ಜಸ್ಟ್​ ಎಳನೀರು ಎಂದು ಮೂಗು ಮುರಿಯಬೇಡಿ.. ಒಂದ್ಸಾರಿ ಟೇಸ್ಟ್​ ಮಾಡಿ ನೋಡಿ..!

ಆರಾಧ್ಯ

1

ಎಳನೀರು, ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಅಚ್ಚುಮೆಚ್ಚು. ಪ್ರತಿನಗರದ ಮುಖ್ಯ ರಸ್ತೆಗಳಲ್ಲಿ ಎಳನೀರು ವ್ಯಾಪಾರ ಜೋರಾಗಿ ನಡೆಯುತ್ತದೆ. ಬೇಸಿಗೆ ಇರಲಿ, ಮಳೆಗಾಲವೇ ಇರಲಿ, ಚಳಿಗಾಲವೇ ಇರಲಿ, ಎಳನೀರಿಗೆ ಬೇಡಿಕೆ ಮಾತ್ರ ಕಡಿಮೆಯಾಗೋದಿಲ್ಲ. ತಂಪುಪಾನಿಯಗಳಿಗೆ ಬೇಸಿಗೆಯಲ್ಲಿ ಮಾತ್ರ ಹೆಚ್ಚಿನ ಬೇಡಿಕೆ ಬರುತ್ತದೆ. ಆದ್ರೆ ಎಳನೀರಿಗೆ ಎಲ್ಲಾ ಕಾಲದಲ್ಲೂ ಬೇಡಿಕೆ ಇರುತ್ತದೆ. ಅದ್ರಲ್ಲೂ ಅನಾರೋಗ್ಯದಿಂದ ಬಳಲುತ್ತಿರುವವರೆಗೆ ವೈದ್ಯರು ಎಳನೀರು ಕುಡಿಯುವುದಕ್ಕೆ ಸಲಹೆನೀಡುತ್ತಾರೆ. ಇಂತಹ ಅರೋಗ್ಯಕಾರ ಎಳನೀರಿನ ವಿವಿಧ ತಿನ್ನಿಸುಗಳ ಅಂಗಡಿ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ. ಅದೇ ತೆಂಗು ಮನೆ..

ಹೌದು ತುಮಕೂರು ಜಿಲ್ಲೆಯ ಚಿಕ್ಕನಾಯಕ್ಕನ ಹಳ್ಳಿಯ ವಿನೋದ್ ಮತ್ತು ಅನಿತಾ, ರೈತ ದಂಪತಿಗಳು ಸಿಲಿಕಾನ್ ಸಿಟಿಯಲ್ಲಿ ಮೂರು ವರ್ಷಗಳ ಹಿಂದೆ ತೆಂಗು ಮನೆ ಪ್ರಾರಂಭ ಮಾಡಿದ್ದರು. ತೆಂಗಿನಕಾಯಿ ಬೆಲೆ ಕುಸಿದಾಗ ಈ ದಂಪತಿಗಳು ರಾಜ್ಯದಲ್ಲಿ ನಡೆಯುವ ಎಲ್ಲಾ ಕೃಷಿ ವೇಳದಲ್ಲಿ ಭಾಗವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಕಂಡ ಕನಸು ಎಳನೀರು ಸುಲಿಯುವ ಯಂತ್ರ.

ಎಳನೀರು ಸುಲಭವಾಗಿ ಸುಲಿಯಬೇಕು ಎಂದು ಒಂದು ಹೊಸ ಯಂತ್ರವನ್ನು ಕಂಡುಹಿಡಿದ್ರು. ಹೊಸ ಯಂತ್ರದ ಸಹಾಯದಿಂದ ತೆಂಗಿನಕಾಯಿ ಸುಲಿಯುವ ಅಗತ್ಯವಿಲ್ಲ. ಯಂತ್ರದ ಮಧ್ಯೆ ತೆಂಗಿನಕಾಯಿ ಸಿಕ್ಕಿಸಿದ್ರೆ ಸಾಕು, ಯಂತ್ರವೇ ಕಾಯಿ ಸುಲಿಯಲಿದ್ದು ಎಳನೀರನ್ನು ಬೇರ್ಪಡಿಸುತ್ತದೆ. ನಂತರ ತೆಂಗಿನಕಾಯಿ ಯಿಂದ ಬರುವ ಎಳನೀರು ಒಂದು ನಿಮಿಷದೊಳಗೆ ತಂಪಾಗಿ ಹೊರ ಬರುತ್ತದೆ. ಅಷ್ಟೇ ಅಲ್ಲದೇ ಇವರು ಭಾಗವಹಿಸುವ ಕೃಷಿ ಮೇಳ, ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ, ಜಾತ್ರೆ ಹೀಗೆ ಜನ ಸೇರುವಪ್ರದರ್ಶನಗಳಲ್ಲಿ ಈ ತಂಪು ಎಳನೀರಿನ ರುಚಿಯನ್ನ ಜನರಿಗೆ ಪರಿಚಯಿಸಿದ್ದಾರೆ.. ಈ ನಿಟ್ಟಿನಲ್ಲಿ ಈ ತಂಪು ತಂಪು ಎಳನೀರಿಗೆ ಇವರ ತೆಂಗು ಮನೆಯಲ್ಲಿ ಬಾರಿ ಬೇಡಿಕೆ.. ಇನ್ನು ಇವರು ಕಂಡು ಹಿಡಿದಿರುವ ಯಂತ್ರಕ್ಕೆ ಈಗ ಬೇರೆ ಬೇರೆ ರಾಜ್ಯಗಳಿಂದಲೂ ಬಾರಿಬೇಡಿಕೆ ಬಂದಿದೆ..

