್ಣು ತರಕಾರಿಯನ್ನ ನೀವು ಖುದ್ದಾಗಿ ಆಯ್ಕೆ ಮಾಡಿಕೊಳ್ಳಬಹುದು ಅದೂ ನಿಮ್ಮ ಮನೆ ಬಾಗಿಲಲ್ಲೇ, ನೀವಿರೋ ಜಾಗದಲ್ಲೇ ಅದಕ್ಕಾಗಿ ನೀವು ಮಾಡಬೇಕಿರೋದಿಷ್ಟೇ.. ನಿಮ್ಮ ಮೊಬೈಲ್ ನಂಬರ್ ಅನ್ನ ರಿಜಿಸ್ಟರ್ ಮಾಡಿಕೊಳ್ಳಬೇಕು, ಫ್ರೆಶ್ ವರ್ಲ್ಡ್​.

ಎಷ್ಟೇ ಸಂಪಾದನೆ ಮಾಡಿದ್ರೂ ಕೂಡ ಆರೋಗ್ಯ ಹಾಗೂ ತಿನ್ನೋ ಆಹಾರದ ವಿಚಾರದಲ್ಲಿ ಚಾನ್ಸ್ ತೆಗೆದುಕೊಳ್ಳೊದಿಕ್ಕೆ ಯಾರಿಗೂ ಇಷ್ಟ ಇರವುದಿಲ್ಲ. ಯಾಕಂದ್ರೆ ಎಲ್ಲರೂ ಕಷ್ಟ ಪಟ್ಟು ದುಡಿಯೋದೇ ಜೀವ ಹಾಗೂ ಜೀವನಕ್ಕಾಗಿ. ಈಗಿನ ದಿನಗಳಲ್ಲಿ ಎಲ್ಲವೂ ಬೆರಳ ತುದಿಯ ಆಯ್ಕೆಯಲ್ಲೇ ಸಿಗುತ್ತೆ ಹಣ್ಣು-ತರಕಾರಿಗಳು ಇದರಿಂದ ಹೊರತಾಗಿ ಇಲ್ಲಾ. ಬಟ್ಟೆ -ಬರೆ ಆದ್ರೆ ಕಣ್ಣಿನಲ್ಲಿ ನೋಡಿ ಆಯ್ಕೆ ಮಾಡಿಕೊಳ್ಳಬಹುದು ಆದ್ರೆ ತಿನ್ನೋ ವಸುಗಳನ್ನ ಮುಟ್ಟಿ ನೋಡಿ ಆಯ್ಕೆ ಮಾಡಿದ್ರೆನೇ ಒಂಥರಾ ಸಮಾಧಾನ. ಅಂತವ್ರಿಗಾಗಿ ಅಂತಾನೆ ಶುರು ಆಗಿದೆ ಫ್ರೆಶ್ ವರ್ಲ್ಡ್​. ಸೂಪರ್ ಮಾರ್ಕೆಟ್​​ ನಲ್ಲಿ ಲಭ್ಯವಾಗೋ ರೀತಿಯಲ್ಲಿ ಹಣ್ಣು ತರಕಾರಿ ಸೊಪ್ಪುಗಳು ನಿಮ್ಮ ಮನೆ ಬಾಗಿಲಿಗೆ ಬರುತ್ತವೆ. ಇದನ್ನ ಬೆಂಗಳೂರಿನ ಜನರಿಗೆ ಲಭ್ಯವಾಗುವಂತೆ ಮಾಡಿದ್ದು ರಾಜೀವ್ ರಾವ್.