ಇಷ್ಟಕ್ಕೆ ಈ ದಂಪತಿಗಳು ಸುಮ್ಮನೆ ಆಗಲಿಲ್ಲ.. ಇನ್ನೂ ಏನಾದ್ರೂ ಸಾಧನೆ ಮಾಡಬೇಕು ಎಂದು ಎಳನೀರಿನಿಂದ ತಯಾರಿಸುವ ಸುಮಾರು 15ಕ್ಕೂ ಹೆಚ್ಚು ಬಗೆ ಬಗೆಯ ತಿಂಡಿ ತಿನ್ನಿಸುಗಳು ಕಂಡು ಹಿಡಿದ್ರು.. ಎಳನೀರಿನಲ್ಲಿ ಐಸ್ ಕ್ರೀಂ ಮಾಡುವುದನ್ನು ಕಂಡುಹಿಡಿದ್ರು.. ಮೂರು ತೆಂಗಿನಕಾಯಿಗಳಿಂದ 750 ಮಿಲಿಲೀಟರ್​ ಎಳನೀರು ಸಿಗುತ್ತದೆ.. ಅಂದ್ರೆ ಈ 750 ಮಿ.ಲೀ ನಲ್ಲಿ ಕನಿಷ್ಠ 10ಐಸ್ ಕ್ರೀಂ ಗಳನ್ನ ತಯಾರಿಸಬಹುದು.. ಇದಕ್ಕೆ ಬೇರೆ ಬೇರೆ ಫ್ಲೇವರ್ ಗಳನ್ನ ಕೊಟ್ಟು ಈ ದಿನ ಜನರ ಅಚ್ಚುಮೆಚ್ಚಿನ ಐಸ್ ಕ್ರೀಂ ಆಗಿದೆ..ಅದರ ಜೊತಗೆ ಎಳನೀರಿಗೆ ಮಸಾಲೆ, ಮೆಣಸು, ಪುದೀನ, ಶುಂಠಿಯಂತಹ ವೈವಿಧ್ಯಮಯ ಸ್ವಾದಗಳನ್ನು ಬೆರೆಸಿ, ಗ್ರಾಹಕರಿಗೆ ಕೈಗೆಟ್ಟಕುವ ದರದಲ್ಲಿ ಮಾರಾಟ ಮಾಡುತ್ತಾರೆ..

ಇನ್ನು ಈ ತಂಗು ಮನೆಯಲ್ಲಿ ಎಳನೀರಿನ ಲಸಿ, ಎಳನೀರಿನಿಂದ ತಯಾರಿಸಿದ ಚಾಕೋಲೇಟ್ , ಕೇರಳದ ತೆಂಗಿನ ಕಾಯಿ ಚಿಪ್ಸ್, ಕೋಕೋನಟ್ ಆ್ಯಪಲ್ ( ತೆಂಗಿನ ಗೂಬು), ಕೋಕೋನೆಟ್ ಜಲ್ಲಿ, ಎಳನೀರಿನ ಪಾನಿಪುರಿ, ತೆಂಗಿನಕಾಯಿ ಬರ್ಫಿ, ಹೀಗೆತರಹೇವಾರಿ ಚಾಟ್ಸ್ ಗಳು ಈ ತೆಂಗು ಮನೆಯಲ್ಲಿ ಲಭ್ಯವಿದೆ.. ಇನ್ನು ಇಲ್ಲಿ ತಯಾರಿಸುವ ಯಾವ ಉತ್ಪನ್ನಗಳಿಗೂ ಪ್ರಿಸರ್ವೆಟಿವ್ಸ್ ಬಳಸುವುದಿಲ್ಲ.. ರಾಸಾಯನಿಕಗಳ ಬೆರಕೆ ಇರುವುದಿಲ್ಲ.. ಹೀಗಾಗಿ ಎಲ್ಲ ಉತ್ಪನ್ನಗಳು ತಾಜಾ ಆಗಿರುವಾದಲೇ ಗ್ರಹಾಕರನ್ನುತಲುಪುತ್ತದೆ.. ಹಾಗಾಗಿ ಎಳನೀರು ಮೌಲ್ಯವರ್ಧನೆ ಆರೋಗ್ಯಕಾರಿಯಾಗಿದೆ..

ಈ ಎಲ್ಲಾ ಚಾಟ್ಸ್ ಹಾಗೂ ತಿಂಡಿಗಳಿಗೆ ವರ್ಷಪೂರ್ತಿ ಬೇಡಿಕೆ ಇದೆ.. ಮಕ್ಕಳಿಗೆ ಇಲ್ಲಿ ಐಸ್ ಕ್ರೀಂ ಅಂದ್ರೆ ತುಂಬಾ ಇಷ್ಟ.. ಲಸ್ಸಿಗೂ ಇಲ್ಲಿ ಅಷ್ಟೇ ಡಿಮ್ಯಾಂಡ್ ಇದೆ.. ವಾರದ ಏಳು ದಿನವು ಈ ತೆಂಗು ಮನೆ ತೆರೆದಿರಲ್ಲಿದೆ.. ಇನ್ನು ಇವರು ಮಾರಾಟ ಮಾಡುವ ಈತಿಂಡಿಗಳ ಪೊಟ್ಟಣದ ಮೇಲಿನ ಹೆಸರು ಬಹಳ ಆಕರ್ಷಕವಾಗಿದೆ, ಅದರ ಹೆಸರು ಕೋಕೋನಟ್ ಪಬ್ , ಪಬ್ ಸೇವೆ ಲಭ್ಯ, ಈಟ್ ಡ್ರಿಂಕ್ ಅಂಡ್ ಬಾತ್ ಇನ್ ಕೋಕೋನಟ್ ಎಂಬ ಘೋಷವಾಕ್ಯದೊಂದಿಗೆ ಆರಂಭವಾಗಿರುವ ಈ ತೆಂಗು ಮನೆಉಲ್ಲಿ ಸರ್ವಂತಂಗು ಮಯಂ ಆಗಿದೆ… ಇನ್ನು ಇವುಗಳ ಬೆಲೆಯು ಕೂಡ ಬಹಳ ಕಡಿಮೆ 15 ರೂಪಾಯಿ ಯಿಂದ ಪ್ರಾರಂಭವಾಗುವ ಬೇಲೆ 50ರೂಪಾಯಿ ವರೆಗೂ ಇದೆ..

ಇನ್ನು ಇವರ ಊರಿನಲ್ಲಿ 800 ತೆಂಗಿನ ಮರಗಳಿವೆ, ಅಲ್ಲಿಂದ ಬಹಳಷ್ಟು ಎಳನೀರು ಬರುತ್ತದೆ.. ಜೊತೆಗೆ ಬೇರೆ ಜಿಲ್ಲೆಗಳಿಂದಲು ತೆಂಗು ಮನೆಗೆ ಎಳನೀರು ಖರೀದಿ ಮಾಡ್ತಾರೆ.. ಈ ದಂಪತಿಗಳ ಮುಖ್ಯ ಉದ್ದೇಶವಿಷ್ಟೇ ತೆಂಗಿನಲ್ಲಿ ಕಾಯಿ ಮತ್ತು ಎಳೆನೀರನ್ನಷ್ಟೇಮಾರಾಟ ಮಾಡಬಹುದೆಂಬ ತಪ್ಪು ಕಲ್ಲನೆಯನ್ನು ಬದಲಾಸಿಸಬೇಕು.. ಸದ್ಯ ತೆಂಗು ಮನೆಯಲ್ಲಿ ಎಳೆನೀರಿನ ಮೌಲ್ಯವರ್ಧಿತ ಉತ್ಪನ್ನಗಳಿವೆ. ಭವಿಷ್ಯದಲ್ಲಿ ತೆಂಗಿನ ನಾರಿನ ಉತ್ಪನ್ನಗಳು, ಚಿಪ್ಪಿನಿಂದ ತಯಾರಿಸಿದ ಕರಕುಶಲ ವಸ್ತುಗಳು, ಕಾಯರ್ ಪಿಟ್ಕಾಂಪೋಸ್ಟ್, ನಾರಿನ ಫುಟ್ರಗ್ ಸೇರಿದಂತೆ ತೆಂಗಿನ ಉಪ ಉತ್ಪನ್ನಗಳನ್ನು ಈ ಮನೆಯಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿಡುವ ಯೋಚನೆ ಇದೆ..

ಬೇಸಿಗೆಯಲ್ಲಿ ತಂಪೆಳೆನೀರಿಗೆ ಬಾರಿ ಬೇಡಿಕೆ ಬರುತ್ತದೆ.. ಐಸ್ ಕ್ರೀಂಗೆ ಮಾತ್ರ ವರ್ಷಪೂರ್ತಿ ಗ್ರಾಹಕರಿದ್ದಾರೆ. ಮಹಾನಗರದ ಗ್ರಾಹಕರಿಗಿರುವ ತೆಂಗಿನ ಪ್ರೀತಿಯನ್ನು ಕಳೆದ ಎರಡು ವರ್ಷಗಳಿಂದ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಅವರ ಆದ್ಯತೆಗೆತಕ್ಕಂತೆ ಉತ್ಪನ್ನಗಳನ್ನು ಪೂರೈಸುತ್ತಿದ್ದೇವೆ ಎನ್ನುತ್ತಾರೆ ವಿನೋದ್ ಅನಿತಾ ದಂಪತಿ.


Related Stories