ರೈತರಿಗೂ ಉಪಯೋಗವಾಗುವಂತೆ ಹಾಗೂ ಗ್ರಾಹಕರಿಗೆ ಉತ್ತಮವಾದ ಹಾಗೂ ಗುಣಮಟ್ಟ ಇರೋ ತರಕಾರಿ ಹಣ್ಣುಗಳನ್ನ ಅವ್ರ ಮನೆ ಬಾಗಿಲಿಗೆ ಒದಗಿಸೋ ನಿಟ್ಟಿನಲ್ಲಿ ಪ್ರಾರಂಭ ಮಾಡಿದ ಸಂಸ್ಥೆ ಇದು. ಸುಮಾರು 50ಕ್ಕೂ ಹೆಚ್ಚು ಜನರು ಇಲ್ಲಿ ಕೆಲಸ ಮಾಡುತ್ತಿದ್ದು ಚಿಕ್ಕ ಚಿಕ್ಕ ವ್ಯಾನ್​ಗಳ ಮೂಲಕ ಫ್ರೆಶ್ ತರಕಾರಿ ಹಣ್ಣು ನಿಮ್ಮ ಮನೆ ಬಾಗಿಲಿಗೆ ಬರುತ್ತೆ. ಒಮ್ಮೆ ಫ್ರೆಶ್ ವರ್ಡ್​ಗೆ ಲಾಗಿನ್ ಆಗಿ ನಿಮ್ಮ ನಗರ ಹಾಗೂ ಫೋನ್ ನಂಬರ್ ಅನ್ನ ರಿಜಿಸ್ಟರ್ ಮಾಡಿದ್ರೆ ನಿಮ್ಮ ಮನೆಗೆ ತರಕಾರಿ ಅಂಗಡಿ ವ್ಯಾನ್​ಗಳು ಬಂದಾಗ ನಿಮ್ಮ ನಂಬರ್​​ಗೆ ಮೆಸೇಜ್ ಹಾಗೂ ತರಕಾರಿ ವ್ಯಾನ್ ನಿಲ್ಲೋ ಸ್ಥಳ ಹಾಗೂ ತರಕಾರಿಗಳ ಬೆಲೆ ಮತ್ತೆ ಅಂದಿನ ವಿಶೇಷ ತರಕಾರಿಗಳ ಲೀಸ್ಟ್ ಮೆಸೆಜ್ ರೂಪದಲ್ಲಿ ಬರುತ್ತೆ. ಇನ್ನು ಎಲ್ಲಾ ವ್ಯಾನ್​ಗಳಲ್ಲೂ ಜಿಪಿಎಸ್ ಅಳವಡಿಸಿದ್ದು ತರಕಾರಿ ವ್ಯಾನ್ ಒಮ್ಮೆ ನಿಮ್ಮ ನಗರಕ್ಕೆ ಎಟ್ರಿ ಆದ ತಕ್ಷಣ ಮೆಸೆಜ್​​ ಬರುತ್ತದೆ. ಡಿಜಿಟಲ್ ವರ್ಲ್ಡ್​ ನಲ್ಲಿ ಎಲ್ಲವೂ ಡಿಜಿಟಲ್ ನಿಂದ ಕೂಡಿದ್ದು ತೂಕದಿಂದ ಹಿಡಿದು ಬಿಲ್​ವರೆಗೂ ಎಲ್ಲವೂ ಹೈ ಕ್ವಾಲಿಟಿಯಲ್ಲೇ ವರ್ಕೌಟ್ ಆಗುತ್ತೆ. ಸಾಕಷ್ಟು ರೈತರು ತಾವು ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನ ಮಾರುಕಟ್ಟೆಗೆ ತರಲು ಹಾಗೂ ಮಧ್ಯವರ್ತಿಗಳಿಂದ ತಪ್ಪಿಸಿಕೊಳ್ಳಲು ಪರದಾಡುವುದನ್ನ ಅರಿತಿರೋ ರಾವ್ ಇದಕೊಂದು ಅಂತ್ಯ ಕಾಣಿಸಬೇಕು ಅಂತ ನಿರ್ಧರಿಸಿ ಈ ಕಾನ್ಸೆಪ್ಟ್ ಅನ್ನ ಹುಟ್ಟುಹಾಕಿದ್ರು. ಸದ್ಯ ಬೆಂಗಳೂರಿನ ಆಯದ್ದ ಭಾಗಗಳಲ್ಲಿ ಫ್ರೆಶ್ ವರ್ಲ್ಡ್​ ಗಾಡಿಗಳು ಮನೆ ಮುಂದಕ್ಕೆ ತರಕಾರಿಗಳನ್ನ ಕೊಂಡೊಯ್ಯುತ್ತಿದೆ. ಇಲ್ಲಿ ತರಕಾರಿ ಕೊಳ್ಳಲೇ ಬೇಕು ಅನ್ನೋ ಒತ್ತಾಯ ಇಲ್ಲ. ನಿಮಗೆ ಬೇಕು ಅನ್ನಿಸಿದ್ರೆ ಮಾತ್ರ ತೆಗೆದುಕೊಳ್ಳಬಹುದು.

ಪ್ರತಿನಿತ್ಯ 25ಕ್ಕೂ ಹೆಚ್ಚು ವಿಧವಾದ ತರಕಾರಿಗಳು,ಹತ್ತು ರೀತಿಯ ಹಣ್ಣುಗಳು ಮತ್ತು 10 ರೀತಿಯ ಸೊಪ್ಪುಗಳನ್ನ ಫ್ರೆಶ್ ವರ್ಲ್ಡ್​ ಗಾಡಿಗಳು ಹೊತ್ತು ತರುತ್ತವೆ. ಸದ್ಯ ಪ್ರತಿ ನಗರದಲ್ಲಿ 20 ಗಾಡಿಗಳು ಓಡಾಡುತ್ತಿದ್ದು ಅದರಲ್ಲಿರೋ ಡ್ರೈವರ್​ಗೆ ಗ್ರಾಹಕರ ಬಳಿ ಹೇಗೆ ನಡೆದುಕೊಳ್ಳಬೇಕು ಅನ್ನೋದ್ರ ಬಗ್ಗೆ ಟ್ರೈನಿಂಗ್ ನೀಡಲಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ನಗರದ ಹೈಫೈ ಜೀವನಕ್ಕೆ ಹತ್ತಿರವಾಗದೆ ಹಿಂದಿನಂತೆಯೇ ನಮ್ಮ ಆಯ್ಕೆ ನೇರವಾಗಿರಬೇಕು ಅನ್ನೋರಿಗೆ ಫ್ರೆಶ್ ವರ್ಲ್ಡ್​ ಬೆಸ್ಟ್ ಅಂದ್ರೆ ತಪ್ಪಿಲ್ಲ.

Related Stories